Pini Village: ಭಾರತದ ಈ ಹಳ್ಳಿಯಲ್ಲಿ ಬಟ್ಟೆ ಧರಿಸಲ್ಲ ಮಹಿಳೆಯರು!

By Roopa Hegde  |  First Published Jul 29, 2024, 3:18 PM IST

ಸಂಪ್ರದಾಯ, ಪದ್ಧತಿಯಲ್ಲಿ ಭಾರತ ಮುಂದಿದೆ. ಶತ ಶತಮಾನಗಳಿಂದ ಜಾರಿಯಲ್ಲಿರುವ ಪದ್ಧತಿಯನ್ನು ಜನರು ಈಗ್ಲೂ ಪಾಲಿಸಿಕೊಂಡು ಬರ್ತಿದ್ದಾರೆ. ಅದಕ್ಕೆ ಹಿಮಾಲಯದ ಈ ಹಳ್ಳಿ ಕೂಡ ಉದಾಹರಣೆ. ಇಲ್ಲಿ ಜಾರಿಯಲ್ಲಿರುವ ಸಂಪ್ರದಾಯ ಅಚ್ಚರಿ ಹುಟ್ಟಿಸುತ್ತದೆ.


ಕೃತಕ ಬುದ್ಧಿಮತ್ತೆ, 5ಜಿ ತಂತ್ರಜ್ಞಾನ ಅಂತ ಒಂದ್ಕಡೆ ದೇಶ ಎಷ್ಟೇ ಮುಂದುವರೆಯುತ್ತಿರಲಿ, ಭಾರತದಲ್ಲಿ ಸಂಪ್ರದಾಯ, ಪದ್ಧತಿಗಳು ಈಗ್ಲೂ ಜೀವಂತವಾಗಿವೆ. ಪ್ರತಿಯೊಂದು ಹಳ್ಳಿ, ಬುಡಕಟ್ಟು, ಜನಾಂಗದಲ್ಲಿ ಜನರು ಅನಾದಿ ಕಾಲದಿಂದ ನಡೆದು ಬಂದ ಪದ್ಧತಿಯನ್ನು ಈಗ್ಲೂ ಪಾಲನೆ ಮಾಡುತ್ತಿದ್ದಾರೆ. ಈಗಾಗಲೇ ನೀವು ಅನೇಕ ಚಿತ್ರ ವಿಚಿತ್ರ ಪದ್ಧತಿಗಳ ಬಗ್ಗೆ ಕೇಳಿರ್ತೀರಿ. ಹಿಮಾಲಯದಲ್ಲಿ ಅಚ್ಚರಿ ಹುಟ್ಟಿಸು ಪದ್ಧತಿಯೊಂದು ಚಾಲ್ತಿಯಲ್ಲಿದೆ. ಅಲ್ಲಿ ಮಹಿಳೆಯರು ಬಟ್ಟೆ ಧರಿಸೋದಿಲ್ಲ. ಇಡೀ ವರ್ಷವಲ್ಲ. ವರ್ಷದಲ್ಲಿ ಐದು ದಿನ ಮಾತ್ರ.

ಹೌದು, ಇಲ್ಲಿನ ಮಹಿಳೆಯರು ಐದು ದಿನ ಬಟ್ಟೆ (Clothes) ಇಲ್ಲದೆ ಜೀವನ ನಡೆಸುತ್ತಾರೆ. ಒಂದ್ವೇಳೆ ನಿಯಮ ಮುರಿದ್ರೆ ಮುಂದೆ ಅನಾಹುತವಾಗುತ್ತೆ ಎಂಬುದು ಅವರ ನಂಬಿಕೆ.

Latest Videos

undefined

ಐದು ದಿನ ಬಟ್ಟೆ ಇಲ್ಲದೆ ಇರ್ತಾರೆ ಮಹಿಳೆಯರು : ಹಿಮಾಲಯ (Himalay)ದ ಮಣಿಕರ್ಣ ಕಣಿವೆಯಲ್ಲಿರುವ ಪಿಣಿ (Pini) ಗ್ರಾಮದಲ್ಲಿ ಈ ಪದ್ಧತಿ ಇದೆ. ಅನೇಕಾನೇಕ ವರ್ಷಗಳಿಂದಲೂ ಇಲ್ಲಿ ಈ ಪದ್ಧತಿ ಜಾರಿಯಲ್ಲಿದೆ.  ಶ್ರಾವಣ ಮಾಸದಲ್ಲಿ ಐದು ದಿನ ಮಹಿಳೆಯರು ಬಟ್ಟೆ ಧರಿಸೋದು ಅಪರಾಧ. ಒಂದ್ವೇಳೆ ಅವರು ಈ ಸಮಯದಲ್ಲಿ ಬಟ್ಟೆ ಧರಿಸಿದ್ರೆ ಕೆಲವೇ ದಿನಗಳಲ್ಲಿ ಕೆಟ್ಟ ಘಟನೆ ಸಂಭವಿಸುತ್ತದೆ ಎಂದು ಅವರು ಬಲವಾಗಿ ನಂಬಿದ್ದಾರೆ. ಬಟ್ಟೆ ಧರಿಸದ ಕಾರಣ ಈ ಐದು ದಿನ ಮಹಿಳೆಯರು ಮನೆಯಿಂದ ಹೊರಗೆ ಬರೋದಿಲ್ಲ. ಹಾಗಾಗಿ ಇದ್ರಿಂದ ಯಾರಿಗೂ ತೊಂದರೆ ಇಲ್ಲ. ಯಾವುದೇ ವ್ಯಕ್ತಿ ಮಹಿಳೆಯನ್ನು ನೋಡಲು ಸಾಧ್ಯವಾಗೋದಿಲ್ಲ. ಐದು ದಿನ ಮನೆಯಲ್ಲಿಯೇ ಇರುವ ಮಹಿಳೆಯರು ಈ ಪದ್ಧತಿಯನ್ನು ಚಾಚೂತಪ್ಪದೆ ಪಾಲಿಸುತ್ತಾರೆ. 

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಐತಿಹಾಸಿಕ ಮೈಲಿಗಲ್ಲು!

ಪುರುಷರಿಗೂ ಇದೆ ಕಠಿಣ ನಿಯಮ : ಶ್ರಾವಣ ಮಾಸದ ಐದು ದಿನ ಮಹಿಳೆಯರು ಮಾತ್ರವಲ್ಲ ಪುರುಷರು ಕೂಡ ಕೆಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪುರುಷರು, ತಮ್ಮ ಪತ್ನಿಯ ಜೊತೆ ಯಾವುದೇ ಕಾರಣಕ್ಕೂ ಮಾತನಾಡುವಂತಿಲ್ಲ. ಹಾಗೆಯೇ ಅವರ ಜೊತೆ ಸೇರುವಂತಿಲ್ಲ. ಇಬ್ಬರು ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಒಬ್ಬರನ್ನು ಒಬ್ಬರು ನೋಡಿ ನಕ್ಕರೂ ಅದನ್ನು ಅಪರಾಧ ಎಂದು ಅಲ್ಲಿನ ಜನರು ಪರಿಗಣಿಸುತ್ತಾರೆ. 

ಮಹಿಳೆ ಹಾಗೂ ಪುರುಷರಿಗೆ ಮದ್ಯ ಹಾಗೂ ಮಾಂಸ ಸೇವನೆ ಕೂಡ ಈ ಸಮಯದಲ್ಲಿ ನಿಷೇಧ. ಯಾರಾದ್ರೂ ಮದ್ಯ - ಮಾಂಸ ಸೇವನೆ ಮಾಡಿದ್ರೆ ಅಥವಾ ನಿಯಮವನ್ನು ಮೀರಿದ್ರೆ ದೇವರು ಕೋಪಗೊಳ್ಳುತ್ತಾನೆ. ಅವರಿಗೆ ಕೆಡುಕು ಮಾಡ್ತಾನೆ ಎಂದು ನಂಬಲಾಗಿದೆ. ಇಲ್ಲಿನ ಜನರು ಈ ಸಂಪ್ರದಾಯ ಪಾಲಿಸಿಕೊಂಡು ಬರುವುದರ ಹಿಂದೊಂದು ಕಥೆ ಇದೆ.

ಬೌ ಬೌ ಮಿಕ್ಸ್​ ಆಗಿರುತ್ತೆ ಹುಷಾರ್​ ಕಣಣ್ಣೋ.... ಹೇಳಿ-ಕೇಳಿ ಅದು... ಡಾ.ಬ್ರೋ ವಿಡಿಯೋಗೆ ಫ್ಯಾನ್ಸ್​ ಹೀಗೊಂದು ಎಚ್ಚರಿಕೆ!

ಸಂಪ್ರದಾಯದ ಹಿಂದೆ ಕಥೆ : ಪಿಣಿ ಗ್ರಾಮದಲ್ಲಿ ಹಿಂದೆ ಭೂತದ ಭಯವಿತ್ತು. ಈ ಗ್ರಾಮಕ್ಕೆ ಬರುವ ಭೂತಗಳು, ಉತ್ತಮ ಬಟ್ಟೆ ಧರಿಸಿ ಸುಂದರವಾಗಿ ಕಾನ್ತಿದ್ದ ವಿವಾಹಿತ ಮಹಿಳೆಯರನ್ನು ಅಪಹರಿಸುತ್ತಿದ್ದರು. ಲಹುವಾ ಘೋಂಡ್ ಎಂಬ ದೇವರು ಪಿಣಿ ಗ್ರಾಮಕ್ಕೆ ಬಂದು ಭೂತಗಳನ್ನು ಸಂಹರಿಸಿದ. ಮಹಿಳೆಯರಿಗೆ ಅಲ್ಲಿಂದ ನೆಮ್ಮದಿ ಸಿಕ್ಕಿತು. ಆದ್ರೆ ಮಹಿಳೆಯರು ಈ ಸಮಯದಲ್ಲಿ ಸುಂದರ ಬಟ್ಟೆಯನ್ನು ಧರಿಸಿದ್ರೆ ಈಗ್ಲೂ ಭೂತ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಜನರು ನಂಬುತ್ತಾರೆ. ಹಾಗಾಗಿ ಶ್ರಾವಣ ಮಾಸದ ಐದು ದಿನ ಬಟ್ಟೆ ಇಲ್ಲದೆ ಮಹಿಳೆಯರು ಕಳೆಯುತ್ತಾರೆ. ಒಂದ್ವೇಳೆ ಮಹಿಳೆ ತನ್ನ ದೇಹವನ್ನು ಮುಚ್ಚಲು ಬಯಸಿದರೆ, ಅವಳು ಉಣ್ಣೆಯಿಂದ ಮಾಡಿದ ಪಾಟ್ಕಾವನ್ನು ಸರಳವಾಗಿ ಬಳಸಬಹುದು. ಇದನ್ನು ಬಿಟ್ಟು ಬೇರೆ ಯಾವುದೇ ಬಟ್ಟೆಯನ್ನು ಧರಿಸುವಂತಿಲ್ಲ ಎಂದು ಅಲ್ಲಿನ ಗ್ರಾಮಸ್ಥರು ಹೇಳ್ತಾರೆ. ಗ್ರಾಮದಲ್ಲಿರುವ ಪ್ರತಿ ಮನೆಯ ಮಹಿಳೆಯರು ಇದನ್ನು ಪಾಲಿಸುತ್ತಿದ್ದಾರೆ. 

click me!