ಬೆನ್ನಿಗೆ ಭಾರವಾಗಲ್ಲ, ಏನೇ ಮಾಡಿದ್ರೂ ಹಾಳಾಗಲ್ಲ, ಜಪಾನಿ ಬ್ಯಾಗ್‌ ವಿಶೇಷತೆಗಿಂತ ಬೆಲೆಯೇ ಆಕರ್ಷಕ

Published : Feb 03, 2026, 04:20 PM IST
Japan School Bag

ಸಾರಾಂಶ

Japan School Bag : ಜಪಾನ್ ತಂತ್ರಜ್ಞಾನದಲ್ಲಿ ಮುಂದಿದೆ. ಜಪಾನ್ ಮಕ್ಕಳ ಆರೋಗ್ಯಕ್ಕೂ ವಿಶೇಷ ಆಧ್ಯತೆ ನೀಡುತ್ತದೆ. ಮಕ್ಕಳಿಗಾಗಿ ಸಿದ್ಧವಾಗುವ ಇಲ್ಲಿನ ಬ್ಯಾಗ್ ಸಾಕಷ್ಟು ವೈಶಿಷ್ಟ್ಯತೆ ಹೊಂದಿದ್ದು, ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ. 

ಜೂನ್ ನಲ್ಲಿ ಸ್ಕೂಲ್ ಸ್ಟಾರ್ಟ್ ಆಗ್ತಿದ್ದಂತೆ ಮಕ್ಕಳ ಗಲಾಟೆ ಶುರುವಾಗುತ್ತೆ. ಹೊಸ ಬ್ಯಾಗ್ ಗೆ ಡಿಮ್ಯಾಂಡ್ ಇಡ್ತಾರೆ. ಹಿಂದಿನ ವರ್ಷ ಖರೀದಿ ಮಾಡಿದ್ದ ಬ್ಯಾಗ್ ಹರಿದಿರುತ್ತೆ ಇಲ್ಲ ಬಣ್ಣ ಮಾಸಿರುತ್ತೆ. ಶಾಲೆ ಫೀಸ್ ಜೊತೆ ಬ್ಯಾಗ್ ಖರೀದಿ ಹೊರೆ ಪಾಲಕರ ಮೇಲೆ ಬೀಳುತ್ತೆ. ಆದ್ರೆ ಜಪಾನ್ ಈ ಸ್ಕೂಲ್ ಬ್ಯಾಗ್ (SCHOOL BAG) ವಿಷ್ಯದಲ್ಲಿ ಭಿನ್ನ ನಿಯಮವನ್ನು ಜಾರಿಗೆ ತಂದಿದೆ. ಇಲ್ಲಿ ಚಿಕ್ಕ ಮಕ್ಕಳಿಗೆ ವರ್ಷ ವರ್ಷ ಬ್ಯಾಗ್ ಬದಲಿಸುವ ಅಗತ್ಯವಿಲ್ಲ. ಒಮ್ಮೆ ಖರೀದಿ ಮಾಡಿದ ಬ್ಯಾಗ್ ಹತ್ತಾರು ವರ್ಷ ಬಾಳಿಕೆ ಬರುತ್ತೆ. ಜಪಾನ್ ನಲ್ಲಿ ಮಕ್ಕಳಿಗಾಗಿಯೇ ವಿಶೇಷ ಸ್ಕೂಲ್ ಬ್ಯಾಗ್ ಸಿದ್ಧವಾಗುತ್ತೆ.

ಭಿನ್ನವಾಗಿದೆ ಜಪಾನಿ ಸ್ಕೂಲ್ ಬ್ಯಾಗ್

ಜಪಾನಿಗರು ಮಕ್ಕಳ ಸ್ಕೂಲ್ ಬ್ಯಾಗನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಿದ್ದಾರೆ. ಇದನ್ನು ಅವರು ರಾಂಡೋಸೆರು ಎಂದು ಕರೆಯುತ್ತಾರೆ. ಜಪಾನ್ನಲ್ಲಿ ಸಿಗುವ ಈ ಸ್ಕೂಲ್ ಬ್ಯಾಗ್, ವಿಶ್ವದ ಅತ್ಯಂತ ವಿಶಿಷ್ಟ ಮತ್ತು ಗಟ್ಟಿಮುಟ್ಟಾದ ಸ್ಕೂಲ್ ಬ್ಯಾಗ್ ಆಗಿದೆ. ಈ ಬ್ಯಾಗ್ ಕೇವಲ ಪುಸ್ತಕಗಳನ್ನು ಹೊತ್ತೊಯ್ಯುವ ಬ್ಯಾಗ್ ಅಲ್ಲ. ಜಪಾನಿನ ಸಂಸ್ಕೃತಿ, ಬಾಲ್ಯ ಮತ್ತು ಶಿಸ್ತಿನ ಸಂಕೇತವಾಗಿದೆ. ಜಪಾನ್ನಲ್ಲಿ, ಒಂದು ಮಗು ಒಂದನೇ ತರಗತಿಯಿಂದ ಆರನೇ ತರಗತಿಯವರೆಗೆ, ಪ್ರಾಥಮಿಕ ಶಾಲೆಯಾದ್ಯಂತ ಒಂದೇ ಬ್ಯಾಗ್ ಬಳಸಬೇಕು. ನಿತ್ಯ ಬಳಸಿದ್ರೂ, ಬೀಳಸಿದ್ರೂ, ಪುಸ್ತಕಗಳನ್ನು ತುಂಬಿದ್ರೂ ಈ ಬ್ಯಾಗ್ ಆಕಾರ ಬದಲಾಗೋದಿಲ್ಲ. ಈ ಬ್ಯಾಗನ್ನು ಉತ್ತಮ ಗುಣಮಟ್ಟದ ಚರ್ಮದಿಂದ ತಯಾರಿಸಲಾಗುತ್ತದೆ. ಇದು ವಾಟರ್ ಪ್ರೂಫ್ ಹಾಗೂ ಗೀರು ಬೀಳದ ಬ್ಯಾಗ್ ಆಗಿದೆ.

ಇದು ಭಾರತದ ಅತ್ಯಂತ ನಿಧಾನ ರೈಲು; 46 ಕಿ.ಮೀ ಪ್ರಯಾಣಕ್ಕೆ ಬರೋಬ್ಬರಿ 5 ಗಂಟೆ, ಟಿಕೆಟ್‌

ಮಕ್ಕಳು ಬಳಸುವ ಈ ಸ್ಕೂಲ್ ಬಾಗ್ ತುಂಬಾ ಸ್ಟ್ರಾಂಗ್ ಆಗಿದೆ. ಬ್ಯಾಗ್ ತೂಕವೇ 1.5 ಕೆಜಿ ಇದೆ. ಮಕ್ಕಳಿಗೆ ಬ್ಯಾಗ್ ಭಾರವೇ ಹೆಚ್ಚಾಗ್ತಿರೋದ್ರಿಂದ ಇತ್ತೀಚಿನ ದಿನಗಳಲ್ಲಿ ಬ್ಯಾಗ್ ಭಾರವನ್ನು ಕಡಿಮೆ ಮಾಡಲಾಗಿದೆ. ಗಟ್ಟಿಯಾದ, ಪೆಟ್ಟಿಗೆಯಂತಹ ವಿನ್ಯಾಸದಲ್ಲಿ ಬ್ಯಾಗ್ ಇರುತ್ತದೆ. ಒಳಗೆ ಪುಸ್ತಕ, ನೋಟ್ ಬುಕ್ ಗಳನ್ನು ಇಡಲು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ.

ಈ ಬ್ಯಾಗ್ ಮಕ್ಕಳಿಗೆ ಹೆಚ್ಚು ಭಾರವೆನ್ನಿಸೋದಿಲ್ಲ. ಮೃಧುವಾದ ಹಾಗೂ ತೂಕ ತಡೆಯಬಲ್ಲ ಬೆಲ್ಟನ್ನು ಈ ಬ್ಯಾಗ್ ಗೆ ನೀಡಲಾಗುತ್ತದೆ. ಅವರ ಬೆಳೆಯುತ್ತಿರುವ ದೇಹಕ್ಕೆ ಹೊಂದಿಕೊಳ್ಳುವ ಅಡ್ಜೆಸ್ಟೇಬಲ್ ಸ್ಟ್ರೆಪ್ಸ್ ಇರುತ್ತದೆ. ಮಕ್ಕಳ ಬ್ಯಾಗ್ ಭಾರವಿದ್ರೂ ಬೆನ್ನುಮೂಳೆಯ ಮೇಲೆ ಕಡಿಮೆ ಒತ್ತಡ ಬೀಳುತ್ತದೆ. ಇದ್ರಿಂದ ದೇಹದ ಆಕಾರಕ್ಕೆ ಯಾವುದೇ ಹಾನಿಯಾಗೋದಿಲ್ಲ. ಜಪಾನ್ನಲ್ಲಿ ಭೂಕಂಪ ಮತ್ತು ಪ್ರವಾಹಗಳು ಸಾಮಾನ್ಯವಾಗಿದೆ. ಆದ್ದರಿಂದ ಬ್ಯಾಗನ್ನು ಹೆಡ್ ಶೀಲ್ಡ್ ರೀತಿಯಲ್ಲೂ ಬಳಕೆ ಮಾಡಲಾಗುತ್ತದೆ.

ವರದಕ್ಷಿಣೆ ರೂಪದಲ್ಲಿ ವಧುಗೆ ಸಿಗುತ್ತೆ ಪೋರ್ಟಬಲ್ ಟಾಯ್ಲೆಟ್ ! ವಿಚಿತ್ರವಾಗಿದೆ ಪದ್ಧತಿ

ಜಪಾನ್ ನ ಈ ಬ್ಯಾಗ್ ಬಾಳಿಕೆ ಬರೋದು ನಿಜ. ಹಾಗೆಯೇ ಮಕ್ಕಳಿಗೆ ಭಾರವನ್ನು ನೀಡೋದಿಲ್ಲ. ಆದ್ರೆ ಅದ್ರ ಬೆಲೆ ದುಬಾರಿ. ಭಾರತದಲ್ಲಿ ಮಧ್ಯಮ ವರ್ಗದ ಜನರು ಇದನ್ನು ಖರೀದಿ ಮಾಡೋದು ಕಷ್ಟ. ಜಪಾನ್ ನಲ್ಲಿ ಈ ಬ್ಯಾಗ್ ಬೆಲೆ 75,000 ಯೆನ್ ಅಂದ್ರೆ ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 40,000 ರೂಪಾಯಿ. ಇದು ಆರಂಭಿಕ ಬೆಲೆ. ಗುಣಮಟ್ಟ ಹೆಚ್ಚಾದಂತೆ ಇದ್ರ ಬೆಲೆ ಏರಿಕೆಯಾಗುತ್ತದೆ. ಜಪಾನ್ ನಲ್ಲಿ ಒಂದು ಲಕ್ಷ ರೂಪಾಯಿ ಬೆಲೆ ಬಾಳುವ ಸ್ಕೂಲ್ ಬ್ಯಾಗ್ ಗಳಿದ್ದು, ಅವುಗಳಿಗೂ ಬೇಡಿಕೆ ಇದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Train Ticket Booking: ಟ್ರೇನ್‌ ಟಿಕೆಟ್‌ ಬುಕ್‌ ಮಾಡ್ಬೇಕಾ? ಹೀಗೆ ಮಾಡಿದ್ರೆ ಪಕ್ಕಾ ಡಿಸ್ಕೌಂಟ್‌ ಸಿಗುತ್ತೆ!
ಇಲ್ಲಿ ಹಗಲಲ್ಲೂ ಕೇಳುತ್ತೆ ಹೆಜ್ಜೆ ಸಪ್ಪಳ, ಹೆಣ್ಣಿನ ಅಳು ಮಗುವಿನ ನಗು: ಇಲ್ಲಿಗೆ ಭೇಟಿ ನೀಡೋಕೆ ಡಬ್ಬಲ್ ಗುಂಡಿಗೆ ಬೇಕು