ಬೇಸಿಗೆ (Summer)ಯಲ್ಲಿ ಸುಡು ಬಿಸಿಲು ಜನರನ್ನ ಹೈರಾಣಾಗಿಸಿದ್ರೆ, ಪ್ರಕೃತಿಯ ವೈಶಿಷ್ಟ್ಯಗಳು ಜನರ ಮನ ತಣಿಸುತ್ತದೆ. ಅಂತಹ ವೈಶಿಷ್ಟ್ಯಗಳ ಸಾಲಿಗೆ ಮಂಡ್ಯ (Mandya)ದ ರಸ್ತೆಯೊಂದು ಸೇರುತ್ತದೆ. ಬೇಸಿಗೆಯಲ್ಲಿ ಈ ರಸ್ತೆಗೆ ಎಲ್ಲಿಲ್ಲದ ಬೇಡಿಕೆ. ಫೋಟೋ ಕ್ರೇಜ್ ಇರುವವರಿಗಿದು ಸ್ವರ್ಗ. ಫೋಟೋಗ್ರಾಫರ್‌ಗಳಿಗೆ ಫಾರಿನ್ ಲೋಕೇಶನ್ (Foreign Location) ಅಂದ್ರೆ ತಪ್ಪಾಗಲ್ಲ. ಹಾಗಾದ್ರೆ ಯಾವುದು ಆ ರಸ್ತೆ (Road)? ಅದರ ವಿಶೇಷತೆ ಏನು .?
ಬೇಸಿಗೆ (Summer) ಬಂತೂಂದ್ರೆ ಸಾಕು ಬಿಸಿಲಿನ ಧಗೆ ಎಲ್ಲರನ್ನೂ ಹೈರಾಣಾಗಿಸುತ್ತದೆ. ಸಾಕಪ್ಪಾ ಈ ಬಿಸಿಲಿನ ಕಾಟ ಅನಿಸಿಬಿಡುತ್ತದೆ. ಆದ್ರೆ ಇಂಥಾ ಕಡುಬೇಸಿಗೆಯಲ್ಲೂ ಖುಷಿ ನೀಡುವುದು ಹೂಗಳ ಸೊಬಗು. ರಸ್ತೆಬದಿಯಲ್ಲಿರುವ ಮರಗಳಲ್ಲಿ ಹೂಗಳು ಅರಳಿ ರಸ್ತೆಯುದ್ದಕ್ಕೂ ರಂಗೋಲಿ ಹಾಕಿದಂತೆ ಬಿದ್ದಿರುವುದನ್ನು ನೋಡುವುದೇ ಚೆಂದ. ಸುಡು ಬಿಸಿಲು ಜನರನ್ನ ಹೈರಾಣಾಗಿಸಿದ್ರೆ, ಪ್ರಕೃತಿಯ ವೈಶಿಷ್ಟ್ಯಗಳು ಜನರ ಮನ ತಣಿಸುತ್ತದೆ. ಅಂತಹ ವೈಶಿಷ್ಟ್ಯಗಳ ಸಾಲಿಗೆ ಮಂಡ್ಯ (Mandya)ದ ರಸ್ತೆಯೊಂದು ಸೇರುತ್ತದೆ. ಬೇಸಿಗೆಯಲ್ಲಿ ಈ ರಸ್ತೆಗೆ ಎಲ್ಲಿಲ್ಲದ ಬೇಡಿಕೆ. ಫೋಟೋ ಕ್ರೇಜ್ ಇರುವವರಿಗಿದು ಸ್ವರ್ಗ.
ಸಾಲು ಸಾಲು ಮರಗಳು, ರಸ್ತೆ ತುಂಬೆಲ್ಲಾ ಹಳದಿ ಹೂ (Yellow Flower). ಇದು ಯಾವುದೇ ಸ್ವಿಜರ್ಲ್ಯಾಂಡ್, ನೆದರ್ಲ್ಯಾಂಡ್ ರಸ್ತೆ ಅಲ್ಲ. ನಮ್ಮ ಸಕ್ಕರೆ ನಾಡು ಮಂಡ್ಯದಲ್ಲಿರುವ ಎಸ್‌ಪಿ ಆಫೀಸ್ ಮುಂಭಾಗದ ರಸ್ತೆ. ಬೇಸಿಗೆ ಬಂತದ್ರೆ ಸಾಕು ಫೋಟೋ ಪ್ರಿಯರಿಗೆ ಈ ರೋಡ್ ಹಾಟ್ ಫೇವರೇಟ್.
ಈ ರಸ್ತೆಯ ವಿಶೇಷ ಅಂದ್ರೆ ಎರಡು ಬದಿಗಳಲ್ಲೂ 40ಕ್ಕೂ ಹೆಚ್ಚು ಕಾಪರ್‌ಪಾಡ್ ಮರಗಳನ್ನ ನೂರಾರು ವರ್ಷಗಳ ಹಿಂದೆಯೇ ನೆಡಲಾಗಿದೆ. ಈ ಹೂಗಳು ಅರಳಿ, ರಸ್ತೆಗೆ ಬಿದ್ದು ಸೊಬಗನ್ನು ಇನ್ನಷ್ಟು ಹೆಚ್ಚುವಂತೆ ನೋಡಿ. ಇದ್ಯಾವುದೋ ಫಾರಿನ್ ರೋಡ್ (Foreign Road) ಇದ್ದಂಗಿದೆ ಎಂದು ಯೋಚಿಸುವಂತೆ ಮಾಡುತ್ತದೆ.
Kanchipuramಗೆ ಹೋದ್ರೆ ನೀವು ನೋಡಲೇಬೇಕಾದ ದೇವಾಲಯಗಳಿವು..
ವಿದೇಶಿ ತಳಿಯ ಮರಗಳು ಇದಾಗಿದ್ದು. ರಸ್ತೆ (Road)ಯ ಸೌಂದರ್ಯ ಹೆಚ್ಚಿಸುವ ಸಲುವಾಗಿ ಬ್ರಿಟಿಷ್ ಆಳ್ವಿಕೆಯಲ್ಲೇ ಇವುಗಳನ್ನ ನೆಡಲಾಗಿದೆ. 200-300 ವರ್ಷಗಳು ಬದುಕ ಬಲ್ಲ ಈ ಮರಗಳು ಬೇಸಿಗೆ ವೇಳೆ ಬಿಡುವ ಹಳದಿ ಬಣ್ಣದ ಹೂ ನೋಡುಗರನ್ನ ಆಕರ್ಷಿಸುತ್ತದೆ.
ಈ ಮರ ಬಿಡುವ ಬಹುತೇಕ ಹೂಗಳು ಕಾಯಿಕಟ್ಟದೆ ನೆಲಕ್ಕೆ ಉದುರುತ್ತದೆ. ಈ ಪ್ರಕ್ರಿಯೆ ಪ್ರಕೃತಿಯ ಸಹಜ ಕ್ರಿಯೆಯೆ ಆದ್ರು. ನೆಲಕ್ಕೆ ಬಿದ್ದ ಹೂಗಳು ರಸ್ತೆಯ ಸೌಂದರ್ಯವನ್ನ ದುಪ್ಪಟ್ಟು ಮಾಡುತ್ತವೆ. ಈ ಸಮಯದಲ್ಲಿ ರಸ್ತೆ ಮೇಲೆಲ್ಲಾ ಹಳದಿ ಹೂ ಗಳೇ ಕಾಣಸಿಗುವುದರಿಂದ ಜನರು ಕೂಡ ಈ ರೋಡ್‌ನಲ್ಲಿ ಕೆಲಕಾಲ ಸಮಯ ಕಳೆಯಲು ಬಯಸುತ್ತಾರೆ.
ಬೇಸಿಗೆಯಲ್ಲಿ ಇಷ್ಟಲ್ಲಾ ವೈಶಿಷ್ಟ್ಯ ಹೊಂದಿರುವ ಈ ರಸ್ತೆ ಫೋಟೋ ಪ್ರಿಯರ ಪಾಲಿಗೆ ಸ್ವರ್ಗ. ಚೆಂದದ ಲೋಕೇಶನ್ ಹುಡುಕಿ ನೂರಾರು ಕಿಲೊಮೀಟರ್ ಸಾಗುವ ಫೋಟೋಗ್ರಾಫರ್‌ಗಳು ಈ ಲೋಕೇಶ್‌ನ ಕಂಡಿತ ಮಿಸ್ ಮಾಡಿಕೊಳ್ಳಲಾರರು. ಪ್ರೀ ವೆಡ್ಡಿಂಗ್ ಶೂಟ್, ಬೇಬಿ ಫೋಟೋ ಶೂಟ್‌ಗಳಿಗೆ ಹೇಳಿ ಮಾಡಿಸಿದ ಲೋಕೇಶನ್ ಇದಾಗಿದೆ.
Travel Guide : ನೀವು ಪ್ರವಾಸ ಹೋದಾಗ ಈ ವಿಶೇಷ ಮಾರ್ಕೆಟ್‌ಗಳಿಗೆ ಭೇಟಿ ಕೊಡೋದು ಮರೆಯಬೇಡಿ!
ಇಲ್ಲಿನ ಹಳದಿ ಬಣ್ಣದ ಹೂ, ಹಸಿರು ತುಂಬಿದ ಮರಗಳು ಫೋಟೋಗೆ ಹೆಚ್ಚಿನ ರಿಚ್‌ನೆಸ್ ನೀಡುತ್ತವೆ ಎನ್ನುತ್ತಾರೆ ಫೋಟೋಗ್ರಾಫರ್‌ಗಳು. ಹೀಗಾಗಿಯೇ ಫೋಟೋಶೂಟ್‌ಗೆ ಊಟಿ, ಕೊಡೆಕೈನಾಲ್‌ಗೆ ತೆರಳುವ ಬದಲು ಮಂಡ್ಯದ ಈ ರಸ್ತೆಗೆ ಬಂದರೆ ಸೂಪರ್ ಆಗಿರುತ್ತೆ. ಫೋಟೋಗ್ರಾಫರ್ ಇದು ಫೋಟೋ ಶೂಟ್‌ಗೆ ಹೇಳಿ ಮಾಡಿಸಿದ ರೀತಿ ಇದೆ ಅಂತಾರೆ. ಒಟ್ಟಾರೆ ಮಂಡ್ಯದ ಎಸ್‌ಪಿ ಆಫೀಸ್ ರೋಡ್ ಬೇಸಿಗೆಯಲ್ಲೂ ಜನರ ಕಣ್ಮನ ಸೆಳೆಯುತ್ತಿದ್ದು. ಫೋಟೋ ಪ್ರಿಯರ ಫೇವರೇಟ್ ಆಗಿರೋದಂತು ಸುಳ್ಳಲ್ಲ.