
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ( Bigg Boss Kannada Season 12) ಗ್ರ್ಯಾಂಡ್ ಫಿನಾಲೆಗೆ ದಿನಗಣನೆ ಶುರುವಾಗಿದೆ. ಈಗ ಮನೆಯಲ್ಲಿ ಟಾಪ್ 5 ಸ್ಪರ್ಧಿಗಳು ಇದ್ದಾರೆ. ಹೀಗಿರುವಾಗ ಮಿಡ್ ವೀಕ್ ಎಲಿಮಿನೇಶನ್ ನಡೆಯಲಿದೆ. ಹಾಗಾದರೆ ಯಾರು ಹೊರಗಡೆ ಹೋಗುತ್ತಾರೆ.
ಕಿಚ್ಚ ಸುದೀಪ್ ಅವರ ಕೊನೆಯ ಕಿಚ್ಚನ ಪಂಚಾಯಿತಿ, ಸಂಡೇ ವಿಥ್ ಸುದೀಪ ಎಪಿಸೋಡ್‌ಗಳು ಮುಗಿದ ಬಳಿಕ, ರಾಶಿಕಾ ಶೆಟ್ಟಿ ಎಲಿಮಿನೇಶನ್ ಬಳಿಕ ಧನುಷ್ ಗೌಡ, ಕಾವ್ಯ ಶೈವ ಅವರು ದೊಡ್ಮನೆಯಲ್ಲಿ ಬೆಡ್ ರೂಮ್ ಏರಿಯಾದಲ್ಲಿ ಮಾತನಾಡಿಕೊಂಡಿದ್ದಾರೆ.
ಧನುಷ್ ಗೌಡ: ಹೋಗು ಡ್ರೆಸ್ ಚೇಂಜ್ ಮಾಡು, ಮಿಡ್ ವೀಕ್ ಕಳಿಸ್ತಾರೆ, ಹೋಗೆ, ರೆಡಿ ಆಗು
ಕಾವ್ಯ ಶೈವ: ಹೋಗಲ್ಲ
ಧನುಷ್ ಗೌಡ: ಹೋಗು
ಕಾವ್ಯ ಶೈವ: ನಾನು ಇಲ್ಲಿ ಕೂತರೆ ನಿನಗೇನು ಸಮಸ್ಯೆ
ಧನುಷ್ ಗೌಡ: ಖುಷಿಯಿಂದ ಕಳಿಸಿಕೊಡ್ತೀನಿ
ಕಾವ್ಯ ಶೈವ: ನಾನು ಎಲ್ಲ ಟೈಮ್‌ನಲ್ಲಿಯೂ ರೆಡಿ ಆಗಿರ್ತೀನಿ, ಯಾವಾಗ ಬೇಕಿದ್ರೂ ಕಳಿಸಬಹುದು
ಗಿಲ್ಲಿ ನಟ ಹಾಗೂ ರಕ್ಷಿತಾ ಬಿಟ್ಟು ಕಾವ್ಯ ಶೈವ ಎಲ್ಲಿಯೂ ಕಾಣಿಸಿಲ್ಲ ಎನ್ನೋ ರೀತಿಯಲ್ಲಿ ಕಿಚ್ಚ ಸುದೀಪ್ ಮಾತನಾಡುತ್ತಾರೆ. ಕಾವ್ಯ ಶೈವ, ಗಿಲ್ಲಿ ನಟ ಅವರು ಅಕ್ಕ-ಪಕ್ಕ ಕೂರೋ ಬಗ್ಗೆ ಕೂಡ ಪ್ರಸ್ತಾಪ ಆಗುವುದು. ಇದನ್ನೆಲ್ಲ ನೋಡಿ ಕಾವ್ಯ ಶೈವ ಡಲ್ ಆಗಿದ್ದುಂಟು, ಧನುಷ್ ಬಳಿ ಹೇಳಿಕೊಂಡು ಅತ್ತಿದ್ದುಂಟು.
ಟಾಪ್ 5ರಲ್ಲಿ ಒಬ್ಬರು ಮಿಡ್ ವೀಕ್ ಎಲಿಮಿನೇಟ್ ಆಗ್ತಾರೆ, ಮಧ್ಯರಾತ್ರಿ ಎಲಿಮಿನೇಶನ್ ಆಗುವುದು. ಅಂದಹಾಗೆ ಕಾವ್ಯ ಶೈವ ಅವರು ಅಷ್ಟಾಗಿ ಟಾಸ್ಕ್‌ಗಳನ್ನು ಆಡಿಲ್ಲ, ಅಡುಗೆ ಬರುತ್ತಿರಲಿಲ್ಲ. ಗಿಲ್ಲಿ ನಟನ ವಿಚಾರವಾಗಿ ಅವರ ಹೆಸರು ಕೇಳಿಬಂದಿದ್ದು ಜಾಸ್ತಿ.
ಗಿಲ್ಲಿ ಕೂಡ ಔಟ್ ಆಗ್ತಾರೆ ಎಂದ್ರು
ಇನ್ನು ಗಿಲ್ಲಿ ನಟ ಕೂಡ ಕಾವ್ಯ ಶೈವ ಅವರು ಔಟ್ ಆಗ್ತಾರೆ, ಮಿಡ್ ವೀಕ್ ಎಲಿಮಿನೇಶನ್ ಆಗುವುದು ಎಂಬರ್ಥದಲ್ಲಿ ಮಾತನಾಡಿದ್ದರು. ಕಾವ್ಯ ಜೊತೆಗೆ ಗಿಲ್ಲಿ ಮಾತನಾಡುತ್ತಿರಲಿಲ್ಲ, ಸಣ್ಣ ಮನಸ್ತಾಪ ಆಗಿತ್ತು. ಆ ವೇಳೆ ಗಿಲ್ಲಿ ನಟ ಅವರು ಟಾಂಟ್ ಮಾಡಿದ್ದರು.
ಫಿನಾಲೆ ಯಾವಾಗ?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗ್ರ್ಯಾಂಡ್ ಫಿನಾಲೆಯು ಜನವರಿ 17, 18ರಂದು ನಡೆಯಲಿದೆ ಎನ್ನಲಾಗಿದೆ. ಈ ಶೋನಲ್ಲಿ ಯಾರು ವಿನ್ ಆಗ್ತಾರೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.