ಗೋವಾದಲ್ಲಿ ಮದುವೆ ಆಗೋ ಪ್ಲಾನ್ ಇದ್ಯಾ? ಎಷ್ಟು ಬರಬಹುದು ಖರ್ಚು?

By Suvarna NewsFirst Published Feb 17, 2024, 2:34 PM IST
Highlights

ಸುಂದರ ಬೀಚ್, ನೈಟ್ ಪಾರ್ಟಿ ಮೂಲಕವೇ ಕೋಟ್ಯಾಂತರ ಮಂದಿ ಸೆಳೆಯುವ ಗೋವಾ, ಹನಿಮೂನ್ ಗೆ ಮಾತ್ರವಲ್ಲ ಮದುವೆಗೂ ಒಳ್ಳೆ ಜಾಗ. ಗೋವಾದಲ್ಲಿ ಮದುವೆ ಆಗೋದ್ರಿಂದ ಲಾಭ ಎಷ್ಟು ಎಂಬ ವಿವರ ಇಲ್ಲಿದೆ. 
 

ಗೋವಾ ಪ್ರವಾಸಿಗರ ಸ್ವರ್ಗ. ಪ್ರತಿ ವರ್ಷ ಲಕ್ಷಾಂತರ ಮಂದಿ ಪ್ರವಾಸಿಗರು ಗೋವಾಕ್ಕೆ ಬಂದು ಹೋಗ್ತಾರೆ. ಸುಂದರ ಬೀಚ್ ಗಳು, ಪ್ರೈವೇಟ್ ಬೀಚ್, ಬೀಚ್ ಗೇಮ್ಸ್, ದೇವಸ್ಥಾನ, ಚರ್ಚ್ ಎಲ್ಲವೂ ಪ್ರವಾಸಿಗರನ್ನು ಸೆಳೆಯುತ್ತದೆ. ರಾತ್ರಿಯಾಗ್ತಿದ್ದಂತೆ ಗೋವಾ ಚಿತ್ರಣ ಸಂಪೂರ್ಣ ಬದಲಾಗುತ್ತದೆ. ನೈಟ್ ಔಟ್, ಪಾರ್ಟಿ ಮಾಡುವವರಿಗೆ ಇದು ಹೇಳಿ ಮಾಡಿಸಿದ ಜಾಗ. ಗೋವಾ ಬರೀ ಪ್ರವಾಸಿಗರಿಗೆ ಮಾತ್ರವಲ್ಲ ಹೊಸದಾಗಿ ದಾಂಪತ್ಯಕ್ಕೆ ಕಾಲಿಡುವ ನವ ಜೋಡಿಗೂ ಅತ್ಯುತ್ತಮ ಜಾಗ. ಗೋವಾದಲ್ಲಿ ಅನೇಕ ಮದುವೆಗಳು ನಡೆಯುತ್ತವೆ.

ನಟಿ ರಾಕುಲ್ ಪ್ರೀತ್ (Rakul Preet)  ಸಿಂಗ್ ಮತ್ತು ನಟ ಹಾಗೂ ನಿರ್ಮಾಪಕ ಜಾಕಿ ಭಗ್ನಾನಿ ಫೆಬ್ರವರಿ 21 ರಂದು ಗೋವಾ (Goa) ದಲ್ಲಿಯೇ ವಿವಾಹವಾಗಲಿದ್ದಾರೆ. ಅವರು ದಕ್ಷಿಣ ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್  ಯೋಜಿಸಿದ್ದಾರೆ. ದಕ್ಷಿಣ ಗೋವಾದ ಹೋಟೆಲ್ ಐಟಿಸಿ ಗ್ರ್ಯಾಂಡ್ ಅವರ ಮದುವೆಯ ಸ್ಥಳವಾಗಿದೆ. ವಿದೇಶದಲ್ಲಿ ಮದುವೆ (Marriage) ಆಗುವ ಬದಲು ನಮ್ಮ ದೇಶದಲ್ಲಿಯೇ ವಿವಾಹ ಸಮಾರಂಭ ಏರ್ಪಡಿಸಿ, ನಮ್ಮ ದೇಶಕ್ಕೆ ಆರ್ಥಿಕ ನೆರವು ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಪ್ರಧಾನಿ ಮಾತಿಗೆ ಮನ್ನಣೆ ನೀಡಿ, ನಮ್ಮ ದೇಶದಲ್ಲೇ ಅದ್ಧೂರಿಯಾಗಿ ಮದುವೆ ಆಗ್ಬೇಕು ಅಂದ್ರೆ ಇಲ್ಲಿ ಸಾಕಷ್ಟು ಜಾಗವಿದೆ. ಅದ್ರಲ್ಲಿ ಗೋವಾ ಕೂಡ ಒಂದು.  
ಗೋವಾದಲ್ಲಿ ಮದುವೆ ಆಗುವ ಮೂಲಕ ನೀವು ಕೆಲವೊಂದು ವಸ್ತುಗಳನ್ನು ಉಳಿಸಬಹುದು. ಗೋವಾ ಮೊದಲೇ ಸುಂದರ ಸ್ಥಳವಾಗಿರುವ ಕಾರಣ ನೀವು ಅಲಂಕಾರಕ್ಕೆ ಹೆಚ್ಚು ಖರ್ಚು ಮಾಡುವ ಅಗತ್ಯವಿಲ್ಲ. ಬರೀ ಹೂಗಳಿಂದ ನೀವು ಮದುವೆ ಅಲಂಕಾರ ಮುಗಿಸಬಹುದು. ಬೀಚ್ ರೆಸಾರ್ಟ್ ಗಳಲ್ಲಿ ಮದುವೆ ಆಯೋಜನೆ ಮಾಡಿದ್ದರೆ ಖರ್ಚು ಮತ್ತಷ್ಟು ಕಡಿಮೆ. ಯಾಕೆಂದ್ರೆ ರಾತ್ರಿಯಲ್ಲಿ ಗೋವಾ ಬಣ್ಣದ ಬೆಳಕಿನಿಂದ ಸಿಂಗಾರಗೊಂಡಿರುತ್ತದೆ. ಬೀಚ್ ಗಳಲ್ಲಿ ಮ್ಯೂಸಿಕ್ ಸದಾ ಇರುತ್ತದೆ. ನೀವು ನಿಮ್ಮ ಅತಿಥಿಗಳಿಗಾಗಿ ವಿಶೇಷ ವ್ಯವಸ್ಥೆ ಮಾಡಬೇಕಾಗಿಲ್ಲ. ಅತಿಥಿಗಳ ಮನರಂಜನೆಗೆ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡ್ತೀರಿ ಎಂದಾದ್ರೂ ಅದಕ್ಕೆ ಹೆಚ್ಚು ಖರ್ಚು ಬರೋದಿಲ್ಲ. ಗೋವಾದಲ್ಲಿ ಮ್ಯೂಜಿಕ್ ಬ್ಯಾಂಡ್ ಗಳ ಸಂಖ್ಯೆ ಸಾಕಷ್ಟಿದೆ. 

Latest Videos

ಸ್ವರ್ಗದಂತಹ ಈ ಸುಂದರ ಸ್ಥಳದಲ್ಲಿ ಹುಟ್ಟೋದು, ಸಾಯೋದು ಎರಡೂ ಕಾನೂನು ಬಾಹಿರ!

ಮದುವೆಗೆ ಬರುವ ಅತಿಥಿಗಳಿಗೆ ಮನರಂಜನೆ ಜೊತೆ ಸಾಹಸ ಕ್ರೀಡೆಗಳ ಮೂಲಕ ಹೆಚ್ಚಿನ ಖುಷಿ ನೀಡ್ಬೇಕು ಅಂದ್ರೆ ಅದಕ್ಕೂ ವ್ಯವಸ್ಥೆ ಇದೆ. ಗೋವಾದಲ್ಲಿ ಸಾಹಸ ಕ್ರೀಡೆಗಳು ಸಾಕಷ್ಟಿವೆ. ನೀವು ಗ್ರೂಪ್ ಪ್ಯಾಕೇಜ್ ಖರೀದಿ ಮಾಡಿದ್ರೆ ನಿಮಗೆ ಖರ್ಚು ಕಡಿಮೆ ಬರುತ್ತದೆ. 

ಪ್ರವಾಸಿಗರ ಅಚ್ಚುಮೆಚ್ಚಿನ ಪ್ರವಾಸಿ ತಾಣ ವಿಯೆಟ್ನಾಂ ಮುಡಿಗೆ ಮತ್ತೊಂದು ಗರಿ!

ಮದುವೆ ಅಂದ್ಮೇಲೆ ಕನಿಷ್ಠ ಮೂರು ದಿನವಾದ್ರೂ ಸಂಭ್ರಮ ಇದ್ದೇ ಇರುತ್ತದೆ. ಮೂರು ದಿನದ ಮದುವೆ, ಪ್ರತಿ ದಿನ ಮೂರು ಹೊತ್ತಿನ ಊಟ ಹಾಗೂ ವಸತಿಗೂ ಹೆಚ್ಚಿನ ಖರ್ಚು ಬರೋದಿಲ್ಲ. ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ 12,000 ರಿಂದ 25,000 ರೂಪಾಯಿಯಂತೆ ಐವತ್ತು ಸದಸ್ಯರಿಗೆ 6 ರಿಂದ 15 ಲಕ್ಷ ರೂಪಾಯಿ ಖರ್ಚು ಬರುತ್ತದೆ. 

ಗೋವಾದಲ್ಲಿ ಅಗ್ಗದಿಂದ ದುಬಾರಿಯವರೆಗೆ ಅನೇಕ ವೆರೈಟಿ ಹೊಟೇಲ್ ಗಳಿವೆ. ನೀವು ಯಾವ ಹೊಟೇಲ್ ಆಯ್ಕೆ ಮಾಡಿಕೊಳ್ಳುತ್ತೀರಿ ಎನ್ನುವುದರ ಮೇಲೆ ಬೆಲೆ ನಿರ್ಧಾರವಾಗುತ್ತದೆ. ನಿಮ್ಮ ಬಜೆಟ್ ಹಾಗೂ ಅತಿಥಿಗಳ ಸಂಖ್ಯೆ ಆಧಾರದ ಮೇಲೆ ಹೊಟೇಲ್ ಬುಕ್ ಮಾಡಿ. ಮದುವೆ ಸ್ಥಳ, ಅಲಂಕಾರ ಹಾಗೂ ಮೆರವಣಿಗೆ ಎಲ್ಲಕ್ಕೂ ನೀವು ಖರ್ಚು ಮಾಡ್ಬೇಕು. ನೀವು ಮೆರವಣಿಗೆಗೆ ಆನೆ ಬದಲು ವಿಂಟೇಜ್ ಕಾರ್ ಬಳಸಿದ್ರೆ ಇದ್ರಲ್ಲಿ ಸ್ವಲ್ಪ ಉಳಿತಾಯ ಮಾಡಬಹುದು. ಹಾಗೆಯೇ ಸಿಂಪಲ್ ಅಲಂಕಾರಕ್ಕೆ ಆದ್ಯತೆ ನೀಡಿದ್ರೆ ಮದುವೆಯ ಖರ್ಚು ಅಗ್ಗವಾಗುತ್ತದೆ. 

click me!