ಬಿಗ್ ಬಾಸ್ ಕನ್ನಡ 11: ಮೋಕ್ಷಿತಾ ಔಟ್, ಮಹಿಳೆ ಟ್ರೋಫಿ ಗೆಲ್ಲುವ ಕನಸು ಈ ಬಾರಿಯೂ ಈಡೇರಲಿಲ್ಲ!

Published : Jan 26, 2025, 09:36 PM ISTUpdated : Jan 26, 2025, 10:02 PM IST
ಬಿಗ್ ಬಾಸ್ ಕನ್ನಡ 11: ಮೋಕ್ಷಿತಾ ಔಟ್, ಮಹಿಳೆ ಟ್ರೋಫಿ ಗೆಲ್ಲುವ ಕನಸು ಈ ಬಾರಿಯೂ ಈಡೇರಲಿಲ್ಲ!

ಸಾರಾಂಶ

ಬಿಗ್‌ಬಾಸ್‌ 11ರಲ್ಲಿ ಮೋಕ್ಷಿತಾ ಪೈ ಮೂರನೇ ರನ್ನರ್‌ಅಪ್‌ ಆಗಿ ಹೊರಬಂದಿದ್ದಾರೆ. ಉಗ್ರಂ ಮಂಜು ನಾಲ್ಕನೇ ರನ್ನರ್‌ಅಪ್‌. ಭವ್ಯಾ ಗೌಡ ಐದನೇ ಸ್ಥಾನ ಪಡೆದರು. ತ್ರಿವಿಕ್ರಮ್, ರಜತ್ ಮತ್ತು ಹನುಮಂತ ಪ್ರಶಸ್ತಿಗಾಗಿ ಸ್ಪರ್ಧಿಸುತ್ತಿದ್ದಾರೆ. ಈ ಬಾರಿಯೂ ಮಹಿಳಾ ಸ್ಪರ್ಧಿ ಗೆಲ್ಲುವ ಕನಸು ಕೈಗೂಡಲಿಲ್ಲ.

ಬಿಗ್‌ ಬಾಸ್ ಕನ್ನಡ 11ನೇ ಸೀಸನ್‌ ನಲ್ಲಿ 50 ಲಕ್ಷ ರೂ ಗೆದ್ದು ಟ್ರೋಫಿಯನ್ನು ಯಾರು ಮನೆಗೆ ತೆಗೆದುಕೊಂಡು ಹೋಗುತ್ತಾರೆ ಎಂಬ ಕುತೂಹಲ ಇನ್ನೂ ಹಾಗೆಯೇ ಇರುವಾಗಲೇ ಮನೆಯಿಂದ  ಮೋಕ್ಷಿತಾ ಪೈ ಹೊರ ಬಂದಿದ್ದಾರೆ. ಭಾನುವಾರದ ಸಂಚಿಕೆಯಲ್ಲಿ ಮೊದಲಿಗೆ ಉಗ್ರಂ ಮಂಜು ಹೊರಬಂದು 4ನೇ ರನ್ನರ್‌ ಅಪ್‌ ಆಗಿದ್ದರು. ಇದೀಗ ಇಂದಿನ ಸಂಚಿಕೆಯಲ್ಲಿ ಮಂಜು ಬಳಿಕ ಮೋಕ್ಷಿತಾ  ಹೊರ ಬಂದಿದ್ದು 3 ನೇ ರನ್ನರ್‌ ಅಪ್‌ ಆಗಿದ್ದಾರೆ.  ಶನಿವಾರ ಸಂಚಿಕೆ ಯಶಸ್ವಿಯಾಗಿ ಮುಕ್ತಾಯವಾಗಿ ಭವ್ಯಾ ಗೌಡ ಮನೆಯಿಂದ ಔಟ್‌ ಆಗಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

BBK 11: ಒಳ್ಳೆಯತನದಲ್ಲಿ ಉಗ್ರಂ ಮಂಜು ಸೇರಾದ್ರೆ, ಕಿಚ್ಚ ಸುದೀಪ್‌ ಸವಾ ಸೇರು! ಗ್ರ್ಯಾಂಡ್‌ ಫಿನಾಲೆಯಲ್ಲಿ ಹೀಗೆ ಹೇಳೋದಾ?

ಇನ್ನು ಮನೆಯಿಂದ 3 ನೇ ರನ್ನರ್‌ ಅಪ್‌ ಆಗಿ ಹೊರಬಂದ ಮೋಕ್ಷಿತಾ ಅವರಿಗೆ ಒfಟು 7 ಲಕ್ಷ ರೂ ಬಹುಮಾನ ದೊರೆಯಿತು. ಇದರ ಜೊತೆಗೆ ಅವರಿಗೆ ಭಾರೀ ಸಂಭಾವನೆ ಕೂಡ ಸಿಕ್ಕಿದೆ. ಮೂಲಗಳ ಪ್ರಕಾರ ವಾರಕ್ಕೆ 60000 ಸಂಭಾವನೆ ಪಡೆಯುತ್ತಿದ್ದರಂತೆ, ಇದು ಬಿಗ್‌ ಬಾಸ್‌ ಸೀಸನ್‌ 11ರಲ್ಲಿ ಎರಡನೇ ಅತಿ ಹೆಚ್ಚು ಸಂಭಾವನೆ ಆಗಿದೆ. ಅದರಂತೆ ಲೆಕ್ಕ ಹಾಕಿದರೆ 10 ಲಕ್ಷ 20 ಸಾವಿರವಾಗುತ್ತದೆ.

BBK11ಕಪ್‌ ಗೆಲ್ತಾರೆ ಅಂದುಕೊಂಡಿದ್ದ ಗ್ರೇ ಏರಿಯಾ ಮಂಜು 50 ಲಕ್ಷ ಗೆಲ್ಲುವ ರೇಸ್‌ನಿಂದ ಔಟ್!

 ಇದೀಗ ಪ್ರಶಸ್ತಿ ರೇಸ್‌ ನಲ್ಲಿ ಕೇವಲ ಮೂವರು ಜನ ಅಂದರೆ  ತ್ರಿವಿಕ್ರಮ್ , ರಜತ್‌ ಮತ್ತು ಹನುಮಂತ ಅವರು ಮನೆಯೊಳಗೆ ಉಳಿದಿದ್ದಾರೆ. ಇದೀಗ ಮೋಕ್ಷಿತಾ ಅವರು ಮನೆಯಿಂದ ಹೊರ ಬರುವ   ಮೂಲಕ  ಈ ಸೀಸನ್‌ ನಲ್ಲಿ ಕಪ್‌ ಗೆಲ್ಲುವ ಮಹಿಳಾ ಸ್ಪರ್ಧಿಯ ಕನಸು ನನಸಾಗದೆ ಉಳಿದಿದೆ. ಜೊತೆಗೆ ವೀಕ್ಷಕರಿಗೂ ಬೇಸರ ಆಗಿದೆ. ಕಳೆದ ಹತ್ತು ಬಿಗ್‌ ಬಾಸ್‌ ಸೀಸನ್‌ಗಳಲ್ಲಿ ಕೇವಲ ಒಬ್ಬ ಮಹಿಳಾ ಸ್ಪರ್ಧಿ ಬಿಗ್‌ ಬಾಸ್‌ ಟ್ರೋಫಿ ಎತ್ತಿ ಹಿಡಿದಿದ್ದರು. ಅದು ಬೇರೆ ಯಾರೂ ಅಲ್ಲ ಖ್ಯಾತ ನಟಿ ಶ್ರುತಿ. ಶ್ರುತಿಯವರನ್ನ ಹೊರತುಪಡಿಸಿ ಯಾವುದೇ ಮಹಿಳಾ ಸ್ಪರ್ಧಿ ವಿನ್ನರ್‌ ಆಗಿರಲಿಲ್ಲ.

ಮೀಸಲಾತಿ ವಿಷ್ಯ ಇಲ್ಲಿಗೆ ಬಿಟ್ಟುಬಿಡಿ, ದೊಡ್‌ ಮನಸ್ಸು ಮಾಡಿ ನನ್ನ ಕ್ಷಮಿಸಿ: ಬಿಗ್‌ ಬಾಸ್‌ ಹಂಸ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಿನಿ ಸ್ನೇಹಿತೆಯರ ಜೊತೆ ಭರ್ಜರಿಯಾಗಿ ಕ್ರಿಸ್‌ಮಸ್‌ ಆಚರಿಸಿದ ಮೇಘನಾ ರಾಜ್‌!
Bigg Boss ಮನೆಯಲ್ಲಿ ಪತ್ನಿ ನೋಡಿ ರಘು ಕಣ್ಣೀರು: ಆ ವಿಷ್ಯವನ್ನೇ ಮರೆತುಬಿಟ್ಟರು! ಬಿಗ್​ಬಾಸ್​ ಬಿಡಬೇಕಲ್ಲಾ?