ವೈಷ್ಣೋ ದೇವಿ ಪೂಜೆಯ ಪ್ರಸಾದ ನಿಮ್ಮ ಮನೆ ಬಾಗಿಲಿಗೆ..!

By Suvarna News  |  First Published Sep 23, 2020, 3:34 PM IST

ದೇಶಾದ್ಯಂತ ಇರುವ ಯಾವುದೇ ಭಕ್ತರ ಮನೆಗೂ ಪ್ರಸಾದ ತಲುಪಿಸುವ ವ್ಯವಸ್ಥೆಯನ್ನು ದೇವಾಲಯದ ಮಂಡಳಿ ಮಾಡಿದೆ.


ಶ್ರೀ ಮಾತಾ ವೈಷ್ಣೋ ದೇವಿ ದೇವಾಲಯದ ಪ್ರಸಾದ ಇನ್ನು ಭಕ್ತರ ಮನೆ ಬಾಗಿಲಿಗೆ ತಲುಪಲಿದೆ. ದೇವಾಲಯದ ಮಂಡಳಿ ಇತ್ತೀಚೆಗಷ್ಟೇ ಪೂಜಾ ಪ್ರಸಾದವನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದೆ.

ವಿಶೇಷ ಎಂದರೆ ದೇಶಾದ್ಯಂತ ಇರುವ ಯಾವುದೇ ಭಕ್ತರ ಮನೆಗೂ ಪ್ರಸಾದ ತಲುಪಿಸುವ ವ್ಯವಸ್ಥೆಯನ್ನು ದೇವಾಲಯದ ಮಂಡಳಿ ಮಾಡಿದೆ. ಜಮ್ಮು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಹಾಗೂ ದೇವಾಲಯ ಮಂಡಳಿಯ ಅಧ್ಯಕ್ಷ ಮನೋಜ್ ಸಿನ್ಹಾ ಸೇರಿ ದೇವಾಲಯದ ಪ್ರಮುಖರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Tap to resize

Latest Videos

ಶಬರಿಮಲೆ ಯಾತ್ರಿಗಳ ಗಮನಕ್ಕೆ..! ಕೊರೋನಾ ಟೆಸ್ಟ್ ಕಡ್ಡಾಯ

ಮೂರು ಪರ್ವತಗಳ ಮಧ್ಯೆ ಇದ್ದು, ತ್ರಿಕುಟ ಎಂದೇ ಪ್ರಸಿದ್ಧವಾಗಿರುವ ಪ್ರದೇಶದಲ್ಲಿರುವ ದೇವಾಲಯಕ್ಕೆ ದೂರದ ಜನರು ಬರಲಾಗುವುದಿಲ್ಲ. ಹಾಗಾಗಿ ಪೂಜೆಯ ಪ್ರಸಾದ ಭಕ್ತರ ಮನೆಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ದೇವಾಲಯ ವಕ್ತಾರ ತಿಳಿಸಿದ್ದಾರೆ.

ದೇವಾಲಯದ ಅಧಿಕೃತ ವೆಬ್‌ಸೈಟ್ ಮೂಲಕ ಭಕ್ತರು ಪ್ರಸಾದವನ್ನು ನುಕ್ ಮಾಡಬಹುದಾಗಿದೆ. 72 ಗಂಟೆಗಳೊಳಗಾಗಿ ಪೂಜೆ ನಡೆಸಿ ಸ್ಪೀಡ್ ಪೋಸ್ಟ್ ಮೂಲಕ ಪ್ರಸಾದ ಕಳುಹಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕೇರಳ ಎಂಟ್ರಿ ಆಗ್ತಿದ್ದಾಗೆ ಸೋನು ಕೈಗೆ ಬಿತ್ತು ಸೀಲ್, ಹೋಟೆಲ್ ಹೊಕ್ಕಾಗ ಪೊಲೀಸ್ರಿಗೆ ಫೋನ್

ಈಗಾಗಲೇ ದೇವಾಲಯದಿಂದ ಸ್ಪೀಡ್ ಪೋಸ್ಟ್ ಮೂಲಕ 1500 ಪೂಜೆ ಪ್ರಸಾದಗಳನ್ನು ಕಳುಹಿಸಲಾಗಿದೆ. ಸಭೆಯಲ್ಲಿ ದೇವಾಲಯ ಮಂಡಳಿಯ  ಶ್ರೀ ರವಿ ಶಂಕರ್, ಮಾಜಿ ಡಿಜಿಪಿ ಡಾ ಅಶೋಕ್ ಬ್ಹಾನ್, ನಿವೃತ್ತ ನ್ಯಾಯಾಧೀಶ ಪರ್‌ಮೋದ್ ಕೊಹ್ಲಿ, ಕೆಕೆ ಶರ್ಮಾ, ನಿವೃತ್ತ ಮೇಜರ್ ಜನರಲ್  ಶಿವಕುಮಾರ್ ಶರ್ಮಾ, ಕೆಜಿ ಕರ್ಚು ಇದ್ದರು.

ಆಗಸ್ಟ್ 16ರಿಂದ ಪೂಜಾ ಭಕ್ತಾದಿಗಳಿಗೆ ಪ್ರವೇಶ ಅನುಮತಿ ಇದ್ದು, ಪಜಾ ಕಾರ್ಯಕ್ರಮಗಳು ನಡೆಯುತ್ತಿವೆ. ಅಗತ್ಯ ಮುಂಜಾಗೃತಾ ಕ್ರಮಗಳೊಂದಿಗೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಭಕ್ತರು ಪ್ರಸಾದವನ್ನು ಇಲ್ಲಿ ಬುಕ್ ಮಾಡಬಹುದು.

click me!