ಗರ್ಲ್​ಫ್ರೆಂಡ್​ಗೆ ತಾಳಿ ಕಟ್ಟೋ ಭರದಲ್ಲಿ ಭಾಗ್ಯಲಕ್ಷ್ಮಿ ನಟ ಕನ್ನಡ ಮರೆತುಬಿಟ್ರಾ? ಇನ್ನಿಲ್ಲದಂತೆ ಟ್ರೋಲ್​!

Published : Jan 24, 2025, 06:35 PM ISTUpdated : Jan 24, 2025, 07:33 PM IST
ಗರ್ಲ್​ಫ್ರೆಂಡ್​ಗೆ ತಾಳಿ ಕಟ್ಟೋ ಭರದಲ್ಲಿ ಭಾಗ್ಯಲಕ್ಷ್ಮಿ  ನಟ ಕನ್ನಡ ಮರೆತುಬಿಟ್ರಾ? ಇನ್ನಿಲ್ಲದಂತೆ ಟ್ರೋಲ್​!

ಸಾರಾಂಶ

ಕನ್ನಡದಲ್ಲೇ ಮಾತನಾಡಬೇಕೆಂದು ಪ್ರತಿಪಾದಿಸುವವರೇ ಇಂಗ್ಲಿಷ್‌ಗೆ ಮನಸೋಲುತ್ತಿರುವುದು ದುರಂತ. ಭಾಗ್ಯಲಕ್ಷ್ಮಿ ಧಾರಾವಾಹಿಯ ತಾಂಡವ್‌ ಖ್ಯಾತಿಯ ಸುದರ್ಶನ್‌ ರಂಗಪ್ರಸಾದ್‌ ಕೂಡ ಇದಕ್ಕೆ ಹೊರತಾಗಿಲ್ಲ. ಕನ್ನಡದಲ್ಲೇ ಕೇಳಿದ ಪ್ರಶ್ನೆಗಳಿಗೆ ಇಂಗ್ಲಿಷ್‌ನಲ್ಲಿ ಉತ್ತರಿಸಿರುವ ಸುದರ್ಶನ್‌ ಅವರ ನಡೆಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಧಾರಾವಾಹಿ, ತಾಯಿಯೊಂದಿಗಿನ ಒಡನಾಟ, ಮದುವೆ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕನ್ನಡ ನಾಡಿನಲ್ಲಿಯೇ ಹುಟ್ಟಿ, ಮಾತೃಭಾಷೆ ಕನ್ನಡ ಆಗಿದ್ದರೂ ಇಂಗ್ಲಿಷ್​ನಲ್ಲಿ ಮಾತನಾಡುವುದು ಟ್ರೆಂಡ್​ ಆಗಿಬಿಟ್ಟಿದೆ. ಇಂಗ್ಲಿಷ್​ನಲ್ಲಿ ಮಾತನಾಡಿದರೆ ಮಾತ್ರ ಗತ್ತು ಎನ್ನುವಂತೆ ಆಗಿದೆ. ಕನ್ನಡದ ಬಗ್ಗೆ ಅಭಿಮಾನ ಮೆರೆಯುವ ತಾರೆಯರ ಮಕ್ಕಳು ಕೂಡ ವೇದಿಕೆಗಳ ಮೇಲೆ ಮಾತೃಭಾಷೆಯೇ ಇಂಗ್ಲಿಷ್​ ಎನ್ನುವ ರೀತಿಯಲ್ಲಿ ಮಾತನಾಡಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಕನ್ನಡ ಕನ್ನಡ ಎಂದು ಹೋರಾಡುವ ಕೆಲವು ಸಾಹಿತಿಗಳು ತಮ್ಮ ಮಕ್ಕಳನ್ನು ಮಾತ್ರ ಇಂಗ್ಲಿಷ್​ ಮೀಡಿಯಂಗೆ ಸೇರಿಸುವುದಂತೂ ಸರ್ವೇ ಸಾಮಾನ್ಯ ಆಗಿಬಿಟ್ಟಿದೆ. ಅದರಲ್ಲಿಯೂ ಬೆಂಗಳೂರಿನಲ್ಲಿ ಯಾರಾದರೂ ಕನ್ನಡದಲ್ಲಿ ಮಾತನಾಡಿದರು ಎಂದರೆ ಅವರನ್ನು ಅಡಿಯಿಂದ ಮುಡಿಯವರೆಗೆ ವಿಚಿತ್ರವಾಗಿ ನೋಡುವವರೂ ಇದ್ದಾರೆ. ಅಲ್ಲಿಯವರೆಗೆ ಬಂದು ತಲುಪಿದೆ ನಮ್ಮ ಕನ್ನಡದ ಸ್ಥಿತಿ. ಕೆಲವು ಕನ್ನಡ ಹೋರಾಟಗಾರರು ಆಗೀಗ ಇವುಗಳ ವಿರುದ್ಧ ದನಿ ಎತ್ತುವುದು ಬಿಟ್ಟರೆ, ಇಂಗ್ಲಿಷ್​ ವ್ಯಾಮೋಹ ಎನ್ನುವುದು ಬಹುತೇಕರನ್ನು ಬಿಟ್ಟಿಲ್ಲ. 

ಇದೀಗ, ಅವರ ಪಾಲಿಗೆ ಭಾಗ್ಯಲಕ್ಷ್ಮಿ ಸೀರಿಯಲ್​ ತಾಂಡವ್​ ಉರ್ಫ್​ ಸುದರ್ಶನ್​ ರಂಗಪ್ರಸಾದ್​ ಅವರು ಸೇರಿಬಿಟ್ಟರಾ ಎಂದು ಅಭಿಮಾನಿಗಳು ನೊಂದುಕೊಳ್ಳುತ್ತಿದ್ದಾರೆ! ಏಕೆಂದರೆ ಬಹುದೊಡ್ಡ ಕಲಾವಿದರಾಗಿರುವ ಸುದರ್ಶನ್​ ಅವರು ನಾಯಕ ಕಮ್​ ವಿಲನ್​ ಆಗಿ ಭಾಗ್ಯಲಕ್ಷ್ಮಿಯಲ್ಲಿ ಮಾತ್ರವಲ್ಲದೇ ಹಲವಾರು ಸೀರಿಯಲ್​ಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಇವರ ಅಭಿನಯಕ್ಕೆ ಮನಸೋಲದವರೇ ಇಲ್ಲ. ಇದೇ ಕಾರಣಕ್ಕೆ ಅಸಂಖ್ಯ ಅಭಿಮಾನಿಗಳನ್ನು ಪಡೆದಿದ್ದಾರೆ. ಸದ್ಯ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ, ಪತ್ನಿ ಭಾಗ್ಯಳಿಂದ ದೂರವಾಗಿ, ಲವರ್​ ಶ್ರೇಷ್ಠಾಳ ಜೊತೆ ಮದುವೆಯಾಗುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇವರ ಈ ರೋಲ್​ ವೀಕ್ಷಕರಿಗೆ ಅದೆಷ್ಟು ಕೋಪ ಬರಿಸಿದೆ ಎಂದರೆ ಹೊರಗಡೆ ಎಲ್ಲಾದರೂ ನಟ ಕಂಡರೆ ಹೊಡೆದು ಬಿಡುವಷ್ಟು ಕೋಪ ಇದೆ. ಅಂದರೆ, ತಮ್ಮ ಪಾತ್ರಕ್ಕೆ ಸುದರ್ಶನ್​ ಅವರು ಅಷ್ಟು ನ್ಯಾಯ ಒದಗಿಸಿದ್ದಾರೆ ಎಂದರ್ಥ.

ಹುಡುಗಿಯರ ಇಂಪ್ರೆಸ್‌ ಮಾಡಲು ಭಾಗ್ಯಲಕ್ಷ್ಮಿ ತಾಂಡವ್‌ ಕೊಟ್ಟ ಟಿಪ್ಸ್‌ ಕೇಳಿ ಯುವತಿಯರು ಕಿಡಿಕಿಡಿ!

ಆದರೆ, ರೇಡಿಯೋ ಸಿಟಿ ಕನ್ನಡಕ್ಕೆ ಈಗ ಅವರು ಸಂದರ್ಶನ ನೀಡಿದ್ದು, ಅದರಲ್ಲಿ ಮುಕ್ಕಾಲು ಭಾಗಕ್ಕಿಂತ ಹೆಚ್ಚು ಇಂಗ್ಲಿಷ್​ನಲ್ಲಿ ಮಾತನಾಡಿದ್ದಾರೆ. ಇದಕ್ಕೆ  ಕಾರಣ ತಿಳಿದಿಲ್ಲ. ಪ್ರಶ್ನೆಗಳನ್ನು ಕನ್ನಡದಲ್ಲಿಯೇ ಕೇಳಿದ್ದರೂ, ಉತ್ತರ ಮಾತ್ರ ಇಂಗ್ಲಿಷ್​ನಲ್ಲಿ ಬಂದಿರುವುದು ಯಾಕೆ ಎನ್ನುವುದು ಅಭಿಮಾನಿಗಳ ಪ್ರಶ್ನೆ. ಸಹಜವಾಗಿ ಸಂದರ್ಶನಗಳ ಸಮಯದಲ್ಲಿ ನಡುನಡುವೆ ಇಂಗ್ಲಿಷ್​ ವಾಕ್ಯ, ಶಬ್ದ ಬಳಸುವುದು ಸರ್ವೇ ಸಾಮಾನ್ಯ. ಆದರೆ ಈ ಸಂದರ್ಶನದಲ್ಲಿ ಸುದರ್ಶನ್​ ಅವರು ನಡುನಡುವೆ ಕನ್ನಡ ಬಳಸಿದ್ದಾರೆ ಬಿಟ್ಟರೆ ಸಂಪೂರ್ಣ ಸಂದರ್ಶನ ಇಂಗ್ಲಿಷ್​ನಲ್ಲಿ ಇದೆ. ಇದರ ಔಚಿತ್ಯವೇನು, ನಿಮಗೂ ಇಂಗ್ಲಿಷ್​ ವ್ಯಾಮೋಹ ಹುಟ್ಟಿಕೊಂಡಿತೇ ಎಂದು ಪ್ರಶ್ನಿಸುತ್ತಿದ್ದಾರೆ ನೆಟ್ಟಿಗರು.

ಈ ಸಂದರ್ಶನದಲ್ಲಿ ಸುದರ್ಶನ್​ ಅವರು, ಭಾಗ್ಯಲಕ್ಷ್ಮಿ ಧಾರಾವಾಹಿಯ ಬಗ್ಗೆ ಮಾತನಾಡಿದ್ದಾರೆ. ತಮ್ಮ ಪಾತ್ರದ ಕುರಿತು ಹಾಗೂ ಭಾಗ್ಯ ಮತ್ತು ಶ್ರೇಷ್ಠಾಳ ನಡುವಿನ ಸಂಬಂಧದ ಕುರಿತು ಮಾತನಾಡಿದ್ದಾರೆ. ಜೊತೆಗೆ ತಮ್ಮ ಮತ್ತು ಅಮ್ಮ ಕುಸುಮ ಅವರ ರಿಯಲ್​  ಲೈಫ್​ ಬಾಂಡಿಂಗ್​ ಬಗ್ಗೆಯೂ ಹೇಳಿದ್ದಾರೆ. ಇದಾಗಲೇ ಹಲವಾರು ಬಾರಿ ಮದುವೆಯಾಗಿಬಿಟ್ಟಿದೆ. ಆದರೆ ಲವರ್​ಗೆ ತಾಳಿ ಕಟ್ಟಲು ವೇಟ್​ ಮಾಡುತ್ತಿದ್ದೇನೆ. ಆ ಸಮಯ ಯಾವಾಗ ಬರುತ್ತದೆಯೋ ಎಂದು ಹೇಳಿದ್ದಾರೆ. ಆದರೆ ಲವರ್​ಗೆ ತಾಳಿ ಕಟ್ಟುವ ಭರದಲ್ಲಿ ಕನ್ನಡ ಮರೆತುಬಿಟ್ರಾ ಎನ್ನುವುದು ನೆಟ್ಟಿಗರ ಪ್ರಶ್ನೆ. 

ತಾಂಡವ್‌ ಕ್ರೂರತನಕ್ಕೆ ಕಾರಣ ತಿಳಿಸುತ್ತಲೇ ಪ್ರತಿ ಪೋಷಕರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ ನಟ ಸುದರ್ಶನ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!