ನಮ್ಮ ದೇಶ ಸಾಕಷ್ಟು ವೈಶಿಷ್ಟತೆಯನ್ನು ಹೊಂದಿದೆ. ನಮ್ಮ ಜನರ ಆಸಕ್ತಿ ಭಿನ್ನ. ಮನೆಯೊಳಗೆ, ಮನೆ ಮೇಲೆ ಆಕರ್ಷಕ ವಸ್ತುಗಳನ್ನು ಜನರು ಅಳವಡಿಸಿ ಗಮನ ಸೆಳೆಯುತ್ತಾರೆ. ಈ ಹಳ್ಳಿ ಕೂಡ ಇದೇ ಸಾಲಿಗೆ ಸೇರುತ್ತದೆ.
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅಭಿನಯದ ಡುಂಕಿ ಚಿತ್ರ ಶೀಘ್ರವೇ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಶಾರುಖ್ ವಿಮಾನದ ರೆಕ್ಕೆ ಮೇಲೆ ಡಾನ್ಸ್ ಮಾಡ್ತಿದ್ರೆ ಅದ್ರ ಹಿಂದೆ ನೀವು ದೊಡ್ಡದೊಂದು ಫುಟ್ಬಾಲ್ ನೋಡ್ಬಹುದು. ವಾಸ್ತವದಲ್ಲಿ ಶಾರುಖ್ ಖಾನ್ ಡಾನ್ಸ್ ಮಾಡಿರುವ ವಿಮಾನದ ರೆಕ್ಕೆ ಸೆಟ್ ಅಲ್ಲ. ಅದೊಂದು ವಾಟರ್ ಟ್ಯಾಂಕ್. ಯಸ್. ನಿಮಗೆ ಅಚ್ಚರಿಯಾದ್ರೂ ಇದು ಸತ್ಯ. ನಮ್ಮ ದೇಶದಲ್ಲಿ ಭಿನ್ನ ಆಲೋಚನೆಯ ಅನೇಕ ಜನರಿದ್ದಾರೆ. ಹಾಗೆಯೇ ತನ್ನ ವಿಭಿನ್ನತೆಯಿಂದಲೇ ಪ್ರಸಿದ್ಧಿ ಪಡೆದ ಕೆಲ ಊರುಗಳಿವೆ. ಅದ್ರಲ್ಲಿ ಜಲಂಧರ್‌ನ ಉಪ್ಪಲ್ ಗ್ರಾಮ ಕೂಡ ಒಂದು. ನಾವಿಂದು ಅಲ್ಲಿನ ವಿಶೇಷಗಳು ಏನು ಎಂಬುದನ್ನು ನಿಮಗೆ ಹೇಳ್ತೇವೆ.
ಆಕರ್ಷಕ ವಾಟರ್ ಟ್ಯಾಂಕ್ (Water Tank) : ಸುಂದರವಾದ ಮನೆ ನಿರ್ಮಾಣಕ್ಕೆ ನಾವೆಲ್ಲ ತಲೆಕೆಡಿಸಿಕೊಳ್ತೇವೆ. ನೋಡೋಕೆ ಆಕರ್ಷಕವಾಗಿರಬೇಕು, ಐಷಾರಾಮಿಯಾಗಿರಬೇಕು ಎಂಬುದು ನಮ್ಮ ಆಸೆ. ಆದ್ರೆ ಪಂಜಾಬ್ ನ ಜಲಂಧರ್ ನ ಉಪ್ಪಲ್ (Uppal) ಗ್ರಾಮದ ಜನರ ಆಸಕ್ತಿ ವಿಚಿತ್ರವಾಗಿದೆ. ಇವರು ಮನೆಗಿಂತ ಮನೆ ಮೇಲೆ ನಿರ್ಮಿಸಲಾಗುವ ವಾಟರ್ ಟ್ಯಾಂಕ್ ಗೆ ಹೆಚ್ಚು ಆದ್ಯತೆ ನೀಡ್ತಾರೆ. ಹಾಗಾಗಿಯೇ ಈ ಊರಿನ ಮನೆ ಮೇಲಿರುವ ವಾಟರ್ ಟ್ಯಾಂಕ್ ನೋಡಲು ದೂರದೂರುಗಳಿಂದ ಜನರು ಬರ್ತಾರೆ. ಸಿನಿಮಾ, ಧಾರಾವಾಹಿಗಳಲ್ಲೂ ನೀವು ಈ ಹಳ್ಳಿಯನ್ನು ನೋಡ್ಬಹುದು. ಈ ಹಳ್ಳಿಯಲ್ಲಿನ ಮನೆಗಳ ವಾಟರ್ ಟ್ಯಾಂಕ್ ವಿನ್ಯಾಸ ಆಕರ್ಷಕವಾಗಿದೆ.
ಈ ದೇಶದಲ್ಲಿ ಆಫೀಸಿಗೇ ಹಲ್ಲುಜ್ಜೋ ಬ್ರಷ್ ತೆಗೆದುಕೊಂಡು ಹೋಗ್ತಾರಂತೆ! ಅದ್ಯಾಕೆ?
ಗ್ರಾಮದ ಜನರು ತಮ್ಮ ಮನೆಗಳ ಚಾವಣಿಯ ನೀರಿನ ತೊಟ್ಟಿಗಳಿಗೆ ವಿವಿಧ ಆಕಾರಗಳನ್ನು ನೀಡಿದ್ದಾರೆ. ಸಾಮಾನ್ಯವಾಗಿ ಮನೆಗಳ ಮೇಲ್ಛಾವಣಿಯ ನೀರಿನ ತೊಟ್ಟಿಗಳು ಪ್ಲಾಸ್ಟಿಕ್, ಉಕ್ಕು, ಕಬ್ಬಿಣ ಅಥವಾ ಸಿಮೆಂಟ್‌ನಿಂದ ಮಾಡಲ್ಪಟ್ಟಿರುತ್ತವೆ. ಅವುಗಳ ಆಕಾರ ದುಂಡಗೆ, ಆಯತಾಕಾರ ಅಥವಾ ಉದ್ದವಾಗಿರುತ್ತವೆ. ಆದರೆ ಈ ಗ್ರಾಮದ ಜನರು ವಾಟರ್ ಟ್ಯಾಂಕ್ ವಿನ್ಯಾಸದಲ್ಲಿ ದೊಡ್ಡ ಬದಲಾವಣೆ ತಂದಿದ್ದಾರೆ. ನೀರಿನ ತೊಟ್ಟಿಯನ್ನು ವಿಮಾನ, ಕಮಲದ ಹೂವು ಅಥವಾ ಹಡಗಿನ ಆಕಾರದಲ್ಲಿ ನಿರ್ಮಿಸಲಾಗಿದೆ. ಇವುಗಳನ್ನು ನೀರಿನ ಟ್ಯಾಂಕ್ ಎಂದು ನೀವು ನಂಬಲು ಸಾಧ್ಯವಿಲ್ಲ. ಅದೇ ವಾಟರ್ ಟ್ಯಾಂಕ್ ವಿಮಾನದ ಮೇಲೆ ನಿಂತು ಶಾರುಕ್ ಖಾನ್ ಡಾನ್ಸ್ ಮಾಡಿದ್ದಾರೆ. ಅದ್ರ ಹಿಂದೆ ಕಾಣ್ತಿರುವ ಫುಟ್ಬಾಲ್ ಕೂಡ ವಾಟರ್ ಟ್ಯಾಂಕ್ ಆಗಿದೆ.
ವಿಶ್ವದ ಅತಿ ಎತ್ತರದಲ್ಲಿ ಬಂಗೀ ಜಂಪ್ ಮಾಡಿ ಜೀವ ತೆತ್ತ ಸಾಹಸಿಗ!
ಕೆಲವರ ಮನೆಯ ನೀರಿನ ಟ್ಯಾಂಕ್ ಸಿಂಹ ಮತ್ತು ಕುದುರೆ ಆಕಾರವನ್ನು ಹೊಂದಿದೆ. ನೀವು ಎತ್ತಿನಗಾಡಿ, ಜೀಪ್ ಮೇಲೆ ಕುಳಿತ ವ್ಯಕ್ತಿ, ಸೈನಿಕ ಸೇರಿದಂತೆ ಇನ್ನೂ ಅನೇಕ ವಿನ್ಯಾಸಗಳನ್ನು ಇಲ್ಲಿ ನೋಡ್ಬಹುದು. ಮನೆ ಮೇಲೆ ಹಾಕಿರುವ ಈ ವಾಟರ್ ಟ್ಯಾಂಕ್ಸ್ ತಮ್ಮದೇ ಕಥೆ ಹೇಳುತ್ತವೆ. 1959ರಿಂದ ಇರುವ ಲಂಡನ್ (London) ವಿಮಾನವೊಂದನ್ನು ಒಂದು ವಾಟರ್ ಟ್ಯಾಂಕ್ ನೆನಪಿಸಿದ್ರೆ ಇನ್ನೊಂದು ವಾಟರ್ ಟ್ಯಾಂಕ್ ಮನೆ ಮಾಲಿಕ ಫುಟ್ಬಾಲ್ ಪ್ರೇಮಿ ಎಂಬುದನ್ನು ತೋರಿಸುತ್ತದೆ. ಇಂಗ್ಲೆಂಡ್ ನ ಟಗ್ ಆಫ್ ವಾರ್ ಕೋಚ್ ಬಗ್ಗೆ ಇನ್ನೊಂದು ವಾಟರ್ ಟ್ಯಾಂಕ್ ಕಥೆ ಹೇಳುತ್ತದೆ.
ಈ ಟ್ಯಾಂಕ್ ನಿರ್ಮಾಪಕರು ಯಾರು? : ಈ ಎಲ್ಲ ವಾಟರ್ ಟ್ಯಾಂಕ್ ಗಳನ್ನು ರಾಮ್ ಕೌಲ್ ಹಾಗೂ ಅವರ ಮಗ ಬಲವೀಂದರ್ ಕೌಲ್ ನಿರ್ಮಾಣ ಮಾಡಿದ್ದಾರೆ. ತಮ್ಮ ಕಲೆಯ ಮೂಲಕ ಈ ತಂದೆ ಹಾಗೂ ಮಗ ಈವರೆಗೆ ಮೂರು ಸಾವಿರಕ್ಕೂ ಹೆಚ್ಚು ವಾಟರ್ ಟ್ಯಾಂಕ್ ಗಳನ್ನು ನಿರ್ಮಿಸಿದ್ದಾರೆ. ಈ ಗ್ರಾಮದ ಬಹುತೇಕ ಗ್ರಾಮಸ್ಥರು ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ ಜನರು ತಮ್ಮ ಮನೆಗಳ ಮೇಲೆ ಅಂತಹ ರಚನೆಗಳನ್ನು ನಿರ್ಮಿಸಲು ಇಷ್ಟಪಡುತ್ತಾರೆ.