
‘ಭಾಗ್ಯಲಕ್ಷ್ಮೀ’ ಧಾರಾವಾಹಿ ತಾಂಡವ್‌ಗೂ, ಆ ಪಾತ್ರಕ್ಕೆ ಜೀವ ತುಂಬ್ತಿರುವ ನಟ ಸುದರ್ಶನ್ ರಂಗಪ್ರಸಾದ್‌ರ ರಿಯಲ್ ವ್ಯಕ್ತಿತ್ವಕ್ಕೆ ಸಂಬಂಧವೇ ಇಲ್ಲ. ಸುದರ್ಶನ್ ರಂಗಪ್ರಸಾದ್ ಬಹುಮುಖ ಪ್ರತಿಭೆ. ಬರಹಗಾರ, ನಿರ್ದೇಶಕ, ನಟ, ಸ್ಟ್ಯಾಂಡಪ್ ಕಾಮಿಡಿ ಮಾಡುವ ಸುದರ್ಶನ್ ಈಗ ಹೊಸ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಸೈಕಲಾಜಿಕಲ್ ಹಾದಿಯಲ್ಲಿ ನಿರೂಪಣೆ?
ಹೌದು, ಸುದರ್ಶನ್ ರಂಗಪ್ರಸಾದ್ ಪತ್ನಿ ಸಂಗೀತಾ ಭಟ್, ಬಹುಭಾಷಾ ನಟ ಕಿಶೋರ್, ಶಶಿಕಾಂತ್ ಗಟ್ಟಿ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಕಾನ್ಸೆಪ್ಟ್ ಪಿಚ್ ರಿಲೀಸ್ ಮಾಡಲಾಗಿದೆ. ಅಂದಹಾಗೆ ಈ ಸಿನಿಮಾಕ್ಕೆ ʼಅರವಾಣಿಪುರಂʼ ಎಂದು ಹೆಸರು ಇಡಲಾಗಿದೆ. ಇಷ್ಟುದಿನ ರಿಲೀಸ್ ಆದ ಕನ್ನಡ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ ಈ ಸಿನಿಮಾ ವಿಭಿನ್ನ ಎನ್ನಬಹುದು. ಸದ್ಯ ಸಿನಿಮಾ ಪೋಸ್ಟರ್ ಹಾಗೂ ಕಾನ್ಸೆಪ್ಟ್ ಪಿಚ್ ಭಾರೀ ಕುತೂಹಲ ಮೂಡಿಸುತ್ತಿದೆ. ಕಿಶೋರ್ ಅವರು ವಿಭಿನ್ನವಾದ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೈಕಲಾಜಿಕಲೀ ಈ ಕಥೆಯನ್ನು ಹೆಣೆಯಲಾಗಿದೆ. ಸಾಂಪ್ರದಾಯಿಕ, ವೀರಗಾಥೆ ಇಲ್ಲಿದೆ ಎನ್ನೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ.
ಭಾಗ್ಯಲಕ್ಷ್ಮಿಯಲ್ಲಿ ಮನೆಬಿಟ್ಟು ಹೊರಟ ತಾಂಡವ್ ಟರ್ಕಿಯಲ್ಲಿ ಹೆಂಡ್ತಿ ಜೊತೆ ಪತ್ತೆ!
ಕಿಶೋರ್, ಸಂಗೀತಾ ಭಟ್, ಸುದರ್ಶನ್ ಕಾಂಬಿನೇಶನ್!
ಪ್ರತಿ ಬಾರಿ ವಿಭಿನ್ನ ಪಾತ್ರ, ಕಥೆಗಳ ಮೂಲಕ ವೀಕ್ಷಕರ ಮುಂದೆ ಬರುವ ಕಿಶೋರ್ ಈ ಬಾರಿ ಈ ಸಿನಿಮಾದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ. ಇನ್ನು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಸಂಗೀತಾ ಭಟ್ ವರ್ಷಗಳ ಗ್ಯಾಪ್ ಬಳಿಕ ಯಾವ ಪಾತ್ರದಲ್ಲಿ ವೀಕ್ಷಕರ ಮುಂದೆ ಬರುತ್ತಾರೆ ಎಂಬ ಕುತೂಹಲ ಇದೆ. ಇಷ್ಟು ವರ್ಷಗಳ ಕಾಲ ರಂಗಭೂಮಿ, ಸಿನಿಮಾ, ಸ್ಟ್ಯಾಂಡಪ್ ಕಾಮಿಡಿ ಎಂದು ಪಳಗಿರುವ ಸುದರ್ಶನ್ ರಂಗಪ್ರಸಾದ್ ಅವರು ಲೇಖನಿ ಹಿಡಿದಿದ್ದು ಯಾವ ವಿಚಾರವನ್ನು ಹೇಗೆ ಹೇಳಲಿದ್ದಾರೆ ಎಂಬ ಕೌತುಕ ಹೆಚ್ಚಾಗುತ್ತಿದೆ. ಬೇರೆ ಭಾಷೆಗಳ ಕಂಟೆಂಟ್‌ಗಳನ್ನು ನೋಡಿ ಚಪ್ಪಾಳೆ ತಟ್ಟುತ್ತಿದ್ದೆವು, ಈಗ ಈ ರೀತಿ ಪೋಸ್ಟರ್ ನೋಡಿದರೆ ಕನ್ನಡದಲ್ಲಿಯೂ ಕೂಡ ಹೊಸ ಪ್ರಯತ್ನಗಳಾಗುವ ಮುನ್ಸೂಚನೆ ಕಾಣುತ್ತಿದೆ.
Bhagyalakshmi serial: ಮಗ-ಸೊಸೆ ಒಂದು ಮಾಡಲು ಹೊಸ ದಾರಿ ಹಿಡಿದ ಕುಸುಮಾ! ಇನ್ನು ಅಸಲಿ ಆಟ ಶುರು!
ಸಿನಿಮಾದಲ್ಲಿ ಯಾರು ಯಾರು ಕೆಲಸ ಮಾಡಿದ್ದಾರೆ?
ರಾಕೇಶ್ ಹೊಸಮನಿ ಛಾಯಾಗ್ರಹಣ, ಶಶಿಕುಮಾರ್ ( Symphony Amps ) ಸಂಗೀತ, ಸೋಮಶೇಖರ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯಕ್ಕೆ ಸಂಗೀತಾ ಭಟ್, ಸುದರ್ಶನ್ ಅವರೇ ಈ ಚಿತ್ರಕ್ಕೆ ಹಣ ಹೂಡಿದ್ದು, ಇನ್ವೆಸ್ಟರ್ಸ್ ಹುಡುಕಾಟದಲ್ಲಿದ್ದಾರಂತೆ.
ಹೊಸ ಐಡಿಯಾಲಜಿ ಹೇಳ್ತಾರಾ?
ಚಿತ್ರರಂಗದ ಜೊತೆಗೆ ಕಾರ್ಪೋರೇಟ್ ಕಂಪೆನಿಯಲ್ಲಿಯೂ ಕೆಲಸ ಮಾಡ್ತಿರುವ ಸುದರ್ಶನ್ ಈ ಬಾರಿ ಹೊಸ ಐಡಿಯಾಲಜಿಗಳನ್ನು ಟಚ್ ಮಾಡಲಿದ್ದಾರೆ ಎನ್ನೋದು ಸದ್ಯ ರಿಲೀಸ್ ಆಗಿರುವ ಝಲಕ್‌ನಲ್ಲಿ ಕಾಣಿಸ್ತಿದೆ. ಈ ಬಗ್ಗೆ ಅವರೇ ಹೆಚ್ಚಿನ ಮಾಹಿತಿ ನೀಡಬೇಕಿದೆ. ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಂಟೆಂಟ್‌ಗೆ ಹೆಚ್ಚು ಒತ್ತು ಕೊಡಬೇಕು ಎನ್ನೋ ಕೂಗು ಇಂದು-ನಿನ್ನೆಯದಲ್ಲ. ಹೀಗಾಗಿ ಸುದರ್ಶನ್ ಈ ಬಾರಿ ಯಾವ ರೀತಿ ಕಂಟೆಂಟ್ ಹೇಳಲಿದ್ದಾರೆ ಎಂಬ ಪ್ರಶ್ನೆ ಎದ್ದು ಕಾಣ್ತಿದೆ.
ಭಾಗ್ಯಲಕ್ಷ್ಮೀ ಸೀರಿಯಲ್ ಅಮ್ಮ- ಮಗಳು ಭಾಗ್ಯಾ-ತನ್ವಿ ಭರ್ಜರಿ ರೀಲ್ಸ್ಗೆ ಅಭಿಮಾನಿಗಳು ಫಿದಾ
ಸಿನಿಮಾಗಳಲ್ಲಿ ಬ್ಯುಸಿ ಆಗಲಿರುವ ಸುದರ್ಶನ್ ರಂಗಪ್ರಸಾದ್!
ಸುದರ್ಶನ್ ರಂಗಪ್ರಸಾದ್ ಅವರು ʼಪ್ರೀತಿ ಗೀತಿ ಇತ್ಯಾದಿʼ, ʼಗೂಗ್ಲಿʼ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಕನ್ನಡ, ಇಂಗ್ಲಿಷ್ ರಂಗಭೂಮಿಗಳಲ್ಲಿ ಕೆಲಸವನ್ನು ಮಾಡಿದ್ದಾರೆ. ಸದ್ಯ ʼಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ನಟಿಸುತ್ತಿರುವ ಸುದರ್ಶನ್ ಅವರು ಮುಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ಬ್ಯುಸಿಯಾಗುವ ಇಂಗಿತವನ್ನು ಹೊಂದಿದ್ದಾರೆ. ನಟ ಸುದರ್ಶನ್ ರಂಗಪ್ರಸಾದ್ ಅವರು ಕಿರುತೆರೆ, ಹಿರಿತೆರೆಯಲ್ಲಿ ಬ್ಯುಸಿ ಆಗುತ್ತಿದ್ದಾರೆ. ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಯಾವ ರೀತಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.