ಈ ವರ್ಷ ವಿಚ್ಛೇದನ ಸಿಗಲಿ ಎಂದು ಸಿತಾರಾ. ಮದುವೆ ಗಂಡ ಸಂಸಾರ ಆಗಿ ಬರಲ್ಲ ಅಂತ ಹೇಳಿದ ನಟಿ....
ಕನ್ನಡ ಕಿರುತೆರೆಯಲ್ಲಿ ಖಡಕ್ ವಿಲನ್ ಆಗಿ ಮಿಂಚುತ್ತಿರುವ ಸಿತಾರಾ ನೀನಾಸಂ ನಾಲ್ಕು ವರ್ಷಗಳ ಹಿಂದೆ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಫ್ಯಾಮಿಲಿ ಮತ್ತು ಸೀರಿಯಲ್ ಎರಡನ್ನೂ ಮ್ಯಾನೇಜ್ ಮಾಡಿಕೊಂಡು ಜೀವನವನ್ನು ಫಸ್ಟ್ ಕ್ಲಾಸ್ ಆಗಿ ನಡೆಸುತ್ತಾರೆ. ತೆರೆ ಮೇಲೆ ಬಣ್ಣ ಹಚ್ಚಿಕೊಂಡು ಕಲರ್‌ಫುಲ್ ಜೀವನ ನಡೆಸುತ್ತಿದ್ದಾರೆ ಅಂದ್ರೆ ರಿಯಲ್ ಲೈಫ್‌ನಲ್ಲೂ ಹಾಗೆ ಅಂದುಕೊಳ್ಳಬೇಡಿ. ತುಂಬಾ ಕಷ್ಟ ನೋವು ಅವಮಾನಗಳನ್ನು ಎದುರಿಸಿಕೊಂಡು ಸಿತಾರಾ ಸಾಧನೆ ಮಾಡಿರುವುದು. ಈಗ ಅವರ ವೈಯಕ್ತಿಕ ಜೀವನದ ಮುಖ್ಯವಾದ ಘಟ ಮುಟ್ಟಿದೆ.
'2019ರಲ್ಲಿ ಮದುವೆ ಮಾಡಿಕೊಂಡೆ ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲು ಇಷ್ಟವಿಲ್ಲ ಏಕೆಂದರೆ ಅದು ಚೆನ್ನಾಗಿ ನಡೆಯಲಿಲ್ಲ. ಏನಾದರೂ ಯಾರ ಬಗ್ಗೆ ಆದರೂ ಮಾತನಾಡಿದರೆ ಅದು ದೂರು ಹೇಳುತ್ತಿರುವ ಹಾಗೆ ಅನಿಸುತ್ತದೆ. ಮದುವೆ ಆಗಿತ್ತು ಈ ವರ್ಷ ಕೊನೆಯಲ್ಲಿ ವಿಚ್ಛೇದನ ಸಿಗಬಹುದು ಖಂಡಿತಾ ಆಗುತ್ತೆ. ಈಗ ಮತ್ತೆ ಜೀವನದಲ್ಲಿ ಒಂಟಿಯಾಗಿರುವೆ. ಲೈಫ್ ಪಾರ್ಟನರ್ ಸಿಗಲ್ಲ ಅನ್ನೋ ಮಾತಲ್ಲ...ಪ್ರತಿಯೊಬ್ಬರು ಒಂದೇ ರೀತಿ ಬೆಳೆದಿರುವುದಿಲ್ಲ ನಾನು ಬೆಳೆದ ರೀತಿ ಬೇರೆ ಆಗಿರುತ್ತೆ ಮತ್ತೊಬ್ಬರ ವ್ಯಕ್ತಿತ್ವ ಮತ್ತು ಬೆಳೆದ ರೀತಿ ಬೇರೆ ಇರುತ್ತದೆ. ಹೊಂದಿಕೊಳ್ಳುತ್ತಾರೆ ಅನ್ನೋ ಭ್ರಮೆಯಲ್ಲಿ ಇರುತ್ತೀವಿ ಆದರೆ ಯಾರೂ ಹೊಂದಿಕೊಳ್ಳಲುವುದಿಲ್ಲ. ಬಹುಷ ನಾನೇ ಅರ್ಜೆಂಟ್ ಮಾಡಿದೆ ದುಡುಕಿ ಬಿಟ್ಟೆ ಅನ್ಸುತ್ತೆ. ನಂದು ಲವ್ ಮ್ಯಾರೇಜ್ ಅಲ್ಲ ಪಕ್ಕಾ ಅರೇಂಜ್ಡ್ ಮ್ಯಾರೇಜ್. ಜೀವನದಲ್ಲಿ ಏನಾಗುತ್ತದೆ ಅಂದ್ರೆ ಸ್ವಾಭಿಮಾನ ಮುಖ್ಯವಾಗುತ್ತದೆ ಅದು ಫ್ಯಾಮಿಲಿ ಆಗಬಹುದು ಯಾರೇ ಇರಬಹುದು. ನಾನು ಮದುವೆಯಾಗಿರುವ ಹುಡುಗನ ಫ್ಯಾಮಿಲಿ ಕೂಡ ತುಂಬಾ ರೆಸ್ಪೆಕ್ಟ್ ಇರುವ ಫ್ಯಾಮಿಲಿ ನನ್ನ ಅತ್ತೆ ಮಾವ ತುಂಬಾ ಒಳ್ಳೆಯವರು ನನ್ನ ಗಂಡ ಕೂಡ ಒಳ್ಳೆಯವರು' ಎಂದು ಸಿತಾರಾ ಕನ್ನಡ ಜನಪ್ರಿಯ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಮುಟ್ಟಬಾರದ ಜಾಗದಲ್ಲಿ ಕೆಟ್ಟದಾಗಿ ಮುಟ್ಟುತ್ತಿದ್ದರು: ನೀನಾಸಂ ಕರಾಳ ಸತ್ಯ ಬಿಚ್ಚಿಟ್ಟ ನಟಿ ಸಿತಾರಾ!
'ಸಣ್ಣ ಮುಟ್ಟ ಮನಸ್ತಾಪಗಳಿತ್ತು ಕೆಲವು ವಿಚಾರಗಳು ಹೊಂದಾಣಿಕೆ ಆಗಲಿಲ್ಲ ಮುಂದಕ್ಕೆ ಸಿಗಬಹುದು ಸಿಗದೇ ಇರಬಹುದು ಆದರೆ ಮದುವೆ ಮಾಡಿಕೊಳ್ಳದೆ ಸಾಧನೆ ಕಡೆ ಗಮನ ಕೊಡಬೇಕು ಅನ್ನೋದು ನನ್ನ ಯೋಚನೆ. ಸಂಸಾರ ಗಂಡ ಅನ್ನೋ ವಿಚಾರನೇ ನನ್ನ ಕೂಡಿ ಬರುತ್ತಿಲ್ಲ. ನಾನು ಅವರಿಗೆ ಅರ್ಥವಾಗಿಲ್ಲ ಅವರು ನನಗೆ ಅರ್ಥವಾಗಿಲ್ಲ ಗೊತ್ತಿಲ್ಲ ಮೂರ್ನಾಲ್ಕು ವರ್ಷ ಸಮಯ ಕೊಟ್ಟಿದ್ದೀನಿ ...ಇದೇ ಹೇಳುತ್ತೆ ನನಗೆ ತಾಳ್ಮೆ ಜಾಸ್ತಿ ಇದೆ ಎಂದು. ನನ್ನ ಸೀರಿಯಲ್ ಕೆಲಸಗಳು ನಡೆಯುತ್ತಿದೆ, ಕೆಲವೊಂದು ಸೀರಿಯಲ್‌ಗೆ ಕಾಸ್ಟ್ಯೂಮ್ ಮಾಡುತ್ತಿರುವೆ, ಕೆಲವರ ಜೊತೆ ಕ್ಯಾಮೆರಾ ಕೆಲಸ ಮಾಡುತ್ತಿರುವೆ. ಈಗಷ್ಟೆ ನಟನೆಗೆ ಎಂಟ್ರಿ ಕೊಡುತ್ತಿರುವವರಿಗೆ ಒಂದು ವಾರ ನಟನೆ ಹೇಳಿ ಕೊಡುವೆ. ಖುಷಿ ಇದೆ ಜೀವನದಲ್ಲಿ ಹೊಸ ವಿಚಾರಗಳನ್ನು ಕಲಿಯುತ್ತಿರುವೆ. ಕೆಲವೊಂದು ಪ್ರಶ್ನೆಗಳು ಉಳಿದು ಬಿಟ್ಟಿತ್ತು ಈ ವರ್ಷ ಅದಕ್ಕೆ ಉತ್ತರ ಸಿಗುತ್ತಿದೆ' ಎಂದು ಸಿತಾರಾ ಹೇಳಿದ್ದಾರೆ.
ಮೂರು ತಿಂಗಳಿನಲ್ಲಿ 45 ಕೆಜಿ ಲಾಸ್; ಅವಕಾಶ ಗಿಟ್ಟಿಸಿಕೊಂಡಿದ್ದು ಹೇಗೆಂದು ಸತ್ಯ ಬಿಚ್ಚಿಟ್ಟ ರಾಮಾಚಾರಿ ರಿತ್ವಿಕ್!