
ಪ್ರತಿಯೊಂದು ದೇಶ, ಜಾತಿ, ಧರ್ಮದಲ್ಲೂ ಮದುವೆ (marriage) ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ಸಂಸ್ಕೃತಿ, ಸಂಪ್ರದಾಯಕ್ಕೆ ತಕ್ಕತೆ ಜನರು ದಾಂಪತ್ಯ ಜೀವನಕ್ಕೆ ಕಾಲಿಡ್ತಾರೆ. ಮದುವೆ ಸಂದರ್ಭದಲ್ಲಿ ವರದಕ್ಷಿಣೆ ಪದ್ಧತಿ ಈಗ್ಲೂ ಅನೇಕ ಕಡೆ ಜಾರಿಯಲ್ಲಿದೆ. ವರನ ಕಡೆಯವರು ಡಿಮ್ಯಾಂಡ್ ಮಾಡ್ದೇ ಹೋದ್ರೂ ವಧುವಿಗೆ ಉಡುಗೊರೆ ರೂಪದಲ್ಲಿ ಆಭರಣ, ವಾಹನ ಸೇರಿದಂತೆ ಐಷಾರಾಮಿ ವಸ್ತುಗಳನ್ನು ನೀಡಲಾಗುತ್ತದೆ. ಆದ್ರೆ ಇಲ್ಲೊಂದು ದೇಶದಲ್ಲಿ ವಧುವಿಗೆ ವರದಕ್ಷಿಣೆ ರೂಪದಲ್ಲಿ ಪೋರ್ಟಬಲ್ ಟಾಯ್ಲೆಟ್ (portable toilet) ನೀಡಲಾಗುತ್ತದೆ.
ಚೀನಾ (China)ದ ಹಾನ್ ಸಮುದಾಯದಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ವಧುವಿಗೆ ವರದಕ್ಷಿಣೆಯಾಗಿ ಪೋರ್ಟಬಲ್ ಟಾಯ್ಲೆಟ್ ನೀಡಲಾಗುತ್ತದೆ. ಇದು ಇತ್ತೀಚಿನ ದಿನಗಳಲ್ಲಿ ಜಾರಿಗೆ ಬಂದ ಪದ್ಧತಿಯಲ್ಲ. ಅತ್ಯಂತ ಹಳೆಯ ಮತ್ತು ಪ್ರಮುಖ ಸಂಪ್ರದಾಯಗಳಲ್ಲಿ ಒಂದು. ಆಧುನಿಕ ಕಾಲದಲ್ಲಿ ವರದಕ್ಷಿಣೆ ರೂಪದಲ್ಲಿ ಪೋರ್ಟಬಲ್ ಟಾಯ್ಲೆಟ್ ನೀಡುವವರ ಸಂಖ್ಯೆ ಕಡಿಮೆ ಆಗಿದೆ.
ರೇಜ್ ಬುಕಿಂಗ್! ಏನಿದು ಜೆನ್ ಝೀಯ ಹೊಸಾ ಟ್ರೆಂಡ್?
ಪ್ರಾಚೀನ ಕಾಲದಲ್ಲಿ ಮನೆಗಳಲ್ಲಿ ಆಧುನಿಕ ಶೌಚಾಲಯಗಳು ಅಥವಾ ಒಳಚರಂಡಿ ವ್ಯವಸ್ಥೆ ಇಲ್ಲದಿದ್ದಾಗ, ಈ ಮಡಕೆ ಮಹಿಳೆಯರಿಗೆ ತುಂಬಾ ಉಪಯುಕ್ತವಾಗಿತ್ತು. ಮಹಿಳೆಯರು ಹೊರಗೆ ಹೋಗುವುದನ್ನು ತಪ್ಪಿಸಲು ರಾತ್ರಿಯಲ್ಲಿ ಇದನ್ನು ಬಳಸುತ್ತಿದ್ದರು. ಕಾಲಾನಂತರದಲ್ಲಿ, ಇದು ಕೇವಲ ಉಪಯುಕ್ತ ವಸ್ತುವಾಗಿರದೆ ಪದ್ಧತಿಯಾಯ್ತು. ಅದರಲ್ಲಿ ಸಂಗ್ರಹವಾದ ಮಾನವ ಮತ್ತು ಪ್ರಾಣಿಗಳ ಮಲವನ್ನು ನಂತರ ಹೊಲಗಳಲ್ಲಿ ಗೊಬ್ಬರವಾಗಿ ಬಳಸಲಾಗ್ತಿತ್ತು.
ಇದೊಂದು ರೀತಿಯಲ್ಲಿ ಮಡಿಕೆಯಂತಿರುತ್ತದೆ. ವಧುವನ್ನು ಬಿಳ್ಕೊಡುವಾಗ ಪಾಲಕರು, ಇದನ್ನು ನೀಡುತ್ತಾರೆ. ಜಿಯಾಂಗ್ಸು ಮತ್ತು ಝೆಜಿಯಾಂಗ್ ಪ್ರಾಂತ್ಯಗಳಲ್ಲಿ, ಈ ಸಂಪ್ರದಾಯವನ್ನು ಬಹಳ ವಿಶೇಷ ರೀತಿಯಲ್ಲಿ ನಡೆಸಲಾಗುತ್ತದೆ. ಮಹಿಳೆಯರು ಈ ಪೋರ್ಟಬಲ್ ಟಾಯ್ಲೆಟನ್ನು ವಧುವಿನ ಪಲ್ಲಕ್ಕಿಯ ಮುಂದೆ ತನ್ನ ಭುಜದ ಮೇಲೆ ಇಟ್ಟುಕೊಂಡು ಹೋಗ್ತಾರೆ. ಇದು ವರನ ಮನೆ ತಲುಪಿದಾಗ, ಅದನ್ನು ಖಾಲಿ ಬಿಡಲಾಗುವುದಿಲ್ಲ. ಇದಕ್ಕೆ ಬೇಯಿಸಿದ ಮೊಟ್ಟೆಗಳು, ಖರ್ಜೂರಗಳು, ಕಡಲೆಕಾಯಿಗಳು ಮತ್ತು ಇತರ ಒಣಗಿದ ಹಣ್ಣುಗಳಂತಹ ಶುಭ ವಸ್ತುಗಳನ್ನು ತುಂಬಿ ನೀಡಲಾಗುತ್ತದೆ.
ಏನಿದು Micro Retirement? ಇಲ್ಲಿದೆ ಜೀವನ ಬದಲಾಯಿಸುವ ತಾಣಗಳು
ಹಾನ್ ಸಮುದಾಯಕ್ಕೆ ಈ ಮಡಕೆ ಕೊಳೆಯ ಸಂಕೇತವಲ್ಲ. ಬದಲಿಗೆ, ಇದು ಜೀವನದ ನಿರಂತರತೆ, ಮನೆಯ ಸ್ಥಿರತೆ ಮತ್ತು ಮಹಿಳೆಯರ ದಕ್ಷತೆಯನ್ನು ಪ್ರತಿನಿಧಿಸುತ್ತದೆ. ಪ್ರತಿಕೂಲ ಸಂದರ್ಭಗಳಲ್ಲಿಯೂ ಸಹ ಮಹಿಳೆ ತನ್ನ ಮನೆ ಮತ್ತು ಜವಾಬ್ದಾರಿಗಳನ್ನು ಎಷ್ಟು ಬುದ್ಧಿವಂತಿಕೆಯಿಂದ ನಿರ್ವಹಿಸುತ್ತಾಳೆ ಎಂಬುದರ ಸಂಕೇತವೆಂದು ಇದನ್ನು ಪರಿಗಣಿಸಲಾಗುತ್ತದೆ.
ಯಾಂಗ್ಝೌದಲ್ಲಿ, ನೇರಳೆ ತಾಮ್ರದ ಮಡಕೆಯನ್ನು ಬಳಸುವ ವಾಡಿಕೆ ಇದೆ. ಮದುವೆಯ ದಿನದಂದು ಇದನ್ನು ಕೆಂಪು ರಿಬ್ಬನ್ನಿಂದ ಅಲಂಕರಿಸಲಾಗುತ್ತದೆ. ಅದರ ಒಳಗೆ 13 ಕೆಂಪು ಮೊಟ್ಟೆಗಳು, ಎರಡು ಬಂಡಲ್ಗಳ ಟಾಯ್ಲೆಟ್ ಪೇಪರ್, ಎರಡು ಜೋಡಿ ಚಾಪ್ಸ್ಟಿಕ್ಗಳು ಮತ್ತು ವಾಲ್ನಟ್ಸ್ ಮತ್ತು ಕಮಲದ ಬೀಜಗಳಂತಹ ವಸ್ತುಗಳನ್ನು ಇರಿಸಲಾಗುತ್ತದೆ. ಈ ವಸ್ತುಗಳನ್ನು ಮಧುಮಕ್ಕಳ ಹಾಸಿಗೆಯ ಮೇಲೆ ಹರಡಲಾಗುತ್ತದೆ. ಗ್ರಾಮೀಣ ಇಲಾಖೆ ಜನರು ತಮ್ಮದೇ ಪದ್ಧತಿಯನ್ನು ಪಾಲಿಸ್ತಾರೆ. ಮೂರು ದಿನಗಳ ಕಾಲ ಈ ಟಾಯ್ಲೆಟ್ ಶುದ್ಧವಾಗಿರುತ್ತದೆ ಎಂದು ಅವರು ನಂಬುತ್ತಾರೆ. ಮತ್ತೆ ಕೆಲ ಭಾಗದಲ್ಲಿ ಸಣ್ಣ ಬಾಲಕನಿಗೆ ಈ ಮಡಿಕೆಯಲ್ಲಿ ಮೂತ್ರ ವಿಸರ್ಜನೆ ಮಾಡುವಂತೆ ಹೇಳಲಾಗುತ್ತದೆ. ಭವಿಷ್ಯದಲ್ಲಿ ವಧುವಿಗೆ ಗಂಡು ಮಗು ಜನಿಸುತ್ತದೆ ಎಂದು ನಂಬಲಾಗುತ್ತದೆ. 1980 ರ ದಶಕದ ನಂತರ, ಗ್ರಾಮೀಣ ಚೀನಾದಲ್ಲಿ ಆಧುನಿಕ ಫ್ಲಶ್ ಶೌಚಾಲಯಗಳು ಸಾಮಾನ್ಯವಾದಂತೆ, ಈ ಸಂಪ್ರದಾಯವು ಕ್ಷೀಣಿಸಲು ಪ್ರಾರಂಭಿಸಿತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.