ಮನೆ ಮನೆ ಮುಂದೆ ಭಿಕ್ಷೆ ಬೇಡಿದ ಸರಿಗಮಪ ಖ್ಯಾತಿಯ ಶ್ರೀ ಹರ್ಷ!

By Suvarna NewsFirst Published Jul 30, 2023, 3:19 PM IST
Highlights

ಭಗವಂತ ನಮಗೇನೂ ಕೊಟ್ಟಲ್ಲವೆಂದೇ ಹೇಳುವ ಕಾಲದಲ್ಲಿ, ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಸ್ವೀಕರಿಸೋದು ಕಡಿಮೆ. ಮನಸ್ಸು ಸಂಕುಚಿತಗೊಳಿಸಿಕೊಳ್ಳುವ ಮೊದಲು ಶ್ರಾವಣ ಮಾಸದಲ್ಲೊಂದು ಭಿಕ್ಷೆ ಬೇಡಿದರೆ ಸಿಗುವ ವಿಶೇಷ ಅನುಭವ ಹಂಚಿಕೊಂಡ ಸರಿಗಮ ಖ್ಯಾತಿಯ ಶ್ರೀ ಹರ್ಷ. 

ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ತನ್ನದೇ ವಿಶೇಷವಿದೆ. ಈ ವಿಶೇಷ ಸಂದರ್ಭದಲ್ಲಿ ಜೀ ಕನ್ನಡದ ಸರಿಗಮಪ ಖ್ಯಾತಿಯ ಶ್ರೀಹರ್ಷ ಮನೆ ಮನೆಗೆ ಹೋಗಿ ಭಿಕ್ಷೆ ಬೇಡಿದ್ದು, ತಮ್ಮ ಅನುಭವವನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂದಿದ್ದಾರೆ. ಅಷ್ಟಕ್ಕೂ ಅವರು ಯಾಕೆ ಭಿಕ್ಷೆ ಬೇಡಲು ಹೋಗಿದ್ದು, ಸಿಕ್ಕ ಭಿಕ್ಷೆ ಎಷ್ಟು? ಫೇಸ್‌ಬುಕ್‌ನಲ್ಲಿ ಇವತ್ತಿನ ಭಿಕ್ಷೆ, ಒಮ್ಮೆ ಓದಿ (ಶ್ರಾವಣ ಶನಿವಾರದ ಮಹತ್ವ) ಎಂದ ಬರೆದುಕೊಂಡಿರುವ ಗಾಯಕ, ಭಿಕ್ಷೆ ಬೇಡಲು ಹೋಗುವಾಗ ಜನರು ಅವರನ್ನು ಹೇಗೆ ಸತ್ಕರಿಸಿದರು, ಅನಿಸಿದ್ದೇನೆಂದು ಹೀಗೆ ಬರೆದು ಕೊಂಡಿದ್ದಾರೆ.  ಬರೆದುಕೊಂಡ ಬರಹ ಇಲ್ಲಿದೆ. 

'ಭಿಕ್ಷೆಯಲ್ಲಿ ಭಗವಂತ ಕರುಣಿಸಿದ ಅನುಭವದ ಪ್ರಸಾದ. ದಿನನಿತ್ಯದ ಈ ಬದುಕಿನಲ್ಲಿ ಭಗವಂತನ ಕೃಪೆಯಿಂದ,  ಒಂದು ದುಡಿಮೆಯ ದಾರಿ ಹುಡುಕಿಕೊಂಡ ನಮಗೆ,  ಅನ್ನದ ಮೌಲ್ಯ ಮರೆತು, ಅದನ್ನು 'ಗಳಿಸುವ ಹಾಗೂ ಬೇಕಾದಾಗ ಮತ್ತು ಬೇಕಾದ ಹಾಗೆ ಬಳಸುವ, ಖರ್ಚು ಮಾಡುವ, ದುರುಪಯೋಗ ಮಾಡುವ ಯೋಗ್ಯತೆ ಇದೆ,' ಎಂಬ ಅಹಂಕಾರ ಬೆಳೆಯಬಹುದು. 

Latest Videos

ಸಮಾಜದಲ್ಲಿ ನಾವೇನೇ ಆಗಿದ್ದರೂ, ಒಮ್ಮೆ ಕೈಯಲ್ಲಿ ತಟ್ಟೆ ಹಿಡಿದು ಭಗವಂತನ ನಾಮ ಸ್ಮರಣೆ ಮಾಡುತ್ತಾ ಮನೆ-ಮನೆ ಮುಂದೆ ನಿಂತು, 'ಭವತಿ ಭಿಕ್ಷಾಂ ದೇಹಿ' ಎಂದು ಅಹಂಕಾರ ಬಿಟ್ಟು ಕೇಳಿ ನೋಡಿ! ಅಲ್ಲಿ ಸಿಗುವ ಹಿಡಿಯಷ್ಟು ಅಕ್ಕಿಯ ಪ್ರತಿ ಕಾಳೂ ತಟ್ಟೆಗೆ ಬೀಳುವಾಗಲೂ ಕಣ್ಣಲ್ಲಿ‌ ನೀರು. ಭಗವಂತನ ದಯೆ ನಮ್ಮ‌ಮೇಲೆ ಎಷ್ಟಿದೆ ಎಂಬುದರ ಅರಿವು ಹಾಗು ಆ ಕರುಣಾಮಯಿಯ ಮೇಲೆ ಕೃತಜ್ಞತಾ ಭಾವವಷ್ಟೇ ಉಳಿಯುತ್ತದೆ. 

ವೈವಾಹಿಕ ಜೀವನಕ್ಕೆ ಕಾಲಿಟ್ಟ ಸರಿಗಮಪ ಗಾಯಕ ಶ್ರೀ ಹರ್ಷ!

ಇಂದಿನ ಅನುಭವ ಹೇಗಾಯ್ತು? ಭಿಕ್ಷೆಗೆಂದು ಮನೆ ಬಾಗಿಲು ತಟ್ಟಿದಾಗ, ಬಾಗಿಲು ತೆರೆಯದೇ ಕಿಟಿಕಿಯಿಂದಲೇ...ನೋಡಿ ಕೆಲವರು ಸುಮ್ಮನಾದರು. ಬನ್ನಿ ಎಂದು ಒಳಗೆ ಕರೆದು - 'ಗೋವಿಂದ' - ಎಂದು ಹೇಳಿದೊಡನೆ ಸದ್ಭಾವನೆಯಿಂದ ಹಿಡಿ ಅಕ್ಕಿ ಹಾಕಿದರು. ಮುಂದಕ್ಕೆ ಹೋಗಿ ಎಂದವರು ಹಲವರು. ಅವರಿಗಿನ್ನ ಮುಂಚೆ,  ನಾಯಿಯೇ - 'ಒಳಗೆ ಬರಬೇಡ' ಎಂದಿದ್ದೂ ಇದೆ. ಒಳಗೆ ಕರೆದು- 'ಏಕೆ ಹೀಗೆ ಭಿಕ್ಷೆ ಬೇಡುತ್ತಿದ್ದೀರಿ? ನಿಮಗೇನು ಆಗಿದೆ? ಅಥವಾ ನಿಮ್ಮ ಪದ್ಧತಿಯೋ?' ಎಂಬ ಪ್ರಶ್ನಿಸಿದವರೂ ಇದ್ದಾರೆ. 

'Sorry pa...ಆಗಲೇ ಗೊತ್ತಾಗಲಿಲ್ಲ.... ಬನ್ನಿ ಬನ್ನಿ' ಎಂದು ಪುನಾ ಕರೆದು ಭಿಕ್ಷಾ ಪ್ರಾಪ್ತಿಸಿದವರೂ ಹಲವರು. ನಮ್ಮ‌ ಮನೆಗೂ ಬನ್ನಿ ಎಂದು ತಾವೇ ಕರೆದು ಭಿಕ್ಷೆ ನೀಡಿದ ತಾಯಂತಿರೆಗ ನಮೋ ನಮಃ. ಎಲ್ಲವನ್ನೂ ಮಂದಸ್ಮಿತದಿಂದ ಸ್ವೀಕರಿಸಿ- 'ಇಟ್ ಹಾಂಗೆ ಇರುವೆನೋ ಹರಿಯೇ' ಎಂಬ ಭಾವವಷ್ಟೇ ನನ್ನದು! ಒಂದೊಂದು ಮನೆಯಲ್ಲಿಯೂ ಒಂದೊಂದು ಅನುಭವ. ಅವರೆಲ್ಲರ expression, ಮಾತುಕತೆ ಹಾಗು reactions -  ಅದು ಅವರ ಕ್ರಿಯೆ ಅದಲ್ಲ. ನನ್ನ ಅಸ್ತಿತ್ವದ ಕೈಗನ್ನಡಿ!

ಒಂದು ಮುಷ್ಟಿ ಅಕ್ಕಿಯ ಬೆಲೆ, ಅದನ್ನು ಪಡೆಯುವ ನಮ್ಮ ಯೋಗ್ಯತೆಯನ್ನು  ಭಗವಂತ ನಮಗೆ ತಿಳಿಸುವ ಪರಿ ಇದು. ನಮ್ಮ ಅಹಂಕಾರ, ಸಣ್ಣತನ, ಸಂಕೋಚ ಕಳೆದುಕೊಳ್ಳಲು ಇದು ಅದ್ಭುತ ಮಾರ್ಗ. ನಮ್ಮ ಭಾರತೀಯ ಸನಾತನ ಧರ್ಮದ ಒಂದೊಂದು ಆಚರಣೆಯೂ ಕೇವಲ ಕುರುಡು, ಡಾಂಭಿಕ‌ ಭಕ್ತಿಯ ತೋರುಗಾಣಿಕೆಯಲ್ಲ. ಅದು ಉನ್ನತವಾಗಿ ಬದುಕುವ ರೀತಿ,' 

ನಿಮಗೆಷ್ಟೇ ವಯಸ್ಸಿರಲಿ, ಯಾವುದೇ designation ಇರಲಿ, ಐಷಾರಾಮಿ ಜೀವನವನ್ನೇ ನಡೆಸುತ್ತಿರಲಿ. so called 'STATUS' ದೊಡ್ಡದಿರಲಿ, ಅಹಂಕಾರ ಬಿಟ್ಟು ಭಗವಂತನ ಹೆಸರಲ್ಲಿ ಒಂದು ಬಾರಿ ಭಿಕ್ಷೆ ಎತ್ತಿ ನೋಡಿ! ನಿಮಗೆ ಅನ್ನ ದುಡಿಯುವ ಯೋಗ್ಯತೆ ಭಗವಂತ ಕರುಣಿಸಿದ್ದರೆ, ಬಂದ ಭಿಕ್ಷೆಯನ್ನು ಅವಶ್ಯಕತೆ ಇರುವವರಿಗೆ ನೀಡಿ. 

ವೈವಾಹಿಕ ಜೀವನಕ್ಕೆ ಕಾಲಿಟ್ಟ ಸರಿಗಮಪ ಗಾಯಕಿ ಅಖಿಲಾ ಪಜಿಮಣ್ಣು!

ಭಿಕ್ಷೆ ಅವರಿಗೆ, ಭಾವ ನಿಮಗೆ, ಅನುಭವ ನಿಮಗೆ, ಭಕ್ತಿ ನಿಮ್ಮೊಳಗೆ, ಅಹಂಕಾರ ಹೊರಗೆ, ನೆಮ್ಮದಿ ಕೊನೆಗೆ! ಅನ್ನಂ ನ ನಿಂದ್ಯಾತ್ - ತದ್ ವ್ರತಂ - ಅನ್ನವನ್ನು ನಿಂದಿಸಬೇಡ ( Don't waste FOOD) - ಅದನ್ನು ವ್ರತವಾಗಿ ಆಚರಿಸು ..(ತೈತ್ತರೀಯ ಉಪನಿಷತ್ತು ) ಒಮ್ಮೆ ನೀವೂ ಮಾಡಿ,' ಎಂದು ಶ್ರೀ ಹರ್ಷ ಕರೆ ನೀಡಿದ್ದಾರೆ. 

ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಹರ್ಷವರು ಈ ಫೇಸ್‌ಬುಕ್ ಪೋಸ್ಟಿಗೆ disclaimer ಕೂಡ ಹಾಕಿಕೊಂಡಿದ್ದು, ಈ post ಅನ್ನು ಯಾವುದೇ advertisement ಗಾಗಿ ಆಗಲಿ, ಪ್ರಶಂಸೆಗಾಗಲಿ  ಮಾಡುತ್ತಿಲ್ಲ, 'ಧರ್ಮೋ ರಕ್ಷತಿ ರಕ್ಷಿತಃ' ಎಂಬ ಮಾತಿನಂತೆ , ಧರ್ಮವನ್ನು ನಿಷ್ಠೆಯಿಂದ  ಆಚರಿಸಿದರೆ ಮಾತ್ರ ಅದು ನಮ್ಮನ್ನು ಕಾಪಾಡುವುದು. ಆಚರಿಸುವುದು - ಎಂದರೆ ಬರೀ ಹೇಳುವುದಲ್ಲ, ಮಾಡುವುದು. ಆಚರಿಸಿದ ನಂತರದ ಅನುಭವ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ನೀವೂ ಆಚರಿಸಿ, ನಂತರ ಮಕ್ಕಳಿಗೆ ಇದರ ಮಹತ್ವ ತಿಳಿಸಿಕೊಡಿ. ಅವರೂ ಆಚರಿಸುವಂತೆ ಬೆಳೆಸಿರಿ, ಎಂದು ಕರೆ ನೀಡಿದ್ದಾರೆ. ಹರ್ಷ ಅವರ ಈ ಪೋಸ್ಟ್ ಸಾಕಷ್ಟು ಮೆಚ್ಚುಗೆ ಗಳಿಸಿದ್ದು, ಸಾಕಷ್ಟು ಶೇರ್ ಆಗುತ್ತಿವೆ. 


 

click me!