ʼಮುಂಗಾರು ಮಳೆʼ ಹಾಗೂ ʼಮನದ ಕಡಲುʼ-ಇವೆರಡೂ ಯೋಗರಾಜ್ ಭಟ್ ಸಿನಿಮಾಗಳೇ. ಯುಗಾದಿ ಹಬ್ಬದ ಪ್ರಯುಕ್ತ ಯೋಗರಾಜ್ ಭಟ್ ಅವರ ಈ ಎರಡೂ ಸಿನಿಮಾ ತಂಡಗಳು ʼಮಜಾ ಟಾಕೀಸ್ʼ ಶೋಗೆ ಆಗಮಿಸಿವೆ.
ಯೋಗರಾಜ್ ಭಟ್ 'ಮುಂಗಾರು ಮಳೆ' ಕನ್ನಡ ಚಿತ್ರರಂಗಕ್ಕೆ ಬಂಗಾರ ಬೆಳೆದು ಕೊಟ್ಟ ಸಿನಿಮಾವಿದು. ಈ ಸಿನಿಮಾ ಬಿಡುಗಡೆಯಾಗಿ ದಶಕಗಳೇ ಕಳೆದಿದ್ದರೂ ಕೂಡ, ಇಂದು ಕೂಡ ಈ ಚಿತ್ರ ಜನರ ಮನಸ್ಸಿನಲ್ಲಿ ಅಚ್ಚಳಿಯಾಗಿ ಉಳಿದಿದೆ.
ಈಗ ಮತ್ತೆ ಕಲರ್ಸ್ ಕನ್ನಡ ವಾಹಿನಿಯ ʼಮಜಾ ಟಾಕೀಸ್ʼನಲ್ಲಿ 'ಮುಂಗಾರು ಮಳೆ'ಯ ನೆನಪು ಅಪ್ಪಳಿಸಿ ಬಂದಿದೆ. 'ಮಜಾ ಟಾಕೀಸ್' ಶೋಗೆ ಯೋಗರಾಜ್ ಭಟ್‌ರ ಹೊಸ ಸಿನಿಮಾ 'ಮನದ ಕಡಲು' ತಂಡ ಆಗಮಿಸಿದೆ.
ಈ ಬಾರಿ ಯುಗಾದಿ ವಿಶೇಷಕ್ಕೆ 'ಮಜಾ ಟಾಕೀಸ್'ನ ಮಹಾ ಸಂಚಿಕೆ ಪ್ರಸಾರವಾಗಲಿದ್ದು, ಭಟ್ಟರ ಹೊಸ ಸಿನೆಮಾ 'ಮನದ ಕಡಲು' ಜೊತೆ 'ಮುಂಗಾರು ಮಳೆ'ಯ ಫ್ಯಾಮಿಲಿಯ ಮಹಾ ಸಮ್ಮಿಲನ ಆಗಲಿದೆ.
ಮೂರು ಗಂಟೆಗಳ ಮಹಾ ಸಂಚಿಕೆ!
ಭಟ್ಟರ ಹೊಸ ಸಿನೆಮಾ 'ಮನದ ಕಡಲು' ಜೊತೆ 'ಮುಂಗಾರು ಮಳೆ'ಯ ಫ್ಯಾಮಿಲಿ 'ಮಜಾ ಟಾಕೀಸ್' ಶೋಗೆ ಆಗಮಿಸಿದೆ. ಈ ಮನರಂಜನೆಯ ಮಹಾ ಸಮ್ಮಿಲನ ಯುಗಾದಿ ಹಬ್ಬದ 'ಸ್ಪೆಷಲ್' ಆಗಿದ್ದು, ಶನಿವಾರ ರಾತ್ರಿ 7.30 ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಮೂರು ಗಂಟೆಗಳ ಈ 'ಮಹಾ ಸಂಚಿಕೆ' ಮನೆಮಂದಿಗೆ ಮನರಂಜನೆಯ ಮಳೆಯನ್ನೇ ಹರಿಸಲಿದೆ.
ಹನುಮಂತನ ವ್ಯಕ್ತಿತ್ವ ತುಂಬ ಭಾರ; ʼವಿಕಟಕವಿʼ ಯೋಗರಾಜ್ ಭಟ್ ಹೀಗ್ಯಾಕಂದ್ರು?
ಎರಡು ಸಿನಿಮಾ ತಂಡ!
'ಮನದ ಕಡಲು' ಸಿನಿಮಾದಲ್ಲಿ ನಟಿಸಿದ್ದ ಸುಮುಖ್, ಅಂಜಲಿ ಅನೀಶ್, ರಿಷಿಕಾ ಶೆಟ್ಟಿಯವರು 'ಮುಂಗಾರು ಮಳೆ'ಯ ಪೂಜಾ ಗಾಂಧಿ, ನೀನಾಸಂ ಅಶ್ವತ್ಥ್, ಸುಧಾ ಬೆಳವಾಡಿ, ಪದ್ಮಜಾ ರಾವ್, ಸಂಚಿತಾ ಶೆಟ್ಟಿಯವರು ಈ ಮಹಾ ಸಂಚಿಕೆಯಲ್ಲಿ ಭಾಗವಹಿಸಿದ್ದಾರೆ. ರಂಗಾಯಣ ರಘು, ನಿರ್ಮಾಪಕ ಈ ಕೃಷ್ಣಪ್ಪ, ಎಕ್ಸೆಕ್ಯುಟಿವ್ ಪ್ರೊಡ್ಯೂಸರ್ ಗಂಗಾಧರ್ ಈ ಮಹಾ ಸಂಚಿಕೆಯಲ್ಲಿರುವುದು ವಿಶೇಷ. ಈ ಎರಡೂ ಚಿತ್ರಗಳ ಸೂತ್ರಧಾರ ನಿರ್ದೇಶಕ ಯೋಗರಾಜ್ ಭಟ್ ಕೂಡ ಹಾಜರಿ ಇಲ್ಲಿದೆ.
Super Queen: ಗಾಯಕಿ ರೆಮೋ ಬದುಕಲ್ಲಿ ಬಿರುಗಾಳಿ, ಪುಟ್ಟ ಮಗಳೊಂದಿಗೆ ಮನೆ ಬಿಟ್ಟು ಬಂದಿದ್ದ ಮಜಾ ಟಾಕೀಸ್ ಸಿಂಗರ್!
'ಏನು ನಿನ್ನ ಹನಿಗಳ ಲೀಲೆ' ಎಂದ ಕವಿ ಯೋಗರಾಜರಿಂದ 'ಹನಿ ಹನಿ ಪ್ರೇಮ್ ಕಹಾನಿ' ಇಲ್ಲಿ ತೆರೆದುಕೊಳ್ಳಲಿದೆ. ರಂಗಾಯಣ ರಘು ಅವರು ಈ ಎರಡು ಸಿನಿಮಾಗಳ ರಸಮಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಕಲಾವಿದನಾಗಿ ಅವರು ತಮ್ಮ ಸುತ್ತಮುತ್ತಲಿನ ಜಗತ್ತನ್ನು ಎಷ್ಟು ಸೂಕ್ಷ್ಮವಾಗಿ ಗಮನಿಸುತ್ತಾರೆ ಅನ್ನುವುದನ್ನು ಇಲ್ಲಿ ಯೋಗರಾಜ್ ಭಟ್ ರಸವತ್ತಾಗಿ ವಿವರಿಸಿದ್ದಾರೆ. ಹಾಗೆಯೇ ಮಿಮಿಕ್ರಿ ಗೋಪಿ ರಂಗಾಯಣ ರಘು ಅವರನ್ನು ಮಿಮಿಕ್ ಮಾಡಿ ಅವರಿಂದ ಶಭಾಷ್ ಗಿರಿ ಪಡೆದಿರುವುದು, ಗೋಪಿಯವರು ನಟ ದತ್ತಣ್ಣ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ದನಿಯನ್ನು ಅನುಕರಣೆ ಮಾಡಿ ಹಾಸ್ಯದ ಹೊನಲನ್ನು ಹರಿಸಿದ್ದಾರೆ.