ಗೆಳತಿ ಗೌತಮಿ ಹಾದಿಯಲ್ಲಿ ನಡೆದ ಉಗ್ರಂ ಮಂಜು! ಮದ್ಯ- ಮಾಂಸಕ್ಕೆ ಅಂತ್ಯ; ಮುಖದ ಹೊಳಪಿನ ಗುಟ್ಟು ರಿವೀಲ್​

ಬಿಗ್​ಬಾಸ್​ ಉಗ್ರಂ ಮಂಜು ಮದ್ಯ ಮತ್ತು ಮಾಂಸವನ್ನು ಬಿಟ್ಟಿರುವುದಾಗಿ ಹೇಳಿದ್ದಾರೆ. ಮುಖದ ಗ್ಲೋ ಕುರಿತೂ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
 

Bigg Boss Ugram Manju said that he has given up drinks and meat and about skin glow suc

ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದರೂ ಅದರ ಹವಾ ಇನ್ನೂ ಕಾಣಿಸುತ್ತಿದೆ. ಸ್ಟ್ರಾಂಗ್​ ಸ್ಪರ್ಧಿ ಎನ್ನಿಸಿಕೊಂಡಿದ್ದ ಮಂಜುನಾಥ ಗೌಡ ಅರ್ಥಾತ್​ ಉಗ್ರಂ ಮಂಜು  ಐದನೇ ಸ್ಥಾನ ಪಡೆದುಕೊಂಡಿದ್ದಾರೆ.  ಬಿಗ್​ಬಾಸ್​ ಮನೆಯಲ್ಲಿ ಮಂಜು ಮತ್ತು  ಗೌತಮಿ ಜಾಧವ್ ಸ್ನೇಹದ ಬಗ್ಗೆಯೂ ಸಾಕಷ್ಟು ಚರ್ಚೆಯಾಗಿತ್ತು. ಇದು ಕೂಡ  ಮಂಜು ಪ್ರಶಸ್ತಿ ಗೆಲ್ಲದೇ ಇರುವುದಕ್ಕೆ ಕಾರಣವಾಯಿತು ಎಂದೂ ಕೆಲವರು ಅಭಿಪ್ರಾಯ ಪಡುತ್ತಿದ್ದಾರೆ. ಇದಾಗಲೇ ಕೆಲವೊಂದು ಸಿನಿಮಾಗಳಲ್ಲಿ ನಟಿಸಿರುವ ಮಂಜು ಅವರು, ತಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಲು ಬಿಗ್​ಬಾಸ್​ ವೇದಿಕೆ ಕಲ್ಪಿಸಿದೆ ಎಂದು ಹೊರಗಡೆ ಬಂದ ಮೇಲೆ ನೀಡಿರುವ ಸಂದರ್ಶನದಲ್ಲಿ ಇದಾಗಲೇ ತಿಳಿಸಿದ್ದಾರೆ.

ಇದೀಗ ಅವರ ಗುಟ್ಟೊಂದು ರಿವೀಲ್​ ಆಗಿದೆ. ಅವರ ಮುಖ ಗ್ಲೋ ಆಗಿದೆಯಂತೆ. ಇದಕ್ಕೆ ಕುತೂಹಲದ ಕಾರಣವನ್ನೂ ಅವರು ತೆರೆದಿಟ್ಟಿದ್ದಾರೆ. ಅದೇನೆಂದರೆ, ಮದ್ಯ ಮತ್ತು ಮಾಂಸವನ್ನು ಬಿಗ್​ಬಾಸ್​ನಿಂದ ಬಂದ ಮೇಲೆ ಬಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ರಜತ್‌ ಕಿಶನ್‌ ಪತ್ನಿ ಅಕ್ಷಿತಾ ಬುಜ್ಜಿ ಹುಟ್ಟುಹಬ್ಬದ ಸಂದರ್ಭದಲ್ಲಿ ಮೋಕ್ಷಿತಾ ಪೈ ಜೊತೆಗೆ ಬಂದಿದ್ದ ಉಗ್ರಂ ಅವರು ಈ ವಿಷಯವನ್ನು ರಿವೀಲ್ ಮಾಡಿದ್ದಾರೆ. ಮೋಕ್ಷಿತಾ ಪಕ್ಕದಲ್ಲಿಯೇ ಕುಳಿತು ಇವರು ಊಟ ಮಾಡುತ್ತಿದ್ದು ಆಗ ತಾವು ಮದ್ಯಪಾನ ಮತ್ತು ನಾನ್​ವೆಜ್​ ಬಿಟ್ಟಿರುವ ವಿಚಾರವನ್ನು ಮಂಜು ತಿಳಿಸಿದ್ದಾರೆ. ಇದಕ್ಕೂ ಮುನ್ನ ಅಂದರೆ ಬಿಗ್​ಬಾಸ್​ಗೆ ಹೋಗುವ ಸಂದರ್ಭದಲ್ಲಿ ಮದ್ಯಸೇವನೆ ಹೆಚ್ಚು ಮಾಡುತ್ತಿದ್ದೆ. ಇದೀಗ ಎಲ್ಲಾ ಬಿಟ್ಟಿದ್ದೇನೆ ಎಂದಿದ್ದಾರೆ. ಅಷ್ಟಕ್ಕೂ  ಬಿಗ್‌ ಬಾಸ್‌ ಹೋಗುವ ಮುಂಚೆ ಉಗ್ರಂ ಮಂಜು ಅವರು ಎಷ್ಟು ಡ್ರಿಂಕ್ಸ್​ ಮಾಡುತ್ತಿದ್ದರು ಎಂದರೆ, ಅದರ ಮೇಲಿರುವ ಪ್ರೀತಿ ತೋರಿಸಲು  ಎರಡು ಬಾರಿ ಬಿಗ್‌ ಬಾಸ್‌ ವೇದಿಕೆಯ ಮೇಲೆ ಮದ್ಯದ ಬಾಟಲಿಗಳು ಮಂಜುಗಾಗಿ ವಿಶೇಷ ಪ್ರಚಾರ ನಡೆಸಿವೆ ಎನ್ನುವ ತಮಾಷೆಯ ವಿಡಿಯೋವನ್ನು ಹಾಕಲಾಗಿತ್ತು.

Latest Videos

ಆ ರಾತ್ರಿ ಗೌತಮಿಗೆ ನಾನು ಆ ಮಾತು ಹೇಳ್ಬಾರ್ದಿತ್ತು, ಈಗ್ಲೂ ತುಂಬಾ ನೋವಿದೆ ಎಂದ ಬಿಗ್​ಬಾಸ್​ ಉಗ್ರಂ ಮಂಜು!

ಇದೇ ವೇಳೆ ತಮ್ಮ ಮುಖಕ್ಕೆ ಗ್ಲೋ ಬಂದಿದೆ ಎಂದು ತಂಗಿ ಎಂದೇ ಸಂಬೋಧಿಸುವ ಮೋಕ್ಷಿತಾ ಹೇಳಿರುವುದಾಗಿ ಮಂಜು ಹೇಳಿದ್ದಾರೆ. 'ನಾನ್‌ ವೆಜ್‌ ತಿನ್ನುವುದನ್ನು ಹಾಗೂ ಡ್ರಿಂಕ್ಸ್‌ ಬಿಟ್ಟಿದ್ದೇನೆ. 48 ದಿನ ತಾಯತ ಕಟ್ಟಿಸಿ ಕೊಂಡಿದ್ದೇನೆ. ಅದಕ್ಕೆ ನನ್ನ ತಂಗಿ ಹೇಳುತ್ತಿದ್ದರು ಮುಖ ಬ್ರೈಟ್‌ ಆಗಿದೆ, ಗ್ಲಾಮರ್‌ ಬಂದಿದೆ ಅಂತಾ' ಎಂದಿದ್ದಾರೆ. ಕುತೂಹಲದ ವಿಷಯ ಏನೆಂದರೆ, ಬಿಗ್​ಬಾಸ್​ನಲ್ಲಿದ್ದ ಗೌತಮಿ ಜಾಧವ್​ ಕೂಡ ಬಿಗ್​ಬಾಸ್​ನಿಂದ ಹೊರಕ್ಕೆ ಬಂದ ಮೇಲೆ ತಾವು ನಾನ್​ವೆಜ್​ ಬಿಟ್ಟಿರುವುದಾಗಿ ತಿಳಿಸಿದ್ದರು. ಇದೀಗ ಉಗ್ರಂ ಕೂಡ ಸೌಮ್ಯ ರೂಪ ತಾಳಿದ್ದಾರೆ! 
 
ಈ ಹಿಂದೆ ಉಗ್ರಂ ಮಂಜು ಅವರು, ಗೌತಮಿ ಜಾಧವ್​ ಅವರಿಗೆ ತಾವು ಹೇಳಿರುವ ಒಂದು ಮಾತು ಇಂದಿಗೂ ತಮ್ಮ ಮನಸ್ಸಿಗೆ ನೋವು ಉಂಟು ಮಾಡುತ್ತಿದೆ ಎಂದಿದ್ದರು.  'ಅಂದು ರಾತ್ರಿ ನಾವು ಒಟ್ಟಿಗೇ ಕುಳಿತಿದ್ದ ಸಂದರ್ಭದಲ್ಲಿ, ಫಿನಾಲೆ ಟಿಕೆಟ್​ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಹೀಗೆ ಮಾತನಾಡುವಾಗ ನಾನು ಗೌತಮಿ ಅವರಿಗೆ, ನೀವೇನಾದರೂ ಅಕಸ್ಮಾತ್​ ಆಟಕ್ಕೋಸ್ಕರ ಫ್ರೆಂಡ್​ಷಿಪ್​ ಬಳಸಿಕೊಳ್ತಾ ಇದ್ದೀರಾ ಎಂದು ಕೇಳಿಬಿಟ್ಟೆ. ಆ ಸನ್ನಿವೇಶದಲ್ಲಿ ಆ ಮಾತು ಬಂದುಬಿಟ್ಟಿತು. ಆದರೆ ಅದರಿಂದ ಅವರು ತುಂಬಾ ನೊಂದುಕೊಂಡರು. ನಾನು ಯಾಕೆ ಹೇಳಿದ್ನೋ ಹಾಗೆ ನನಗೂ ಗೊತ್ತಾಗ್ತಾ ಇಲ್ಲ. ಅವರು ನನ್ನ ಜೊತೆ ತುಂಬಾ ಒಳ್ಳೆಯ ಸ್ನೇಹಿತೆಯಾಗಿ ಇದ್ದರು. ಆ ಮಾತನ್ನು ಅಂದು ರಾತ್ರಿ ನಾನು ಹೇಳಬಾರದಿತ್ತು. ಅವರು ನೊಂದುಕೊಂಡಿರುವುದನ್ನು ನೆನಪಿಸಿಕೊಂಡರೆ ಈಗಲೂ ನೋವಾಗುತ್ತದೆ. ಆದರೆ ಆ ಪರಿಸ್ಥಿತಿಯಲ್ಲಿ ಆ ಮಾತು ಬಂದುಬಿಟ್ಟಿತು' ಎಂದಿದ್ದರು. ಇವರ ವಿಡಿಯೋ ಅನ್ನು ಸಿನೆಸ್ಟೋರ್​ ಯುಟ್ಯೂಬ್​ ಚಾನೆಲ್​ ಶೇರ್​ ಮಾಡಿದೆ. 

ಅಮ್ಮನ ಆಸೆ ಈಡೇರಿಸಿದ ಬಿಗ್​ಬಾಸ್​​ ವರ್ತೂರು ಸಂತೋಷ್:​ 8 ಕೋಟಿ ರೂ. ಬಂಗಲೆ ಹೀಗಿದೆ ನೋಡಿ...

vuukle one pixel image
click me!