ಈ ವಾರದಲ್ಲಿ ಬಿಗ್‌ಬಾಸ್ ವೀಕ್ಷಕರ ಮನಗೆದ್ದದ್ದು ಡ್ರೋನ್ ಪ್ರತಾಪ್. ಅವರ ಎಮೋಶನಲ್ ಸೀನ್‌ಗಳನ್ನು ಲಕ್ಷಾಂತರ ಜನ ಮೆಚ್ಚಿಕೊಂಡಿದ್ದಾರೆ. ಈ ವೀಕ್ ಪ್ರತಾಪ್‌ಗೆ ಭರ್ಜರಿ ಓಟು ಬೀಳೋದು ಗ್ಯಾರಂಟಿ.
ಈ ವಾರ ಬಿಗ್‌ಬಾಸ್ ಮನೇಲಿ ಡ್ರೋನ್ ಪ್ರತಾಪ್ ಎಪಿಸೋಡ್‌ಗಳು ಸಖತ್ ಹೈಪ್ ಕ್ರಿಯೇಟ್ ಮಾಡಿವೆ. ಬಹಳ ಎಮೋಶನಲ್ ಆಗಿ ಸ್ಟ್ರಾಂಗ್ ಆಗಿದ್ದ ಈ ಎಪಿಸೋಡ್‌ಗಳನ್ನು ಜನ ಕಣ್ಣೀರು ಹಾಕಿಕೊಂಡು ನೋಡಿದ್ದಾರೆ. ಬಹಳ ಮೆಚ್ಚಿಕೊಂಡಿದ್ದಾರೆ. ಈ ವಾರದ ಪ್ರತೀ ದಿನದ ಬೆಳವಣಿಗೆಯೂ ಇಂಟರೆಸ್ಟಿಂಗ್ ಆಗಿಯೇ ಇತ್ತು. ಅದರಲ್ಲೂ ಡ್ರೋನ್ ಪ್ರತಾಪ್ ಎಪಿಸೋಡ್‌ಗಳು ಭಲೇ ಭಾವುಕವಾಗಿದ್ದು ಕರ್ನಾಟಕದ ಜನರ ಮನ ಗೆದ್ದವು.
ಡ್ರೋನ್ ಪ್ರತಾಪ್ ಮೂರು ವರ್ಷಗಳ ಬಳಿಕ ತಮ್ಮ ಪೋಷಕರನ್ನು ಭೇಟಿಯಾದರು. ತಾನು ಮಾಡಿದ ತಪ್ಪಿನಿಂದ ಅವಮಾನ ಅನುಭವಿಸಿದ ಅವರು ನನ್ನನ್ನು ನೋಡಲು ಮನೆಗೆ ಬರುವುದಿಲ್ಲವೇನೋ ಎಂಬ ಆತಂಕದಲ್ಲಿದ್ದರು. ಆದರೆ ಡ್ರೋನ್ ಪ್ರತಾಪ್ ಅಷ್ಟೇ ಕಾತರದಿಂದ ಅಪ್ಪನೂ ಮಗನನ್ನು ನೋಡಲು ಕಾಯುತ್ತಿದ್ದರೆಂಬುದು ಅವರ ಆಗಮನದಿಂದ, ಅವರು ನೀಡಿದ ಬಿಗಿಯಾದ ಅಪ್ಪುಗೆಯಿಂದ ತಿಳಿದು ಬಂತು. ಡ್ರೋನ್ ಪ್ರತಾಪ್, ತಮ್ಮ ಪೋಷಕರನ್ನು ಮತ್ತೆ ಸೇರಿದ್ದು ಮನೆಯ ಸದಸ್ಯರನ್ನು ಭಾವುಕಗೊಳಿಸಿತು. ಹಲವು ಭಾವುಕ ಸನ್ನಿವೇಶಗಳು, ಮಾತುಕತೆಗಳು ಡ್ರೋನ್ ಪ್ರತಾಪ್ ಹಾಗೂ ಅವರ ಪೋಷಕರ ನಡುವೆ ಸೃಷ್ಟಿಯಾದವು. ಇದೆಲ್ಲದರ ನಡುವೆ ಪ್ರತಾಪ್ರ ಮದುವೆ ವಿಷಯವೂ ಸಹ ಮನೆಯಲ್ಲಿ ಚರ್ಚೆಯಾಯ್ತು. ಸಂಗೀತಾ ಶೃಂಗೇರಿ ಅವರೂ ಇದರಲ್ಲಿ ಭಾಗಿಯಾದರು.
ದೊಡ್ಮನೆಯಲ್ಲಿ ಡ್ರೋನ್ ಹಾರಿಸಿದ ಬಿಗ್ ಬಾಸ್, 'ನಂದೇ ಡ್ರೋನು, ನಂದೇ ಡ್ರೋನು..' ಎಂದು ಕುಣಿದ ಪ್ರತಾಪ್!
ವರ್ತೂರು ಸಂತೋಷ್ ಮೊದಲಿಗೆ ಡ್ರೋನ್ ಪ್ರತಾಪ್ರ ಮದುವೆ ಚರ್ಚೆ ಎತ್ತಿದರು. 'ಯಜಮಾನ್ರೆ ನೀವು ಹೇಳಿದರೆ ನಿಮ್ಮ ಮಗ ಮದುವೆ ಆಗ್ತಾನಂತೆ, ನೀವು ಹೂ ಅನ್ನಿ ಎಂದರು. ಅದಕ್ಕೆ ಪ್ರತಾಪ್ರ ತಂದೆ ನನ್ನ ಅಭ್ಯಂತರವೇನೂ ಇಲ್ಲ ಎಂದರು. ಬಳಿಕ ಹಾಗಿದ್ದರೆ ಆ ಜವಾಬ್ದಾರಿ ನನಗೆ ಬಿಡಿ ನಾನು ನೋಡುತ್ತೇನೆ ಎಂದರು. ಹೌದು, ನಿಮ್ಮ ಊರಲ್ಲೇ ಒಂದು ಒಳ್ಳೆ ಹೆಣ್ಣು ನೋಡಪ್ಪ ಎಂದರು ಪ್ರತಾಪ್ರ ತಂದೆ. ತುಕಾಲಿ ಸಂತು, ನಮ್ಮ ಊರಲ್ಲಿ ಒಂದು ಒಳ್ಳೆಯ ಹೆಣ್ಣು ಇದೆ ನೀವು ಹೂ ಅನ್ನಿ ನಾನು ಮಾತಾಡ್ತೀನಿ ಎಂದರು. ಅಯ್ಯೋ ನಾವು ಹೂ ಅಂದರೆ ಹುಡುಗಿಯೂ ಒಪ್ಪಿಕೊಳ್ಳಬೇಕಲ್ಲ ಅಂದರು. ಅವರಿಗೆ ನನ್ನ ಮಾತೇ ಅಂತಿಮ, ನಾನು ಮಾತನಾಡಿದರೆ ಮುಗಿದಂತೆ ಎಂದರು. ಆ ಮಾತಿಗೆ ಎಲ್ಲರೂ ಸೇರಿ ತುಕಾಲಿಯ ಕಾಲೆಳೆದರು.
ಪ್ರತಾಪ್ ಅಪ್ಪ ಅಮ್ಮನ ನಡುವಿನ ಸಿಟ್ಟು ಕರಗಿ ಪ್ರೇಮ (love) ಉಕ್ಕುಕ್ಕಿ ಹರೀತಿತ್ತು. ಆದ್ರೆ ದೇವ್ರು ಕೊಟ್ರೆ ಎಲ್ಲವನ್ನೂ ಒದ್ದು ಒದ್ದು ಕೊಡ್ತಾನೆ ಅನ್ನೋದು ಇದನ್ನೇ ಏನೋ. ಡ್ರೋನ್ ಪ್ರತಾಪ್ ಎಷ್ಟೋ ವರ್ಷದ ನಂತರ ಅಪ್ಪ ಅಮ್ಮನ ಜೊತೆಗೆ ಮಾತನಾಡಿದ ಒಡನಾಡಿದ ಖುಷಿ ಒಂದೆಡೆ ಆದರೆ ಬಿಗ್‌ಬಾಸ್ ಅವರಿಗೆ ಮತ್ತೊಂದು ಪ್ಲೆಸೆಂಟ್ ಸರ್ಪೈಸ್ ಕೊಟ್ರು. ಡ್ರೋನ್ ಮೂಲಕವೇ ಹೆಸರಾದ ಪ್ರತಾಪ್‌ಗಾಗಿ ಅವರ ಡ್ರೋನ್ ಅನ್ನೇ ದೊಡ್ಡ ಮನೆಗೆ ಕಳಿಸಿಬಿಟ್ರು. ಡ್ರೋನ್ ಸೌಂಡ್ ಕೇಳಿದ ತಕ್ಷಣ ಪ್ರತಾಪ್ ಕಿವಿ ನೆಟ್ಟಗಾಯಿತು. ಹೊರಗೆ ಓಡಿ ಬಂದು ನೋಡಿದ್ರೆ ಆಕಾಶದಲ್ಲೊಂದು ಡ್ರೋನ್ ಹಾರಾಡ್ತಾ ಇದೆ. ಪ್ರತಾಪ್ ಖುಷಿಯಲ್ಲಿ ಮೂರ್ಛೆ ಹೋಗೋದೊಂದು ಬಾಕಿ. 'ಹೇ ಅಲ್ಲಿ ಡ್ರೋನ್, ಅದು ನಂದೇ ಡ್ರೋನು, ಅದು ನಂದೇ ಡ್ರೋನ್' ಅಂತ ಖುಷಿಯಲ್ಲಿ ಕುಣಿದಾಡಿ ಬಿಟ್ರು. ತಾಯಿ ಮಗುವನ್ನು ಎತ್ತಿಕೊಳ್ಳೋ ಹಾಗೆ ಎರಡೂ ಕೈ ಚಾಚಿ ಡ್ರೋನ್ ಎತ್ತಿಕೊಳ್ಳಲು ಮುಂದಾಗಿದ್ದಾರೆ.
ಪ್ಲೀಸ್ ಬಾಗಿಲು ತೆಗೆಯಿರಿ... ಅಪ್ಪ-ಅವ್ವನ್ನ ನೋಡ್ಬೇಕು... ಬಿಕ್ಕಿ ಬಿಕ್ಕಿ ಅತ್ತ ಡ್ರೋನ್ ಪ್ರತಾಪ್!
ಈ ನಡುವೆ ಡ್ರೋನ್ ಪ್ರತಾಪ್ ಸಂಚಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಯದ್ವಾ ತದ್ವಾ ವ್ಯೂಸ್ (views) ಸಿಕ್ತಿದೆ. ಅದರಲ್ಲೂ ತಂದೆ ತಾಯಿ ಜೊತೆಗಿನ ಎಮೋಶನಲ್ ಎಪಿಸೋಡ್‌ಗಳನ್ನಂತೂ ಲಕ್ಷಾಂತರ ಜನ ಮೆಚ್ಚಿಕೊಂಡಿದ್ದಾರೆ. 'ಹಳ್ಳಿ ಜನರ ಪ್ರೀತಿಯಲ್ಲಿ ಕಲ್ಮಶ ಇರೋದಿಲ್ಲ. ಡ್ರೋನ್ ಅಮ್ಮ ಅಪ್ಪನ ಪ್ರೀತಿ ಕಂಡು ಮನಸ್ಸು (mind full) ತುಂಬಿ ಬಂತು, ಕಣ್ಣೀರು ಹಾಕಿದ್ವಿ' ಅಂತ ಬಹಳ ಮಂದಿ ಕಾಮೆಂಟ್ (comment) ಮಾಡಿದ್ರು.
ಈ ಎಪಿಸೋಡ್‌ಗಳಿಂದ ಬಿಗ್‌ಬಾಸ್ ಟಿಆರ್‌ಪಿ ಏರಿರೋ ಜೊತೆಗೆ ಡ್ರೋನ್ (drone) ಪ್ರತಾಪ್ ಮೇಲೆ ಜನರ ಪ್ರೀತಿಯೂ ಹೆಚ್ಚಿದ ಹಾಗಿದೆ. ಇದನ್ನೆಲ್ಲ ನೋಡ್ತಿದ್ರೆ ಈ ಬಾರಿ ಡ್ರೋನ್‌ಗೆ ಅಧಿಕ ಓಟ್ ಬರೋದಂತೂ ಗ್ಯಾರಂಟಿ.