ಲಕ್ಷ್ಮೀ ಬಾರಮ್ಮ ಸೀರಿಯಲ್ನಲ್ಲಿ ಕೀರ್ತಿ ಪಾತ್ರ ಮಾಡುತ್ತಿದ್ದ ನಟಿ ತನ್ವಿ ರಾವ್, ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಬಂದು ಕೆಲವು ವಿಷಯ ಹಂಚಿಕೊಂಡಿದ್ದಾರೆ. ಏನದು?
ಲಕ್ಷ್ಮೀ ಬಾರಮ್ಮ ಸೀರಿಯಲ್ ಮುಗಿದಿದೆ. ಕಳೆದ ಎರಡೂವರೆ ವರ್ಷಗಳಿಂದ ಜನರನ್ನು ಹಿಡಿದಿಟ್ಟುಕೊಂಡಿದ್ದ ಸೀರಿಯಲ್ 600 ಎಪಿಸೋಡ್ಗಳನ್ನು ಮುಗಿಸಿದೆ. ಅವಸರ ಮಾಡದೆ ಎಲ್ಲಾ ಪಾತ್ರಗಳಿಗೂ ನ್ಯಾಯ ಕೊಟ್ಟು, ಕಾವೇರಿಯ ಅಂತ್ಯ ಕಂಡಿದೆ. ಸೀರಿಯಲ್ಗಳಲ್ಲಿ ಹೆಚ್ಚಾಗಿ ವಿಲನ್ಗಳಿಗೆ ಕೊನೆಯಲ್ಲಿ ಒಳ್ಳೆಯ ಬುದ್ಧಿ ಬರುತ್ತದೆ. ಆದರೆ, ಲಕ್ಷ್ಮೀ ಬಾರಮ್ಮದಲ್ಲಿ ವಿಲನ್ ಕಾವೇರಿಯನ್ನು ಸಾಯಿಸಲಾಗಿದೆ. ಯಾರ ಮೇಲೂ ಆಪಾದನೆ ಬರಬಾರದು ಎನ್ನುವ ಕಾರಣಕ್ಕೆ ಸಿನಿಮಾದ ರೀತಿಯಲ್ಲಿ ಕಾಲಿಗೆ ಕಲ್ಲೊಂದು ತಾಗಿ ಬೆಟ್ಟದ ತುದಿಯಿಂದ ಬಿದ್ದು ಸತ್ತಿದ್ದಾಳೆ. ಅಷ್ಟಕ್ಕೂ ಈ ಸೀರಿಯಲ್ ಕಥೆ ಏನೆಂದರೆ, ವೈಷ್ಣವ್ ಮೇಲೆ ಆತನ ತಾಯಿ ಕಾವೇರಿಗೆ ಎಲ್ಲಿಲ್ಲದ ಪ್ರೀತಿ. ಮಗನನ್ನು ಬಹಳ ಮುದ್ದಿನಿಂದ ಬೆಳೆಸಿದ್ದಳು. ಮಗ ತನ್ನ ಕೈತಪ್ಪಿ ಹೋಗಬಾರದು ಎನ್ನುವ ಕಾರಣಕ್ಕೆ ಮುಗ್ಧಳಾಗಿದ್ದ ಲಕ್ಷ್ಮೀಗೆ ವಿವಾಹ ಮಾಡಿಕೊಟ್ಟಿದ್ದಳು. ಆದರೆ, ಅಲ್ಲಾಗಿದ್ದೇ ಬೇರೆ. ವೈಷ್ಣವ್ ದಿನ ಕಳೆದಂತೆ ಲಕ್ಷ್ಮೀ ಪ್ರೇಮ ಪಾಶಕ್ಕೆ ಸಿಲುಕುತ್ತಾ ಹೋದನು. ಇದರಿಂದ ಕಾವೇರಿ ಸಾಕಷ್ಟು ಚಿಂತೆಗೆ ಒಳಗಾಗುತ್ತಾಳೆ. ತನ್ನ ಮಗ ನನ್ನ ಕೈಯಿಂದ ಬಿಟ್ಟು ಹೋಗಬಾರದು ಎಂಬ ಕಾರಣಕ್ಕೆ ಸೊಸೆಯ ಮೇಲೆ ಕಿಡಿ ಕಾರುತ್ತಾಳೆ. ಕೊನೆಗೆ ಆಕೆಯನ್ನು ಸಾಯಿಸಲೂ ಹೇಸುವುದಿಲ್ಲ. ಆದರೆ ಕೊನೆಯಲ್ಲಿ ತಾನೇ ಅಂತ್ಯ ಕಂಡಿದ್ದಾಳೆ.
ಇದೀಗ ಸೀರಿಯಲ್ ಮುಗಿಯುತ್ತಿದ್ದಂತೆಯೇ, ಲಕ್ಷ್ಮೀ ಬಾರಮ್ಮ ಕೀರ್ತಿ ಪಾತ್ರಧಾರಿ ನಟಿ ತನ್ವಿ ರಾವ್, ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಬಂದು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ಸುದೀರ್ಘ ಅವಧಿಯಲ್ಲಿ ತಮಗಾಗಿರುವ ಅನುಭವ ಹಾಗೂ ವೀಕ್ಷಕರು ತೋರಿಸಿರುವ ಪ್ರೀತಿಗೆ ಧನ್ಯವಾದ ಸಲ್ಲಿಸುತ್ತಲೇ ಕೆಲವೊಂದು ವಿಷಯಗಳನ್ನು ಅವರು ಹೇಳಿದ್ದಾರೆ. 'ನಿಮ್ಮ ಜೊತೆ ಕೀರ್ತಿಯಾಗಿ ಕೊನೆಯದಾಗಿ ಮಾತನಾಡೋಣ ಎಂದು ಬಂದಿದ್ದೇನೆ. ನಿಮ್ಮನ್ನೆಲ್ಲಾ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಪ್ರತಿ ಎಪಿಸೋಡ್ ಪ್ರೊಮೋ ರಿಲೀಸ್ ಆದಾಗಲೂ ವಿವಿಧ ರೀತಿಯ ಕಮೆಂಟ್ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ, ತಿದ್ದಿ ತೀಡಿದ ಅಭಿಮಾನಿಗಳಿಗೆ ಇದೇ ವೇಳೆ ನಟಿ ಧನ್ಯವಾದ ಸಲ್ಲಿಸಿದ್ದಾರೆ. ತಮ್ಮದೇ ಮನೆಯ ಕಥೆಯಂತೆ ಈ ಮೂರು ವರ್ಷಗಳ ತಮ್ಮ ಜೊತೆ ಇದ್ದ ವೀಕ್ಷಕರಿಗೆ ಆಭಾರಿ' ಎಂದು ಹೇಳಿದ್ದಾರೆ.
ಬೆಟ್ಟದಿಂದ ಬಿದ್ದ ಕಾವೇರಿ ಎದ್ದು ಬಂದಳು! ಲಕ್ಷ್ಮೀ ಬಾರಮ್ಮಾ ಸೀರಿಯಲ್ಗೆ ಇದೇನಿದು ಮತ್ತೊಂದು ಟ್ವಿಸ್ಟ್?
ಸೀರಿಯಲ್ ಶುರುವಾಗಿ ಮೂರು ವರ್ಷವಾದರೂ ನಿನ್ನೆ-ಮೊನ್ನೆ ಎಂದ ಹಾಗೆ ಎನ್ನಿಸುತ್ತಿವೆ. ಎಲ್ಲಾ ಕಲಾವಿದರೂ ಒಂದೇ ಕುಟುಂಬದ ರೀತಿಯಲ್ಲಿ ಇದ್ದೆವು. ಒಟ್ಟಿಗೇ ಹಬ್ಬ ಆಚರಿಸುತ್ತಿದ್ದೆವು. ಈಗ ಎಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಭಾವುಕರಾಗಿರುವ ನಟಿ, ಶೀಘ್ರದಲ್ಲಿ ಮತ್ತೊಮ್ಮೆ ನಿಮ್ಮ ಮುಂದೆ ಕಾಣಿಸಿಕೊಳ್ಳುವೆ ಎನ್ನುವ ಮೂಲಕ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ.
ತನ್ವಿ ರಾವ್, ಭರತನಾಟ್ಯ ಕಲಾವಿದೆಯಾಗಿದ್ದು, ಕಥಕ್ ಹಾಗೂ ಸೆಮಿ ಕ್ಲಾಸಿಕಲ್ ನೃತ್ಯವನ್ನೂ ಅಭ್ಯಾಸ ಮಾಡಿದ್ದಾರೆ. ಕಿರುತೆರೆಗೆ ಬರುವ ಮುನ್ನ ತನ್ವಿ ರಾವ್ ಹಿಂದಿ ಸಿನಿರಂಗದ ಜನಪ್ರಿಯ ತಾರೆಯರಾದ ಮಾಧುರಿ ದೀಕ್ಷಿತ್ ಹಾಗೂ ಜೂಹಿ ಚಾವ್ಲಾ ಅವರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಬಾಲಿವುಡ್ ಸಿನಿಮಾ 'ಗುಲಾಬಿ ಗ್ಯಾಂಗ್'ನಲ್ಲಿ ನಟಿಸಿರುವ ತನ್ವಿ, ಮುಂದೆ 'ಗನ್ಸ್ ಆಫ್ ಬನಾರಸ್' ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಜೊತೆಗೆ ಕನ್ನಡದ 'ರಂಗ್ ಬಿರಂಗಿ' ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ್ದಾರೆ.
ಲಕ್ಷ್ಮೀ ಬಾರಮ್ಮ ಶೂಟಿಂಗ್ ಸೆಟ್ನಲ್ಲೇ ಕಣ್ಣಿನಿಂದ ರಕ್ತ ಸುರೀತು: ಶಾಕಿಂಗ್ ವಿಷ್ಯ ರಿವೀಲ್ ಮಾಡಿದ ನಟಿ ಭೂಮಿಕಾ