Travel Rules : ರೈಲಿನಿಂದ ಇಳಿಯೋವಾಗ ಬೆಡ್ ಶೀಟ್ ಇದ್ಯಾ ಚೆಕ್ ಮಾಡಿ..ಮಿಸ್ ಆದ್ರೆ ಜೈಲೂಟ ಸಿಗ್ಬಹುದು..!

By Suvarna News  |  First Published Mar 4, 2024, 12:34 PM IST

ಪ್ರಯಾಣಿಕರ ಅನುಕೂಲಕ್ಕೆ ರೈಲ್ವೆ ಇಲಾಖೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದೇ ರೀತಿ ತಪ್ಪಾಗದಂತೆ ನೋಡಿಕೊಳ್ಳಲು ಕೆಲ ನಿಯಮ ಮಾಡಿದೆ. ರೈಲಿನ ಈ ರೂಲ್ಸ್ ಮುರಿದ್ರೆ ಶಿಕ್ಷೆ ಆಗ್ಬಹುದು ಎಚ್ಚರ. 
 


ಪ್ರತಿ ವರ್ಷ ಭಾರತದ ರೈಲಿನಲ್ಲಿ ಲಕ್ಷಾಂತರ ಮಂದಿ ಪ್ರಯಾಣ ಬೆಳೆಸುತ್ತಾರೆ. ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಅನೇಕ ವ್ಯವಸ್ಥೆಗಳನ್ನು ಮಾಡುತ್ತದೆ. ನೀವು ಸಾಮಾನ್ಯ ಬೋಗಿಯಲ್ಲಿ ಪ್ರಯಾಣ ಬೆಳೆಸುತ್ತಿದ್ದರೆ ನಿಮಗೆ ಬೆಡ್ ಶೀಟ್ ಹಾಗೂ ದಿಂಬಿನ ಅವಶ್ಯಕತೆ ಇರೋದಿಲ್ಲ. ಎಸಿ ಕೋಚ್ ನಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ ಬೆಡ್ ಶೀಟ್ ಅವಶ್ಯಕತೆ ಇರುತ್ತದೆ. ರೈಲ್ವೆ ಇಲಾಖೆ, ಎಸಿ ಕ್ಲಾಸ್ ನಲ್ಲಿ ಪ್ರಯಾಣಿಸುವವರಿಗೆ ಮಾತ್ರ ಬೆಡ್ ರೋಲ್ ನೀನೀಡುತ್ತದೆ. ರೈಲ್ವೆ ಒದಗಿಸಿದ ಬೆಡ್‌ರೋಲ್‌ನಲ್ಲಿ ಎರಡು ಬೆಡ್ ಶೀಟ್, ಕಂಬಳಿ, ದಿಂಬು, ದಿಂಬಿನ ಕವರ್ ಇರುತ್ತದೆ. ಕೆಲ ರೈಲಿನ ಬೆಡ್ ರೋಲ್ ನಲ್ಲಿ ಟವೆಲ್ ಕೂಡ ಇರುತ್ತದೆ. ಒಂದ್ವೇಳೆ ನಿಮ್ಮ ಸೀಟ್ ನಲ್ಲಿ ಬೆಡ್ ಶೀಟ್ ಇಲ್ಲ ಎಂದಾಗ ಅಥವಾ ಅದು ಕೊಳಕಾಗಿದ್ದರೆ ನೀವು ಅದನ್ನು ಪಡೆಯಬಹುದು ಮತ್ತು ಬದಲಿಸಿಕೊಳ್ಳುವ ವ್ಯವಸ್ಥೆ ಇದೆ. ಹಾಗೆಯೇ ಬೆಡ್ ಶೀಟ್ ಮತ್ತು ದಿಂಬಿನ ಬಗ್ಗೆ ಕೆಲ ವಿಷ್ಯಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. 

ಹೊಟೇಲ್ ಗೆ ಹೋದಾಗ ಅಲ್ಲಿರುವ ಶಾಂಪೂ, ಸೋಪ್ ಗಳನ್ನು ಬ್ಯಾಗಿಗೆ ಹಾಕಿಕೊಳ್ಳುವಂತೆ ಎಸಿ (AC )ಕೋಚ್ ನಲ್ಲಿ ಪ್ರಯಾಣಿಸುವ ವೇಳೆ ದಿಂಬು, ಬೆಡ್ ಶೀಟ (Bed Sheet) ನ್ನು ಬ್ಯಾಗ್ ಗೆ ಹಾಕಿಕೊಂಡು ಮನೆಗೆ ತರುವವರಿದ್ದಾರೆ. ಮೊದಲು ರೈಲ್ವೆ (Railway) ಇಲಾಖೆ ಇಂಥ ಪ್ರಯಾಣಿಕರ ವಿರುದ್ಧ ಯಾವುದೇ ಕ್ರಮಕೈಗೊಳ್ಳುತ್ತಿರಲಿಲ್ಲ. ಆದ್ರೀಗ ಈ ಬಗ್ಗೆ ಕಠಿಣ ನಿಯಮವನ್ನು ಜಾರಿಗೆ ತಂದಿದೆ.

Tap to resize

Latest Videos

VIRAL VIDEO: ಬಾಹ್ಯಾಕಾಶ ನೌಕೆ ಭೂಮಿ ಪ್ರವೇಶಿಸುವಾಗ ಹೇಗಿರುತ್ತೆ? ಮೈನವಿರೇಳಿಸೋ ವೀಡಿಯೋ ನೋಡಿ

ಬೇರೆ ಊರಿಗೆ ಪ್ರಯಾಣ ಬೆಳೆಸುವವರು ನೀವಾಗಿದ್ದು, ರೈಲಿನಲ್ಲಿ ನೀಡಿದ ಬೆಡ್ ಶೀಟ್ ಮುಂದೆ ಪ್ರಯೋಜನಕ್ಕೆ ಬರುತ್ತೆ ಅಂತಾ ಬ್ಯಾಗ್ ಗೆ ಹಾಕಿಕೊಳ್ಳಬೇಡಿ. ಇದು ರೈಲ್ವೆ ನಿಯಮಕ್ಕೆ ವಿರುದ್ಧ. ಒಂದ್ವೇಳೆ ನೀವು ತಪ್ಪಾಗಿ ನಡೆದುಕೊಂಡಲ್ಲಿ ನಿಮಗೆ ದಂಡ ವಿಧಿಸಲಾಗುತ್ತದೆ. ಕೆಲವೊಮ್ಮೆ ಜೈಲು ಸೇರುವ ಅಪಾಯವಿದೆ.

ನೀವು ರೈಲಿನ ವಸ್ತುಗಳನ್ನು ಕದ್ದಿದ್ದು ಅದು ಸಾಭಿತಾದ್ರೆ ನಿಮಗೆ 5 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದು. ಪ್ರಯಾಣಿಕರ ವಿರುದ್ಧ ರೈಲ್ವೆ ಆಸ್ತಿ ಕಾಯಿದೆ 1966 ರ ಪ್ರಕಾರ ಕ್ರಮ ಕೈಗೊಳ್ಳಬಹುದು. ಈ ಕಾಯ್ದೆಯಡಿ ಗರಿಷ್ಠ 5 ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.

ಪ್ರಯಾಣಿಕರು ರೈಲನಿಂದ ಇಳಿಯುವ ಮೊದಲು ಬೆಡ್ ರೋಲ್ ನ ಎಲ್ಲ ವಸ್ತು ಇದ್ಯೆ ಎಂದು ಚೆಕ್ ಮಾಡಬೇಕು. ಅದನ್ನು ಅಟೆಂಡರ್ ಕಲೆಕ್ಟ್ ಮಾಡ್ತಾರೆ. ಒಂದ್ವೇಳೆ ನಿಮ್ಮ ಸೀಟ್ ನಲ್ಲಿರುವ ಬೆಡ್ ಶೀಟ್ ಅಥವಾ ದಿಂಬನ್ನು ಬೇರೆ ಯಾವುದೇ ವ್ಯಕ್ತಿ ಕೊಂಡೊಯ್ದಿದ್ದರೂ ನಿಮ್ಮನ್ನು ಪ್ರಶ್ನೆ ಮಾಡಲಾಗುತ್ತದೆ. ತನಿಖೆ ನಡೆಯುತ್ತದೆ. ಆದ್ರೆ ಬೆಡ್ ರೋಲ್ ಕೊಂಡೊಯ್ದ ವ್ಯಕ್ತಿ ಯಾರು ಎಂಬುದು ಗೊತ್ತಾಗದೆ ಹೋದ್ರೆ ನಿಮಗೆ ಯಾವುದೇ ಶಿಕ್ಷೆ ನೀಡಲಾಗುವುದಿಲ್ಲ. ಅದೇ ಬೆಡ್ ಶೀಟ್ ಅಥವಾ ದಿಂಬು ತೆಗೆದುಕೊಂಡು ಹೋದ ವ್ಯಕ್ತಿ ಸಿಕ್ಕಿಬಿದ್ದಲ್ಲಿ ಆತನಿಗೆ ದಂಡ ಹಾಗೂ ಶಿಕ್ಷೆ ವಿಧಿಸಲಾಗುತ್ತದೆ. 

80 ಲಕ್ಷ ಜನರನ್ನು ಬಲಿತೆಗೆದುಕೊಂಡ ಈ ಪರ್ವತದೊಳಗೆ ಏನಿದೆ ಗೊತ್ತಾ?

ಭಾರತದಲ್ಲಿ ಪ್ರತಿ ವರ್ಷ 800 ಕೋಟಿ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಸುಮಾರು 8.57 ಲಕ್ಷ ಮಂದಿ ಎಸಿಯಲ್ಲಿ ಪ್ರಯಾಣಿಸುತ್ತಾರೆ. ಇವರಿಗಾಗಿ ಪ್ರೀಮಿಯಂ, ಮೇಲ್ ಮತ್ತು ಎಕ್ಸ್‌ಪ್ರೆಸ್ ಸೇರಿದಂತೆ 2122 ರೈಲುಗಳು ಪ್ರತಿದಿನ ಕಾರ್ಯನಿರ್ವಹಿಸುತ್ತವೆ. ಎಸಿ ಕೋಚ್ ನಲ್ಲಿ ಪ್ರಯಾಣಿಸುವ ಜನರು ದಿಂಬು, ಬೆಡ್ ಶೀಟನ್ನು ದೊಡ್ಡ ಮಟ್ಟದಲ್ಲಿ ಕಳ್ಳತನ ಮಾಡ್ತಾರೆ. 2017-18ರಲ್ಲಿ 1.95 ಲಕ್ಷ ಟವೆಲ್‌ಗಳು, 81,776 ಬೆಡ್‌ಶೀಟ್‌ಗಳು, 5,038 ದಿಂಬಿನ ಕವರ್‌ಗಳು ಮತ್ತು 7,043 ಬ್ಲಾಂಕೆಟ್‌ಗಳನ್ನು ಕಳವು ಮಾಡಲಾಗಿತ್ತು. ಇದ್ರಿಂದ ಲಕ್ಷಾಂತರ ರೂಪಾಯಿ ರೈಲ್ವೆ ಇಲಾಖೆಗೆ ನಷ್ಟವಾಗ್ತಿದೆ. ಜನರು ಬೆಡ್ ಶೀಟ್, ದಿಂಬು ಮಾತ್ರವಲ್ಲ ಚಮಚ, ಕೆಟಲ್‌, ನಲ್ಲಿ ಮತ್ತು ಟಾಯ್ಲೆಟ್ ಬೌಲ್‌ಗಳನ್ನು ಸಹ ಕದಿಯುತ್ತಾರೆ.

click me!