ಕಾಡಲ್ಲೆಂಥ ಹನಿಮೂನ್? ಯಾಕೋ ಇದೇ ಹೊಸ ಟ್ರೆಂಡ್ ನೋಡಿ

By Suvarna NewsFirst Published Jan 8, 2024, 4:42 PM IST
Highlights

ಯುವಜನರ ಮನಸ್ಥಿತಿ ಬದಲಾಗ್ತಿದೆ. ಅವರ ಆಲೋಚನೆ, ಅವರ ಆಯ್ಕೆಗಳಲ್ಲಿ ಸಾಕಷ್ಟು ಭಿನ್ನತೆಯನ್ನು ನಾವು ಕಾಣ್ಬಹುದು. ವಿದೇಶಕ್ಕೆ, ಸಮುದ್ರ ಪ್ರದೇಶಕ್ಕೆ ಹನಿಮೂನ್ ಗೆ ಹೋಗ್ತಿದ್ದ ಕಾಲ ಈಗಿಲ್ಲ. ಈಗೇನಿದ್ರೂ ಕಾಡು ಕರೆಯುತ್ತಿದೆ. 
 

ಮದುವೆ, ಹನಿಮೂನ್ ಬಗ್ಗೆ ಯುವಕರು ಮೊದಲೇ ಪ್ಲಾನ್ ಮಾಡಿರ್ತಾರೆ. ಹನಿಮೂನ್ ಜೋಡಿಯನ್ನು ಮತ್ತಷ್ಟು ಹತ್ತಿರಕ್ಕೆ ತರುವ ಸಮಯ. ಹಾಗಾಗಿಯೇ ಹನಿಮೂನ್ ಗೆ ಆಯ್ಕೆ ಮಾಡುವ ಸ್ಥಳ ಕೂಡ ಇಲ್ಲಿ ಪ್ರಾಮುಖ್ಯತೆ ಪಡೆಯುತ್ತದೆ. ಹಿಂದೆ ಜನರು ಹನಿಮೂನ್ ಗೆಂದೇ ಪ್ರಸಿದ್ಧಿ ಪಡೆದಿರುವ ಗೋವಾ, ಊಟಿ, ಶಿಮ್ಲಾ ಹಾಗೂ ವಿದೇಶದ ಕೆಲ ಪ್ರದೇಶಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದ್ರೀಗ ಯುವಜನರ ಆಲೋಚನೆ ಬದಲಾಗಿದೆ. ಹನಿಮೂನ್ ಪ್ರಸಿದ್ಧಿ ಸ್ಥಳಗಳಲ್ಲಿ ಜನರ ಸಂಖ್ಯೆ ಹೆಚ್ಚು. ಇದ್ರಿಂದ ಒಬ್ಬರನ್ನೊಬ್ಬರು ಅರಿಯೋದು ಕಷ್ಟ ಎನ್ನುವ ಸತ್ಯವನ್ನು ಯುವಜನತೆ ಅರಿತಿದ್ದಾರೆ. ಯುವಜನರ ಹನಿಮೂನ್ ಸ್ಫಾಟ್ ಈಗ ಬದಲಾಗಿದೆ. ನಾಡಿನಿಂದ ಕಾಡಿಗೆ ಹೋಗಲು ಯುವಜೋಡಿ ಹೆಚ್ಚು ಇಷ್ಟಪಡ್ತಿದ್ದಾರೆ. 

ಭಾರತ (India) ಪ್ರವಾಸೋದ್ಯಮ 2022 ಮಾಹಿತಿ ವರದಿಯಲ್ಲೂ ಇದೇ ವಿಷ್ಯವನ್ನು ಉಲ್ಲೇಖಿಸಲಾಗಿದೆ.  ಈಗ ಹೆಚ್ಚಿನ ಜನರು ಪ್ರವಾಸೋದ್ಯಮ (Tourism) ಕ್ಕಾಗಿ ಪ್ರಕೃತಿಯ ನಡುವೆ ಹೋಗಲು ಬಯಸುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಕಾಡು ಜನರ ಅತ್ಯುತ್ತಮ ಹನಿಮೂನ್ (Honeymoon) ಜಾಗವಾಗಲು ಕಾರಣವೇನು ಎಂಬ ವರದಿ ಇಲ್ಲಿದೆ.

ಮಾಲ್ಡೀವ್ಸ್‌ ಪ್ರವಾಸದಲ್ಲಿ ಭಾರತೀಯರದ್ದೇ ಮೇಲುಗೈ: 2023ರಲ್ಲಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದು 17 ಲಕ್ಷ ಜನ!

ಹನಿಮೂನ್ ಸ್ಫಾಟ್ ಆಗ್ತಿದೆ ಕಾಡು :
ಶಾಂತ ವಾತಾವಣ :
ಜನವರಿಯಲ್ಲಿ ಮದುವೆಯಾಗುವವರ ಸಂಖ್ಯೆ ಸಾಮಾನ್ಯವಾಗಿ ಹೆಚ್ಚಿರುತ್ತದೆ. ಈ ಸಮಯದಲ್ಲಿ ವಾತಾವರಣ ಕಲುಷಿತವಾಗೋದು ಹೆಚ್ಚು. ಶುದ್ಧ ವಾತಾವರಣ ಹಾಗೂ ಶಾಂತ ಸ್ಥಳವನ್ನು ಅರಸುವ ಜೋಡಿ ಕಾಡಿನತ್ತ ಮುಖ ಮಾಡ್ತಾರೆ. ಕಾಡಿನ ವಾತಾವರಣ ಶಾಂತವಾಗಿರುವ ಕಾರಣ ಅವರು ಗುಣಮಟ್ಟದ ಸಮಯವನ್ನು ಕಳೆಯಬಹುದು. 

ಅದ್ರಲ್ಲೂ ಬಹುತೇಕರು ಜಿಮ್ ಕಾರ್ಬೆಟ್ ಗೆ ಹೋಗಲು ಬಯಸ್ತಾರೆ. ಉತ್ತರಾಖಂಡದಲ್ಲಿರುವ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್, ಯುವಜೋಡಿಯ ಅಚ್ಚುಮೆಚ್ಚಿನ ಸ್ಥಳವಾಗಿದೆ. ಇಲ್ಲಿ ಒಂದೆರಡು ದಿನ ಉಳಿದು, ಆರಾಮವಾಗಿ ಪ್ರಾಣಿಗಳ ವೀಕ್ಷಣೆ ಮಾಡಬಹುದು. ಅಲ್ಲದೆ ಮಾಲಿನ್ಯ, ಶಬ್ದ, ಗಲಾಟೆ ಮತ್ತು ಗದ್ದಲದಿಂದ ಪಾರಾಗಬಹುದು.

ಈ ರೈಲು ಏರೋಪ್ಲೇನ್‌ಗಿಂತ ವೇಗವಾಗಿ ಓಡಬಲ್ಲದು!

ಜಂಗಲ್ ಸಫಾರಿಗೆ ಹೆಚ್ಚಿದ ಕ್ರೇಜ್ : ಮದುವೆಯ ಆಯಾಸವನ್ನು ಹೋಗಲಾಡಿಸಿ, ಹನಿಮೂನ್ನ ಸುಂದರ ಕ್ಷಣವನ್ನು ಸವಿಯಲು ಪ್ರಕೃತಿ ಉತ್ತಮ ಸ್ಥಳವಾಗಿದೆ. ಹನಿಮೂನ್ ಸದಾ ನೆನಪಿನಲ್ಲಿರಲಿ ಎನ್ನುವ ಕಾರಣಕ್ಕೆ ಯುವ ಜೋಡಿ ಸಾಹಸಕ್ಕೆ ಕೈ ಹಾಕುತ್ತಾರೆ. ಟ್ರಕ್ಕಿಂಗ್, ಆನೆ ಸಫಾರಿ, ಜಂಗಲ್ ಸಫಾರಿ, ಬೋಟಿಂಗ್ ಸೇರಿದಂತೆ ಪ್ರಕೃತಿ ಮಧ್ಯೆ ಸಂಗಾತಿ ಜೊತೆ ಪ್ರೀತಿಯ ಕ್ಷಣಗಳನ್ನು ಕಳೆಯಲು ಇಷ್ಟಪಡ್ತಾರೆ. ಇದೇ ಕಾರಣಕ್ಕೆ ಕಾಡಿಗೆ ಬರುವ ಹನಿಮೂನ್ ಜೋಡಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ.

ರೆಸಾರ್ಟ್ ನಲ್ಲಿ ಹೊಸ ಜೀವನದ (New Life) ಆನಂದ : ಪ್ರಕೃತಿ (Nature) ಮಧ್ಯೆ ಹೊಸ ಜೀವನ ಶುರು ಮಾಡುವುದರ ಸಂತೋಷ ಭಿನ್ನವಾಗಿರುತ್ತದೆ. ಜಂಗಲ್ ರೆಸಾರ್ಟ್, ನವ ದಂಪತಿಯನ್ನು ಆಕರ್ಷಿಸುತ್ತಿದೆ. ಇದ್ರಿಂದ ಭಾರತೀಯ ಪ್ರವಾಸೋದ್ಯಮಕ್ಕೂ ಲಾಭವಾಗ್ತಿದೆ. ಕಬಿನಿ, ದುಧ್ವಾ, ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ, ನಾಗರಹೊಳೆ, ಸಾತ್ಪುರ ಮತ್ತು ಕನ್ಹಾ ರಾಷ್ಟ್ರೀಯ ಉದ್ಯಾನವನಗಳು ಜಂಗಲ್ ಟೂರಿಸಂನಲ್ಲಿ ಮುಂದಿವೆ. ಈ ಸ್ಥಳಗಳು ಹೆಚ್ಚು ಬೇಡಿಕೆ ಇರುವ ಜಾಗಗಳಾಗಿದ್ದು, ಯುವಜನರನ್ನು ಆಕರ್ಷಿಸುತ್ತಿದೆ. 

ಸೆಲೆಬ್ರಿಟಿಗಳಿಂದ ಪ್ರೇರಣೆ : ಸೆಲೆಬ್ರಿಟಿಗಳು ಮಾಡಿದ ಕೆಲಸಕ್ಕೆ ಅನೇಕರು ಪ್ರೇರಿತರಾಗ್ತಾರೆ. ಈಗಿನ ದಿನಗಳಲ್ಲಿ ಸೆಲೆಬ್ರಿಟಿಗಳು ಕೂಡ ಕಾಡಿನತ್ತ ಮುಖ ಮಾಡಿದ್ದಾರೆ. ಬಾಲಿವುಡ್ (Bollywood), ಸ್ಯಾಂಡಲ್ವುಡ್ (Sandalwood) ಸೇರಿದಂತೆ ಎಲ್ಲ ಭಾಗದ ಸಿನಿ ತಾರೆಯರು ಜಂಗಲ್ ಸಫಾರಿ ನಡೆಸುತ್ತಿದ್ದಾರೆ. ಕಾಡಿನ ಫೋಟೋ, ಕೈ ಕೈ ಹಿಡಿದು ಓಡಾಡಿದ ವಿಡಿಯೋ ಹಂಚಿಕೊಳ್ತಿದ್ದಾರೆ. ಇದು ಕೂಡ ಸಾಮಾನ್ಯ ಜನರನ್ನು ಸೆಳೆಯುತ್ತಿದೆ. ಸೆಲೆಬ್ರಿಟಿಗಳಂತೆ ನವದಂಪತಿ ಕೂಡ ಕಾಡಿನ ಮಜ ಅನುಭವಿಸಲು ಮುಂದಾಗ್ತಿದ್ದಾರೆ. 

click me!