
ಭಾರತದ ಬಗ್ಗೆ ಹಿಂದಿನಿಂದಲೂ ಅನೇಕ ವಿದೇಶಿ ಪ್ರವಾಸಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅದೆಲ್ಲವೂ ಇತಿಹಾಸಗಳಲ್ಲಿ ದಾಖಲಾಗಿದೆ. ಆದರೆ ಈಗ ಕಾಲ ಬದಲಾಗಿದೆ. ಆಗ ಪುಸ್ತಕದಲ್ಲಿ ಬರೆದಿಡುತ್ತಿದ್ದರೆ, ಈಗ ಸೋಶಿಯಲ್ ಮೀಡಿಯಾದಲ್ಲಿ ಸಾಕ್ಷ್ಯಧಾರ ಸಮೇತ ವೀಡಿಯೋವನ್ನು ವಿದೇಶಿ ಪ್ರವಾಸಿಗರು ಪೋಸ್ಟ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಇಂದು ಸಾಕಷ್ಟು ಪ್ರಭಾವಶಾಲಿಯಾಗಿರುವುದರಿಂದ ಇವರ ಈ ಪೋಸ್ಟ್‌ಗಳಿಂದ ದೊಡ್ಡ ಅಭಿಪ್ರಾಯವೇ ಸೃಷ್ಟಿಯಾಗುತ್ತದೆ. ಕೆಲವು ವಿದೇಶಿಗರು ನಮ್ಮ ದೇಶದ ಬಗ್ಗೆ ಒಳ್ಳೆಯ ಮಾತನಾಡಿದರೆ ಮತ್ತೆ ಕೆಲವರು ಕೆಟ್ಟ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಆದರೆ ಈಗ ವಿದೇಶಿ ಪ್ರವಾಸಿಗರೊಬ್ಬರು ನಮ್ಮ ದೇಶದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ವೀಡಿಯೋವೊಂದು ವೈರಲ್ ಆಗುತ್ತಿದೆ.
ಏಕಾಂಗಿ ಭಾರತ ಪ್ರವಾಸದ ವೇಳೆ ತನಗಾದ ಮೂರು ಅಚ್ಚರಿಗಳ ಬಗ್ಗೆ ಆಸ್ಟ್ರೇಲಿಯಾದ ಮಹಿಳೆಯೊಬ್ಬಳು ಹೇಳಿಕೊಂಡಿದ್ದಾಳೆ. ಆಕೆಯ ವೀಡಿಯೋ ಈಗ ವೈರಲ್ ಆಗಿದೆ. ಬೆಕ್ ಮೆಕ್‌ಕಾಲ್ ಎಂಬ ಆಸ್ಟ್ರೇಲಿಯನ್ ಪ್ರವಾಸಿ ಮಹಿಳೆ ಭಾರತಕ್ಕೆ ಭೇಟಿ ನೀಡಿದ್ದು, ತಾನು ಮಾಡಿದ ಅತ್ಯುತ್ತಮ ಕೆಲಸಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ತಮ್ಮನ್ನು ಅಚ್ಚರಿಗೊಳಿಸಿದ ಮೂರು ವಿಚಾರಗಳ ಬಗ್ಗೆ ಹೇಳಿದ್ದಾರೆ. ನಾನು ಇತ್ತೀಚೆಗೆ ಯುವ ಮಹಿಳಾ ಪಯಣಿಗಳಾಗಿ ಭಾರತಕ್ಕೆ ಪ್ರವಾಸ ಮಾಡಿದ್ದೆ ಮತ್ತು ನನಗೆ ನಿಜವಾಗಿಯೂ ಆಶ್ಚರ್ಯವನ್ನುಂಟುಮಾಡಿದ ಮೂರು ವಿಷಯಗಳ ಬಗ್ಗೆ ಇಲ್ಲಿವೆ ಎಂದು 24 ವರ್ಷದ ಮೆಕ್‌ಕಾಲ್ ತನ್ನ ಈಗ ವೈರಲ್ ಆಗಿರುವ ವೀಡಿಯೊದಲ್ಲಿ ಮೂರು ವಿಚಾರಗಳನ್ನು ಉಲ್ಲೇಖಿಸಿದ್ದಾರೆ.
ಭಾರತೀಯರಿಂದ ಸೆಲ್ಫಿಗೆ ₹100 ಹಣ ಪಡೆದ ರಷ್ಯನ್ ಯುವತಿ! 3 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದ ವಿಡಿಯೋ
1.ಮಹಿಳೆಯರ ಸುರಕ್ಷತೆ
ಅದರಲ್ಲಿ ಮೊದಲನೇಯದಾಗಿ ಮಹಿಳೆಯರ ಸುರಕ್ಷತೆ, ಭಾರತವು ಮಹಿಳಾ ಪ್ರಯಾಣಿಕರಿಗೆ ಅಪಾಯಕಾರಿ ಎಂದು ನನಗೆ ಹೇಳಲಾಯಿತು. ಆದರೆ ನಾನು ನಿಜವಾಗಿಯೂ ಅಲ್ಲಿಗೆ ಹೋದಾಗ, ನಾನು ಅಲ್ಲಿದ್ದ ಸಮಯದುದ್ದಕ್ಕೂ ಸುರಕ್ಷಿತವಾಗಿದ್ದೆ ಕೇವಲ ಒಂದೇ ಒಂದು ಸಲ ಅದು ತಡರಾತ್ರಿಯಾಗಿದ್ದರಿಂದ ಸ್ವಲ್ಪ ತೊಂದರೆಯಾಗಿತ್ತು ಎಂಬುದನ್ನು ಬಿಟ್ಟರೆ ನನಗೆ ಯಾವುದೇ ಸಮಸ್ಯೆ ಆಗಿಲ್ಲ.
2 ಕಲುಷಿತ ಆಹಾರ
ನಾನು ಭಾರತಕ್ಕೆ ಆಗಮಿಸುವ ಮೊದಲು ಇಲ್ಲಿ ಕಲುಷಿತ ಆಹಾರದಿಂದ ಫುಡ್ ಪಾಯಿಸನ್ ಆಗುತ್ತದೆ ಎಂದು ನಾನು ಭಯಪಟ್ಟಿದ್ದೆ. ಆದರೆ ಆ ರೀತಿ ನನಗೆ ಎಂದೂ ಆಗಲೇ ಇಲ್ಲ, ಆಹಾರ ತುಂಬಾ ರುಚಿಕರವಾಗಿತ್ತು, ಅದರಲ್ಲೂ ಸಸ್ಯಹಾರಿ ಆಹಾರಗಳು ತುಂಬಾ ವಿಶೇಷವಾಗಿದ್ದವು. ಅಲ್ಲದೇ ನನಗೆ ಮೊದಲೇ ಹೇಳಿದಂತೆ ಯಾವ ಆಹಾರಗಳು ಕೂಡ ನನಗೆ ಇಲ್ಲಿ ಖಾರವಿರಲಿಲ್ಲ, ಆಹಾರಗಳು ಇಲ್ಲಿ ತುಂಬಾ ಚೆನ್ನಾಗಿದ್ದವು. ನಾನು ನಿಜವಾಗಿಯೂ ಇಲ್ಲಿ ಶಾಖಕ್ಕಾಗಿ ಹಂಬಲಿಸುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.
3. ಭಾರತದ ಇತಿಹಾಸ:
ನಮ್ಮ ದೇಶದ ಇತಿಹಾಸ ಪುರಾತನ ಸಂಸ್ಕೃತಿಯ ಬಗ್ಗೆ ವಿದೇಶಿಗರಿಗೆ ಬಿಡಿ ನಮ್ಮವರಿಗೂ ಗೊತ್ತಿಲ್ಲ, ಈ ವಿಚಾರ ಬಗ್ಗೆ ಈ ಆಸ್ಟ್ರೇಲಿಯಾದ ಈ ಪ್ರವಾಸಿಗಳಿಗೂ ಅಚ್ಚರಿ ಆಯ್ತಂತೆ, ಭಾರತ ಇಷ್ಟೊಂದು ಅಗಾಧವಾದ ಪುರಾತನವಾದ ಇತಿಹಾಸ ವಾಸ್ತುಶಿಲ್ಪವನ್ನು ಹೊಂದಿದೆ ಎಂಬ ವಿಚಾರ ತಿಳಿದು ಅಚ್ಚರಿ ಆಯ್ತು. ಭಾರತಕ್ಕೆ ಎಷ್ಟು ಇತಿಹಾಸವಿದೆ ಎಂದು ನನಗೆ ತಿಳಿದಿರಲಿಲ್ಲ. ಅಲ್ಲಿ ಪ್ರಾಚೀನ ನಗರಗಳು, ಯುನೆಸ್ಕೋ ತಾಣಗಳು ಮತ್ತು 13 ನೇ ಶತಮಾನದ ಅದ್ಭುತ ವಾಸ್ತುಶಿಲ್ಪ ಇಲ್ಲಿದೆ. ಇಲ್ಲಿನ ಸಂಸ್ಕೃತಿ ಮತ್ತು ಪರಂಪರೆ ಮನಸ್ಸಿಗೆ ಮುದ ನೀಡುತ್ತದೆ ಎಂದು ಅವರು ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.
2024ರಲ್ಲಿ ವಿದೇಶಿ ಪ್ರವಾಸಿಗರನ್ನು ಅತೀಯಾಗಿ ಸೆಳೆದ ಭಾರತದ ಟಾಪ್5 ಬೀಚ್‌ಗಳಿವು
ಹೀಗಾಗಿ ಭಾರತದ ಬಗ್ಗೆ ಬೇರೆಡೆ ಇರುವ ಗಾಳಿ ಸುದ್ದಿಗಳು ನಿಜವಲ್ಲ, ಇದು ನಿಜವಾಗಿಯೂ ಸುರಕ್ಷಿತವಾಗಿದೆ. ಆಗಾಧ ಇತಿಹಾಸದ ಜೊತೆ ರುಚಿಕರವಾದ ಆಹಾರ ವ್ಯವಸ್ಥೆಯನ್ನು ಹೊಂದಿದೆ ಎಂದು ಭಾರತವನ್ನು ಈ ಆಸ್ಟ್ರೇಲಿಯನ್ ಪ್ರವಾಸಿ ಮಹಿಳೆ ಕೊಂಡಾಡಿದ್ದಾರೆ. ಇದಕ್ಕಿಂತ ಹೆಚ್ಚು ಇನ್ನೇನು ಬೇಕು ಎಂದು ಆಕೆ ವೀಡಿಯೋದ ಕೊನೆಯಲ್ಲಿ ಹೇಳಿದ್ದಾರೆ. ವೀಡಿಯೋದ ಉದ್ದಕ್ಕೂ ಆಕೆ ಭಾರತದಲ್ಲಿ ಸುತ್ತಾಡುತ್ತಿರುವ ವೀಡಿಯೋಗಳ ತುಣುಕನ್ನು ಹಂಚಿಕೊಂಡಿದ್ದಾರೆ.
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಲಕ್ಷಾಂತರ ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಅಲ್ಲದೇ ಆಕೆಯ ಈ ಅಭಿಪ್ರಾಯಕ್ಕೆ ಆಕೆಯ ಬಗ್ಗೆ ಭಾರತೀಯರು ಹೆಮ್ಮೆಯ ಜೊತೆ ಧನ್ಯವಾದ ಸಲ್ಲಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.