
ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ನೇಹಾ ಗೌಡ ಹಾಗೂ ಚಂದನ್ ಗೌಡ ದಂಪತಿ ಮಗಳಿಗೆ ನಾಮಕರಣ ಮಾಡಿದ್ದಾರೆ. ನಮ್ಮ ಮಗುವಿಗೆ ತುಂಬ ಡಿಫರೆಂಟ್ ಆಗಿರೋ, ಯುನಿಕ್ ಆಗಿರೋ ಹೆಸರು ಇಡಬೇಕು ಅಂತ ಇಂದಿನ ಪಾಲಕರು ಉಚ್ಛಾರ ಮಾಡಲು ಕಷ್ಟವಾಗುವ, ಕ್ಯಾಚಿ ಅಲ್ಲದ ಹೆಸರು ಇಡುತ್ತಾರೆ. ಅಷ್ಟೇ ಅಲ್ಲದೆ ಹಳೆಯ ಹೆಸರುಗಳ ಕಡೆ ಅಥವಾ ತುಂಬ ಹೆಸರು ಇದ್ದರೆ ಅತ್ತ ಕಡೆ ಮುಖ ಕೂಡ ಹಾಕೋದಿಲ್ಲ. ಆದರೆ ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ನಟಿ ನೇಹಾ ಗೌಡ ಮಾತ್ರ ಮಗಳಿಗೆ ಧಾರ್ಮಿಕವಾಗಿ, ತುಂಬ ಮುದ್ದಾದ ಹೆಸರನ್ನಿಟ್ಟಿದ್ದಾರೆ.
ಖಾಸಗಿಯಾಗಿ ನಡೆದ ನಾಮಕರಣ!
ಬೆಂಗಳೂರಿನಲ್ಲಿ ನಾಮಕರಣ ಶಾಸ್ತ್ರ ನಡೆದಿದೆ. ಖಾಸಗಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಕಿರುತೆರೆಯ ಕಲಾವಿದರು, ನಿರ್ದೇಶಕರು, ತಂತ್ರಜ್ಞರು, ಕುಟುಂಬಸ್ಥರು, ಆತ್ಮೀಯರು, ಸ್ನೇಹಿತರು ಭಾಗವಹಿಸಿದ್ದರು. ಅನೇಕರು ನೇಹಾರ ಮುದ್ದಾದ ಮಗಳಿಗೆ ಆಶೀರ್ವದಿಸಿದ್ದಾರೆ.
ಅಯ್ಯೋ ನಿನ್ನ ಸೊಸೆ ಈ ತರ ಬಟ್ಟೆ ಹಾಕ್ತಾಳಾ ಎಂದು ಕೊಂಕು ಮಾಡುವವರಿಗೆ ಖಡಕ್ ಉತ್ತರ ಕೊಟ್ಟ ನೇಹಾ ಗೌಡ
ಚಂದನ್-ನೇಹಾ ಮಗಳ ಹೆಸರು ಏನು?
ನೇಹಾ ಗೌಡ ಹಾಗೂ ಚಂದನ್ ಗೌಡ ಅವರು ಮಗಳಿಗೆ ʼಶಾರದಾʼ ಎಂದು ಹೆಸರು ಇಟ್ಟಿದ್ದಾರೆ. ಶಾರದಾ ಎಂದರೆ ಮಾತೆ ಸರಸ್ವತಿ ಎಂದರ್ಥ. ಜ್ಞಾನ, ಕಲಿಯುವಿಕೆಗೆ ಶಾರದಾ ಮಾತೆಯ ಅಸ್ತು ಬೇಕೇ ಬೇಕು. ಇನ್ನು 18 ಇನ್ನು ಶರತ್ಕಾಲವನ್ನು ಕೂಡ ಶಾರದಾ ಎಂದು ಕರೆಯಲಾಗುವುದು. ಭಾದ್ರಪದ, ಅಶ್ವಿನಿ, ಕಾರ್ತಿಕ ಮಾಸವನ್ನು ಶರತ್ಕಾಲ ಎನ್ನುವರು. 18 ಶಕ್ತಿ ಪೀಠಗಳಲ್ಲಿ ಒಂದಾದ ಶಾರದಾ ಪೀಠವು ಕಾಶ್ಮೀರ ಪ್ರದೇಶದಲ್ಲಿದೆ ಮತ್ತು ಸತಿಯ ಬಲಗಣ್ಣು ಬಿದ್ದ ಸ್ಥಳ ಎಂದು ನಂಬಲಾಗಿದೆ. ಮಗಳಿಗೆ ಶಾರದಾ ಎನ್ನುವ ಹಿಂದು ಧರ್ಮದ ದೇವಿ ಹೆಸರಿಟ್ಟಿರೋದು ಅನೇಕರಿಗೆ ಖುಷಿ ಕೊಟ್ಟಿದೆ. ಇನ್ನು ಈ ಹೆಸರು ಬೆಗ ತಲೆಯಲ್ಲಿ ಉಳಿದುಕೊಳ್ಳುವುದು. ಇನ್ನು ನಟಿ ಶ್ರುತಿ ಹರಿಹರನ್ ಅವರು ತಮ್ಮ ಮಗಳಿಗೆ ಜಾನಕಿ ಎಂದು ಹೆಸರು ಇಟ್ಟಿದ್ದಾರೆ.
ವಾಚ್ ಕೊಡುವುದಾಗಿ ಕರೆದು ಬಾಗಿಲು ಹಾಕಿದ... ಬಾಲ್ಯದ ಮೈನಡುಗುವ ಕರಾಳ ಘಟನೆ ನೆನೆದ ನೇಹಾ ಗೌಡ
ಅದ್ದೂರಿ ಮದುವೆ
ಶಾಲೆಗೆ ಹೋಗುವ ಸಮಯದಿಂದ ಚಂದನ್ ಹಾಗೂ ನೇಹಾ ಗೌಡ ಅವರು ಪ್ರೀತಿಸಲು ಆರಂಭಿಸಿದ್ದರು. ಚಂದನ್ ಅವರು ಉದ್ಯಮದತ್ತ ಮುಖ ಮಾಡಿದ್ದರೆ, ಇತ್ತ ನೇಹಾ ಗೌಡ ನಟಿಯಾಗಿ ಕೆಲಸ ಆರಂಭಿಸಿದ್ದರು. ಇನ್ನು ಕುಟುಂಬದವರನ್ನು ಒಪ್ಪಿಸಿ ಈ ಜೋಡಿ 2018ರಲ್ಲಿ ಮದುವೆಯಾಗಿತ್ತು. ವಿಶೇಷ ಬೇಬಿಬಂಪ್ ಫೋಟೋಶೂಟ್ ಮೂಲಕ ಈ ಜೋಡಿ ಮಗುವಿನ ನಿರೀಕ್ಷೆಯಲ್ಲಿರೋದಾಗಿ ಹೇಳಿಕೊಂಡಿತ್ತು. ಅದಾದ ನಂತರ ಚಂದನ್ ಅವರು ಬಹಳ ಅದ್ದೂರಿಯಾಗಿ ಪತ್ನಿ ಸೀಮಂತ ಮಾಡಿದ್ದರು. ಕಿರುತೆರೆಯ ನಟ, ನಟಿಯರು ಈ ಸೀಮಂತದಲ್ಲಿ ಭಾಗಿಯಾಗಿದ್ದರು. ಇನ್ನು 2024 ಅಕ್ಟೋಬರ್ 29ರಂದು ನೇಹಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅದಾದ ನಂತರದಲ್ಲಿ ಮಗಳ ಜೊತೆ ಈ ಜೋಡಿ ವಿಶೇ಼ಷವಾಗಿ ಫೋಟೋಶೂಟ್ ಮಾಡಿಸಿಕೊಂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.