ಭಾಗ್ಯಲಕ್ಷ್ಮಿ' ಸೀರಿಯಲ್ಗೆ ತನ್ವಿ ಪಾತ್ರಧಾರಿ ಅಮೃತಾ ಗೌಡ ಈಗ ಸೀರಿಯಲ್ ತಮ್ಮ ಗುಂಡಣ್ಣನಿಗೆ ಕರೆ ಮಾಡಿ ತಾನು ಸೀರಿಯಲ್ ಬಿಡ್ತಿರೋ ವಿಷಯ ತಿಳಿಸಿದ್ದಾಳೆ. ಅವಳು ಹೇಳಿದ್ದೇನು?
ಭಾಗ್ಯಲಕ್ಷ್ಮಿ ಸೀರಿಯಲ್ ತನ್ವಿ ಈಗ ಸಕತ್ ಸದ್ದು ಮಾಡುತ್ತಿದ್ದಾಳೆ. ಇದಕ್ಕೆ ಕಾರಣ ಸೀರಿಯಲ್ ಅಲ್ಲ, ಬದಲಿಗೆ ನಿನ್ನೆ ಬಿಡುಗಡೆಗೊಂಡ ಫಲಿತಾಂಶದಲ್ಲಿ ಪಿಯುಸಿಯ ಕಾಮರ್ಸ್ ವಿಭಾಗದಲ್ಲಿ ಶೇಕಡಾ 91 ತೆಗೆದಿರುವುದಕ್ಕೆ. ಅಂದಹಾಗೆ ತನ್ವಿ ಎಂದೇ ಫೇಮಸ್ ಆಗಿರೋ ಈಕೆಯ ಹೆಸರು ಅಮೃತ ವರ್ಷಿನಿ ಗೌಡ. ಈಗಿನ ಬಹುತೇಕ ಮಕ್ಕಳು ಶೇಕಡಾ 90ರ ಮೇಲೆ ತೆಗೆಯುವುದು ಸಾಮಾನ್ಯವಾಗಿದೆ. ಆದರೆ ಒಂದೆಡೆ ಶೂಟಿಂಗ್ ಬಿಜಿಯ ನಡುವೆಯೇ, ಇಷ್ಟು ಅಂಕ ಗಳಿಸಿರುವ ಕಾರಣ ತನ್ವಿಗೆ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ. ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ತನ್ವಿ, ತನ್ನ ಸುಂದರ ಅಭಿನಯದಿಂದ ಒಂದು ಸಲ ಅಮ್ಮನ ಪರ, ಮತ್ತೊಮ್ಮೆ ಅಪ್ಪನ ಪರ, ಮಗದೊಮ್ಮೆ ಗೊಂದಲಗೂಡಾಗಿರುವ ಮನಸ್ಸು... ಹೀಗೆ ಎಲ್ಲಾ ರೀತಿಯ ಅಭಿನಯಕ್ಕೂ ಸೈ ಎನಿಸಿಕೊಂಡಿದ್ದಾಳೆ. ಶಿಕ್ಷಣದ ಜೊತೆಗೆ ಶೂಟಿಂಗ್ ಎರಡನ್ನೂ ಜೊತೆಯಾಗಿ ಮ್ಯಾನೇಜ್ ಮಾಡುವ ಈಕೆ ಅದೇ ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲೂ (social media) ಸಕತ್ ಆಕ್ಟೀವ್.
ಇದೀಗ ತನ್ನ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾಳೆ ತನ್ವಿ. ಭಾಗ್ಯಲಕ್ಷ್ಮಿಯಲ್ಲಿ ತನ್ನ ತಮ್ಮ ಗುಂಡಣ್ಣನಿಗೆ ಪೋನ್ ಮಾಡುವ ಮೂಲಕ ತಾನು ಸೀರಿಯಲ್ಗೆ ವಿದಾಯ ಹೇಳುತ್ತಿರುವುದಾಗಿ ಹೇಳಿದ್ದಾಳೆ. ಮಿಸ್ ಯೂ ಎಂದಿದ್ದಾಳೆ. ಇದನ್ನು ಕೇಳಿದ ಗುಂಡಣ್ಣ ಅರ್ಥಾತ್ ಬಾಲಕ ನಿಹಾರ್ ಗೌಡ ಯಾಕೆ ಎಂದು ಕೇಳಿದಾಗ, ಅಮೃತಾ ಸೀರಿಯಲ್ ಬಿಡುತ್ತಿದ್ದೇನೆ, ಭಾಗ್ಯ ಅಮ್ಮಂಗೂ ಹೇಳಿಬಿಡು. ಅವರ ನೆಟ್ವರ್ಕ್ ಸಿಕ್ತಿಲ್ಲ ಎಂದಿದ್ದಾಳೆ. ನಿಹಾರ್ ತುಂಬಾ ಬೇಸರದಿಂದ ಯಾಕೆ ಏನಾಯ್ತು ಎಂದು ಕೇಳಿದಾಗ ನಾನು ಸಿಎ ಮಾಡಬೇಕು, ಸ್ಟಡಿ ಮಾಡುವುದಕ್ಕಾಗಿ ಸೀರಿಯಲ್ ಬಿಡ್ತಾ ಇದ್ದೇನೆ. ಬೇರೊಬ್ಬಳು ತನ್ವಿ ಪಾರ್ಟ್ ಮಾಡ್ತಾಳೆ. ನಾನೇ ಒಬ್ಬಳಿಗೆ ರೆಫರ್ ಮಾಡಿದ್ದೇನೆ. ಆಡಿಷನ್ ಕೂಡ ನಡೆದಿದೆ ಎಂದಿದ್ದಾಳೆ. ಇದನ್ನು ಕೇಳಿ ನಿಹಾರ್ ಫುಲ್ ಶಾಕ್ ಆಗಿದ್ದಾನೆ.
ರಿಯಲ್ ಅಮ್ಮ ಕೊಟ್ಟ ಟಾರ್ಚರ್ ಬಗ್ಗೆ ಪಿಯುಸಿಯಲ್ಲಿ 91% ತೆಗೆದ 'ಭಾಗ್ಯಲಕ್ಷ್ಮಿ' ತನ್ವಿ ಹೇಳಿದ್ದೇನು ಕೇಳಿ!
ಆಗ ಅಮೃತಾ ಜೋರಾಗಿ ನಕ್ಕು ಏಪ್ರಿಲ್ ಫೂಲ್ ಎಂದಿದ್ದಾಳೆ! ಅಷ್ಟಕ್ಕೂ ಸಹಜವಾಗಿ ತಮ್ಮ ಮಕ್ಕಳು ಮುಂದೆ ಹೀಗೆ ಆಗಬೇಕು, ಹಾಗೆ ಆಗಬೇಕು ಎಂದು ಅಪ್ಪ-ಅಮ್ಮ ಕನಸು ಕಟ್ಟಿಕೊಳ್ಳುವುದು ಸಹಜ. ಅದೇ ರೀತಿ ಮಕ್ಕಳಿಗೂ ಅದೇನೋ ಆಸೆ ಇರುತ್ತದೆ. ಕೆಲವೊಮ್ಮೆ ಇಬ್ಬರ ಆಸೆಗಳಲ್ಲಿ ವೈರುಧ್ಯವಿದ್ದು ಮನೆಯಲ್ಲಿ ಗಲಾಟೆಯೂ ನಡೆಯುವುದು ಉಂಟು. ಆದರೆ ತನ್ವಿ ಅರ್ಥಾತ್ ಅಮೃತಾ ಮನೆಯಲ್ಲಿ ಹಾಗಲ್ಲ. ಹಾಗೆಂದು ಅಮೃತಾ ಅಮ್ಮನಿಗೆ ಮಗಳು ಸಿಎ ಆಗುವ ಆಸೆ ಇದ್ದರೆ, ಅಮೃತಾ ಆಸೆಯೇ ಬೇರೆ ಇದೆ ಅನ್ನಿ. ಈ ಕುರಿತು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅಮೃತಾ ಗೌಡ ಮಾತನಾಡಿದ್ದಾಳೆ. ನನಗೆ ಬಿಸಿಎ ಮಾಡಿ ಎಂಸಿಎ ಮಾಡುವ ಆಸೆ ಎಂದಿರುವ ಆಕೆ, ಇದೇ ವೇಳೆ ಬಹುತೇಕ ನಟ-ನಟಿಯರಂತೆ ನನಗೂ ಹೀರೋಯಿನ್ ಆಗುವ ಆಸೆ ತುಂಬಾ ಇದೆ ಎಂದಿದ್ದಾಳೆ. ಓದಿನ ಜೊತೆಜೊತೆಗೇ ನಾಯಕಿಯೂ ಆಗ್ತಾಳೋ ಎನ್ನುವುದು ಈಗಿರುವ ಪ್ರಶ್ನೆ.
ಆದರೆ ಈ ಫೋನ್‌ನಲ್ಲಿ ತಾನು ಸಿಎ ಮಾಡಬೇಕಿರುವ ಕಾರಣ ಸೀರಿಯಲ್ ಬಿಡುತ್ತೇನೆ ಎಂದಿರುವ ಕಾರಣ, ಅಮ್ಮನ ಆಸೆಯಂತೆ ಅಮೃತಾ ಕೂಡ ಸಿಎ ಮಾಡುತ್ತಾಳೆ ಎಂದು ಫ್ಯಾನ್ಸ್ ಎಂದುಕೊಳ್ಳುತ್ತಿದ್ದಾರೆ. ನಟನೆಯ ಜೊತೆ ಶಿಕ್ಷಣವನ್ನೂ ಮ್ಯಾನೇಜ್ ಮಾಡ್ತಿರೋ ಬಾಲಕಿಗೆ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ.
ಭಾಗ್ಯಲಕ್ಷ್ಮಿ ತನ್ವಿಯ ರಿಯಲ್ ಅಮ್ಮಂಗೆ ಮಗಳು ಸಿಎಯಾಗುವ ಕನಸು: ಆದ್ರೆ ಈಕೆಯ ಪ್ಲ್ಯಾನೇ ಬೇರೆ...