ಮುಸ್ಲಿಂ ಅಲ್ಲ ಅಂತ ಹೇಳಿದ್ದಕ್ಕೆ ರೈಲಿನಿಂದಲೇ ಇಳಿಸಿದ್ರು: ವಿದೇಶದಲ್ಲಿ ಡಾಕ್ಟರ್ ಬ್ರೋ ಕಥೆ

Published : Feb 10, 2026, 11:31 AM IST
Dr Bro

ಸಾರಾಂಶ

ಖ್ಯಾತ ವ್ಲಾಗರ್ ಡಾ. ಬ್ರೋ, ಜೌರಾತ್‌ನಲ್ಲಿ ವಿಚಿತ್ರ ಅನುಭವ ಎದುರಿಸಿದ್ದಾರೆ. ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುವಾಗ, ಅವರು ಮುಸ್ಲಿಂ ಅಲ್ಲ ಎಂದು ತಿಳಿದ ನಂತರ ಸಹ ಪ್ರಯಾಣಿಕರು ಅವರಿಂದ ಅಂತರ ಕಾಯ್ದುಕೊಂಡರು ಮತ್ತು ಅಂತಿಮವಾಗಿ ಅವರನ್ನು ಲಗೇಜ್ ಬೋಗಿಯಲ್ಲಿ ಪ್ರಯಾಣಿಸಲು ಹೇಳಿದರು.

ಡಾಕ್ಟರ್ ಬ್ರೋ ಖ್ಯಾತಿಯ ಗಗನ್ ಶ್ರೀನಿವಾಸ್ ತಮ್ಮ ವ್ಲಾಗ್‌ಗಳ ಮೂಲಕವೇ ಕರುನಾಡಿನ ಜನತೆಗೆ ವಿದೇಶ ಪ್ರವಾಸ ಮಾಡಿಸುತ್ತಾರೆ. ಡಾ.ಬ್ರೋ ವಿದೇಶಗಳನ್ನು ಸುತ್ತಾಡುತ್ತಾ ಅಲ್ಲಿಯ ಜನರು, ವಾತಾವರಣ, ಸಂಸ್ಕೃತಿಯ ಅನಾವರಣ ಮಾಡುತ್ತಿರುತ್ತಾರೆ. ಉಗ್ರರ ಆಡಳಿತವಿರೋ ಅಫ್ಘಾನಿಸ್ತಾನಕ್ಕೂ ತೆರಳಿ ಅಲ್ಲಿಯ ಜನರ ಜೀವನ ಮತ್ತು ಅಲ್ಲಿಯ ಸ್ಥಳಗಳ ಮಾಹಿತಿಯನ್ನು ನೀಡಿದ್ದಾರೆ. ಇದೀಗ ಡಾ.ಬ್ರೋ Zouerat ಎಂಬ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಇಲ್ಲಿಯ ಜನರು ಗಗನ್ ಅವರನ್ನು ರೈಲಿನಿಂದ ಇಳಿಸಿದ ಘಟನೆ ನಡೆದಿದೆ. ರೈಲಿನಿಂದ ಕೆಳಗೆ ಇಳಿಸಿದ್ದು ಯಾಕೆ ಎಂಬುದರ ಬಗ್ಗೆ ಡಾ.ಬ್ರೋ ತಮ್ಮ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.

ಸುಮಾರು 750 ಕೀ.ಮೀ ದೂರ ಚಲಿಸುವ ಗೂಡ್ಸ್ ರೈಲು

ಇದಕ್ಕೂ ಮೊದಲು Zoueratನಿಂದ Nouadhibou ತೆರಳುವ ಗೂಡ್ಸ್ ರೈಲಿನಲ್ಲಿ ಪ್ರಯಾಣಿಸಿದ್ದ ವಿಡಿಯೋವನ್ನು ಹಂಚಿಕೊಂಡಿದ್ದರು. Zoueratನಿಂದ ಕಬ್ಬಿಣದ ಅದಿರು ತುಂಬಿಕೊಂಡು ತೆರಳುವ ಗೂಡ್ಸ್ ರೈಲು ಸುಮಾರು 750 ಕೀ.ಮೀ ದೂರದ Nouadhibou ಬಂದರು ತಲುಪುತ್ತದೆ. ಇಲ್ಲಿಂದ ಕಬ್ಬಿಣದ ಅದಿರು ನೇರವಾಗಿ ಯುರೋಪ್ ತಲುಪುತ್ತದೆ. ಮೊದಲಿಗೆ ಗೂಡ್ಸ್ ರೈಲಿನ ವ್ಯಾಗನರ್‌ನಲ್ಲಿ ಕುಳಿತು ಡಾ.ಬ್ರೋ ಪ್ರಯಾಣಿಸಿದ್ದರು. ಪ್ಯಾಸೆಂಜರ್‌ ರೈಲಿನಲ್ಲಿ ಪ್ರಯಾಣಿಸುವಾಗ ಡಾ.ಬ್ರೋ ಜೊತೆಯಲ್ಲಿ ನಡೆದುಕೊಂಡ ರೀತಿ ನಿಜಕ್ಕೂ ಅಚ್ಚರಿಯನ್ನುಂಟು ಮಾಡಿದೆ.

ಅರೇಬಿಕ್-ಫ್ರೆಂಚ್ ಮಿಶ್ರಿತ ಅಸಾನಿಯಾ ಭಾಷೆ ಮಾತನಾಡುವ ಜನರು

ಡಾ.ಬ್ರೋ ಹೇಳುವ ಪ್ರಕಾರ, ಈ ದೇಶವನ್ನು ಫ್ರೆಂಚ್ ಅವರು ಆಳಿದ್ದರಿಂದ ಇಲ್ಲಿಯ ಜನರು ಅರೇಬಿಕ್ ಮತ್ತು ಫ್ರೆಂಚ್ ಮಿಶ್ರಿತ ಅಸಾನಿಯಾ ಭಾಷೆಯನ್ನು ಮಾತನಾಡುತ್ತಾರೆ. ಕಬ್ಬಿಣದ ಅದಿರು ಸಾಗಾಟವೇ ಈ ದೇಶದ ಪ್ರಮುಖ ಆದಾಯವಾಗಿದೆ.

ಈ ದೇಶದಲ್ಲಿ ಮೊದಲು ಪ್ರವಾಸಿಗರಿಗೆ ಹೆಸರು ಮತ್ತು ಯಾವ ದೇಶದವರು ಅಂತ ಕೇಳಲ್ಲ. ನೀವು ಮುಸ್ಲಿಂ ಹೌದಾ ಅಥವಾ ಅಲ್ಲವಾ ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಮುಸ್ಲಿಂ ಯೆಸ್ ಆರ್ ನೋ ಅಂತ ಕೇಳ್ತಾರೆ. ಒಬ್ಬ ವ್ಯಕ್ತಿಯನ್ನು ಇಲ್ಲಿಯ ಜನರು ಧರ್ಮದಿಂದಲೇ ಗುರುತಿಸುತ್ತಾರೆ. ಈ ವಿಷಯದಲ್ಲಿ ಅವರದ್ದು ತಪ್ಪಿಲ್ಲ. ಕಾರಣ ಇವರುಗಳು ಬೆಳೆದು ಬಂದ ರೀತಿಯಾಗಿದೆ ಎಂದು ಬ್ರೋ ಹೇಳುತ್ತಾರೆ.

ಇದನ್ನೂ ಓದಿ: ಸಚಿವ ಬೈರತಿ ಸುರೇಶ್ ವಿಧಾನಸೌಧದ ಕಚೇರಿಯಲ್ಲೇ 300 ಗ್ರಾಂ ಚಿನ್ನಾಭರಣ, 1.5 ಲಕ್ಷ ನಗದು ಕಳ್ಳತನ

ಡಾ.ಬ್ರೋ ಜೊತೆ ರೈಲಿನಲ್ಲಿ ಆಗಿದ್ದೇನು?

ಪ್ಯಾಸೆಂಜರ್ ರೈಲಿನಲ್ಲಿ ಭಾರತೀಯ ಡಾ.ಬ್ರೋ ಅವರನ್ನು ನೋಡಿದ ಜನರು ಕುತೂಹಲದಿಂದ ಮಾತನಾಡಿಸುತ್ತಾರೆ. ಡಾ.ಬ್ರೋ ಮಾತನಾಡಿಸಲು ಬಂದ ವ್ಯಕ್ತಿ ಮೊದಲಿಗೆ ನೀವು ಮುಸ್ಲಿಂ ವ್ಯಕ್ತಿಯಾ ಎಂದು ಕೇಳುತ್ತಾರೆ. ಇದಕ್ಕೆ ಬ್ರೋ, ನಾನು ಭಾರತದವನು ಎಂದು ತಮ್ಮನ್ನು ಪರಿಚಯಿಸಿಕೊಳ್ಳುತ್ತಾರೆ. ಯಾವಾಗ ರೈಲಿನಲ್ಲಿರುವ ವಿದೇಶಿ ವ್ಯಕ್ತಿ ಮುಸ್ಲಿಂ ಅಲ್ಲ ಅಂತ ತಿಳಿಯುತ್ತಿದ್ದಂತೆ ಅಲ್ಲಿದ್ದ ಜನರು ಬ್ರೋ ಅವರಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಈ ಬಗ್ಗೆ ಡಾ.ಬ್ರೋ ತಮ್ಮ ವಿಡಿಯೋದಲ್ಲಿ ಮಾತನಾಡಿದ್ದಾರೆ.

ತಮ್ಮಿಂದ ಅಂತರ ಕಾಯ್ದುಕೊಂಡು ಜನರ ಬಳಿ ಡಾ.ಬ್ರೋ ಹೋಗ್ತಿದ್ದಂತೆ ವಿಡಿಯೋ ಮಾಡಬೇಡಾ? ಯಾಕೆ ಇಲ್ಲಿಗೆ ಬಂದಿದೆಯಾ? ಅಲ್ಲಿ ಹೋಗಬೇಡಾ? ಇಲ್ಲಿ ಹೋಗಬೇಡಾ ಅಂತ ಹೇಳಿದ್ದಾರೆ. ಕೊನೆಗೆ ಪ್ಯಾಸೆಂಜರ್ ಬೋಗಿಯಿಂದ ಬ್ರೋ ಅವರನ್ನು ಕೆಳಗಿಳಿಸಿ ಲಗೇಜ್ ಬೋಗಿಯಲ್ಲಿ ಬರುವಂತೆ ಹೇಳಿದ್ದಾರೆ. ಕೊನೆಗೆ ಡಾ.ಬ್ರೋ ಲಗೇಜ್ ಬೋಗಿಯಲ್ಲಿ ಪ್ರಯಾಣಿಸಿದ್ದಾರೆ. ಪ್ರಯಾಣದ ಸಂದರ್ಭದಲ್ಲಿ ಇದೆಲ್ಲಾ ಸಾಮಾನ್ಯ ಅಂತ ಗಗನ್ ಹೇಳಿಕೊಂಡಿದ್ದಾರೆ.

ಇದನ್ನೂ: ಸೊಂಟ ಬಳುಕಿಸುತ್ತಾ ಮಕ್ಕಳನ್ನ ಬಾವಿಗೆ ಬಿಟ್ಟ ಡೇಂಜರ್ ಮಮ್ಮಿ: ವೈರಲ್ ವಿಡಿಯೋ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

99 ದೇಶಗಳನ್ನು ಸುತ್ತಿದ ಬಳಿಕ Dr. Bro ಹಾದಿ ಹಿಡಿದ Flying Passport ಜೋಡಿ
ಅಗ್ಗದ ದರದರಲ್ಲಿ ವಿದೇಶ ಪ್ರವಾಸಕ್ಕೆ Flight Book ಮಾಡೋದು ಹೇಗೆ?