ಅಪಘಾತವಾದಾಗ ರಸ್ತೆ ಸರಿಯಿಲ್ಲ ಅಂತಾ ಬೊಬ್ಬಿಡ್ತೇವೆ. ಹಾಗಂತ ಚಾಲನೆ ಮಾಡೋವಾಗ ನಿಯಮಗಳನ್ನು ಪಾಲಿಸೋದಿಲ್ಲ. ಕೆಟ್ಟ ವಾಹನ ಚಾಲನೆ ಕೂಡ ಅಪಘಾತಕ್ಕೆ ಕಾರಣ. ಯಾವ ದೇಶ ಕೆಟ್ಟ ಚಾಲಕರನ್ನು ಹೊಂದಿದೆ ಎಂಬುದು ನಿಮಗೆ ಗೊತ್ತಾ?
ವಾಹನ ಚಲಾಯಿಸುವಾಗ ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಬಹುತೇಕರು ಈ ನಿಯಮಗಳನ್ನು ಮುರಿಯೋದ್ರಲ್ಲಿ ಮುಂದಿರುತ್ತಾರೆ. ನಿಯಮಗಳು ರಸ್ತೆ ಪಕ್ಕದ ಫಲಕದ ಮೇಲೆ ಮಾತ್ರ ಇರುತ್ತದೆಯೇ ಹೊರತು ಅದನ್ನು ಪಾಲಿಸುವವರು ಬಹಳ ಅಪರೂಪ. ವಾಹನ ಚಾಲನೆಗೆ ಅನುಮತಿ ನೀಡುವ ಮೊದಲು ನಡೆಯುವ ಪರೀಕ್ಷೆ ವೇಳೆಯಲ್ಲಿ ಸಂಚಾರಿ ನಿಯಮದ ಬಗ್ಗೆ ಪರೀಕ್ಷೆ ನಡೆಯುತ್ತದೆ. ಜನರು ಅದ್ರಲ್ಲೂ ಗೋಲ್ ಮಾಲ್ ಮಾಡಿ ಪರೀಕ್ಷೆ ಪಾಸ್ ಆಗಿರ್ತಾರೆ. ಹಾಗಾಗಿ ಅನೇಕರಿಗೆ ಸಂಚಾರಿ ನಿಯಮ ಏನಿದೆ ಎನ್ನುವುದೇ ತಿಳಿದಿರೋದಿಲ್ಲ. ಭಾರತದಲ್ಲಿ ಈಗಿನ ದಿನಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಮಿತಿ ಮೀರುತ್ತಿದೆ. ಇದಕ್ಕೆ ಕಳಪೆ ರಸ್ತೆ ಮಾತ್ರ ಕಾರಣವಲ್ಲ. ವಾಹನ ಸವಾರರ ನಿರ್ಲಕ್ಷ್ಯ ಕೂಡ ಕಾರಣ.
ಭಾರತ (India) ದಲ್ಲಿ ಸೀಟ್ ಬೆಲ್ಟ್ (Seat Belt) ಹಾಕದೆ ಕಾರು ಚಲಾಯಿಸುವುದು, ರಾಂಗ್ ರೂಟ್ ನಲ್ಲಿ ವಾಹನ ಚಾಲನೆ ಹಾಗೂ ನಿಗದಿತ ಸ್ಪೀಡ್ ಗಿಂತ ವೇಗವಾಗಿ ವಾಹನ ಓಡಿಸುವುದು, ಓವರ್ ಟೇಕ್ ಮಾಡವುದ್ರಿಂದ ಹೆಚ್ಚು ಅಪಘಾತ (Accident) ವಾಗ್ತಿದೆ. ಭಾರತದಲ್ಲಿ ಪ್ರಸ್ತುತ 15 ಕೋಟಿಗೂ ಅಧಿಕ ಕಾರು (car) ಗಳಿವೆ. ಕೆಟ್ಟ ಚಾಲನೆ ಬಗ್ಗೆ ಸಮೀಕ್ಷೆಯೊಂದು ನಡೆದಿದೆ. ಈ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಯಾವ ದೇಶ (Country) ಯಾವ ಸ್ಥಾನದಲ್ಲಿದೆ ಎನ್ನುವ ವಿವರ ಇಲ್ಲಿದೆ.
ಈ ದ್ವೀಪಕ್ಕೆ ಮಹಿಳೆಯರು ಕಾಲಿಡುವಂತಿಲ್ಲ..!
ಈ ವರದಿಯಲ್ಲಿ ಏನಿದೆ? : ಉಬರ್, 'ರೈಡಿಂಗ್ ವಿತ್ ಇಂಟರ್‌ಸಿಟಿ ಹೆಸರಿನ ವಾರ್ಷಿಕ ಪ್ರಯಾಣ ಸೂಚ್ಯಂಕ (Uber Annual Travel Index) ವನ್ನು ಬಿಡುಗಡೆ ಮಾಡಿದೆ. ಚಾಲಕರ ಚಾಲನೆ ವಿಧಾನದ ಮೇಲೆ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಅತ್ಯುತ್ತಮ ಚಾಲಕರು ಹಾಗೂ ಕೆಟ್ಟ ಚಾಲಕರು ಎಂಬ ಆಧಾರದ ಮೇಲೆ ಅಂಕವನ್ನು ನೀಡಲಾಗಿದೆ.
ವರದಿಯಲ್ಲಿ ಕೆಲ ವಿಷ್ಯಗಳನ್ನು ಉಲ್ಲೇಖನ ಮಾಡಲಾಗಿದೆ. ಅದ್ರಲ್ಲಿ ಚಾಲನಾ ಕೌಶಲ್ಯಗಳು, ರಸ್ತೆಯ ಸ್ಥಿತಿ, ವೇಗದ ಮಿತಿ, ಸಂಚಾರ ಜಾಗೃತಿ, ಸಂಚಾರ ನಿಯಮಗಳ ಪಾಲನೆ, ರಕ್ತದ ಆಲ್ಕೋಹಾಲ್ ಮಿತಿಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.
ಕೆಟ್ಟ ಚಾಲಕರ ಪಟ್ಟಿಯಲ್ಲಿ ಯಾವ ದೇಶ ಮೊದಲ ಸ್ಥಾನದಲ್ಲಿದೆ ಗೊತ್ತಾ? : ಈ ವರದಿಯ ಪ್ರಕಾರ, ಥೈಲ್ಯಾಂಡ್ ವಿಶ್ವದ ಅತ್ಯಂತ ಕೆಟ್ಟ ಚಾಲಕರನ್ನು ಹೊಂದಿರುವ ದೇಶವಾಗಿದೆ. ಕೆಟ್ಟ ಡ್ರೈವಿಂಗ್‌ನಲ್ಲಿ ಭಾರತ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಭಾರತದಲ್ಲಿ ನಿಯಮಗಳನ್ನು ಪಾಲಿಸಬೇಕಾದ ಚಾಲಕರ ಮನೊಭಾವ ಅತ್ಯಂತ ಕಳಪೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಭಾರತದಲ್ಲಿ ಜನರು ಸಂಚಾರಿ ನಿಯಮಗಳನ್ನು ಕೆಲವರು ಪಾಲನೆ ಮಾಡೋದಿಲ್ಲ. ಮತ್ತೆ ಕೆಲವರು ಕಟ್ಟುನಿಟ್ಟಾಗಿ ಪಾಲಿಸುವುದಿಲ್ಲವೆಂದು ವರದಿಯಲ್ಲಿ ಹೇಳಲಾಗಿದೆ. ಇನ್ನು ಕೆಟ್ಟ ಚಾಲಕರ ಪಟ್ಟಿಯಲ್ಲಿ ಪೆರು ಎರಡನೇ ಸ್ಥಾನದಲ್ಲಿದೆ. ಲೆಬನಾನ್ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
ತಾಜ್ ಮಹಲ್ ಮ್ಯಾಜಿಕಲ್ ಸೌಂದರ್ಯ ಕಣ್ತುಂಬಿಕೊಳ್ಳಲು ಮೆಹತಾಬ್ ಬಾಗ್‌ಗೆ ಭೇಟಿ ನೀಡಿ
ಅತ್ಯುತ್ತಮ ಚಾಲಕರನ್ನು ಹೊಂದಿದೆ ಈ ದೇಶ : ಮೊದಲೇ ಹೇಳಿದಂತೆ ಪಟ್ಟಿಯಲ್ಲಿ ಕೆಟ್ಟ ಹಾಗೂ ಉತ್ತಮ ಚಾಲಕರನ್ನು ಹೊಂದಿರುವ ದೇಶಗಳ ಹೆಸರಿದೆ. ಅತ್ಯುತ್ತಮ ಚಾಲಕರನ್ನು ಹೊಂದಿರುವ ದೇಶದ ಪಟ್ಟಿಯಲ್ಲಿ ಜಪಾನ್ ಮೊದಲ ಸ್ಥಾನದಲ್ಲಿದೆ. ವಿಶ್ವದ ಅತ್ಯುತ್ತಮ ಚಾಲಕರು ಜಪಾನ್‌ನವರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜಪಾನ್ ಚಾಲಕರು, ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಇನ್ನು ಉತ್ತಮ ಚಾಲಕರನ್ನು ಹೊಂದಿರುವ ಪಟ್ಟಿಯಲ್ಲಿ ನೆದರ್ಲ್ಯಾಂಡ್ಸ್ ಎರಡನೇ ಸ್ಥಾನದಲ್ಲಿದೆ. ವರದಿ ಪ್ರಕಾರ, ನಾರ್ವೆಯಲ್ಲೂ ಚಾಲಕರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಾರೆ. ನಾರ್ವೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನು ಉತ್ತಮ ಚಾಲಕರನ್ನು ಹೊಂದಿರುವ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಎಸ್ಟೋನಿಯಾಕ್ಕೆ ಹೋದ್ರೆ ಸ್ವೀಡನ್ ಐದನೇ ಸ್ಥಾನದಲ್ಲಿದೆ.