ಸೋಶಿಯಲ್ ಮೀಡಿಯಾ ಸೆನ್ಸೇಷನ್ ರೇಷ್ಮಾ ಆಂಟಿ ಅವರ ಹೊಸ ಕಿಡ್ನಾಪ್ ರೀಲ್ಸ್ ವೈರಲ್ ಆಗಿದೆ. ರವಿ ಮಂಡ್ಯ ಜೊತೆಗೂಡಿ ಮಾಡಿರುವ ಈ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡಿದ್ದಾರೆ.
ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ರೇಷ್ಮಾ ಆಂಟಿಯ ಹೊಸ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಯ್ ಫ್ರೆಂಡ್ಸ್ ಎಂದು ವಿಡಿಯೋ ಆರಂಭಿಸುವ ರೇಷ್ಮಾ, ತಮ್ಮ ವೈರಲ್ ವಿಡಿಯೋಗಳಿಂದಲೇ ಇಂದು ಸೆಲಿಬ್ರಿಟಿಯಾಗಿದ್ದಾರೆ. ಜನರು ಸಹ ರೇಷ್ಮಾ ಅವರ ವಿಡಿಯೋಗಳಿಗೆ ಪ್ರೀತಿಯನ್ನು ನೀಡುತ್ತಿದ್ದು, ಅಧಿಕ ವ್ಯೂವ್ ಪಡೆದುಕೊಳ್ಳುತ್ತಿರುತ್ತವೆ. ಇದೀಗ ಕಿಡ್ನಾಪ್ ಆಗಿರೋ ರೀತಿಯಲ್ಲಿ ರೀಲ್ಸ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನವೀನ್ ಕುಮಾರ್ ಎಂಬ ಯುವಕನ ಜೊತೆ ಸೇರಿ ರೇಷ್ಮಾ ಅವರು ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿರುತ್ತವೆ. ತಮ್ಮ ವಿಡಿಯೋಗಳು ಎಷ್ಟೇ ಟ್ರೋಲ್ ಆದರೂ ರೇಷ್ಮಾ ಮತ್ತು ನವೀನ್ ಕುಮಾರ್ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ರೀಲ್ಸ್ ಮಾಡುತ್ತಿರುತ್ತಾರೆ. ಇದೀಗ ಮತ್ತೋರ್ವ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ರವಿ ಮಂಡ್ಯ ಎಂಬವರೊಂದಿಗೆ ರೇಷ್ಮಾ ರೀಲ್ಸ್ ಮಾಡಿದ್ದಾರೆ.
ಈ ರೀಲ್ಸ್‌ನ್ನು ರವಿ ಮಂಡ್ಯ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ರವಿ ಮಂಡ್ಯ ಸಹ ತಮ್ಮ ವಿಭಿನ್ನ ಕಂಟೆಂಟ್‌ಗಳ ಮೂಲಕ ಸೋಶಿಯಲ್ ಮೀಡಿಯಾ ಮೂಲಕ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇದೀಗ ರೇಷ್ಮಾ ಜೊತೆ ಮಾಡಿರುವ ರೀಲ್ಸ್‌ಗೆ 38 ಸಾವಿರಕ್ಕೂ ಅಧಿಕ ಲೈಕ್ಸ್ ಮತ್ತು ನೂರಾರು ಕಮೆಂಟ್‌ಗಳು ಬಂದಿವೆ. ರವಿ ಅಣ್ಣ ಜೀವನದಲ್ಲಿ ನೀನು ಮೊದಲನೆಯದಾಗಿ ಒಳ್ಳೆ ಕೆಲಸ ಮಾಡಿದ್ಯಾ ಅಂದ್ರೆ ಇದೊಂದೇ ಕಣಪ್ಪ. ಅವಳು ಓವರ್ ಆಕ್ಟಿಂಗ್ ಅಂದ್ರೆ ನೀನು ಅದಕ್ಕಿಂತ ಓವರ್ ಆಕ್ಟಿಂಗ್ ನಿನ್ನದು.ನೀನು ಮೊದ್ಲು ಹೋಗಿ ಡ್ಯಾಮ್‌ಗೆ ಬೀಳು ಎಂದು ತಮಾಷೆ ಮಾಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಹಾಯ್ ಫ್ರೆಂಡ್ಸ್, ನೀವು ನನ್ನನ್ನು ಎಷ್ಟು ಬೆಳೆಸಿದ್ದೀರಿ ಅಂದ್ರೆ ರವಿ ಮಂಡ್ಯ ಅವರನ್ನು ನಾನು ಪರ್ಸನಲ್ ಮೇಕಪ್ ಮ್ಯಾನ್ ಆಗಿ ಇಟ್ಕೊಂಡಿದ್ದೇನೆ ಎಂದು ರೇಷ್ಮಾ ಅಂಟಿ ಹೇಳುತ್ತಾರೆ. ಇದಕ್ಕೆ ಕೋಪಗೊಳ್ಳುವ ರವಿ ಮಂಡ್ಯ, ಒಮಿನಿ ವ್ಯಾನ್ ಡಿಕ್ಕಿ ಓಪನ್ ಮಾಡುತ್ತಾರೆ. ನಂತರ ರೇಷ್ಮಾ ಕೈ-ಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಡಿಕ್ಕಿಯೊಳಗೆ ಹಾಕುತ್ತಾರೆ. ಬಿದ್ಕೋ ಕಪಿ ಮುಂಡೆದೆ, ಇನ್ನೊಂದ್ ಸಾರಿ ಆ ಕಟ್ಟಪ್ಪನ ಜೊತೆ ನೀನು ವಿಡಿಯೋನೇ ಮಾಡಬಾರದು. ನಿನ್ನನ್ನು ಕೆಆರ್‌ಎಸ್ ಡ್ಯಾಂಗೆ ಎತ್ತಿ ಹಾಕುವೆ ಎಂದು ವ್ಯಾನ್ ಚಾಲನೆ ಮಾಡಿಕೊಂಡು ಹೋಗುತ್ತಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಸರ್ ನನ್ನ ಒಳಗೆ ಕರ್ಕೊಳ್ಳಿ; ವಿಧಾನಸೌಧ ಮುಂದೆ ಕಿರುಚಿ ಕೂಗಾಡಿದ ರೇಶ್ಮಾ ಆಂಟಿ ವಿಡಿಯೋ ವೈರಲ್
ಈ ರೀಲ್ಸ್ ನೋಡಿದ ನೆಟ್ಟಿಗರು, ಅಣ್ಣಾ ಆವಮ್ಮನ ವಿಡಿಯೋ ನೋಡಕ್ ಆಯಿತಲ್ಲ ಅಣ್ಣ ಫಸ್ಟ್ ತಗೊಂಡ್ ಹೋಗಿ KRS ಡ್ಯಾಮ್ ಆಕ್ಬಿಡು ದೇವರು ಒಳ್ಳೇದ್ ಮಾಡ್ತಾನೆ ನಿನಗೆ, instagram ಓಪನ್ ಮಾಡಿದ್ರೆ ಸಾಕುವಮ್ಮನೆ ಬರ್ತಾಳೆ ನೋಡಿ ನೋಡಿ ಬೇಜಾರ್ ಆಗ್ಬಿಟ್ಟೈತೆ ಅಣ್ಣ ಎಂದು ತಮ್ಮ ಗೋಳು ತೋಡಿಕೊಂಡಿದ್ದಾರೆ. ಏನ್ ಗುರು ನಿನಗೆ ಇಟ್ಕೊಂಡಳಂತೆ, ಯಾವುದಾದರೂ ಕಸದಲ್ಲಿ ಹಾಕಿ ಬೆಂಕಿ ಇಟ್ಟು ಸುಟ್ಟಿಬಿಡು, ನಿನಗೆ ಪುಣ್ಯ ಬರುತ್ತೆ ಎಂದು ಕಮೆಂಟ್ ಮಾಡಿದ್ದಾರೆ.
ಆರಂಭದಲ್ಲಿ ತಮಗೆ ತೋಚಿದ್ದನ್ನು ಮಾತಾಡಿ ರೀಲ್ಸ್ ಮಾಡುತ್ತಿದ್ದರು. ತಮ್ಮ ದಿನನಿತ್ಯ ಜೀವನ ಘಟನೆಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಿದ್ದರು. ಈ ವಿಡಿಯೋಗಳಿಂದ ಫೇಮಸ್ ಆದ ರೇಷ್ಮಾ ಅವರು ಖಾಸಗಿ ವಾಹಿನಿ ಕಾಮಿಡಿ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿದ್ದರು. ರಿಯಾಲಿಟಿ ಶೋ ಬಳಿಕ ಸ್ಯಾಂಡಲ್‌ವುಡ್ ಹಾಡುಗಳನ್ನು ರಿಕ್ರಿಯೇಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಛೀ ಛೀ...ಯುವಕನ ಜೊತೆಗಿರುವ ವಿಡಿಯೋ ವೈರಲ್: ಡಿವೋರ್ಸ್ ಗಾಸಿಪ್‌ಗೆ ಬ್ರೇಕ್ ಹಾಕಿದ ರೇಶ್ಮಾ ಆಂಟಿ!