ಅಲಾಸ್ಕಾದ ಶೀತದಲ್ಲಿ, ಧ್ರುವ ಪ್ರದೇಶದ ಬೆಳಕಿನ ನರ್ತನದ ಎದುರು ಭಾರತೀಯ ಮೂಲದವರು ಮಾಡಿದ ಗರ್ಬಾ ನೃತ್ಯ ಅಂತರ್ಜಾಲದಲ್ಲಿ ಎಲ್ಲರ ಗಮನ ಸೆಳೆದಿದೆ.
ಭೂಮಿಯ ಮೇಲೆ ನೀಲಿ, ಹಸಿರು ಬಣ್ಣಗಳ ಬೆಳಕಿನ ನರ್ತನವನ್ನು ನೋಡಬೇಕಿದ್ದರೆ ಉತ್ತರಧ್ರುವಕ್ಕೆ ಹೋಗಬೇಕು. ನೈಸರ್ಗಿಕವಾಗಿ ಇಲ್ಲಿ ಸಂಭವಿಸುವ ಈ ವಿದ್ಯಮಾನ ವಿಶ್ವದ ಬೇರ್ಯಾವುದೇ ಭಾಗದಲ್ಲೂ ಸಂಭವಿಸದು. ಪ್ರತಿವರ್ಷ ಲಕ್ಷಾಂತರ ಜನ ಈ ವಿದ್ಯಮಾನಕ್ಕೆ ಸಾಕ್ಷಿಯಾಗಲು ಉತ್ತರಧ್ರುವಕ್ಕೆ ಭೇಟಿ ನೀಡುತ್ತಾರೆ. ಥೇಟ್ ಸಿನಿಮೀಯ ಶೈಲಿಯಲ್ಲಿ ನಡೆಯುವ ಈ ಬೆಳಕಿನ ಪ್ರದರ್ಶನವನ್ನು ವೀಕ್ಷಿಸುವುದು ಹಲವರ ಜೀವನದ ಕನಸು. ಅಷ್ಟೊಂದು ಸೊಗಸಾಗಿರುತ್ತದೆ. ಅಂತಹ ವಿದ್ಯಮಾನ ವೀಕ್ಷಿಸಿದಾಗ ಸಹಜವಾಗಿ ಖುಷಿಯಿಂದ ನಗುತ್ತ, ನೃತ್ಯ ಮಾಡೋಣ ಎನಿಸುತ್ತದೆ. ಅಂಥದ್ದೇ ಸನ್ನಿವೇಶದಲ್ಲಿ ನಮ್ಮ ಭಾರತದ ತಂಡವೊಂದು ಮಾಡಿದ ಗರ್ಬಾ ನೃತ್ಯದ ವಿಡಿಯೋ ವೈರಲ್ ಆಗಿದೆ. ಸೂರ್ಯ ಮತ್ತು ಭೂಮಿನ ನಡುವೆ ಸಂಭವಿಸುವ ವಿಶಿಷ್ಟ ಕ್ರಿಯೆಯಿಂದಾಗಿ ಇಂತಹ ಅತಿಸುಂದರ ಬೆಳಕಿನ ಪ್ರದರ್ಶನ ಏರ್ಪಡುತ್ತದೆ. ಸೂರ್ಯನಿಂದ ಹೊರಬರುವ ಶಕ್ತಿಯುತ ಅತಿಸಣ್ಣ ಕಿಡಿಯೊಂದು ಭೂಮಿಯ ಮೇಲ್ ಸ್ತರದ ವಾತಾವರಣಕ್ಕೆ ಬರೋಬ್ಬರಿ ಗಂಟೆಗೆ 72 ಮಿಲಿಯನ್ ಕಿಲೋಮೀಟರ್ ವೇಗದಲ್ಲಿ ಬಂದು ಅಪ್ಪಳಿಸುತ್ತದೆ. ಆದರೆ, ನಮ್ಮ ಭೂಗ್ರಹದ ಕಾಂತೀಯ ವಲಯ ಇದರಿಂದ ನಮ್ಮನ್ನು ಬಚಾವು ಮಾಡುತ್ತದೆ. ಭೂಮಿಯ ಆಯಸ್ಕಾಂತೀಯ ವಲಯವು ಸೂರ್ಯನ ಆ ಕಿಡಿಯನ್ನು ಧ್ರುವ ಪ್ರದೇಶದ ಕಡೆಗೆ ಎತ್ತೆಸೆಯುತ್ತದೆ. ಹೀಗಾಗಿ, ದಕ್ಷಿಣ ಮತ್ತು ಉತ್ತರ ಎರಡೂ ಧ್ರುವ ಪ್ರದೇಶಗಳಲ್ಲಿ ಬೆಳಕಿನ ಚಿತ್ತಾರ ಉಂಟಾಗುತ್ತದೆ.
ಅಲಾಸ್ಕಾದಲ್ಲಿ ಗರ್ಬಾ ನೃತ್ಯ
ಉತ್ತರದ ಬೆಳಕು (Northern Light) ಅಥವಾ ಅರೋರಾ ಬೋರಿಯಾಲಿಸ್ ಎಂದು ಈ ಬೆಳಕನ್ನು ಕರೆಯಲಾಗುತ್ತದೆ. ಈ ವಿದ್ಯಮಾನ ವೀಕ್ಷಿಸಲು ಅಲಾಸ್ಕಾ ಉತ್ತಮ ಸ್ಥಳ. ವಿಶ್ವದ ಎಲ್ಲ ಪ್ರದೇಶಗಳ ಜನ ಇದನ್ನು ವೀಕ್ಷಿಸಲು ಉತ್ತರಧ್ರುವದಲ್ಲಿರುವ ಅಲಾಸ್ಕಾಕ್ಕೆ (Alaska) ಭೇಟಿ ನೀಡುತ್ತಾರೆ. ಹೀಗೆ ಭಾರತದ ತಂಡವೊಂದು ಅಲಾಸ್ಕಾಗೆ ಭೇಟಿ ನೀಡಿದೆ. ಅಲ್ಲಿ ಬೆಳಕಿನ ಚಿತ್ತಾರ ನಡೆಯುತ್ತಿದ್ದರೆ ಇಲ್ಲಿ ಇವರ ಗರ್ಬಾ ನೃತ್ಯ (Garba Dance) ಶುರುವಾಗುತ್ತದೆ. ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಇಡೀ ವಿಶ್ವದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಗುಜ್ಜುಸ್ (Gujjus) ಅಂದರೆ ಗುಜರಾತಿಗಳು ಅಲಾಸ್ಕಾದಲ್ಲಿ ನರ್ತಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ನಮ್ಮಲ್ಲೇ ನೇತ್ರಾಣಿ ಐಲ್ಯಾಂಡ್ ಇರೋವಾಗ ಸ್ಕೂಬಾ ಡೈವಿಂಗ್‌ಗಾಗಿ ಥೈಲ್ಯಾಂಡ್‌ಗೆ ಯಾಕೆ?
ಸಂತಸದಲ್ಲಿರುವಾಗ ಅಥವಾ ಯಾವುದೇ ಭಾವನೆಗಳ ಉತ್ತುಂಗದಲ್ಲಿ ಪ್ರತಿ ವ್ಯಕ್ತಿ ತನ್ನ ದೇಸಿತನವನ್ನು (Nativity) ವ್ಯಕ್ತಪಡಿಸುತ್ತಾನೆ, ತನ್ನ ಜೀವನಶೈಲಿಯನ್ನು (Lifestyle) ಮೆರೆಯುತ್ತಾನೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಹಾಗೆಯೇ, ಈ ಮೂಲಕ ಸಂಸ್ಕೃತಿಯನ್ನು ತೋರ್ಪಡಿಸುತ್ತಾನೆ.
ಜಿಲೇಬಿ ಹಪ್ಪಳವೂ ದೊರೆತಿದ್ದರೆ…
ವಿಡಿಯೋಕ್ಕೆ ಸಾಕಷ್ಟು ಕಾಮೆಂಟ್ (Comments)ಗಳು ಬಂದಿದ್ದು, “ಗರ್ಬಾ ನೃತ್ಯ ಉತ್ತರ ಧ್ರುವದ ಬೆಳಕಿನಂತೆಯೇ ಅತಿಮುಖ್ಯʼಎಂದು ವಿಡಿಯೋಕ್ಕೆ ಕ್ಯಾಪ್ಷನ್ ನೀಡಲಾಗಿದೆ. ಇನ್ ಸ್ಟಾಗ್ರಾಮ್ (Instagram) ಖಾತೆಯಲ್ಲಿ ಇದನ್ನು ಹಂಚಿಕೊಳ್ಳಲಾಗಿದ್ದು, ಅಲಾಸ್ಕಾದ ಬೆಳಕಿನ ನರ್ತನವೂ ವಿಡಿಯೋದಲ್ಲಿ ಸೆರೆಯಾಗಿದೆ. ನರ್ತಿಸುತ್ತಿರುವ ಜನ ಜಾಕೆಟ್ ಮತ್ತು ಕ್ಯಾಪ್ ಧರಿಸಿದ್ದು, ಹಿನ್ನೆಲೆಯಲ್ಲಿ ಹಸಿರು, ನೀಲಿ ಬೆಳಕಿದ್ದರೆ ಅದರೆದುರು ಇವರ ನರ್ತನ ಕಂಡುಬರುತ್ತದೆ. ಜತೆಗೆ, ಹಿನ್ನೆಲೆಯಲ್ಲಿ “ಚೋಗಡಾʼ ಎನ್ನುವ ಹಾಡೂ ಕೇಳಿಬರುತ್ತದೆ.
ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದವರಿಗೆ ಒದ್ದು ಬುದ್ಧಿ ಕಲಿಸಿದ ಗಟ್ಟಿಗಿತ್ತಿ: ವಿಡಿಯೋ ವೈರಲ್
ಮಾರ್ಚೆ 26ರಂದು ವಿಡಿಯೋವನ್ನು ಶೇರ್ ಮಾಡಲಾಗಿದೆ. ಈಗಾಗಲೇ ಲಕ್ಷಾಂತರ ವ್ಯೂ ಗಳಿಸಿದ್ದು, ನೆಟ್ಟಿಗರು (Netizens) ಭಾರೀ ಖುಷಿಯನ್ನೂ ಹಂಚಿಕೊಂಡಿದ್ದಾರೆ. “ಜಿಲೇಬಿ, ಹಪ್ಪಳ ದೊರೆತಿದ್ದರೆ ಇನ್ನೂ ಮಜಾ ಬರುತ್ತಿತ್ತುʼ ಎಂದು ಒಬ್ಬಾತ ಹೇಳಿದ್ದರೆ, “ಗರ್ಬಾ ನೃತ್ಯಕ್ಕೆ ಒಳ್ಳೆಯ ಸ್ಥಳ, ದೇಹವೂ ಬೆಚ್ಚಗಿರುತ್ತದೆʼ ಎಂದು ಮತ್ತೊಬ್ಬರು ಹೇಳಿದ್ದಾರೆ. “ಉತ್ತರ ಧ್ರುವದ ಬೆಳಕಿನ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳುʼ ಎಂದಿದ್ದಾರೆ ಇನ್ನೊಬ್ಬರು. “ಇಂದು ಅಂತರ್ಜಾಲದಲ್ಲಿನ (Internet) ಉತ್ತಮ ವಿಡಿಯೋ ಇದುʼ ಎಂದೂ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.