BBK11ಕಪ್‌ ಗೆಲ್ತಾರೆ ಅಂದುಕೊಂಡಿದ್ದ ಗ್ರೇ ಏರಿಯಾ ಮಂಜು 50 ಲಕ್ಷ ಗೆಲ್ಲುವ ರೇಸ್‌ನಿಂದ ಔಟ್!

Published : Jan 26, 2025, 08:20 PM ISTUpdated : Jan 26, 2025, 08:41 PM IST
 BBK11ಕಪ್‌ ಗೆಲ್ತಾರೆ ಅಂದುಕೊಂಡಿದ್ದ ಗ್ರೇ ಏರಿಯಾ ಮಂಜು 50 ಲಕ್ಷ ಗೆಲ್ಲುವ ರೇಸ್‌ನಿಂದ ಔಟ್!

ಸಾರಾಂಶ

ಬಿಗ್‌ ಬಾಸ್ ಕನ್ನಡ 11 ಇಂದು ಮುಕ್ತಾಯವಾಗಲಿದೆ. 50 ಲಕ್ಷ ರೂ. ಗೆದ್ದು ಟ್ರೋಫಿಯನ್ನು ಯಾರು ಮನೆಗೆ ತೆಗೆದುಕೊಂಡು ಹೋಗುತ್ತಾರೆ ಎಂಬ ಕುತೂಹಲಕ್ಕೆ  ಇನ್ನೂ ಬಾಕಿ ಇರುವಾಗಲೇ  ಗ್ರೇ ಏರಿಯಾ . ಮಂಜು 4ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡು ಮನೆಯಿಂದ ಹೊರಬಂದಿದ್ದಾರೆ.

ಬಿಗ್‌ ಬಾಸ್ ಕನ್ನಡ 11 ಇಂದು ಮುಕ್ತಾಯವಾಗುತ್ತಿದೆ. 50 ಲಕ್ಷ ರೂ ಗೆದ್ದು ಟ್ರೋಫಿಯನ್ನು ಯಾರು ಮನೆಗೆ ತೆಗೆದುಕೊಂಡು ಹೋಗುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. ಶನಿವಾರ ಸಂಚಿಕೆ ಯಶಸ್ವಿಯಾಗಿ ಮುಕ್ತಾಯವಾಗಿ ಭವ್ಯಾ ಗೌಡ ಮನೆಯಿಂದ ಔಟ್‌ ಆಗಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಭಾನುವಾರದ ಸಂಚಿಕೆಗೆ ಮೋಕ್ಷಿತಾ,  ಮಂಜು, ತ್ರಿವಿಕ್ರಮ್ , ರಜತ್‌ ಮತ್ತು ಹನುಮಂತ ಅವರು ಕಾಲಿಟ್ಟಿದ್ದರು. ಇದೀಗ ಭಾನುವಾರದ ಸಂಚಿಕೆಯಲ್ಲಿ ಮೊದಲನೆಯದಾಗಿ ಮಂಜು ಅವರು ಮನೆಯಿಂದ ಹೊರಬಂದು 4 ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಬಿಗ್ ಬಾಸ್ ಫಿನಾಲೆಯಲ್ಲಿ 'ತಾಯ್ನಾಡು' ಪದಕ್ಕೆ ಅಗೌರವ; ರಜತ್ ಹಾಗೂ ಕಿಚ್ಚನ ಮಾತಿನ ಮರ್ಮವೇನು?

ಈ ಮೂಲಕ  ಈ ಸೀಸನ್‌ ನಲ್ಲಿ ಕಪ್‌ ಗೆಲ್ಲುವ  ಗ್ರೇ ಏರಿಯಾ ಕಿಂಗ್ ಕನಸು ನನಸಾಗದೆ ಉಳಿದಿದೆ. ಜೊತೆಗೆ ವೀಕ್ಷಕರಿಗೂ ಬೇಸರ ಆಗಿದೆ.    ಬಿಗ್‌ ಬಾಸ್ ಕನ್ನಡ 11 ಇಂದು ಮುಕ್ತಾಯವಾಗುತ್ತಿದೆ. 50 ಲಕ್ಷ ರೂ ಗೆದ್ದು ಟ್ರೋಫಿಯನ್ನು ಯಾರು ಮನೆಗೆ ತೆಗೆದುಕೊಂಡು ಹೋಗುತ್ತಾರೆ ಎಂಬ ಕುತೂಹಲಕ್ಕೆ ಕೊನೆಯಲ್ಲಿ ತೆರೆ ಬೀಳಲಿದೆ.

ಬಿಗ್ ಬಾಸ್ 5ನೇ ರನ್ನರ್ ಅಪ್ ಭವ್ಯಾ ಗೌಡ ಸಿಕ್ಕ ಹಣವೆಷ್ಟು? ಬಾಕಿ 14 ಸ್ಪರ್ಧಿಗಳಿಗೆ ಸಿಕ್ಕಿದ್ದೆಷ್ಟು?

ಸೀಸನ್‌ ಫುಲ್‌ ತಾಯಿಗಾಗಿ ಈ ಆಟಕ್ಕೆ ಬಂದಿರುವೆ ಎನ್ನುತ್ತಲೇ ಬಂದಿರುವ ಉಗ್ರಂ ಮಂಜು ಮನೆಯಿಂದ ಹೊರ ಬಂದ ಮೇಲೆ ಕಪ್‌ ಗೆಲ್ಲುವ ಅಮ್ಮನ ಆಸೆ ಈಡೇರಲಿಲ್ಲ ಎಂದರು. ನಾನು ಕಪ್‌ ಗೆದ್ದಿಲ್ಲ ಆದರೆ ಅಣ್ಣನ (ಸುದೀಪ್) ಸಿನೆಮಾದಲ್ಲಿ ಅಭಿನಯಿಸಿ ಗೆದ್ದಿದ್ದೇನೆ ಅಮ್ಮ ಎಂದು ಗ್ಯಾಲರಿಯಲ್ಲಿದ್ದ ತಾಯಿಗೆ ಹೇಳಿದರು. ಕಪ್‌ ಗೆಲ್ಲಿಲ್ಲದ್ದಕ್ಕೆ ಕಿಂಚಿತ್ ಬೇಜಾರು ಇಲ್ಲ ಎಂದರು. ಇನ್ನು ಸುದೀಪ್‌ ಕೂಡ ಈ ಸೀಸನ್‌ ನೀವಿಲ್ಲದಿದ್ದರೆ ಕಂಪ್ಲೀಟ್‌ ಆಗುತ್ತಿರಲಿಲ್ಲ. ಈ ಶೋಗೆ ಕಳೆ ತಂದಿದ್ದೀರಿ ಎಂದರು. 

ಮೀಸಲಾತಿ ವಿಷ್ಯ ಇಲ್ಲಿಗೆ ಬಿಟ್ಟುಬಿಡಿ, ದೊಡ್‌ ಮನಸ್ಸು ಮಾಡಿ ನನ್ನ ಕ್ಷಮಿಸಿ: ಬಿಗ್‌ ಬಾಸ್‌ ಹಂಸ

ಇನ್ನು ಶೋ ನಲ್ಲಿ ವಿವಿಧ ಸ್ಪಾನ್ಸರ್ ಕಡೆಯಿಂದ  ಬಹುಮಾನ ರೂಪದಲ್ಲಿ ಸಿಕ್ಕಿದ  3.50 ಲಕ್ಷವನ್ನು ದಾನ ಮಾಡಲು ಮಂಜು ಮುಂದಾದರು. ಈ ವೇಳೆ ತಡೆದ ಸುದೀಪ್‌  ಅದನ್ನು ನಾನು ಕೊಡುತ್ತೇನೆ. ಈ ಹಣವನ್ನು ನಿಮ್ಮ ತಂದೆ ಇಟ್ಟುಕೊಳ್ಳಲಿ ಎಂದರು. ದಾನ ಮಾಡಬೇಕು ಎಲ್ಲವನ್ನೂ ದಾನ ಮಾಡಬಾರದು ಎಂದು ಬುದ್ಧಿ ಹೇಳಿದರು ಕಿಚ್ಚ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ
ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ