ಮುಂಬೈ (Mumbai) ನಲ್ಲಿ ವಿಪರೀತ ಮಳೆ (Rain) ಕಾರಣದಿಂದ ಜನ ಸಂಚಾರ ಅಸ್ತವ್ಯಸ್ತವಾಗಿದೆ. ಈ ನಡುವೆ ಉಬರ್ (Uber)ನಲ್ಲಿ ಪ್ರಯಾಣಿಸಿದ ವ್ಯಕ್ತಿಯೊಬ್ಬರು ವಿಪರೀತ ಮಳೆಗಲ್ಲ ಊಬರ್ ಚಾರ್ಜ್ ನೋಡಿ ಬೆಚ್ಚಿಬಿದ್ದಿದ್ದಾರೆ. ಇದಕ್ಕಿಂತ ಕಡಿಮೆ ದುಡ್ಡಿನಲ್ಲಿ ಗೋವಾಕ್ಕೆ ವಿಮಾನದಲ್ಲಿ ಹೋಗ್ಬೋದಾಗಿತ್ತು ಎಂದಿದ್ದಾರೆ.
ಮಹಾನಗರಗಳಲ್ಲಿ ಮಳೆ (Rain) ಬಂದ್ರೆ ಎಲ್ರಿಗೂ ಕಿರಿಕಿರಿಯಾಗುತ್ತೆ. ಆದ್ರೆ ಓಲಾ, ಊಬರ್, ಸ್ವಿಗ್ಗಿ, ಜೊಮೆಟೋಗಳಿಗಲ್ಲ. ಯಾಕೆಂದ್ರೆ ಈ ಟ್ಯಾಕ್ಸಿ (Taxi), ಫುಡ್ ಡೆಲಿವರಿ ಆಪ್‌ಗಳು ಮಳೆ ನೆಪದಲ್ಲಿ ಹೆಚ್ಚುವರಿ ಶುಲ್ಕ ಹಾಕಿ ಜನರ ಅಸಹಾಯಕತೆಯನ್ನು ಉಪಯೋಗಿಸಿಕೊಂಡು ಚೆನ್ನಾಗಿ ದುಡ್ಡು ಮಾಡ್ತವೆ. ಮಳೆ ಬಂದಾಗ ಬೇಗ ಬೇಗನೇ ಆಫೀಸಿನಿಂದ ಮನೆಗೆ ಹೊರಡಲು, ಮಾಲ್, ಥಿಯೇಟರ್‌ನಿಂದ ಮನೆ ಸೇರಲು ಜನರು ಮುಂದಾಗುತ್ತಾರೆ. ಇದನ್ನು ತಿಳಿದುಕೊಂಡೇ ಓಲಾ, ಊಬರ್ ಕನಿಷ್ಠ ದೂರಕ್ಕೂ ಸಿಕ್ಕಾಪಟ್ಟೆ ಚಾರ್ಜ್ ಮಾಡ್ತವೆ. ಮಳೆ, ಟ್ರಾಫಿಕ್ ಜಾಮ್ ಅಂತ ಹೆಚ್ಚುವರಿ ನೂರು, ಇನ್ನೂರು ತೆಗೆದುಕೊಳ್ಳುವುದು ಸರಿ. ಆದರೆ ಮುಂಬೈನಲ್ಲಿ ಊಬರ್ (Uber) ಬಿಲ್ ನೋಡಿದ ವ್ಯಕ್ತಿ ತಲೆಸುತ್ತಿ ಬೀಳೋದೊಂದೇ ಬಾಕಿ.
ಮಳೆ ಬಂದಾಗ ಟ್ಯಾಕ್ಸಿ ಬುಕ್ ಮಾಡಿದ್ರೆ ಹೀಗೆಲ್ಲಾ ಆಗುತ್ತೆ !
ತುರ್ತು ಪರಿಸ್ಥಿತಿಯಿದ್ದಾಗ ಟ್ಯಾಕ್ಸಿಗಳು ಬಹಳ ನೆರವಿಗೆ ಬರುತ್ತವೆ. ಮೊಬೈಲ್ನಲ್ಲಿಯೇ (Mobile) ಬೇಕಾದ ವಾಹನ ಆಯ್ಕೆ ಮಾಡಿ ಹಾಯಾಗಿ ಪ್ರಯಾಣ ಮಾಡಬಹುದು. ಆದರೆ ಕೆಲವೊಮ್ಮೆ ಈ ಪ್ರಯಾಣ ಸಿಕ್ಕಾಪಟ್ಟೆ ದುಬಾರಿಯಾಗಿಬಿಡುತ್ತವೆ. ಬಸ್ನಲ್ಲಿ (Bus) ಬರೀ 20 ರೂಪಾಯಿ ಕೊಟ್ಟು ಪ್ರಯಾಣಿಸಬಹುದಾದ ದಾರಿಯಲ್ಲಿ ನೀವು 300 ಕೊಟ್ಟು ಪ್ರಯಾಣಿಸಬೇಕಾಗುತ್ತದೆ. ಹೆವಿ ಟ್ರಾಫಿಕ್ ಜಾಮ್ (Traffic Jam) ಆದರೆ ಇಂಥಹ ಸಂದರ್ಭಗಳಲ್ಲಿ ಮುಲಾಜಿಲ್ಲದೆ ಟ್ಯಾಕ್ಸಿ ಫೇರ್ ಹೆಚ್ಚಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಹಾಗಯೇ ಮಳೆ ಬಂದ ಸಂದರ್ಭದಲ್ಲೂ ಟ್ಯಾಕ್ಸಿಗಳು ಏಕಾಏಕಿ ದರವನ್ನು ಹೆಚ್ಚಿಸಿಬಿಡುತ್ತಾರೆ. ಹಾಗೆಯೇ ಮುಂಬೈನಲ್ಲಿ ವಿಪರೀತ ಮಳೆಯೆಂದು ಪ್ರಯಾಣಿಸಲು ಊಬರ್ ಬಳಸಿದ ಯುವಕ ಕೊನೆಗೆ ಬಿಲ್ ಕಂಡು ಕಕ್ಕಾಬಿಕ್ಕಿಯಾಗಿದ್ದಾನೆ.
ಮುಂಬೈನಲ್ಲಿ ಭಾರೀ ಮಳೆ, ಭೂಕುಸಿತಕ್ಕೆ 20 ಬಲಿ: ಮುಂದುವರೆದ ಕಾರ್ಯಾಚರಣೆ!
ಮುಂಬೈ (Mumbai)ನಲ್ಲಿ ಮಳೆ ಬಂದರೆ ರಸ್ತೆಯೇ ಹೊಳೆಯಂತಾಗಿ ಬಿಡುತ್ತದೆ. ಮರ, ಕಟ್ಟಡಗಳು ಉರುಳಿಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತವಾಗುತ್ತದೆ. ಜನರು ಬೇಗ ಮನೆ ಸೇರಲು ಹಾತೊರೆಯುತ್ತಾರೆ. ಸಿಕ್ಕಿದ ಟ್ಯಾಕ್ಸಿ, ಬಸ್ ಹಿಡಿದು ಮನೆ ಸೇರುತ್ತಾರೆ. ಹಾಗೆಯೇ ಸಿಕ್ಕಾಪಟ್ಟೆ ಮಳೆಯೆಂದು ಶ್ರವಣ್ ಕುಮಾರ್ ಎಂಬವರು ಉಬರ್ ಕ್ಯಾಬ್ ಬುಕ್ ಮಾಡಿದ್ದಾರೆ. ಅವರು ಮನೆ ತಲುಪಿದಾಗ ಪಾವತಿಸಿರುವ ಮೊತ್ತ ಬರೋಬ್ಬರಿ 3,000 ರೂ.
Uber Charges Mumbai Man Rs 3,000 For Ride Home Amid Heavy Rain
Flight to goa is cheaper than my ride home pic.twitter.com/r3JLGAwQxc
— Shravankumar Suvarna (@ShravanSuvarna)ಮುಂಬೈ ಒಳಗಡೆ ಪ್ರಯಾಣಕ್ಕೆ ಭರ್ತಿ 3 ಸಾವಿರ ರೂ. ಚಾರ್ಜ್ ಮಾಡಿದ ಊಬರ್
ಶ್ರವಣಕುಮಾರ್ ಸುವರ್ಣ ಅವರು ಟ್ವಿಟರ್‌ನಲ್ಲಿ ಉಬರ್ ಪ್ರಯಾಣದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ, ಪೋಸ್ಟ್ ಊಬರ್ ಅಪ್ಲಿಕೇಶನ್‌ನ ಸ್ಕ್ರೀನ್‌ಶಾಟ್ ಅನ್ನು ತೋರಿಸುತ್ತದೆ. ಸುವರ್ಣ ಅವರು ರಾತ್ರಿ 7 ಗಂಟೆಗೆ ದಾದರ್‌ನಿಂದ ಮನೆಗೆ ಕ್ಯಾಬ್ ರೈಡ್ ಬುಕ್ ಮಾಡಲು ಪ್ರಯತ್ನಿಸುತ್ತಿದ್ದರು. ಆದರೆ ನಿರಂತರ ಮುಂಬೈ ಮಳೆಯಿಂದಾಗಿ, 50 ಕಿಮೀ ರೈಡರ್ ಸೇವೆಗಾಗಿ 3,000 ರೂ.ಗಿಂತ ಹೆಚ್ಚಿನ ಮೊತ್ತವನ್ನು ನೀಡಬೇಕಾಯಿತು ಎಂದು ಬೆಲೆ ಏರಿಕೆ ತೋರಿಸಿದೆ. ನನ್ನ ಮನೆಗೆ ಹೋಗುವುದಕ್ಕಿಂತ ಗೋವಾದ ವಿಮಾನವೇ ಚೀಪರ್ ಆಗಿದೆ ಎಂದು ಕ್ಯಾಪ್ಶನ್ನಲ್ಲಿ ಬರೆಯಲಾಗಿದೆ.
ನಮ್ಮ ಕುಟುಂಬವನ್ನು ಹೆದ್ದಾರಿಯಲ್ಲಿಯೇ ಬಿಟ್ಟ ಓಲಾ ಕ್ಯಾಬ್, ಪ್ರಯಾಣದ ಕಹಿ ಅನುಭವ ಹಂಚಿಕೊಂಡ ಬೆಂಗಳೂರು ವ್ಯಕ್ತಿ!
ಈ ಟ್ವೀಟ್ಗೆ 3,100 ಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು ನೆಟಿಜನ್‌ಗಳು ಕಾಮೆಂಟ್‌ಗಳ ಬಾಕ್ಸ್‌ನಲ್ಲಿ ತಮ್ಮ ಅನುಭವವನ್ನೆಲ್ಲ ತಿಳಿಸಿದ್ದಾರೆ. ಕೆಲವರು ತಮ್ಮ ಅಪ್ಲಿಕೇಶನ್-ಕ್ಯಾಬ್ ಸಂಕಟಗಳ ಬಗ್ಗೆ ಬರೆಯಲು ಈ ಫನ್ನಿ ಮೊಮೆಂಟ್ ಬಳಸಿಕೊಂಡಿದ್ದರು.ಹೆಚ್ಚಿದ ಬೇಡಿಕೆಯಿಂದಾಗಿ ದರಗಳು ಬಹಳಷ್ಟು ಹೆಚ್ಚಾಗಿದೆ ಎಂದು ಅನೇಕರು ಇದೇ ರೀತಿಯ ಅನುಭವಗಳನ್ನು ಹಂಚಿಕೊಳ್ಳುವುದರೊಂದಿಗೆ ಟ್ವೀಟ್ ವೈರಲ್ ಆಗಿದೆ. UBERXL ದರದೊಂದಿಗೆ ನೀವು ನಾಸಿಕ್‌ನ ಹೊರಭಾಗದಲ್ಲಿ ಯೋಗ್ಯವಾದ 1bhk ಮನೆಯನ್ನು ಪಡೆಯಬಹುದು ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.