
ಹೃದಯಾಘಾತ (Heart attack)ದಿಂದ ನಿಧನರಾಗ್ತಿರುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಈಗಿದ್ದ ವ್ಯಕ್ತಿ ಇನ್ನೊಂದು ಕ್ಷಣಕ್ಕೆ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಡಾನ್ಸ್ ಮಾಡ್ತಿದ್ದವರು, ಜಿಮ್ ನಲ್ಲಿ ವರ್ಕ್ ಔಟ್ ಮಾಡ್ತಿದ್ದವರು, ಬಸ್ ನಲ್ಲಿ ಪ್ರಯಾಣ ಮಾಡ್ತಿದ್ದವರು ಕುಸಿದು ಬಿದ್ದು ಅಲ್ಲೇ ಸಾವನ್ನಪ್ಪಿದ ಎಷ್ಟೋ ಘಟನೆಗಳು ವರದಿ ಆಗ್ತಿವೆ. ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತಕ್ಕೆ ಒಳಗಾಗ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಅಚಾನಕ್ ಸಾವು ಅನೇಕರನ್ನು ಅಪಾಯಕ್ಕೆ ತಳ್ಳಬಹುದು. ಬಸ್ ಅಥವಾ ಟ್ರೈನ್ ಸೇರಿದಂತೆ ಸಾರ್ವಜನಿಕ ವಾಹನ ಚಲಾಯಿಸುವ ಚಾಲಕನಿಗೆ ಹೃದಯಾಘಾತವಾದ್ರೆ ಆತನ ಜೊತೆ ಅನೇಕರ ಜೀವ ಹೋಗುವ ಅಪಾಯವಿರುತ್ತದೆ. ರೈಲು ಚಾಲಕ (Train driver)ನಿಗೆ ಹೃದಯಾಘಾತವಾದ್ರೆ ಏನಾಗುತ್ತೆ ಎನ್ನುವ ಸಾಮಾನ್ಯ ಪ್ರಶ್ನೆಗೆ ನಾವಿಂದು ಉತ್ತರ ನೀಡ್ತೇವೆ.
ಭಾರತದಲ್ಲಿ ಅತ್ಯಂತ ಸುರಕ್ಷಿತ ಮತ್ತು ಆರಾಮದಾಯಕ ಸಾರ್ವಜನಿಕ ವಾಹನವೆಂದ್ರೆ ಅದು ಟ್ರೈನ್. ದೂರದೂರುಗಳಿಗೆ ಕಡಿಮೆ ಖರ್ಚಿನಲ್ಲಿ, ಸುಸ್ತಿಲ್ಲದೆ ಹೋಗಲು ಜನರು ಟ್ರೈನ್ ಆಯ್ಕೆ ಮಾಡಿಕೊಳ್ತಾರೆ. ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ರೈಲ್ವೆ ಇಲಾಖೆ (Railway Department) ಕೂಡ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿದೆ. ಹೊಸ ಹಾಗೂ ಸೌಲಭ್ಯವುಳ್ಳ ರೈಲುಗಳನ್ನು ಪರಿಚಯಿಸ್ತಾ ಇದೆ. ಹಾಗೆಯೇ ರೈಲನ್ನು ಓಡಿಸ್ತಿರುವ ವೇಳೆ ರೈಲು ಚಾಲಕನಿಗೆ ಹೃದಯಾಘಾತವಾದ್ರೆ ಅದಕ್ಕೆ ಪರಿಹಾರವನ್ನು ರೈಲ್ವೆ ಇಲಾಖೆ ಮೊದಲೇ ನೀಡಿದೆ.
ರೈಲು ಚಲಾಯಿಸುತ್ತಿರುವಾಗ್ಲೇ ಚಾಲಕನಿಗೆ ಹೃದಯಾಘಾತವಾದ್ರೆ ? : ನೂರಾರು ಜನರನ್ನು ಹೊತ್ತ ರೈಲೊಂದು ವೇಗವಾಗಿ ಓಡ್ತಿದೆ ಅಂತ ಇಟ್ಕೊಳ್ಳಿ. ಆಗ ಚಾಲಕನಿಗೆ ಹೃದಯಾಘಾತವಾಗುತ್ತೆ. ಆಗ ಪ್ರಯಾಣಿಕರ ಕಥೆ ಏನು? ಚಿಂತಿಸುವ ಅಗತ್ಯವಿಲ್ಲ. ರೈಲ್ವೆ ಸಚಿವಾಲಯ ಮುಖ್ಯ ಚಾಲಕನ ಜೊತೆ ಸಹಾಯಕ ಚಾಲಕನನ್ನು ನೇಮಿಸಿರುತ್ತದೆ. ಮುಖ್ಯ ಚಾಲಕನಿಗೆ ಹೃದಯಾಘಾತವಾದಲ್ಲಿ ಅಥವಾ ಬೇರೆ ಯಾವುದೇ ಸಮಸ್ಯೆ ಕಾಣಿಸಿಕೊಂಡಲ್ಲಿ, ಆತ ರೈಲು ಚಲಾಯಿಸಲು ಸಾಧ್ಯವಿಲ್ಲ ಎಂದಾಗ, ಸಹ ಚಾಲಕ ರೈಲು ಓಡಿಸಲು ಶುರು ಮಾಡ್ತಾನೆ. ಮುಂದಿನ ರೈಲ್ವೆ ನಿಲ್ದಾಣ ತಲುಪಿದ ನಂತ್ರ ನಿಯಂತ್ರಣ ಕೊಠಡಿಗೆ ಮಾಹಿತಿಯನ್ನು ನೀಡಲಾಗುತ್ತದೆ.
ಕೌಂಟರ್‌ಗಿಂತ ಆನ್‌ಲೈನ್ ರೈಲು ಟಿಕೆಟ್ ದರ ದುಬಾರಿ ಯಾಕೆ?
ಸಹ ಚಾಲಕನಿಗೆ ಸಮಸ್ಯೆ ಆದ್ರೆ ಏನು ಗತಿ? : ಮುಖ್ಯ ಚಾಲಕನಿಗೆ ಹೃದಯಾಘಾತವಾಗಿದೆ ಇಲ್ಲವೆ ಆರೋಗ್ಯ ಸಮಸ್ಯೆ ಕಾಡ್ತಿದ್ದು, ಸಹ ಚಾಲಕ, ರೈಲು ಓಡಿಸ್ತಿದ್ದಾನೆ ಅಂತ ಇಟ್ಕೊಳ್ಳಿ. ಆತನಿಗೂ ಸಮಸ್ಯೆ ಕಾಣಿಸಿಕೊಂಡಿದ್ದು, ಇಬ್ಬರೂ ರೈಲನ್ನು ಚಲಾಯಿಸಲು ಸಾಧ್ಯವಿಲ್ಲ ಎಂಬ ಸ್ಥಿತಿಯಲ್ಲೂ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ರಕ್ಷಣೆ ನೀಡುತ್ತದೆ. ಈ ಟೈಂನಲ್ಲಿ ಸ್ವಯಂಚಾಲಿತ ಬ್ರೇಕ್ ಬಳಸಲಾಗುತ್ತದೆ.
ರೈಲು ಪ್ರಯಾಣ ಮಾಡುತ್ತಿದ್ದರೆ ಮರೆಯದೆ ಈ ಆಹಾರ ತಗೊಂಡು ಹೋಗಿ
ರೈಲ್ವೆ ತನ್ನ ಎಲ್ಲಾ ರೈಲುಗಳ ಎಂಜಿನ್‌ಗಳಿಗೆ ಜಾಗೃತ ನಿಯಂತ್ರಣ ಸಾಧನಗಳನ್ನು ಅಳವಡಿಸಿದೆ. ನಿಯಂತ್ರಣ ಕೊಠಡಿಯಿಂದ ಈ ಸಾಧನಕ್ಕೆ ಸಂಕೇತಗಳನ್ನು ನೀಡಲಾಗುತ್ತದೆ. ಸಿಗ್ನಲ್ ನೀಡಿದ ನಂತರ ರೈಲು ಚಾಲಕ ಮತ್ತು ಸಹಾಯಕ ಚಾಲಕ ಪ್ರತಿಕ್ರಿಯಿಸದಿದ್ದರೆ, ಅದು ಎಚ್ಚರಿಕೆಯ ಅಧಿಸೂಚನೆಯನ್ನು ನಿಯಂತ್ರಣ ಕೊಠಡಿಗೆ ಕಳುಹಿಸುತ್ತದೆ. 17 ಸೆಕೆಂಡುಗಳ ಕಾಲ ಚಾಲಕ ಪ್ರತಿಕ್ರಿಯಿಸದಿದ್ದರೆ, ನಿಯಂತ್ರಣ ಕೊಠಡಿ ಸಕ್ರಿಯಗೊಳ್ಳುತ್ತದೆ. ರೈಲಿಗಿರುವ ಸ್ವಯಂಚಾಲಿತ ಬ್ರೇಕ್‌ಗಳನ್ನು ಅನ್ವಯಿಸಲಾಗುತ್ತದೆ. ಕ್ರಮೇಣ ರೈಲು ನಿಲ್ಲುತ್ತದೆ. ಆ ನಂತ್ರ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಭಾರತದಲ್ಲಿ ಒಟ್ಟು 22,593ಕ್ಕೂ ಹೆಚ್ಚು ರೈಲುಗಳು ಚಲಿಸುತ್ತವೆ. ಇವುಗಳಲ್ಲಿ ಸುಮಾರು 7,325 ನಿಲ್ದಾಣಗಳನ್ನು ಒಳಗೊಂಡ 13,452 ಪ್ಯಾಸೆಂಜರ್ ರೈಲುಗಳಿವೆ. ಈ ಪ್ಯಾಸೆಂಜರ್ ರೈಲುಗಳಲ್ಲಿ ಪ್ರತಿದಿನ 2.40 ಕೋಟಿ ಪ್ರಯಾಣಿಕರು ಪ್ರಯಾಣಿಸುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.