ಸೋಲೂರಿನ ಭೈರವದುರ್ಗಕ್ಕೆ ರಾಮನಗರ ಜಿಲ್ಲಾಧಿಕಾರಿಯ ಚಾರಣ

Suvarna News   | Asianet News
Published : Mar 20, 2022, 07:49 PM ISTUpdated : Mar 20, 2022, 07:58 PM IST
ಸೋಲೂರಿನ ಭೈರವದುರ್ಗಕ್ಕೆ ರಾಮನಗರ ಜಿಲ್ಲಾಧಿಕಾರಿಯ ಚಾರಣ

ಸಾರಾಂಶ

ಕೆಂಪೇಗೌಡರ ಆಳ್ವಿಕೆಗೆ ಒಳಪಟ್ಟಿದ್ದ ಸ್ಥಳಗಳಲ್ಲಿ ಈ ಭೈರವದುರ್ಗ (Bhairavadurga) ಒಂದಾಗಿದೆ. ನಾಡಪ್ರಭು ಮಾಗಡಿ ಕೆಂಪೇಗೌಡರ ಪ್ರಮುಖ ಸೇನಾ ನೆಲೆಯಾಗಿತ್ತು. ಬೆಂಗಳೂರಿನ ಸುತ್ತಮುತ್ತಲ ನವದುರ್ಗಗಳಲ್ಲಿ ಪ್ರಮುಖವಾದ ಭೈರವದುರ್ಗಕ್ಕೆ ರಾಮನಗರ (Ramanagara)ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಚಾರಣ ಮಾಡಿದ್ರು.

ಕೆಂಪೇಗೌಡ (Kempegowda)ರ ಆಳ್ವಿಕೆಗೆ ಒಳಪಟ್ಟಿದ್ದ ಒಂದಾದ ಸೋಲೂರಿನ ಭೈರವದುರ್ಗ (Bhairavadurga)ಕ್ಕೆ ಇಂದು ಬೆಳ್ಳಂಬೆಳಗ್ಗೆ ರಾಮನಗರ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಚಾರಣ ಮಾಡಿದ್ರು. ಜಿಲ್ಲಾಧಿಕಾರಿ (Collectors) ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಪ್ರಯುಕ್ತ ಸೋಲೂರಿನ ಗ್ರಾಮದಲ್ಲಿ ರಾಮನಗರ (Ramanagara) ಜಿಲ್ಲಾಡಳಿತ ಕಾರ್ಯಕ್ರಮ ಹಮ್ಮಿಕೊಂಡಿತ್ತು. ನಿನ್ನೆ ದಿನ ಸೋಲೂರು ಗ್ರಾಮದ ಜನರ ಸಮಸ್ಯೆಗಳ ಆಲಿಸಿದ ಜಿಲ್ಲಾಧಿಕಾರಿಗಳು ನಂತರ ರಾತ್ರಿ ಅಲ್ಲೇ ವಾಸ್ತವ್ಯ ಹೂಡಿದ್ರು.

Kanchipuramಗೆ ಹೋದ್ರೆ ನೀವು ನೋಡಲೇಬೇಕಾದ ದೇವಾಲಯಗಳಿವು..
 
ಮುಂಜಾನೆ ಎದ್ದು ಕುದೂರು ಭೈರವದುರ್ಗಕ್ಕೆ ಸುಮಾರು ನಾಲ್ಕರಿಂದ ಐದು ಕಿಲೋಮೀಟರ್ ಟ್ರಕಿಂಗ್ (Trekking) ಮಾಡಿದ್ರು . ರಾಮನಗರ ಡಿಸಿಗೆ ಡಿಡಿಎಲ್ ಆರ್ ಸಂತೋಷ್, ಮಾಗಡಿ ತಹಸೀಲ್ದಾರ್ ಶ್ರೀನಿವಾಸ್ ಪ್ರಸಾದ್, ಕುದೂರು ಪೊಲೀಸ್ ಠಾಣೆ ಸಿಪಿಐ ಎ.ಪಿ ಕುಮಾರ್, ಅರಣ್ಯ ಇಲಾಖೆ ,ಕಂದಾಯ ಇಲಾಖೆ ಹಾಗೂಇತರೆ ಇಲಾಖೆ ಸಿಬ್ಬಂದಿಗಳು ಜಿಲ್ಲಾಧಿಕಾರಿಗೆ ಸಾಥ್ ನೀಡಿದ್ರು. ಭೈರವದುರ್ಗವನ್ನು ಪ್ರವಾಸಿ ತಾಣವನ್ನಾಗಿ ಮಾಡುವುದಾಗಿ ಮನಗರ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಭರವಸೆ ನೀಡಿದರು.

ಕೆಂಪೇಗೌಡರ ಆಳ್ವಿಕೆಗೆ ಒಳಪಟ್ಟಿದ್ದ ಸ್ಥಳಗಳಲ್ಲಿ ಈ ಭೈರವದುರ್ಗ ಒಂದಾಗಿದೆ. ನಾಡಪ್ರಭು ಮಾಗಡಿಕೆಂಪೇಗೌಡರ ಪ್ರಮುಖ ಸೇನಾ ನೆಲೆಯಾಗಿತ್ತು. ಬೆಂಗಳೂರಿನ ಸುತ್ತಮುತ್ತಲ ನವದುರ್ಗಗಳಲ್ಲಿ ಪ್ರಮುಖವಾದುದು ಭೈರವದುರ್ಗ. ಶೈವಗುರು ಗಗನಾದಾರ್ಯರು ಶಿವೈಕ್ಯರಾದ ಪವಿತ್ರಸ್ಥಳವಾಗಿದೆ. ಕರ್ನಾಟಕದ ಅತಿ ಎತ್ತರದ ಏಕಶಿಲಾ ಬೆಟ್ಟಗಳಲ್ಲಿ ಈ ಭೈರವದುರ್ಗದ ಬೆಟ್ಟ ಒಂದಾಗಿದೆ. ಚಾರಣಿಗರಿಗೆ ಇದು ಬೆಸ್ಟ್ ಪ್ಲೇಸ್‌.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!