Breaking: ಮಚ್ಚು ಹಿಡಿದು ರೀಲ್ಸ್‌, 3 ದಿನ ಪೊಲೀಸ್‌ ಕಸ್ಟಡಿಗೆ ರಜತ್‌ ಕಿಶನ್‌, ವಿನಯ್‌ ಗೌಡ!

ಮಚ್ಚು ಹಿಡಿದು ರೀಲ್ಸ್‌ ಮಾಡಿ ದುರಹಂಕಾರ ತೋರಿದ ಬಿಗ್‌ಬಾಸ್‌ ಸ್ಟಾರ್‌ಗಳಾದ ರಜತ್‌ ಕಿಶನ್‌ ಹಾಗೂ ವಿನಯ್‌ ಗೌಡ ಅವರನ್ನು ಪೊಲೀಸ್‌ ಕಸ್ಟಡಿಗೆ ಪಡೆಯುವಂತೆ ಜಡ್ಜ್‌ ಸೂಚಿಸಿದ್ದಾರೆ. ನಕಲಿ ಮಚ್ಚು ನೀಡಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದರಿಂದ ಕೇಸ್‌ ದೊಡ್ಡದಾಗಿದೆ.

Rajath Kishan Vinay Gowda Sent to 3 days Custody after Social Media Reels with Machete san

ಬೆಂಗಳೂರು (ಮಾ.26): ಸೋಶಿಯಲ್‌ ಮೀಡಿಯಾದಲ್ಲಿ ಮಚ್ಚು ಹಿಡಿದು ರೀಲ್ಸ್‌ ಮಾಡಿದ್ದ ಪ್ರಕರಣದಲ್ಲಿ ಪೊಲೀಸರ ಎದುರೇ ದುರಹಂಕಾರ ತೋರಿದ ಬಿಗ್‌ಬಾಸ್‌ ಸ್ಟಾರ್‌ಗಳಾದ ರಜತ್‌ ಕಿಶನ್‌ ಹಾಗೂ ವಿನಯ್‌ ಗೌಡ ಅವರನ್ನು ಮೂರು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆಯುವಂತೆ ಜಡ್ಜ್‌ ಆದೇಶ ನೀಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಮಚ್ಚು ಬಳಸಿ ರೀಲ್ಸ್‌ ಮಾಡಿದ್ದಲ್ಲದೆ, ಪೊಲೀಸರಿಗೆ ನಕಲಿ ಫೈಬರ್‌ ಮಚ್ಚು ನೀಡಿ ಸಾಕ್ಷ್ಯ ನಾಶ ಮಾಡುವ ಪ್ರಯತ್ನ ಮಾಡಿದ್ದರು. ಇದರಿಂದ ಸಣ್ಣದಾಗಿ ಮುಗಿಯಬೇಕಾಗಿದ್ದ ಕೇಸ್‌ ಇನ್ನೂ ಬೃಹದಾಕಾರಾವಾಗಿ ಬೆಳೆದು ಈಗ ಬಿಗ್‌ಬಾಸ್‌ ಬ್ಯಾಡ್‌ ಬಾಯ್ಸ್‌ಗೆ ಪೊಲೀಸ್‌ ಕಸ್ಟಡಿಗೆ ಕಾರಣವಾಗಿದೆ. ಮಂಗಳವಾರ ಇವರಿಬ್ಬರೂ ರೀಲ್ಸ್‌ ಮಾಡಿದ್ದ ಪ್ರದೇಶದ ಸ್ಥಳ ಮಹಜರು ನಡೆಸಿದ್ದ ಪೊಲೀಸರು,

ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿ ಜಡ್ಜ್‌ ಎದುರು ಹಾಜರು ಮಾಡಿದ್ದರು. ಜಡ್ಜ್‌ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ನೀಡಿದ್ದಲ್ಲದೆ, ಬುಧವಾರ ಕೋರ್ಟ್‌ ಎದುರು ಹಾಜರುಪಡಿಸುವಂತೆ ಸೂಚಿಸಿದ್ದರು. ಇಂದು ಇಬ್ಬರ ಜಾಮೀನು ಅರ್ಜಿ ವಿಚಾರಣೆಯೂ ನಡೆಯಿತು.

Latest Videos

ಹೆಚ್ಚಿನ ವಿಚಾರಣೆಗಾಗಿ ಇಬ್ಬರನ್ನೂ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು. ಪೊಲೀಸರ ಮನವಿಗೆ ಆರೋಪಿಗಳ ಪರ ವಕೀಲರು ವಿರೋಧ ವ್ಯಕ್ತಪಡಿಸಿದ್ದರು. ಸೋಶಿಯಲ್‌ ಮೀಡಿಯಾ ವಿಡಿಯೋ ಆಧರಿಸಿ ದೂರು ದಾಖಲಿಸಿದ್ದಾರೆ ಎಂದು ರಜತ್‌ ಹಾಗೂ ವಿನಯ್‌ ಪರ ವಕೀಲರು ವಾದ ಮಾಡಿದ್ದಾರೆ. ಇದು 3 ರಿಂದ 7 ವರ್ಷಗಳ ಶಿಕ್ಷೆ ಇರುವ ಪ್ರಕರಣದ,  5 ದಿನಗಳ ಕಾಲ ಹೆಚ್ಚಿನ ವಿಚಾರಣೆಗೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು.

ವಿನಯ್‌, ರಜತ್‌ ಪರ ವಕೀಲರ ವಾದವೇನು?: ಮಾ.24ರಂದು ವಿಚಾರಣೆಗೆ ಹಾಜರಾದಾಗ ರಾತ್ರಿ ತಡ ಆಯ್ತು ಅಂತ ವಾಪಸ್ ಕಳಿಸಿದ್ದಾಗಿ ಅವರೇ ಹೇಳಿದ್ದಾರೆ. ಅವರಿಗೆ ನೋಟಿಸ್ ಕೊಟ್ಟು ಕಳುಹಿಸಿದ್ದಾಗಿ ಹೇಳುತ್ತಾರೆ. ಆದರೆ, ನೋಟಿಸ್ ಕಾಪಿ ಇಲ್ಲ. ರೀಲ್ಸ್ ಗೆ ಬಳಿಸಿದ್ದ ಮಚ್ಚು ಫೈಬರ್ ಎಂದು ಕಂಡು ಬಂದಿದ್ದು, ಅದರಿಂದ ಅವರನ್ನು ವಾಪಾಸ್‌ ಕಳಿಸಿದ್ದಾಗಿ ಹೇಳಿದ್ದಾರೆ. ಆದರೆ, 25ರ ಹೇಳಿಕೆಯಲ್ಲಿ ಫೈಬರ್‌ ಲಾಂಗ್ ಎಂದು ಸುಳ್ಳು ಹೇಳಿದ್ದಾಗಿ ಪೊಲೀಸರು ಹೇಳಿಕೆ ದಾಖಲಿಸಿದ್ದಾರೆ. ರೀಲ್ಸ್ ಮಾಡಿದ ಜಾಗಕ್ಕೆ ತೆರಳಿ ಮಹಜರ್ ಕೂಡ ಮಾಡಿದ್ದಾರೆ. ಪೊಲೀಸ್ ಕಸ್ಟಡಿಗೆ ಕೇಳಲು ಅಸ್ತ್ರವನ್ನ ಬಳಕೆ‌ ಮಾಡಿದ್ದಾರೆ ಅದನ್ನ ವಶಕ್ಕೆ ಪಡೆಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಇವರೇನೂ ಕೊಲೆ‌ ಮಾಡಿದ್ದಾರೆಯೇ? ಎಂದು ರಜತ್, ವಿನಯ್ ವಕೀಲ ಪ್ರಶ್ನೆ ಮಾಡಿದ್ದಾರೆ.

ಇವರಿಬ್ಬರು ಕಲಾವಿದರು, ಬಿಗ್ ಬಾಸ್ ಸ್ಪರ್ಧಿಗಳು, ಬಾಯ್ಸ್ ವರ್ಸಸ್ ಗರ್ಲ್ಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಗಳು. ರಿಯಾಲಿಟಿ ಷೋ ನಲ್ಲಿ ಬಳಸುವ ಎಲ್ಲಾ ಪ್ರಾಪರ್ಟಿಗಳನ್ನು ಮರದಿಂದ ಮಾಡಿರುತ್ತಾರೆ. ಅಕ್ಷಯ್ ಸ್ಟೂಡಿಯೋದಲ್ಲಿ ಕೇವಲ ಮಹಜರ್ ಮಾಡಿದ್ದಾರೆ. ಸ್ಟುಡಿಯೋದಲ್ಲಿ ಇರುವ ವಸ್ತುಗಳನ್ನ ಸೀಜ್ ಯಾಕೆ ಮಾಡಿಲ್ಲ. ಈ ರೀತಿ ತಪ್ಪು ಮಾಡಿದ್ದಾರೆ ಎಂದು ಯಾರೂ ದೂರು  ನೀಡಿಲ್ಲ. ಶಾಲಾ‌ ಕಾಲೇಜ್ ಗಳಲ್ಲಿಯೂ ಕಾರ್ಯಕ್ರಮಗಳನ್ನ ಮಾಡ್ತಾರೆ ಅಲ್ಲಿಗೆ ಹೋಗಿ ಪೊಲೀಸರು ಅರೆಸ್ಟ್ ಮಾಡ್ತಾರಾ? ಒಂದು ಸಾಂಗ್‌ನಲ್ಲಿ ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಇಸ್ಕೋತಾರೆಯೇ ಹೊರರು ಯಾವುದೇ ಬಳಕೆ ಮಾಡಿಲ್ಲ ಎಂದು ಹೇಳಿದ್ದಾರೆ.

ರಜತ್‌ ಒಳ್ಳೆಯ ಮನುಷ್ಯ, ನಾವು ಅಣ್ಣ ತಂಗಿ ರೀತಿ ಜಗಳವಾಡುತ್ತೀವಿ

ಬಾಯ್ಸ್ ವರ್ಸಸ್ ಗರ್ಲ್ಸ್ ಕಾರ್ಯಕ್ರಮದಲ್ಲಿ ರಜತ್ ದರ್ಶನ್ ರೀತಿ ಪಾತ್ರ ಮಾಡಿದ್ದಾನೆ. ರಿಯಾಲಿಟಿ ಶೋದವರನ್ನ ಪೊಲೀಸರು ಕೇಳಿದ್ದಾರೆ. ವಿನಯ್ ಅಲ್ಲು ಅರ್ಜುನ್‌ ಅಭಿನಯದ ಪುಷ್ಟ ಪಾತ್ರ ಮಾಡಿದ್ದ. ಪಾವಗಡ ಮಂಜು ರವಿಚಂದ್ರನ್ ಪಾತ್ರ ಮಾಡಿ ಗಿಟಾರ್ ಹಿಡಿದಿದ್ದ. ಹಾಗಂತ ಗಿಟಾರ್ ಸೀಜ್ ಮಾಡಲು ಸಾಧ್ಯವೇ? ತಮ್ಮ ಆ್ಯಕ್ಟ್ ನ ರಿಹರ್ಸಲ್ ಮಾಡಿರೋದು. ಇವರು ಕಲಾವಿದರು ಆ್ಯಕ್ಟ್ ಮಾಡದೇ ಮಾರ್ಕೆಟ್ ನಲ್ಲಿ ಮೂಟೆ ಹೊರಲು ಸಾಧ್ಯವೇ? ಇವರನ್ನ ಯಾವುದೇ ಕಾರಣಕ್ಕೂ ಪೊಲೀಸ್ ಕಸ್ಟಡಿ ನೀಡಬಾರದು ಜೊತೆಗೆ ಜಾಮೀನು ನೀಡುವಂತೆ ಮನವಿ ಮಾಡಿದ್ದರು.

ದರ್ಶನ್​ ಸಿನಿಮಾ ಕಾಪಿ ಮಾಡುವಾಗ ಎಡವಟ್ಟು! ರಜತ್‌, ವಿನಯ್‌ ಬಳಿಕ ಬುಲೆಟ್​ ರಕ್ಷಕ್​ಗೂ ಕಾನೂನು ಉರುಳು?

ನಂತರ ವಾದ ಮಾಡಿದ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಹರಿಶ್ಚಂದ್ರಗೌಡ , ನಾವು ಜಾಮೀನು ಅರ್ಜಿ ಬಗ್ಗೆ ಆಕ್ಷೇಪಣೆ ಸಲ್ಲಿಸಿಲ್ಲ, ಜಾಮೀನು ಅರ್ಜಿ ಮೇಲೆ‌ ಯಾವುದೇ ಆದೇಶ ಬೇಡ  ಎಂದು ಹೇಳಿದರು. ಕೇಸಿನ ಮಾಹಿತಿ ಜಡ್ಜ್‌ಗೆ ನೀಡಿದ ವಕೀಲರು, ಲಾಂಗ್ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಮಾಡಿ ಸಾರ್ವಜನಿಕರಿಗೆ ಭಯ ಹುಟ್ಟಿಸುವ ಯತ್ನ ಮಾಡಿದ್ದಾರೆ. ಬುಚ್ಚಿ ಎಂಬ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಹೀಗಾಗಿ ಶಸ್ತ್ರಾಸ್ತ್ರ ಕಾಯಿದೆ ದೂರು ದಾಖಲು ಮಾಡಲಾಗಿದೆ. ಮಾರ್ಚ್ 24 ರಂದು ರಜತ್‌ ಹಾಗೂ ವಿನಯ್ ಸ್ವ ಇಚ್ಚೆಯಿಂದ ಠಾಣೆಗೆ ಹಾಜರಾಗಿದ್ದರು. ಈ ವೇಳೆ ಪ್ಲಾಸ್ಟಿಕ್ ಲಾಂಗ್ ಬಳಕೆ‌ ಎಂದು ಹೇಳಿದ್ದರು. ಆಗ ಆರೋಪಿ ರಜತ್ ತನ್ನ ಪತ್ನಿಗೆ ಹೇಳಿ ಲಾಂಗ್ ತರಿಸಿದ್ದಾರೆ. ಜೊತೆಗೆ ಪತ್ನಿ ಅಕ್ಷಿತಾ ಅವರ ಹೇಳಿಕೆ ಕೂಡ ದಾಖಲು ಮಾಡಲಾಗಿದೆ.

ಹಾಜರುಪಡಿಸಿದ ಲಾಂಗ್ ಫೈಬರ್ ಆಗಿದ್ದರಿಂದ ಮತ್ತೆ ವಿಚಾರಣೆಗೆ ಬರುವಂತೆ ನೋಟಿಸ್‌ ನೀಡಿ ಕಳುಹಿಸಲಾಗಿತ್ತು. ರೀಲ್ಸ್ ನಲ್ಲಿ ಇರುವ ಲಾಂಗ್ ಹಾಗೂ ಹಾಜರುಪಡಿಸಿದ ಲಾಂಗ್ ಪರಿಶೀಲನೆ ಮಾಡಿದಾಗ ವ್ಯತ್ಯಾಸ ಇದೆ ಎಂದು ಗೊತ್ತಾಗಿದೆ. ನಂತರ ಬೆಳಗ್ಗೆ 10ಗಂಟೆಗೆ ವಿಚಾರಣೆಗೆ ಬರುವಂತೆ ಸೂಚನೆ ನೀಡಲಾಗಿತ್ತು. ಮಧ್ಯಾಹ್ನ 2.30ಕ್ಕೆ‌ವಿಚಾರಣೆ ಹಾಜರಾಗಿದ್ದಾರೆ. ತಾವು ಸುಳ್ಳು ಮಾಹಿತಿ ನೀಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಸ್ವ ಇಚ್ಛಾ ಹೇಳಿಕೆ ದಾಖಲು ಮಾಡಿಕೊಂಡು ಅಕ್ಷಯ್‌ ಸ್ಟುಡಿಯೋದಲ್ಲಿ ಮಹಜರ್ ಮಾಡಲಾಗಿದೆ. ಮಹಜರ್ ವೇಳೆ ಸ್ಥಳದಲ್ಲಿ ಕಬ್ಬಿಣದ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ತನಿಖಾ ಅಧಿಕಾರಿಗಳಿಗೆ ದಾರಿ ತಪ್ಪಿಸುವ ಕೆಲಸ‌ ಮಾಡಿದ್ದಾರೆ. ಫೈಬರ್‌ ಅಂತ ಹೇಳಿ ತನಿಖೆ ದಾರಿ ತಪ್ಪಿಸಿದ್ದಾರೆ. ಕಬ್ಬಿಣದ್ದು ಅಂತ ವಿಚಾರಣೆ ವೇಳೆಯೇ ಒಪ್ಪಿಕೊಳ್ಳಬಹುದಿತ್ತು.ಇದೊಂದು ನಾನ್ ಬೇಲ್‌ಇರುವ ಅಪರಾಧವಾಗಿದೆ. ಶಿಕ್ಷೆ ಎಷ್ಟೇ ಇದ್ದರೂ ಗಂಭೀರತೆ ಮುಖ್ಯವಾಗಿದೆ. ಲಾಂಗ್ ವಶಕ್ಕೆ ಪಡೆಯದಿದ್ದರೆ ತನಿಖೆ ಮುಕ್ತಾಯ ಆಗಲ್ಲ. ಹೀಗಾಗಿ ತನಿಖೆ ಅತ್ಯಂತ ಅವಶ್ಯಕತೆ ಇದ್ದು  ಪೊಲೀಸರ ‌ವಶಕ್ಕೆ ಪಡೆಯಬೇಕಿದೆ. ರೀಲ್ಸ್ ಶೂಟ್ ಮಾಡಿದ ಮೊಬೈಲ್ ವಶಕ್ಕೆ ಪಡೆಯಬೇಕಿದೆ. ಯಾವ ಮೊಬೈಲ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ ಅದನ್ನ ವಶಕ್ಕೆ ಪಡೆಯಬೇಕಿದೆ ಎಂದು ಹೇಳಿದರು.

ರಿಯಾಲಿಟಿ ಶೋಗಳಲ್ಲಿ ಲಾಂಗ್ ಮಚ್ಚು ಬಳಸುತ್ತಾರೆ ಎಂದು ಆರೋಪಿ ಪರ‌ ವಕೀಲರು ಹೇಳಿದ್ದಾರೆ. ಆದರೆ, ಅಲ್ಲಿ ನಕಲಿ ಅಸ್ತ್ರ ಬಳಸುತ್ತಾರೆ. ಇವರು ಜ್ಞಾನ ಇಲ್ಲದವರಾ? ಇವರಿಗೆ ಗೊತ್ತಿಲ್ಲವಾ.? ಉದ್ದೇಶ ಇಲ್ಲದಿದ್ದರೂ, ಜ್ಞಾನ ಇರಲಿಲ್ವಾ.? ಪಬ್ಲಿಕ್ ಪ್ಲೇಸ್‌ನಲ್ಲಿ ಭಯ ಹುಟ್ಟಿಸುವ ಯತ್ನ ಮಾಡಿದ್ದಾರೆ ಎಂದರು.

ಬಳಿಕ ಮತ್ತೆ ಮಾತನಾಡಿದ ವಿನಯ್‌ ಹಾಗೂ ರಜತ್‌ ಪರ ವಕೀಲರು, ಸ್ಟುಡಿಯೋದಲ್ಲಿ ರೆಕಾರ್ಡ್ ಆಗಿದೆ, ಸಾರ್ವಜನಿಕ ಸ್ಥಳದಲ್ಲಿ ಅಲ್ಲ. ಸಾರ್ವಜನಿಕರು ಯಾವುದೇ ದೂರು ನೀಡಿಲ್ಲ ಎಂದರು. ಇದಕ್ಕೆ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಹರಿಶ್ಚಂದ್ರಗೌಡ, ಲಾಂಗ್ ಹಿಡಿದವರ ವಿರುದ್ಧ ಯಾರಾದರೂ ದೂರು ಕೊಡ್ತಾರಾ? ಇಲ್ಲಿಯೇ ಯಾರಾದರೂ ಲಾಂಗ್ ಹಿಡಿದು ಬಂದ್ರೆ ನಾವೇ ಇರಲ್ಲ ಎಂದರು ಹೇಳಿದರು.

ಹಾಜರು ಪಡಿಸಿದ ಲಾಂಗ್, ರೀಲ್ಸ್ ಗೆ ಬಳಸಿದ್ದ ಲಾಂಗ್ ಬೇರೆ ಬೇರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇಲ್ಲಿ ಪೊಲೀಸರ ತನಿಖೆ‌ ಮಾಡ್ತಾ ಇದ್ದಾರಾ.? ಮಾಧ್ಯಮಗಳು ತನಿಖೆ ಮಾಡ್ತಾ ಇದ್ದಾವಾ? ಎಂದು ಆರೋಪಿಗಳ ಪರ ವಕೀಲರು ಹೇಳಿದರು.

ಆರ್ಟ್ ಡೈರಕ್ಟರ್ ಪೊಲೀಸರಿಗೆ ಪೋನ್ ಮಾಡಿ ಮಾತಾಡಿದ್ದಾರೆ. ನಕಲಿ ಅಸ್ತ್ರಗಳನ್ನ ರಚಿಸಿ ನಾಶ ಮಾಡುತ್ತಾರೆ. 10 ದಿನದ ನಂತರ ಅದೇ ಬೇಕು ಎಂದರೆ ಎಲ್ಲಿ ಸಿಗುತ್ತೆ? ಎಂದು ಆರೋಪಿಗಳ ಪರ ವಕೀಲರು ಪ್ರಶ್ನೆ ಮಾಡಿದ್ದಾರೆ.
 

vuukle one pixel image
click me!