
ಶೂಟಿಂಗ್ ಮಾಡುವ ಸಮಯದಲ್ಲಿ ಏನೇನೋ ಎಡವಟ್ಟುಗಳಾಗುವುದು ಸಹಜ. ಆ ಪಾತ್ರದ ಒಳಹೊಕ್ಕು ತಮ್ಮನ್ನು ತಾವು ಮರೆತು ಶೂಟಿಂಗ್ನಲ್ಲಿ ನಿರತರಾಗಿರುತ್ತಾರೆ ನಟ-ನಟಿಯರು. ಕೆಲವೊಮ್ಮೆ ಸಹಜವಾಗಿ ಎಲ್ಲವೂ ಕಾಣಬೇಕು ಎನ್ನುವ ನಿಟ್ಟಿನಲ್ಲಿ ಸಹಜತನ ತೋರಿಸಲು ಹೋಗಿ ಎಡವಟ್ಟು ಆಗುವುದು ಇದೆ. ಇದಾಗಲೇ ಸಿನಿಮಾ ಶೂಟಿಂಗ್ ಸಮಯದಲ್ಲಿ ಸಾಹಸ ದೃಶ್ಯಗಳನ್ನು ಡ್ಯೂಪ್ ಇಲ್ಲದೇ ಮಾಡಲು ಹೋಗಿ ಎಷ್ಟೋ ನಟ-ನಟಿಯರು ಭಾರಿ ಗಾಯ ಮಾಡಿಕೊಂಡಿರುವ ಘಟನೆ ಸಂಭವಿಸಿದೆ. ಅದೇ ಇನ್ನೊಂದೆಡೆ ಸೀರಿಯಸ್ ದೃಶ್ಯಗಳ ಆ್ಯಕ್ಟಿಂಗ್ ಮಾಡುವ ಸಮಯದಲ್ಲಿ ಎಷ್ಟೇ ಟೇಕ್ ತೆಗೆದುಕೊಂಡರೂ ನಗು ತಡೆಯಲಾಗದೇ ಎಡವಟ್ಟಾಗುವುದೂ ಇದೆ.
ಈಗ ಅಂಥದ್ದೊಂದು ದೃಶ್ಯ ಪುಟ್ಟಕ್ಕನ ಮಕ್ಕಳು ಸೀರಿಯಲ್ ಶೂಟಿಂಗ್ನಿಂದ ವೈರಲ್ ಆಗಿದೆ. ಗಜೇಂದ್ರ ಮರಸಾಣಿಗೆ ಅವರು ಈ ವಿಡಿಯೋ ಶೇರ್ ಮಾಡಿದ್ದಾರೆ. ಸೀರಿಯಲ್ನಲ್ಲಿ ಸ್ನೇಹಾ ಮತ್ತು ಬಂಗಾರಮ್ಮನಿಗೆ ಅಪಘಾತ ಆಗಿರುತ್ತದೆ. ಸ್ನೇಹಾ ಸಾಯುತ್ತಾಳೆ. ಬಂಗಾರಮ್ಮ ಕೋಮಾಕ್ಕೆ ಹೋಗುತ್ತಾಳೆ. ಬಂಗಾರಮ್ಮನಿಗೆ ಸ್ನೇಹಾ ಸತ್ತ ಸುದ್ದಿಯನ್ನು ತಿಳಿಸಬಾರದು ಎಂದು ವೈದ್ಯರು ಹೇಳಿರುವ ಕಾರಣ, ಎಲ್ಲರೂ ಅದನ್ನು ಮುಚ್ಚಿಟ್ಟಿರುತ್ತಾರೆ. ತನ್ನ ಮುದ್ದಿನ ಸೊಸೆ ಆಗ ಬರ್ತಾಳೆ, ಈಗ ಬರ್ತಾಳೆ ಎಂದು ಬಂಗಾರಮ್ಮ ಕಾಯ್ತಾ ಇರುತ್ತಾಳೆ. ಅವಳು ಟ್ರೇನಿಂಗ್ಗೆ ಹೋಗಿರುವುದಾಗಿ ಸುಳ್ಳು ಹೇಳಿರಲಾಗುತ್ತದೆ. ಆದರೆ ವಿಲನ್ ರಾಜಿ ಉದ್ದೇಶಪೂರ್ವಕವಾಗಿ ಬಂಗಾರಮ್ಮನಿಗೆ ಸ್ನೇಹಾ ಸತ್ತ ಸುದ್ದಿ ತಿಳಿಸುತ್ತಾಳೆ.
ಕರೆಂಟ್ ಹೊಡೆಯುವ ಸೀನ್ ಶೂಟಿಂಗ್ನಲ್ಲಿ ಸಹನಾ- ಕಾಳಿ ಮಾಡಿದ್ದೇನು ನೋಡಿ! ನಿರ್ದೇಶಕರೇ ಸುಸ್ತು
ಇದರಿಂದ ಬಂಗಾರಮ್ಮ ಶಾಕ್ಗೆ ಒಳಗಾಗುತ್ತಾಳೆ. ಇದನ್ನು ಪುಟ್ಟಕ್ಕ, ಗೋಪಾಲಯ್ಯ ಹಾಗೂ ಹೊಸ ಸ್ನೇಹಾ ಮುಂದೆ ಪ್ರಶ್ನಿಸಿದಾಗ, ಅವರು ಅನಿವಾರ್ಯವಾಗಿ ಹೌದು ಎಂದು ಹೇಳುತ್ತಾರೆ. ಆಗ ಸ್ನೇಹಾಳ ಸಾವು ನಿಜ ಎಂದು ಗೊತ್ತಾಗಿ ಬಂಗಾರಮ್ಮನಿಗೆ ಹೃದಯವೇ ಒಡೆದು ಹೋದ ಅನುಭವ ಆಗುತ್ತದೆ. ಸ್ನೇಹಾ ಸ್ನೇಹಾ ಎಂದು ಎದೆ ಹಿಡಿದುಕೊಂಡು ಬೀಳುವ ದೃಶ್ಯವಿದೆ. ಇದನ್ನು ಮಾಡುವಾಗ, ಬಂಗಾರಮ್ಮ ಪಾತ್ರಧಾರಿ ಮಂಜು ಭಾಷಿಣಿ ಅವರು ಬಿದ್ದೂ ಬಿದ್ದೂ ನಕ್ಕಿದ್ದಾರೆ. ಬಂಗಾರಮ್ಮನನ್ನು ಹಿಡಿದುಕೊಳ್ಳಲು ಬಂದ ಪುಟ್ಟಕ್ಕ ಅರ್ಥಾತ್ ಉಮಾಶ್ರೀ ಕೂಡ ಮಂಜು ಭಾಷಿಣಿ ನಗುವುದನ್ನು ನೋಡಿ ನಕ್ಕಿದ್ದಾರೆ. ಕೊನೆಗೆ ಅಲ್ಲಿದ್ದವರು ಎಲ್ಲರೂ ಜೋರಾಗಿ ನಕ್ಕಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.
ಇದೇ ಶೂಟಿಂಗ್ನಲ್ಲಿ ಈ ಹಿಂದೆ, ವಿಲನ್ ಕಲಿಯನ್ನು ಕಟ್ಟಿಹಾಕಿ, ಸಹನಾ ಕಲಿಯ ಕೆನ್ನೆಗೆ ಬಲವಾಗಿ ಹೊಡೆಯುವ ದೃಶ್ಯವಿದ್ದಾಗ ಎಡವಟ್ಟಾಗಿತ್ತು. ಶೂಟಿಂಗ್ ಸಮಯದಲ್ಲಿ, ಆವೇಶದಲ್ಲಿದ್ದ ಸಹನಾ ಪಾತ್ರಧಾರಿ ಅಕ್ಷರಾ ಅವರು ನಿಜವಾಗಿಯೂ ಕಲಿ ಪಾತ್ರಧಾರಿಯ ಕೆನ್ನೆಗೆ ಬಲವಾಗಿ ಹೊಡೆದೇ ಬಿಟ್ಟಿದ್ದಾರೆ. ಕೊನೆಗೆ ಅಯ್ಯೋ ಸಾರಿ.. ಸಾರಿ.. ಹೇಳಿದ್ದಾರೆ. ಕಲಿ ಪಾತ್ರಧಾರಿ ಸಾವರಿಸಿಕೊಂಡು ಇರಲಿ ಬಿಡಿ ಎಂದಿದ್ದಾರೆ. ಪುಟ್ಟಕ್ಕನ ಮಕ್ಕಳು ಕಥೆಯಲ್ಲಿ, ಸ್ನೇಹಾ ಮತ್ತು ಬಂಗಾರಮ್ಮನಿಗೆ ಅಪಘಾತ ಮಾಡಿಸಿದ್ದು ಸಿಂಗಾರಮ್ಮ ಮತ್ತು ಕಲಿ ಎನ್ನುವ ಸತ್ಯ ತಿಳಿದಿದೆ. ಈ ಅಪಘಾತದಲ್ಲಿ ಸ್ನೇಹಾ ಸಾವನ್ನಪ್ಪಿದ್ದಾಳೆ. ಕಲಿ ಸಹನಾ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಆತನನ್ನು ತಂದು ಕಟ್ಟಿಹಾಕಿ ಮಾಡಿದ ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡಲಾಗುತ್ತಿದೆ. ಆಗ ಸಹನಾ ಕಲಿಯ ಕೆನ್ನೆಗೆ ಏಟು ಹಾಕುವ ದೃಶ್ಯವಿದೆ. ಆ್ಯಕ್ಷನ್ ಹೇಳುತ್ತಿದ್ದಂತೆಯೇ ಸಹನಾ ಡೈಲಾಗ್ ಹೇಳಿ, ಕಲಿಯ ಕೆನ್ನೆಗೆ ಬಾರಿಸಿದ್ದಾಳೆ. ಆದರೆ, ಏಟು ನಿಜವಾಗಿಯೂ ಬಿದ್ದು ಬಿಟ್ಟಿದೆ. ಕೊನೆಗೆ ಸಾರಿ ಸಾರಿ ಎಂದು ಕೆನ್ನೆ ಸವರಿದ್ದಾಳೆ. ಕಲಿ ಪಾತ್ರಧಾರಿ ಇರಲಿ ಬಿಡಿ ಎಂದಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಆವೇಶದಲ್ಲಿ ನಿಜವಾಗ್ಲೂ ಕೆನ್ನೆಗೆ ಹೊಡೆದೇ ಬಿಡೋದಾ ಪುಟ್ಟಕ್ಕನ ಮಗಳು ಸಹನಾ? ವಿಲನ್ ಕಲಿ ಸುಸ್ತೋ ಸುಸ್ತು!
ಇವೆಲ್ಲಾ ಅವಘಡಗಳು ಶೂಟಿಂಗ್ ಸಮಯದಲ್ಲಿ ಸಾಮಾನ್ಯವಾಗಿದೆ. ಇದೀಗ ಸೀರಿಯಲ್ಗಳು ಕೂಡ ಸಿನಿಮಾಗಳಿಗೆ ಪೈಪೋಟಿ ಒಡ್ಡುತ್ತಿವೆ. ಒಂದೊಂದು ದೃಶ್ಯವನ್ನೂ ಸೂಕ್ಷ್ಮವಾಗಿ, ಬಲು ಪ್ರಯಾಸದಿಂದಲೇ ಶೂಟಿಂಗ್ ಮಾಡಲಾಗುತ್ತದೆ. ಇಂಥ ಸಂದರ್ಭಗಳಲ್ಲಿಯೂ ಎಡವಟ್ಟು ಆಗುವುದು ಇದೆ. ಅಂಥದ್ದೇ ಒಂದು ಎಡವಟ್ಟು ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ನಡೆದಿದೆ. ವಿಲನ್ ಕಲಿಯನ್ನು ಕಟ್ಟಿಹಾಕಿ, ಸಹನಾ ಕಲಿಯ ಕೆನ್ನೆಗೆ ಬಲವಾಗಿ ಹೊಡೆಯುವ ದೃಶ್ಯವಿದೆ. ಶೂಟಿಂಗ್ ಸಮಯದಲ್ಲಿ, ಆವೇಶದಲ್ಲಿದ್ದ ಸಹನಾ ಪಾತ್ರಧಾರಿ ಅಕ್ಷರಾ ಅವರು ನಿಜವಾಗಿಯೂ ಕಲಿ ಪಾತ್ರಧಾರಿಯ ಕೆನ್ನೆಗೆ ಬಲವಾಗಿ ಹೊಡೆದೇ ಬಿಟ್ಟಿದ್ದಾರೆ. ಕೊನೆಗೆ ಅಯ್ಯೋ ಸಾರಿ.. ಸಾರಿ.. ಹೇಳಿದ್ದಾರೆ. ಕಲಿ ಪಾತ್ರಧಾರಿ ಸಾವರಿಸಿಕೊಂಡು ಇರಲಿ ಬಿಡಿ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.