
ಬಿಗ್ ಬಾಸ್ ಸೀಸನ್ 12 ಈಗಾಗಲೇ 15 ವಾರಗಳನ್ನು ಸಂಪೂರ್ಣವಾಗಿ ಪೂರೈಸಿದ್ದು, ಇದೀಗ ಫಿನಾಲೆ ವಾರಕ್ಕೆ ಕಾಲಿಟ್ಟಿದೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಒಟ್ಟ 7 ಸ್ಪರ್ಧಗಳಿದ್ದಾರೆ. ಆದರೆ, ಇದರಲ್ಲಿ 6 ಸ್ಪರ್ಧಗಳ ಮಾತ್ರ ಬಿಗ್ ಬಾಸ್ ಫಿನಾಲೆಗೆ ತಲುಪುತ್ತಾರೆ. ಹೀಗಾಗಿ, ಒಬ್ಬ ಸ್ಪರ್ಧಿ ಇದೀಗ ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆಯ ಮೂಲಕ ಮನೆಯನ್ನು ಬಿಟ್ಟು ಹೊರಹೋಗಲಿದ್ದಾರೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಇದರ ಬೆನ್ನಲ್ಲಿಯೇ ಒಬ್ಬ ಸ್ಪರ್ಧಿ ನಾನು ಮಿಡ್ ವೀಕ್ ಎಲಿಮಿನೇಷನ್‌ಗೆ ಈಗಲೇ ಸಿದ್ಧವಾಗಿದ್ದೇನೆ. ಯಾವಾಗ ಬೇಕಾದರೂ ಮನೆಯಿದ ಹೊರಗೆ ಹೋಗುವ ಸಂದರ್ಭ ಬರಬಹುದು. ಹೀಗಾಗಿ ಈಗಲೇ ಯಾವಾಗಲೂ ಚೆನ್ನಾಗಿ ರೆಡಿಯಾಗಿ ಬಟ್ಟೆಗಳನ್ನೆಲ್ಲಾ ಪ್ಯಾಕಿಂಗ್ ಮಾಡಿಟ್ಟಿರುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನು ಕೇಳಿದ ಬಿಗ್ ಬಾಸ್‌ಗೆ ಶಾಕ್ ಆಗಿದೆ.
ರಾಶಿಕಾ ಬಿಗ್ ಬಾಸ್ ಮನೆಯಿಂದ ಹೊರಗೆ ಹೋದ ನಂತರ ಮಿಡ್ ವೀಕ್ ಎಲಿಮಿನೇಷನ್ ಆಗುತ್ತದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಇದನ್ನು ಕೇಳಿದ ಕಾವ್ಯಾ ಶೈವ ಅವರು ಮಿಡ್ ವೀಕ್ ಎಲಿಮಿನೇಷನ್‌ಗೆ ಭಯಪಟ್ಟಿದ್ದಾರೆ. ಯಾವಾಗ ಬೇಕಾದರೂ ಮಿಡ್ ವೀಕ್ ಎಲಿಮಿನೇಷನ್ ಆಗಬಹುದು, ಹೀಗಾಗಿ ಯಾವಾಗಲೂ ನಾನು ತುಂಬಾ ಚೆನ್ನಾಗಿ ರೆಡಿಯಾಗಿಯೇ ಇರುತ್ತೇನೆ. ನನ್ನ ಎಲ್ಲ ವಸ್ತುಗಳನ್ನು ನೀಟಾಗಿ ಪ್ಯಾಕ್ ಮಾಡಿಟ್ಟುಕೊಂಡಿರುತ್ತೇನೆ. ಒಂದೇ ಬಾರಿಗೆ ಮನೆಯೊಂದ ಹೊರಗೆ ಕಳಿಸಿದರೆ, ನಾನು ಹೇಗಿದ್ದೇನೋ ಹಾಗೆಯೇ ಹೊರಗೆ ಹೋಗಲಾಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ತಾನು ಮಿಡ್ ವೀಕ್‌ನಿಂದ ಮನೆಯಿಂದ ಹೊರಬೀಳಬಹುದು ಎಂಬ ಭಯದಲ್ಲಿಯೇ ಮೂರು ದಿನಗಳ ಆಟವನ್ನು ಮುಂದುವರೆಸಿದ್ದಾರೆ.
ಬಿಗ್‌ಬಾಸ್ ಮನೆಯಿಂದ ಹೊರಬಿದ್ದ ರಾಶಿಕಾ, ಶೋ ಮುಗಿಯುವ ಮುನ್ನ ಶಾಕಿಂಗ್ ನ್ಯೂಸ್ ಹೇಳಿದ ಸುದೀಪ್!
ಇನ್ನು ಕಾವ್ಯಾ ಶೈವ ಅವರು ಮೊದಲ ದಿನದಿಂದಲೂ ಗಿಲ್ಲಿ ನಟನೊಂದಿಗೆ ಜಂಟಿಯಾಗಿ ಆಟವಾಡುತ್ತಾ ಬಂದಿದ್ದಾರೆ. ಗಿಲ್ಲಿ ನಟ ಅವರು ಕಾವ್ಯಾ ಅವರಿಗೆ ಕಾವು ಕಾವು ಎಂದು ರೇಗಿಸುತ್ತಾ ಅವಳೊಂದಿಗೆ ಸಮಯ ಕಳೆಯುತ್ತಿದ್ದನು. ಇನ್ನು ಕಾವ್ಯಾಗೆ ಹಲವು ಬಾರಿ ಪ್ರೇಮ ನಿವೇದನೆಯನ್ನು ಮಾಡುತ್ತಾ ರೇಗಿಸಿದ್ದಾನೆ. ಆದರೆ, ಎಲ್ಲ ಆಟಗಳಲ್ಲಿ ಹಾಗೂ ಟಾಸ್ಕ್‌ಗಳನ್ನು ಕಾವ್ಯಾಳನ್ನು ಮಾತ್ರ ತನ್ನೊಂದಿಗೆ ಉಳಿಸಿಕೊಂಡೇ ಬಂದಿದ್ದಾನೆ. ಕೆಲವು ಬಾರಿ ಕಾವ್ಯಾಳನ್ನು ಉಳಿಸುವುದಕ್ಕಾಗಿ ಮನೆಯ ಇತರೆ ಸ್ಪರ್ಧಿಗಳನ್ನು ಎದುರು ಹಾಕಿಕೊಂಡಿದ್ದಾನೆ. ಆದರೆ, ಫಿನಾಲೆ ವಾರ ಬರುತ್ತಿದ್ದಂತೆ ಕಾವ್ಯಾ ಶೈವ ಗಿಲ್ಲಿ ನಟನಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಒಂದು ವೇಳೆ ಮನೆಯಿಂದ ಹೊರ ಹೋದರೆ ಅಥವಾ ಫಿನಾಲೆ ಕಂಟೆಸ್ಟೆಂಟ್ ಆದರೆ ಅಥವಾ ಟ್ರೋಫಿ ಗೆದ್ದರೆ ನನ್ನ ಸ್ವಂತಿಕೆಯಿಂದಲೇ ಆಟವಾಡಿದ್ದೇನೆ ಎಂಬುದನ್ನು ಹೇಳಿಕೊಳ್ಳಲು ಇದು ಸಹಾಯಕವಾಗಬಹುದು ಎಂದು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬುದನ್ನು ಕಾದು ನೋಡಬೇಕಿದೆ.
ಬಿಗ್ ಬಾಸ್ 12ನೇ ಸೀಸನ್‌ನಲ್ಲಿ ಕೊನೆಯ ವಾರದ ಕಿಚ್ಚನ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ರಾಶಿಕಾ ಅವರನ್ನು ಎಲಿಮಿನೇಟ್ ಮಾಡಿದ್ದಾರೆ. ಕೇವಲ ಟಾಸ್ಕ್‌ಗಳನ್ನು ಆಟವಾಡುತ್ತಾ, ಮನೆಯಲ್ಲಿ ಆಕ್ಟೀವ್ ಇಲ್ಲದಂತಿದ್ದ ರಾಶಿಕಾ ತುಂಬಾ ಸೈಲೆಂಟ್ ಆಗಿದ್ದರು. ಆದರೆ, ಬಿಗ್ ಬಾಸ್ ಮನೆಯಲ್ಲಿ ಹೀಗೆ ಸೈಲೆಂಟ್ ಆಗಿರುವುದಾದರೆ, ಅವರು ಉಳಿದುಕೊಳ್ಳಲು ಅರ್ಹರೇ ಇರುವುದಿಲ್ಲ. ಅಂಥವರಿಗೆ ವೀಕ್ಷಕರು ಕೂಡ ಓಟ್ ಹಾಕುವುದಿಲ್ಲ. ಇನ್ನು ಸೂರಜ್ ಇದ್ದಾಗ ಅವರೊಂದಿಗೆ ಅಂಟಿಕೊಂಡೇ ಇರುತ್ತಿದ್ದ ರಾಶಿಕಾ, ಸೂರಜ್ ಮನೆಯಿಂದ ಹೊರಗೆ ಹೋದ ನಂತರ ಒಂದೇ ಒಂದು ಬಾರಿಯೂ ಅವರ ಹೆಸರನ್ನು ಎಲ್ಲಿಯೂ ಹೇಳಿಲಿಲ್ಲ. ಆದರೆಮ ಸೂರಜ್ ಸಿಂಗ್ ಬಗ್ಗೆ ಅಶ್ವಿನಿ ಗೌಡ ಅವರೇ ನಾಲ್ಕೈದು ಬಾರಿ ಮಾತನಾಡಿ ತುಂಬಾ ಒಳ್ಳೆಯ ಹುಡುಗ ಎಂದು ಧ್ರುವಂತ್ ಮುಂದೆ ಹೇಳಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.