ʼಬಿಗ್ ಬಾಸ್ ಕನ್ನಡʼ ಖ್ಯಾತಿಯ ವಿನಯ್ ಗೌಡ, ರಜತ್ ಕಿಶನ್ ವಿರುದ್ಧ ದೂರು ದಾಖಲಾಗಿದೆ. ಯಾಕೆ? ಏನಾಯ್ತು?
ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ವಿನಯ್ ಗೌಡ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 11 ಸ್ಪರ್ಧಿ ರಜತ್ ಕಿಶನ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆರ್ಮ್ ಆ್ಯಕ್ಟ್ ಅಡಿಯಲ್ಲಿ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರು ದಾಖಲು!
ಬಸವೇಶ್ವರನಗರ ಠಾಣಾ ಪಿಎಸ್ ಐ ಭಾನು ಪ್ರಕಾಶ್ ನೀಡಿದ ದೂರಿನ ಅನ್ವಯ ಎಫ್ಐಆರ್ ದಾಖಲಾಗಿದೆ. ಇವರಿಬ್ಬರು ರೀಲ್ಸ್ ಮಾಡುವಾಗ ಎಡವಟ್ಟು ಮಾಡಿಕೊಂಡಿದ್ದಾರೆ. ಕೈಯಲ್ಲಿ ಲಾಂಗ್ ಹಿಡಿದುಕೊಂಡು ಪೋಸ್ ಕೊಟ್ಟಿದ್ದಾರೆ. ಬಿಗ್ ಬಾಸ್ ರಜತ್ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರೀಲ್ಸ್ ಅಪ್‌ಲೋಡ್ ಆಗಿದೆ. ಲಾಂಗ್ ಹಿಡಿದುಕೊಂಡು ಭಯದ ವಾತಾವರಣ ಸೃಷ್ಟಿಯಾಗುವಂತೆ ರೀಲ್ಸ್ ಮಾಡಿದ್ದರೆಂದು ದೂರು ದಾಖಲಿಸಲಾಗಿದೆ.
ಲಾಂಗ್ ಹಿಡಿದು ರೀಲ್ಸ್ ಮಾಡಿದ ಬಿಗ್ ಬಾಸ್ ರಜತ್, ವಿನಯ್ ಗೌಡ; ಇವರ ಮೇಲೆ ಕೇಸ್ ಯಾಕಿಲ್ಲ?
ದುರ್ವರ್ತನೆ ತೋರಲಾಯ್ತು!
ಸಾರ್ವಜನಿಕ ಸ್ಥಳದಲ್ಲಿ, ಕಾನೂನು ಬಾಹಿರವಾಗಿ ಲಾಂಗ್ ಹಿಡಿದುಕೊಂಡು ರೀಲ್ಸ್ ಮಾಡಿದ್ದಾರೆ. ಸಾರ್ವಜನಿಕರ ಶಾಂತಿ ನೆಮ್ಮದಿಗೆ ಭಂಗವಾಗುವಂತಹ ಕೆಲಸ ಮಾಡಿರುತ್ತಾರೆ ಎಂದು ಆರೋಪಿಸಲಾಗಿದೆ. ಲಾಂಗ್ ಹಿಡಿದುಕೊಂಡು ಇಬ್ಬರು ಜೊತೆಗೆ ನಡೆದುಕೊಂಡು ರೀಲ್ಸ್ ಮಾಡಿದ್ದಾರೆ. ವಿಡಿಯೋವನ್ನು ಬುಜ್ಜಿ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿ ಹಾಳು ಮಾಡುವ ರೀತಿ ದುರ್ವರ್ತನೆ ತೋರಿಸಲಾಗಿದೆ ಎಂದು ಆರೋಪಿಸಲಾಗಿದೆ.
ನಿಷೇಧಿತ ಮಾರಕಾಸ್ತ್ರ ಬಳಕೆ!
18 ಸೆಕೆಂಡ್‌ಗಳ ವಿಡಿಯೋ ಲಿಂಕ್ ಮೂಲಕ ದೂರು ನೀಡಲಾಗಿದೆ. ನಿಷೇಧಿತ ಮಾರಕಾಸ್ತ್ರವಾದ ಹಿಡಿದುಕೊಂಡು ರೀಲ್ಸ್ ಮಾಡಿದ್ದಾರೆ. ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿ ಹಾಳು ಮಾಡಿದ್ದಾರೆ. ಹೀಗಾಗಿ ರಜತ್ ಹಾಗೂ ವಿನಯ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ದಾಖಲಿಸಲಾಗಿದೆ. ಬಸವೇಶ್ವರನಗರ ಠಾಣೆಯ ಸೋಷಿಯಲ್ ಮೀಡಿಯಾ ಮಾನಿಟಿರಿಂಗ್ ಉಸ್ತುವರಿ ಆಗಿರುವ ಪಿಎಸ್ಐ ಪ್ರಕಾಶ್ ಅವರು ತನಿಖೆ ಆರಂಭಿಸಿದ್ದಾರೆ.
28 ವರ್ಷಗಳ ಬಳಿಕ ತಾನು ಕಲಿತ ಹೈಸ್ಕೂಲ್‌ಗೆ ಅತಿಥಿಯಾಗಿ ಭೇಟಿ ಕೊಟ್ಟ 'Bigg Boss' ಖ್ಯಾತಿಯ ವಿನಯ್ ಗೌಡ!
ʼಬಾಯ್ಸ್ v/s ಗರ್ಲ್ಸ್ʼ ರಿಯಾಲಿಟಿ ಶೋನಲ್ಲಿ ವಿನಯ್ ಗೌಡ, ರಜತ್ ಭಾಗವಹಿಸಿದ್ದರು. ಆ ವೇಳೆ ಅವರಿಬ್ಬರು ಲಾಂಗ್ ಹಿಡಿದುಕೊಂಡು ಆಕ್ಟ್ ಮಾಡಬೇಕಿತ್ತು. ಅದೇ ಟೈಮ್‌ನಲ್ಲಿ ತೆರೆ ಹಿಂದೆ ಇವರಿಬ್ಬರು ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್ ಸಂಕಷ್ಟಕ್ಕೆ ದೂಡಿದೆ.
ವಿನಯ್ ಗೌಡ, ರಜತ್ ಕಿಶನ್ ಅವರು ಉತ್ತಮ ಸ್ನೇಹಿತರು. ದಶಕಗಳಿಂದಲೂ ಇವರಿಬ್ಬರು ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ.