ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾಹ್ನವಿ ಪಾತ್ರ ಸಂಪೂರ್ಣವಾಗಿ ಬದಲಾಗಿದ್ದು, ಇದೀಗ ಜಾನು ಜಯಂತ್ ನನ್ನು ತನ್ನ ಕಂಟ್ರೋಲ್ ನಲ್ಲಿ ಇಡ್ತಿದ್ದಾಳೆ. ಇದನ್ನು ನೋಡಿ ವೀಕ್ಷಕರು ಕೂಡ ಖುಷಿ ಪಟ್ಟಿದ್ದಾರೆ.
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ (Lakshmi Nivasa) ಇಲ್ಲಿವರೆಗೆ ಜಯಂತ್ ನ ಸೈಕೋ ಅವತಾರಗಳನ್ನು ನೋಡಿ ನೋಡಿ ಜನ ಬೇಸತ್ತು ಹೋಗಿದ್ದರು.. ಜಯಂತ್ ನ ಸೈಕೋ, ಪಾಸೆಸಿವ್ ಗುಣದಿಂದಾಗಿ ತೊಂದರೆಯಾಗಿದ್ದು, ಕಡಿಮೆ ಏನಲ್ಲ. ಆದರೆ ಈಗ ಎಲ್ಲವೂ ಬದಲಾಗಿದೆ. ಜಯಂತ್ ನ ನಿಜ ಗುಣವನ್ನು ತಿಳಿದುಕೊಂಡಿರುವ ಜಾನು ತನ್ನ ಗಂಡನ ವಿರುದ್ಧವೇ ತಿರುಗಿ ಬಿದ್ದಿದ್ದಾಳೆ. ತಾನು ಹೇಳುವಂತೆ, ತನ್ನ ಗಂಡ ಕೇಳುವಂತೆ ಮಾಡಿದ್ದಾಳೆ ಜಾನು.
ಕೊನೆಗೂ ಜಾನು ಬುದ್ಧಿವಂತೆ ಆದ್ಳು.. ಹೊಡಿರಿ ಚಪ್ಪಾಳೆ; ಒಂಟಿಯಾದ ಸೈಕೋ ಜಯಂತ್!
ತನ್ನ ಪಾಸೆಸಿವ್ ನೆಸ್ ನಿಂದ ಜಯಂತ್ ಏನೆಲ್ಲಾ ಮಾಡಿಲ್ಲ ಹೇಳಿ. ಜಾನು ಜೊತೆ ಕ್ಲೋಸ್ ಆಗಿದ್ದ ಎಂದು ಹಾಗೂ ಅವನೇ ಅವಳ ಹಳೆಯ ಬಾಯ್ ಫ್ರೆಂಡ್ ಎಂದು ಕೊಂಡು, ಜಾನು ಗೆಳೆಯನೊಬ್ಬನನ್ನು, ಮಾತು ಬಾರದಂತೆ, ನಡೆಯಲು ಆಗದಂತೆ ಹೊಡೆದು ಹಾಕಿದ್ದ ಜಯಂತ್, ರಸ್ತೆಯಲ್ಲಿ ಯಾರೋ ಜಾಹ್ನವಿಗೆ ತಮಾಷೆ ಮಾಡಿದ್ದಕ್ಕಾಗಿ, ಅವರ ಮೇಲೆ ಕಾರು ಹತ್ತಿಸಿದ್ದೂ ಆಗಿದೆ, ಮನೆಯ ವಾಚ್ ಮ್ಯಾನ್ ಜೊತೆ ಜಾಹ್ನವಿ ಮಾತನಾಡುತ್ತಾಳೆ ಎಂದು ತಿಳಿದ ಮೇಲೆ, ಆತನನ್ನು ಕಿಡ್ನಾಪ್ ಮಾಡಿ, ಹಿಂಸೆ ಕೊಟ್ಟು ಮನೆಬಿಟ್ಟು, ಊರು ಬಿಟ್ಟು ಹೋಗುವಂತೆ ಮಾಡಿದ್ದಾನೆ. ಇನ್ನು ತನ್ನನ್ನು ಅರಸಿ ಬಂದ ಗೆಳೆಯನನ್ನು ಮನೆಯಲ್ಲಿ ಇಟ್ಟುಕೊಳ್ಳಲು ಇಷ್ಟಪಡದೆ, ಅವನ ಮೇಲೆ ಹಲ್ಲೆ ಮಾಡಿ, ಮನೆ ಬಿಟ್ಟು ಹೋಗುವಂತೆ ಮಾಡಿದ್ದಾರೆ, ಇದನ್ನೆಲ್ಲಾ ಅಜ್ಜಿ ನೋಡಿದ್ದಾರೆ ಎನ್ನುವ ಕಾರಣಕ್ಕೆ ಅಜ್ಜಿಯ ಮೇಲೆ ಹಲ್ಲೆ ಮಾಡಿ, ಅಜ್ಜಿ ಕೋಮಾಕ್ಕೆ ಹೋಗುವಂತೆ ಮಾಡಿ, ಅವರು ಎಚ್ಚರಗೊಳ್ಳದಂತೆ ಏನೇನೋ ಪ್ಲ್ಯಾನ್ ಮಾಡಿ, ಮನೆಯ ಮೂಲೆ ಮೂಲೆಯಲ್ಲೂ ಸಿಸಿ ಕ್ಯಾಮೆರಾ ಹಾಕಿಕೊಂಡಿದ್ದ ಜಯಂತ್.
ಜಾನು ತವರಿನಲ್ಲಿಯೂ ಜಯಂತ್‌ನ ಕಿತಾಪತಿ; ಚಿನ್ನುಮರಿಗೆ ವಿಷ್ಯ ಗೊತ್ತಾದ್ರೆ ಉಳಿಗಾಲವೇ ಇಲ್ಲ!
ಆದರೆ ಜಯಂತ್ ಮೇಲೆ ಅನುಮಾನ ಮೂಡಿದ ಜಾಹ್ನವಿ, ಆತನ ಮೊಬೈಲ್ ಚೆಕ್ ಮಾಡಿದಾಗ, ಜಯಂತ್ ನ ಅಸಲಿ ಬಂಡವಾಳ ಬೆಳಕಿಗೆ ಬಂದಿದೆ. ಇದನ್ನು ನೋಡಿ ಶಾಕ್ ಆಗಿ ಬೀಳುವ ಜಾಹ್ನವಿ ಮಗುವನ್ನು ಸಹ ಕಳೆದುಕೊಳ್ಳುತ್ತಾಳೆ. ಇದೀಗ ಜಾಹ್ನವಿ ಸಂಪೂರ್ಣವಾಗಿ ಬದಲಾಗಿದ್ದಾಳೆ. ತನ್ನನ್ನು ಚಿನ್ನುಮರಿ ಎಂದು ಕರೆಯಲೇ ಬಾರದು, ತನ್ನನ್ನು ಮುಟ್ಟಲೇ ಬಾರದು ಎಂದು ಗಂಡನಿಗೆ ಚಾಲೆಂಜ್ ಮಾಡಿದ್ದಾಳೆ. ಮನೆಯಲ್ಲಿದ್ದ ಅಜ್ಜಿಯನ್ನು ತನ್ನ ತವರು ಮನೆಗೆ ಕಳುಹಿಸಿದ್ದಾಳೆ. ಈಗ ಅಲ್ಲಿ ಅಜ್ಜಿ ಎಚ್ಚರಗೊಳ್ಳುತ್ತಿರೋದು ಗೊತ್ತಾಗಿ, ಭಯಗೊಂಡಿರುವ ಜಯಂತ್, ತಾನು ಅಲ್ಲಿಗೆ ಹೋಗೋದಾಗಿ ಹೇಳಿದ್ದಾನೆ. ಆದರೆ ಇದಕ್ಕೆ ಜಾಹ್ನವಿ ಒಪ್ಪಿಗೆ ನೀಡುತ್ತಿಲ್ಲ. ಅಜ್ಜಿಗೆ ಎಚ್ಚರ ಆಗಿ, ಎಲ್ಲವನ್ನೂ ಮನೆಯವರ ಮುಂದೆ ಹೇಳಬೇಕು ಎಂದು ಕಾಯ್ತಿದ್ದಾಳೆ ಜಾನು. ಹಾಗಾಗಿ ಗಂಡನಿಗೆ ತನ್ನ ಮಾತಿನಲ್ಲೇ ಚಾಟಿ ಬೀಸುವ ಮೂಲಕ, ಆತನನ್ನು ಮನೆಯಿಂದ ಅಲುಗಾಡದ ಹಾಗೆ ತಡೆದಿದ್ದಾಳೆ. ಚಿನ್ನುಮರಿಯ ಹೊಸ ಆಟಕ್ಕೆ ಜಯಂತ್ ಕಂಗಾಲಾಗಿದ್ದಾನೆ. ಇದನ್ನು ನೋಡಿ ವೀಕ್ಷಕರು ಜಾನುಗೆ ಭೇಷ್ ಎಂದಿದ್ದಾರೆ.
ಚಿನ್ನುಮರಿಯ ಒಂದೇ ಅವಾಜ್‌ಗೆ ಥಂಡಾ ಹೊಡೆದ ಸೈಕೋ ಜಯಂತ್; ಈಗ ಮಜಾ ಬರ್ತಿದೆ ಎಂದ ವೀಕ್ಷಕರು!
ಅಯ್ಯೋ ಪಾಪ ಜಯಂತು, ಹಿಂಗ್ ಆಗಬಾರದು ಆಗಿತ್ತು ಪಾಪ ಜಯಂತ್ ಗೆ, ಚಿನ್ನುಮರಿ ಮೇಲೆ ಇರೋ ಅತಿಯಾದ ಪ್ರೀತಿ ಹೀಗೆಲ್ಲಾ ಮಾಡಸ್ತು... ಅದಕ್ಕೆ ಹೊಳೋದು ಅತೀ ಆದ್ರೆ ಅಮೃತಾನೂ ವಿಷ ಆಗುತ್ತೆ ಅಂತಾ ಉದಾಹರಣೆ ನಮ್ಮ ಕಣ್ಣಮುಂದೆ ಇದೆ, ಅಯ್ಯೋ ಪಾಪ ಜಯಂತ ನಿನಗೆ ಹೀಗೆ ಅಗುತ್ತೆ ಅನ್ಕೊಂಡಿರಲಿಲ್ಲ, ಸೈಕೋ ಜಯಂತ್ ಚಿನ್ನು ಮರಿ ಆಗಿದ್ದರೆ... ಚಿನ್ನು ಮರಿ ಅಲ್ಲ, ಚುರಮುರಿ ಆಗಿದ್ದಾರೆ, ಚಿನ್ನುಮರಿ ಜಾಣಮರಿ ಆಗಿದ್ದಾಳೆ ಎಂದು ಹೊಗಳಿಕೆ ಸೂಚಿಸಿದ್ದಾರೆ ವೀಕ್ಷಕರು.