ಚಂದನ್ ಶೆಟ್ಟಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಮಾಡುವ ಮೂಲಕ ಅಭಿಮಾನಿಗಳಿಗೆ ಸಕತ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅವರು ಹೇಳಿದ್ದೇನು?
ಕನ್ನಡದ ರ್‍ಯಾಪರ್ ಚಂದನ್ ಶೆಟ್ಟಿ ಅವರು 'ಕಾಟನ್ ಕ್ಯಾಂಡಿ' ಹೆಸರಿನ ಮ್ಯೂಸಿಕ್ ವಿಡಿಯೋದಲ್ಲಿ ಸಕತ್ ಬಿಜಿಯಾಗಿರೋ ನಡುವೆಯೇ ಇದೀಗ ಮಾಜಿ ಪತ್ನಿ ನಿವೇದಿತಾ ಗೌಡ ಅವರ ಜೊತೆಗೆ ನಟಿಸಿದ್ದ ಮುದ್ದು ರಾಕ್ಷಸಿ ಚಿತ್ರದ ಶೂಟಿಂಗ್ ಕೂಡ ಮುಗಿಸಿ ನಿರಾಳರಾಗಿದ್ದಾರೆ. ನಿವೇದಿತಾ ಜೊತೆಗಿನ ದಾಂಪತ್ಯ ಜೀವನವನ್ನು ಕೊನೆಗಾಣಿಸಿದ ಬಳಿಕ ಮತ್ತೆ ಕಮ್ಬ್ಯಾಕ್ ಆಗಿದ್ದು ನೋಡಿ ಫ್ಯಾನ್ಸ್ಗೆ ಸಕತ್ ಖುಷಿಯಾಗಿದೆ. ಮೊನ್ನೆಯಷ್ಟೇ ಈ ಮಾಜಿ ದಂಪತಿ ಬಂದು ಪತ್ರಿಕಾಗೋಷ್ಠಿ ಮಾಡಿ ಸಿನಿಮಾದ ಕೊನೆಯ ದೃಶ್ಯಗಳನ್ನು ಶೂಟಿಂಗ್ ಮಾಡಿ ಹೋಗಿದೆ. ಅಲ್ಲಿ ಒಂದಿಷ್ಟು ಡ್ರಾಮಾ ಕ್ರಿಯೇಟ್ ಕೂಡ ಆಗಿದ್ದು, ಎಲ್ಲವೂ ಪಬ್ಲಿಸಿಟಿಗಾಗಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗಳ ಸುರಿಮಳೆಯೂ ಆಗುತ್ತಿದೆ.
ಟ್ರೋಲರ್ಸ್‌ಗಳಿಗೆ ಏನು ಬಿಡಿ... ಆದರೆ ವಿಷಯ ಅದಲ್ಲ. ಚಂದನ್ ಶೆಟ್ಟಿ ಅವರು ಇನ್ನಷ್ಟು ಮೇಲಕ್ಕೆ ಹೋಗಬೇಕು, ದಾಂಪತ್ಯದ ಕಹಿ ಘಟನೆಯನ್ನು ಮರೆತು ಬದುಕನ್ನು ಮುಂದಕ್ಕೆ ಸಾಗಿಸಬೇಕು ಎಂದುಕೊಂಡಿರುವ ಹಲವು ಅಭಿಮಾನಿಗಳು ಇದ್ದಾರೆ. ಡಿವೋರ್ಸ್ ಬಳಿಕವೂ ಸೋಷಿಯಲ್ ಮೀಡಿಯಾದಲ್ಲಿ ಚಂದನ್ ಶೆಟ್ಟಿ ಅವರ ಪರವಾಗಿಯೇ ಬರುತ್ತಿದ್ದ ಕಮೆಂಟ್ಸ್ ನೋಡಿದರೆ ಅವರಿಗೆ ಎಷ್ಟು ಮಂದಿ ಅಭಿಮಾನಿಗಳು ಇದ್ದಾರೆ ಎನ್ನುವುದು ತಿಳಿಯುತ್ತದೆ. ನಿವೇದಿತಾ ಅವರ ಹೊಸ ಹೊಸ ರೂಪಗಳ ರೀಲ್ಸ್ ನೋಡಿದ ಮೇಲೆ ಅವರು ನೆಗೆಟಿಂಗ್ ಕಮೆಂಟ್‌ಗಳಿಂದಲೇ ಹೆಚ್ಚು ಪ್ರಸಿದ್ಧರಾಗುತ್ತಿದ್ದರೆ, ಚಂದನ್ ಶೆಟ್ಟಿ ವಿಷಯದಲ್ಲಿ ಹಾಗಲ್ಲ. ಇವರಿಗೆ ಪಾಸಿಟಿವ್ ಕಮೆಂಟ್‌ಗಳು ಬರುವುದೇ ಹೆಚ್ಚು. ಇಂತೆಲ್ಲಾ ಅಭಿಮಾನಿಗಳಿಗೆ ಚಂದನ್ ಶೆಟ್ಟಿ, ಇದೀಗ ಗುಡ್‌ನ್ಯೂಸ್ ಕೊಟ್ಟಿದ್ದಾರೆ.
ಚಂದನ್ ಶೆಟ್ಟಿಯನ್ನು ಮದ್ವೆಯಾದ ಗುಟ್ಟು ಕೊನೆಗೂ ಬಾಯ್ಬಿಟ್ಟ ನಿವೇದಿತಾ ಗೌಡ: ಅಲೆಲೆ ಹೆಣ್ಣೇ ಎಂದ ನೆಟ್ಟಿಗರು!
ಅದೇನೆಂದರೆ, ಇಂಗ್ಲೆಂಡ್‌ನ ಹಲವು ಕಡೆಗಳಲ್ಲಿ ಅವರು ಷೋ ಆಯೋಜಿಸಿದ್ದಾರೆ ಮಾರ್ಚ್ 21ರಿಂದ ಕೆಲವು ದಿನಗಳವರೆಗೆ ವಿವಿಧ ಜಾಗಗಳಲ್ಲಿ ಅವರು ಮ್ಯೂಸಿಕ್ ಷೋ ನೀಡಲಿದ್ದಾರೆ. ಅಲ್ಲಿಯ ಕನ್ನಡಿಗರು ಈ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ಹೇಳಿದ್ದಾರೆ. ಅಲ್ಲಿರುವ ಎಲ್ಲಾ ಕನ್ನಡಿಗರು ಬಂದು ತಮ್ಮನ್ನು ಆಶೀರ್ವದಿಸುವಂತೆ ಕೇಳಿಕೊಂಡಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇನ್ನಷ್ಟು ಮೇಲು ಮಟ್ಟಕ್ಕೆ ಹೋಗಿ ದೇಶದ, ಕರ್ನಾಟಕ ಕೀರ್ತಿ ಹೆಚ್ಚಿಸಿ ಎನ್ನುತ್ತಿದ್ದಾರೆ.
ಅಷ್ಟಕ್ಕೂ,ಕನ್ನಡದ ರ್‍ಯಾಪ್ ಸಾಂಗ್ಸ್‌ಗಳ ಹೊಸ ಹೊಸ ಪ್ರಯೋಗ ಮಾಡುವಲ್ಲಿ ಫೇಮಸ್ ಆಗಿರೋ ಚಂದನ್ ಅವರು ಇದಾಗಲೇ ಹಲವಾರು ಹಿಟ್ ಹಾಡುಗಳನ್ನು ನೀಡಿದ್ದಾರೆ. '3 ಪೆಗ್', 'ಟಕಿಲಾ', 'ಪಕ್ಕಾ ಚಾಕೋಲೆಟ್ ಗರ್ಲ್' ಹೀಗೆ ಹಲವು ಹಾಡುಗಳು ಇಂದಿಗೂ ಹಲವರ ಬಾಯಲ್ಲಿ ನಲಿದಾಡುತ್ತಿರುತ್ತವೆ. ಅದರಲ್ಲಿಯೂ ಪಬ್, ರೆಸಾರ್ಟ್ ಪಾರ್ಟಿಗಳಲ್ಲಿ ಕನ್ನಡದ ಹಾಡು ಎಂದರೆ ಇವರ ಹಾಡೇ ಕೇಳಿಬರುವಷ್ಟರ ಮಟ್ಟಿಗೆ ಇವರ ಹಾಡು ಫೇಮಸ್ ಆಗಿವೆ. 2011 ರಿಂದಲೂ ತಮ್ಮ ರ್‍ಯಾಪ್ ಸಾಂಗ್ಸ್‌ಗಳ ಮೂಲಕ ಇವರು ಫೇಮಸ್ ಆಗಿದ್ದು, ಇದಾಗಲೇ 15ಕ್ಕಿಂತ ಹೆಚ್ಚು ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ. ಇವರೇ ಹಾಡಿದ್ದಾರೆ ಕೂಡ. ಇದೀಗ ಅವರ ಮ್ಯೂಸಿಕ್ ವಿಡಿಯೋ 'ಕಾಟನ್ ಕ್ಯಾಂಡಿ' ಸಕತ್ ಸೌಂಡ್ ಮಾಡುತ್ತಿದೆ. ಸದ್ಯ ಟ್ರೆಂಡಿಂಗ್ ಕ್ರಿಯೇಟ್ ಮಾಡಿದೆ ಈ ವಿಡಿಯೋ.
ನಿವೇದಿತಾ ಎದುರೇ ಬಾಡಿ ಬಿಲ್ಡ್ ಗುಟ್ಟು ರಟ್ಟು ಮಾಡಿದ ಚಂದನ್ ಶೆಟ್ಟಿ -ಹೊಸ ಜೀವನದ ಬಗ್ಗೆ ಹೇಳಿದ್ದೇನು?