ಬಹುಶಃ ಈ ವಾರ ಮನೆಯ ಸದಸ್ಯರ ಅಭಿಪ್ರಾಯದ ಮೇರೆಗೆ ಪ್ರತಾಪ್ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗೆ ಉಳಿಯಬಹುದು. ಸಂಗೀತಾ ಮತ್ತು ತನಿಷಾ ಕ್ಯಾಪ್ಟನ್ಸಿ ಟಾಸ್ಕ್ ಆಡಬಹುದು.
ಭರಪೂರ ಭಾವುಕತೆಯಲ್ಲಿಯೇ ಈ ವಾರ ಕಳೆದಿದೆ. ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸಿದ ಎಲ್ಲ ಸದಸ್ಯರ ಕುಟುಂಬದವರು, ಎಲ್ಲ ಸದಸ್ಯರಿಗೂ ಕಿವಿಮಾತು ಹೇಳಿ ಹೋಗಿದ್ದಾರೆ. ಬಿಗ್‌ಬಾಸ್ ಕುಟುಂಬದ ಬಂಧವನ್ನು ಇನ್ನಷ್ಟು ಗಟ್ಟಿ ಮಾಡಿದ್ದಾರೆ. ವಾರವಿಡೀ ಹಲವು ಹೃದಯಸ್ಪರ್ಶಿ ಸನ್ನಿವೇಶಗಳಿಗೆ ಸಾಕ್ಷಿಯಾಗಿದ್ದ ಬಿಗ್‌ಬಾಸ್ ಮನೆ ವಾರಾಂತ್ಯದಲ್ಲಿ ಮತ್ತೆ ಮೊದಲಿನ ಹಳಿಗೆ ಮರಳುತ್ತಿದೆ. ‘ಕ್ಯಾಪ್ಟನ್ ಯಾರು?’ ಈ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.
ಈ ಪ್ರಶ್ನೆಗೆ ಉತ್ತರದ ಜೊತೆಗೇ ಕಿಚ್ಚನ ವಾರಾಂತ್ಯದ ಎಪಿಸೋಡ್‌ಗಳಲ್ಲಿ ಭಾಗಿಯಾಗಲು ಸದಸ್ಯರು ಕಾಯುತ್ತಿದ್ದಾರೆ. ಈ ಪ್ರಶ್ನೆಗೆ ಉತ್ತರದ ಸುಳಿವು ಈವತ್ತು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಇದೆ. ಈ ವಾರ ಮನೆಯೊಳಗೆ ಬಂದ ಸ್ಪರ್ಧಿಗಳ ಕುಟುಂಬದವರಿಗೆ ಒಂದು ಪ್ರಶ್ನೆ ಕೇಳಲಾಗಿತ್ತು. ಅವರ ಕುಟುಂಬದ ಸದಸ್ಯರನ್ನು ಬಿಟ್ಟು ಬೇರೆ ಯಾರು ಈ ಮನೆಯ ಕ್ಯಾಪ್ಟನ್ ಆಗಬೇಕಾಗಬೇಕು ಎಂದು ಬಯಸುತ್ತೀರಿ? ಎಂಬ ಪ್ರಶ್ನೆಗೆ ಎಲ್ಲರೂ ತಮ್ಮ ಅಭಿಪ್ರಾಯ ಸೂಚಿಸಿದ್ದರು.
ಸಂಗೀತಾ ಕುಗ್ಗಿಸಲು ವಿನಯ್ ಹೆಂಡತಿ ಪ್ಲಾನ್ ಮಾಡಿದ್ರಾ; ಯಾಕೆ ಬೇಕಿತ್ತು ಪ್ರತ್ಯೇಕ ಮಾತುಕತೆ!?
ಅದರ ಅನುಸಾರ ಸಂಗೀತಾ, ತನಿಷಾ ಮತ್ತು ಪ್ರತಾಪ್ ಹೆಸರು ಅತಿ ಹೆಚ್ಚು ಸಲ ಬಂದಿತ್ತು. ಹಾಗಾಗಿ ಈ ಮೂವರು ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಆಡಲು ಸಜ್ಜಾಗಿದ್ದರು. ಈ ನಡುವೆ ಬಿಗ್‌ಬಾಸ್ ಇನ್ನೊಂದು ಶಾಕ್ ಕೊಟ್ಟಿದ್ದಾರೆ. ಮನೆಯ ಸದಸ್ಯರಿಗೇ ಈ ಮೂವರಲ್ಲಿ ಯಾರು ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಆಡುವುದು ಬೇಡ ಎಂಬುದನ್ನು ಸೂಚಿಸಲು ತಿಳಿಸಿದ್ದಾರೆ. ಆಗ ಬಹುತೇಕ ಎಲ್ಲರೂ ಸೂಚಿಸಿದ್ದು ಪ್ರತಾಪ್ ಹೆಸರನ್ನು. ‘ಪ್ರತಾಪ್ ಅಧಿಕಾರ ಸಿಕ್ಕ ಕೂಡಲೇ ಸ್ಟ್ರಿಕ್ಟ್ ಆಗಿಬಿಡ್ತಾರೆ’, ‘ಅವರು ಮೂಡಿ’, ‘ಪದೇ ಪದೇ ಮೂಡ್‌ಸ್ವಿಂಗ್ ಆಗುತ್ತಿರುತ್ತದೆ’ ಹೀಗೆಲ್ಲ ಹಲವು ಅಭಿಪ್ರಾಯಗಳು ಬಂದಿದೆ. ಇದರಿಂದ ಪ್ರತಾಪ್ ಮನಸ್ಸಿಗೆ ನೋವೂ ಆಗಿದೆ.
ದೇವರ ರೂಪದಲ್ಲಿ ಕನ್ನಡಕ್ಕೆ ಬರುತ್ತಿರುವ ಜ್ಯೂನಿಯರ್ ಎನ್‌ಟಿಆರ್; ಜಾನ್ವಿ ಕಪೂರ್ ಬರುತ್ತಿಲ್ವಾ!?
ಬಹುಶಃ ಈ ವಾರ ಮನೆಯ ಸದಸ್ಯರ ಅಭಿಪ್ರಾಯದ ಮೇರೆಗೆ ಪ್ರತಾಪ್ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗೆ ಉಳಿಯಬಹುದು. ಸಂಗೀತಾ ಮತ್ತು ತನಿಷಾ ಕ್ಯಾಪ್ಟನ್ಸಿ ಟಾಸ್ಕ್ ಆಡಬಹುದು. ಆ ಇಬ್ಬರಲ್ಲಿ ಯಾರು ಈ ವಾರದ ಕ್ಯಾಪ್ಟನ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಷ್ಟೆ.
ಮಹಿಳಾ ಜೇಮ್ಸ್ ಬಾಂಡ್ ಆಗಿ ನಟಿಸಲು ಬಯಸುತ್ತೇನೆ; ಪ್ರಿಯಾಂಕಾ ಹೇಳಿದ್ದೇ ತಡ, ಲಡ್ಡು ಬಂದು ಬಾಯಿಗೆ ಬಿತ್ತಾ!
ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ ವೀಕ್ಷಿಸಬಹುದು.