'ಅಣ್ಣಯ್ಯ' ಧಾರಾವಾಹಿಯಲ್ಲಿ ಮಾರಿಗುಡಿ ಶಿವು ಹಾಗೂ ಪಾರು ಒಂದಾಗಬೇಕು, ಸಂಸಾರ ಶುರು ಮಾಡಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಹೀಗಿರುವಾಗಲೇ ವೀಕ್ಷಕರಿಗೆ ಬ್ಯಾಡ್ ನ್ಯೂಸ್ ಸಿಕ್ಕಿದೆ. ಏನದು?
‘ಅಣ್ಣಯ್ಯ’ ಧಾರಾವಾಹಿಯಲ್ಲಿ ಮಾರಿಗುಡಿ ಶಿವುಗೆ ಪ್ರೇಮ ನಿವೇದನೆ ಮಾಡಬೇಕು, ನಾನು ನನ್ನ ಮಾವನ ಜೊತೆ ಸಂಸಾರ ಮಾಡಬೇಕು ಅಂತ ಪಾರು ಕನಸು ಕಾಣುತ್ತಿದ್ದಾಳೆ. ಅದೇ ಸಮಯಕ್ಕೆ ಮಗಳ ಜೀವನ ಹಾಳು ಮಾಡಬೇಕು ಅಂತ ಪಾರು ಅಪ್ಪ ಪಂಚಾಯಿತಿ ಕರೆದಿದ್ದಾನೆ.
ಪಂಚಾಯಿತಿ ಕರೆದಿದ್ದಾನೆ!
ಶಿವುಗೆ ಪ್ರೇಮ ನಿವೇದನೆ ಮಾಡಬೇಕು ಅಂತ ಪಾರು ಈಗಾಗಲೇ ಸಾಕಷ್ಟು ಸಲ ಅಂದುಕೊಂಡಿದ್ದಳು. ಪಾರು ಹೇಳೋದು ಶಿವುಗೆ ಅರ್ಥ ಆಗಿರಲಿಲ್ಲ. ಈಗ ಅವಳು ಈ ಬಾರಿ ಹೇಳಲೇಬೇಕು ಅಂತ ಫಿಕ್ಸ್ ಆಗಿದ್ದಾಳೆ. ಅಂದು ಡಿವೋರ್ಸ್‌ಗೆ ಶಿವು-ಪಾರು ಅಪ್ಲೈ ಮಾಡಿರೋದು ಪಾರು ತಂದೆಗೆ ಗೊತ್ತಾಗಿದೆ. ಅದನ್ನೇ ಇಟ್ಟುಕೊಂಡು ಅವನು ಗಂಡ-ಹೆಂಡತಿ ದೂರ ಮಾಡಲು ರೆಡಿ ಆಗಿದ್ದಾನೆ. ಹೀಗಾಗಿ ಪಂಚಾಯಿತಿ ಕೂಡ ಕರೆದಿದ್ದಾನೆ.
ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಕೆಲಸ ಮಾಡಿದ್ದ ʼಅಣ್ಣಯ್ಯ ಧಾರಾವಾಹಿʼ ಜಿಮ್ ಸೀನ ತಾಯಿ ವಿದ್ಯಾರ್ಹತೆ ಏನು?
ದೇವರ ಪ್ರಸಾದ ಬಿತ್ತು!
ಇನ್ನೊಂದು ಕಡೆ ದೇವಸ್ಥಾನದಲ್ಲಿ ಶಿವು-ಪಾರು ದೇವಿಗೆ ನಮಸ್ಕರಿಸುತ್ತಿದ್ದಾಳೆ. ಇನ್ನು ಪಾರುಗೆ ಶಿವು ಹೂ ಮುಡಿಸಿದ್ದಾನೆ. ಅಷ್ಟೇ ಅಲ್ಲದೆ ನನ್ನ ಪ್ರೀತಿಯನ್ನು ಮಾವ ಒಪ್ಪಿಕೊಳ್ಳಲಿ, ನನಗೆ ಪ್ರೀತಿ ಹೇಳುವ ಧೈರ್ಯ ತಂದುಕೊಡು ಅಂತ ಪಾರು ಮನಸ್ಸಿನಲ್ಲಿ ಬೇಡಿದ್ದಳು. ದೇವರು ಎಡಗಡೆಯಿಂದ ಹೂ ಕೊಟ್ಟಿದ್ದನು, ಅಂದರೆ ಪಾರು-ಶಿವು ಒಂದಾಗೋದಿಲ್ಲ ಎಂದು ಅರ್ಥೈಸಿಕೊಳ್ಳಬಹುದು. ಆದರೆ ಈ ಜೋಡಿ ದೂರ ಆಗೋಕೆ ಚಾನ್ಸ್ ಇಲ್ಲ. ಎಲ್ಲ ಸವಾಲುಗಳು, ಸಮಸ್ಯೆಗಳನ್ನು ದೂರ ಮಾಡಿ ಇವರಿಬ್ಬರು ಒಂದಾಗ್ತಾರೆ.
ಜಿಮ ಸೀನನ ಪಾಲಿಗೆ ವಿಲನ್ ಆದ ಪಿಂಕಿ
ಇನ್ನು ಗುಂಡಮ್ಮ ಹಾಗೂ ಜಿಮ್ ಸೀನ ಮದುವೆ ನಡೆದು ಹೋಗಿದೆ. ಸೀನನಿಗೆ ಈ ಮದುವೆ ಇಷ್ಟವೇ ಇರಲಿಲ್ಲ. ಗುಂಡಮ್ಮ ಒಪ್ಪಿಕೊಂಡಳು ಅಂತ, ತಂದೆಯ ಬಲವಂತಕ್ಕೆ ಅವನು ಮದುವೆ ಆಗಿದ್ದಾನೆ. ಇದರಿಂದ ಅವನು ಪ್ರೀತಿಸಿದ್ದ ಹುಡುಗಿ ಪಿಂಕಿ ಸಿಟ್ಟಾಗಿದ್ದಾಳೆ. ಹೀಗಾಗಿ ಅವಳು ಸೇಡು ತೀರಿಸಿಕೊಳ್ಳಲು ಪ್ಲ್ಯಾನ್ ಹಾಕಿದ್ದಾಳೆ.
ದುಡ್ಡು ಮಾಡ್ಬೇಕು ಅಂತಿದ್ದ ನಟಿ ಪ್ರತೀಕ್ಷಾ, ʼಅಣ್ಣಯ್ಯʼ ಧಾರಾವಾಹಿಗೋಸ್ಕರ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ರು!
ಇನ್ನು ಈ ಎಪಿಸೋಡ್ ನೋಡಿ ಸೋಶಿಯಲ್ ಮೀಡಿಯಾದಲ್ಲಿ ವೀಕ್ಷಕರು ಏನು ಹೇಳಿದರು?
ಈ ಧಾರಾವಾಹಿಯಲ್ಲಿ ಶಿವು ಪಾತ್ರದಲ್ಲಿ ವಿಕಾಶ್ ಉತ್ತಯ್ಯ, ಪಾರು ಪಾತ್ರದಲ್ಲಿ ನಿಶಾ ರವಿಕೃಷ್ಣನ್, ಗುಂಡಮ್ಮ ಪಾತ್ರದಲ್ಲಿ ಪ್ರತೀಕ್ಷಾ ಶ್ರೀನಾಥ್ ನಟಿಸುತ್ತಿದ್ದಾರೆ. ಅಂದಹಾಗೆ ನಾಗೇಂದ್ರ ಶಾ ಕೂಡ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.