
ಗೋವಾದಲ್ಲಿ ಪೆಟ್ರೋಲ್ ತುಂಬಿಸಲು ಬಂಕ್ಗೆ ಹೋಗಬೇಕೆಂದೇನಿಲ್ಲ. ಹಲವು ಕಡೆಗಳಲ್ಲಿ ಹೀಗೆ ಬೀದಿ ಬದಿಯಲ್ಲಿ ಸಿಗುತ್ತದೆ. ಇದರಿಂದ ತುಂಬಾ ಟೈಮ್ ಸೇವ್ ಆಗುತ್ತದೆ ಎಂದು ಯೂಟ್ಯೂಬರ್ ಒಬ್ಬಾಕೆ ಮಾಡಿರುವ ವಿಡಿಯೋ ಇನ್ನಿಲ್ಲದಂತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ವೈರಲ್ ಆಗುತ್ತಿರುವುದಕ್ಕೆ ಕಾರಣ, ಪೆಟ್ರೋಲ್ ಬೀದಿ ಬದಿಯಲ್ಲಿ ಸಿಗುತ್ತದೆ ಎನ್ನುವ ಕಾರಣಕ್ಕೆ ಅಲ್ಲ, ಬದಲಿಗೆ ಈಕೆ ಧರಿಸಿರುವ ಬಿಕಿನಿ ಡ್ರೆಸ್ನಿಂದಾಗಿ!
ಇಂದು ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್, ಶೇರ್ಸ್ ಪಡೆಯುವುದಕ್ಕಾಗಿ ಜೀವವನ್ನು ಪಣಕ್ಕಿಟ್ಟು ಸಾಹಸ ಮಾಡುವವರು ಬೇಕಾದಷ್ಟು ಜನರಿದ್ದಾರೆ. ಕೆಲವರು ಜೀವವನ್ನೂ ಕಳೆದುಕೊಂಡಿದ್ದಾರೆ. ರೈಲು ಬರುವಾಗ ರೀಲ್ಸ್ ಮಾಡಲು ಹೋಗಿ, ಬೆಟ್ಟದ ತುದಿಯಲ್ಲಿ ನಿಂತು, ಯಾವುದೋ ಅಪಾಯಕಾರಿ ಜಾಗಕ್ಕೆ ಹೋಗಿ, ಹರಿಯುವ ನೀರಿನ ನಡುವೆ ನಿಂತು... ಹೀಗೆ ಏನೇನೋ ಮಾಡಲು ಹೋಗಿ ಎಡವಟ್ಟು ಆಗಿದ್ದರಿಂದ ಪ್ರಾಣವನ್ನೂ ಕಳೆದುಕೊಂಡವರು ಇದ್ದಾರೆ. ಆದರೆ ಈ ಲೇಡಿ ಅಷ್ಟೊಂದು ರಿಸ್ಕ್ ತೆಗೆದುಕೊಳ್ಳಲೇ ಇಲ್ಲ. ಕ್ಯಾತಿಶ್ರೀ ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಶೇರ್ ಆಗಿದೆ. ಇವಳ ಹೆಸರು ಕ್ಯಾತಿಶ್ರೀನೋ ಅಥವಾ ಇದು ಬೇರೆಯ ಇನ್ಸ್ಟಾಗ್ರಾಮೋ ಗೊತ್ತಾಗಿಲ್ಲ. ಆದರೆ, ಬಿಕಿನಿ ಧರಿಸಿ, ಕೊರಳಲ್ಲಿ ಬೇರೆ ಕರಿಮಣಿ ಬೇರೆ ಧರಿಸಿ 'ಕು'ಖ್ಯಾತಿ ಮಾತ್ರ ಪಡೆಯುತ್ತಿದ್ದಾಳೆ!
ಆರಂಭದಲ್ಲಿ, ಸ್ಕೂಟಿಯನ್ನು ಓಡಿಸುತ್ತಾ ಬರುವ ಈಕೆ ಕೊನೆಗೆ ರಸ್ತೆ ಬದಿಯಲ್ಲಿ ನಿಂತಿದ್ದಾಳೆ. ಅಲ್ಲಿ ಅಜ್ಜನೊಬ್ಬ ಬಾಟಲಿಯಲ್ಲಿ ಇರುವ ಪೆಟ್ರೋಲ್ ಅನ್ನು ಆಕೆಯ ಗಾಡಿಗೆ ತುಂಬಿಸಿದ್ದಾನೆ. ಆಕೆ ವಿಡಿಯೋ ಮಾಡುತ್ತಿದ್ದಾಳೆ ಎಂದು ಅರಿತಿರುವ ಆ ಅಜ್ಜ, ಅಪ್ಪಿತಪ್ಪಿಯೂ ತಲೆ ಎತ್ತಿ ನೋಡಲಿಲ್ಲ. ಅಲ್ಲಿ ಅವಳು ಮಾಹಿತಿ ನೀಡುತ್ತಾ, ಗೋವಾದಲ್ಲಿ ಪೆಟ್ರೋಲ್ ಬಂಕ್ ಹುಡುಕಿ ಹೋಗುವ ಅಗತ್ಯವಿಲ್ಲ. ರಸ್ತೆಯ ಬದಿಯಲ್ಲಿಯೇ ಹೀಗೆ ಸಿಗುತ್ತದೆ. ಇದರಿಂದ ಸಾಕಷ್ಟು ಸಮಯ ಉಳಿತಾಯವಾಗುತ್ತದೆ ಎಂದಿದ್ದಾಳೆ.
ಈ ವಿಡಿಯೋ ಶೇರ್ ಮಾಡಿರುವ ಆಕೆಯ ಉದ್ದೇಶ ಈಡೇರಿದೆ. ಇದೇ ಮಾಹಿತಿಯನ್ನು ಸಾಮಾನ್ಯ ಜನ ನೀಡಿದ್ದರೆ ಖಂಡಿತವಾಗಿಯೂ ಈ ವಿಡಿಯೋ ನೂರು ಮಂದಿಯೂ ನೋಡುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ ಈಕೆಯ ಈ ವಿಡಿಯೋಗೆ ಲಕ್ಷ ಲಕ್ಷ ವ್ಯೂವ್ಸ್ ಕಂಡಿದೆ. ಸಹಸ್ರಾರು ಮಂದಿ ಕಮೆಂಟ್ ಮಾಡಿದ್ದಾರೆ. ಕಮೆಂಟಿಗರು ಪುರುಸೊತ್ತು ಮಾಡಿಕೊಂಡು ಕಮೆಂಟುಗಳಿಗೆ ರಿಪ್ಲೈ ಕೂಡ ಮಾಡಿದ್ದಾರೆ. ಅವರ ಪೈಕಿ ಹಲವರು ಈ ಯುವತಿಯನ್ನು ವಾಚಾಮಗೋಚರವಾಗಿ ಬೈದಿದ್ದಾರೆ. ನೀವು ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಿ, ಗೋವಾದ ಮರ್ಯಾದೆ ನಿನ್ನಂಥವರಿಂದಲೇ ಹೋಗುತ್ತಿದೆ ಎಂದೆಲ್ಲಾ ಬಾಯಿಗೆ ಬಂದವರಂತೆ ಕಮೆಂಟ್ ಹಾಕಿದ್ದಾರೆ. ಆದರೆ ಈ ವಿಡಿಯೋ ಅನ್ನು ಅವರು ಹಲವು ಬಾರಿ ರಿಪೀಟ್ ರಿಪೀಟ್ ನೋಡಿರಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿದೆ ಇದಕ್ಕೆ ಸಿಕ್ಕಿರುವ ವ್ಯೂವ್ಸ್.
ಪ್ರೇಮಿಗಳ ದಿನಕ್ಕೆ ಕಂಗನಾ ರಣಾವತ್ ಗುಡ್ನ್ಯೂಸ್: ಸದ್ಯ ದೀಪಿಕಾಗೆ ಆಹ್ವಾನ! ವಿಡಿಯೋ ಶೇರ್ ಮಾಡಿದ ಸಂಸದೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.