Allu Arjun ಒಂದೇ ಒಂದು ಫೋಟೋಗೆ ಹೊಡೆಯಿತು ಲಾಟರಿ: ಇತಿಹಾಸ ಸೃಷ್ಟಿಸಿದ ನಟ

Published : Jul 29, 2023, 03:40 PM ISTUpdated : Jul 30, 2023, 02:53 PM IST
Allu Arjun ಒಂದೇ ಒಂದು ಫೋಟೋಗೆ ಹೊಡೆಯಿತು ಲಾಟರಿ: ಇತಿಹಾಸ ಸೃಷ್ಟಿಸಿದ ನಟ

ಸಾರಾಂಶ

ಒಂದೇ ಒಂದು ಫೋಟೋ ಹಾಕಿರುವ ನಟ ಅಲ್ಲು ಅರ್ಜುನ್​ ಅವರು ಒಂದು ಮಿಲಿಯನ್​ ಫಾಲೋವರ್ಸ್​ ಹೊಂದಿಗೆ ದಾಖಲೆ ಸೃಷ್ಟಿಸಿದ್ದಾರೆ. ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.   

ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರ ಪುತ್ರ ಅಲ್ಲು ಅರ್ಜುನ್ (Allu Arjun) ಟಾಲಿವುಡ್ ನ ಖ್ಯಾತ ನಟರಲ್ಲೊಬ್ಬರು. ಹಲವಾರು ಬ್ಲಾಕ್​ಬಸ್ಟರ್​ ಚಿತ್ರಗಳನ್ನು ನೀಡಿರುವ ನಟ, ಇದೀಗ ಪುಷ್ಪ-2 ಸಿನಿಮಾ ಕೆಲಸಗಳಲ್ಲಿ ಬಿಸಿ ಆಗಿದ್ದಾರೆ. ಇದರ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಹೌದು. ಅಲ್ಲು ಅರ್ಜುನ್​ ಅವರ ಒಂದೇ ಒಂದು ಪೋಸ್ಟ್​ಗೆ ಒಂದು ಮಿಲಿಯನ್​ ಅರ್ಥಾತ್​ 10 ಲಕ್ಷ ಫಾಲೋವರ್ಸ್​ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ, ಟ್ವಿಟರ್​ ಥ್ರೆಡ್‌ಗಳಲ್ಲಿ ಒಂದು ಮಿಲಿಯನ್ ಹಿಂಬಾಲಕರನ್ನು ಗಳಿಸಿದ ಮೊದಲ ಭಾರತೀಯ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  

ಹೊಸದಾಗಿ ಪ್ರಾರಂಭಿಸಲಾಗಿರೋ  ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ  ಮೊದಲ ಪೋಸ್ಟ್  ಹಂಚಿಕೊಂಡ ಕೆಲವೇ ದಿನಗಳಲ್ಲಿ ಈ ಸಾಧನೆ ಮಾಡಲಾಗಿದೆ.  ಇತ್ತೀಚೆಗೆ ಮಾರ್ಕ್​ ಜುಕರ್​ಬರ್ಗ್​ ಅವರು ಥ್ರೆಡ್ಸ್ (Twitter Thread) ಹೆಸರಿನ ಸೋಶಿಯಲ್ ಮಿಡಿಯಾ ಪ್ಲಾಟ್​ಫಾರ್ಮ್​ ಆರಂಭಿದ್ದರು. ಆರಂಭದಲ್ಲಿ ಇದು ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಆದರೆ, ದಿನ ಕಳೆದಂತೆ ಇದರ ಬಳಕೆ ಮಾಡುವವರ ಸಂಖ್ಯೆ ಕಡಿಮೆ ಆಗಿದೆ. ಹಲವು ಸೆಲೆಬ್ರಿಟಿಗಳು ಕೂಡ ಇದರಲ್ಲಿ ಖಾತೆ ತೆರೆದಿದ್ದಾರೆ. ಈ ಪೈಕಿ ಒಂದು ಮಿಲಿಯನ್ ಹಿಂಬಾಲಕರನ್ನು ತಲುಪಿದ ಮೊದಲ ಭಾರತೀಯ ಸೆಲೆಬ್ರಿಟಿ ಎನ್ನುವ ಖ್ಯಾತಿ ಅಲ್ಲು ಅರ್ಜುನ್​ಗೆ ಸಿಕ್ಕಿದೆ.

ಅಲ್ಲು ಅರ್ಜುನ್ ಮಗಳು ತನ್ನ ಸಿನಿಮಾದಲ್ಲಿ ಇರಬೇಕು ಎಂದು Jr NTR ಕೊಟ್ಟ ಸಂಭಾವನೆ ಇಷ್ಟು!

ಅಲ್ಲು ಅರ್ಜುನ್ ಅತ್ಯಾಸಕ್ತಿಯ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲದಿದ್ದರೂ, ಅವರು ಆನ್‌ಲೈನ್‌ನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಸಂವಹನ ನಡೆಸುತ್ತಿರುತ್ತಾರೆ.  ಆದ್ದರಿಂದ  ಅಲ್ಲು  ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. 'ಪುಷ್ಪ: ದಿ ರೈಸ್'  (Pushpa The Rise) ಚಿತ್ರದಿಂದ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ. 'ಪುಷ್ಪ: ದಿ ರೈಸ್' ಚಿತ್ರದ ಅದ್ಭುತ ಅಭಿನಯದ ನಂತರ ಅಲ್ಲು ಅರ್ಜುನ್ ಮನೆಮಾತಾಗಿದ್ದಾರೆ. 41ರ ಹರೆಯದ ಅಲ್ಲು ಅವರ  ಜನಪ್ರಿಯತೆ ಈ ಚಿತ್ರದ ಬಳಿಕ ಭಾರತದ ಆಚೆಗೂ ಹರಡಿದೆ. ಅವರು ಇತರ ದೇಶಗಳಲ್ಲಿಯೂ ಸಾಕಷ್ಟು ಮತ್ತು ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿದ್ದಾರೆ.  ಸದ್ಯ ಅವರು ಸುಕುಮಾರ್ ನಿರ್ದೇಶನ ಮಾಡುತ್ತಿರುವ   ‘ಪುಷ್ಪ 2’ ಚಿತ್ರದ  ಶೂಟಿಂಗ್​ನಲ್ಲಿ ಬಿಜಿಯಾಗಿದ್ದಾರೆ. ಇದರ ನಡುವೆಯೇ ಈಗ ಹೊಸ ಸಾಧನೆಯ ಗರಿ ದಕ್ಕಿದೆ. ಇದನ್ನು ಕೇಳುತ್ತಿದ್ದಂತೆಯೇ ಅವರ ಫ್ಯಾನ್ಸ್​ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.  ಏಕೆಂದರೆ  ಹಿಂದ್ಯಾವ ಭಾರತೀಯ ನಟರೂ ಮಾಡದ ಸಾಧನೆ ಮಾಡಿ ದಾಖಲೆ ಇದಾಗಿದೆ.  

ಇದಾಗಲೇ ಹಲವಾರು ನಟರು ಟ್ವಿಟರ್​ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಕತ್​ ಫಾಲೋವರ್ಸ್​ಗಳನ್ನು ಪಡೆದಿದ್ದಾರೆ. ಅವರ ಪೈಕಿ ಹಲವರು ಅಲ್ಲು ಅರ್ಜುನ್ ಅವರಿಗಿಂತಲೂ ಫೇಮಸ್​ ಆದವರೂ ಇದ್ದಾರೆ.  ಆದರೆ, ಈ ಪೈಕಿ ಥ್ರೆಡ್ಸ್​ನಲ್ಲಿ ಖಾತೆ ತೆಗೆದವರು ತೀರಾ ಕಡಿಮೆ. ಇದೀಗ ಒಂದೇ ಒಂದು ಪೋಸ್ಟ್​ ಮಾಡುವ ಮೂಲಕ ಅಲ್ಲು ಗೆದ್ದಿದ್ದಾರೆ.  

ಇನ್ನೊಂದು ವಿಶೇಷವೆಂದರೆ,  Instagram ನಲ್ಲಿ 20 ಮಿಲಿಯನ್ ಅನುಯಾಯಿಗಳನ್ನು ಗಳಿಸಿದ ಮೊದಲ ದಕ್ಷಿಣ ಭಾರತೀಯ ನಟ ಎಂಬ ಹೆಗ್ಗಳಿಕೆ ಕೂಡ ಇವರ ಹೆಸರಿನಲ್ಲಿಯೇ ಇದೆ. ಇತ್ತೀಚೆಗಷ್ಟೇ ಈ ಹಿರಿಮೆಯ ಪಾಲಾಗಿದ್ದರು ಅಲ್ಲು ಅರ್ಜುನ್​. ಇದಾದ ಕೆಲವೇ  ತಿಂಗಳುಗಳ ನಂತರ ಮತ್ತೊಂದು ಗರಿ ಸಿಕ್ಕಿದೆ.  ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪ್ರಕಾರ, ಜುಲೈ 6 ರಂದು ಥ್ರೆಡ್‌ಗಳಲ್ಲಿ ಒಂದು ಮಿಲಿಯನ್ (One Million) ಅನುಯಾಯಿಗಳನ್ನು ಹಿಟ್ ಮಾಡಿದ ಮೊದಲ ಸೆಲೆಬ್ರಿಟಿಯಾದ ಜಿಮ್ಮಿ ಡೊನಾಲ್ಡ್ಸನ್ ಹೊರಹೊಮ್ಮಿದ್ದಾರೆ. ಅವರ ನಿಜವಾದ ಹೆಸರು ಯೂಟ್ಯೂಬರ್ ಮಿಸ್ಟರ್ ಬೀಸ್ಟ್.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನನ್ನ ಶಿಷ್ಯನೆಂದು ಬಿಗ್ ಬಾಸ್ ಮನೆಯೊಳಗೆ ಯಾರನ್ನೂ ಕಳಿಸಿಲ್ಲ! ಕಿಚ್ಚ ಸುದೀಪ್ ಈ ಮಾತು ಹೇಳಿದ್ಯಾರಿಗೆ ಗೊತ್ತಾಯ್ತ?
BBK 12 : ಬಿಗ್ ಬಾಸ್‌ನಲ್ಲಿ ಗಿಲ್ಲಿ ಗಿಮಿಕ್, ದಾಖಲೆಯಾಯ್ತು ಇನ್ಸ್ಟಾ ಫಾಲೋವರ್ಸ್‌