ಬಾಹ್ಯಾಕಾಶ ನೌಕೆ ಭೂಮಿಗೆ ವಾಪಸ್ಸಾಗುವ ಸಮಯದಲ್ಲಿ ಬಾಹ್ಯ ವಾತಾವರಣ ಹೇಗೆ ಕಾಣಿಸುತ್ತದೆ ಎನ್ನುವುದನ್ನು ತೋರಿಸುವ ವೀಡಿಯೋವೊಂದನ್ನು ವರ್ದಾ ಸ್ಪೇಸ್ ಇಂಡಸ್ಟ್ರೀಸ್ ಬಿಡುಗಡೆ ಮಾಡಿದೆ. ಸದ್ಯ ಈ ವೀಡಿಯೋವೀಗ ವೈರಲ್ ಆಗಿದ್ದು, ರೋಮಾಂಚನಗೊಳಿಸುವಂತಿದೆ.  

ಬಾಹ್ಯಾಕಾಶ ಅಧ್ಯಯನ ಇಂದು ಅತ್ಯಂತ ಆಸಕ್ತಿಕರ ಕ್ಷೇತ್ರವಾಗಿದೆ. ಬ್ರಹ್ಮಾಂಡದಲ್ಲಿರುವ ನಿಗೂಢಗಳನ್ನು ಅರಿಯುವಲ್ಲಿ, ನಮ್ಮದೇ ಭೂಮಿ, ಸೂರ್ಯ, ಚಂದ್ರರ ಬಗ್ಗೆ ಹೆಚ್ಚಿನ ಜ್ಞಾನ ಮೂಡಿಸಿಕೊಳ್ಳುವಲ್ಲಿ ಬಾಹ್ಯಾಕಾಶ ಅಧ್ಯಯನ ಮಹತ್ವದ ಪಾತ್ರ ವಹಿಸುತ್ತದೆ. ನಮ್ಮ ದೇಶ ಈ ದಿಸೆಯಲ್ಲಿ ಒಂದಿಷ್ಟು ಮುಂಚೂಣಿಯಲ್ಲೇ ಇದೆ. ಚಂದ್ರನ ಮೇಲೆ ನೌಕೆ ಇಳಿಸುವ ಮೂಲಕ ಸಾಧನೆ ಮಾಡಿದೆ. ಸೂರ್ಯನ ಅಧ್ಯಯನಕ್ಕೆ ಆದಿತ್ಯ ಎಲ್ 1 ನಿಯೋಜಿಸಿದೆ. ಶುಕ್ರ, ಮಂಗಳ ಗ್ರಹಗಳ ಅಧ್ಯಯನವೂ ನಿರಾತಂಕವಾಗಿ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಂತೂ ಭಾರತದಲ್ಲಿ ಬಾಹ್ಯಾಕಾಶ ವಲಯವನ್ನು ಖಾಸಗಿ ಕ್ಷೇತ್ರಕ್ಕೂ ಮುಕ್ತಗೊಳಿಸಿರುವ ಹಿನ್ನೆಲೆಯಲ್ಲಿ ಮತ್ತಷ್ಟು ವಾಣಿಜ್ಯ ಅವಕಾಶಗಳು ಗರಿಗೆದರಿವೆ. ಇತ್ತೀಚೆಗಷ್ಟೇ ಭಾರತದ ಗಗನಯಾನಿಗಳನ್ನು ಸಹ ಅಧಿಕೃತಗೊಳಿಸಲಾಗಿದ್ದು, ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದೆ. ಒಟ್ಟಿನಲ್ಲಿ ಬಾಹ್ಯಾಕಾಶವನ್ನು ಅರಿಯುವ ಕುತೂಹಲಕ್ಕೆ ಕೊನೆಯಿಲ್ಲ. ಬಾಹ್ಯಾಕಾಶಕ್ಕೆ, ಭೂಮಿಗೆ ಪಯಣಿಸುವ ಕಾರ್ಯ ಸಾಮಾನ್ಯವಾದುದಲ್ಲ. ಅಲ್ಲಿ ಜೀವಕ್ಕೂ ಅಪಾಯ ಇರುತ್ತದೆ. ಮೇಲ್ನೋಟಕ್ಕೆ ಬಾಹ್ಯಾಕಾಶ ನೌಕೆ ನಿಧಾನವಾಗಿ ಚಲಿಸುತ್ತಿರುವಂತೆ ಕಂಡುಬಂದರೂ ಅದರ ವೇಗ ನಾವು ಊಹಿಸುವುದಕ್ಕಿಂತ ಭಾರೀ ಅಧಿಕವಾಗಿರುತ್ತದೆ. ಇದಕ್ಕೆ ಪುಷ್ಟಿ ನೀಡುವ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲೀಗ ವೈರಲ್ ಆಗಿದೆ. 

ಸೋಷಿಯಲ್ ಮೀಡಿಯಾದಲ್ಲಿ (Social Media) ಬಾಹ್ಯಾಕಾಶ (Space) ವಲಯಕ್ಕೆ ಸಂಬಂಧಿಸಿದ ಅದೆಷ್ಟೋ ವೀಡಿಯೋಗಳು ಅಪ್ ಲೋಡ್ ಆಗುತ್ತಿರುತ್ತವೆ. ಆದರೆ, ವರ್ದಾ ಸ್ಪೇಸ್ ಇಂಡಸ್ಟ್ರೀಸ್ (Varda Space Industries) ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಶೇರ್ (Share) ಮಾಡಿರುವ ವೀಡಿಯೋವೊಂದು ಈಗ ವೈರಲ್ (Viral) ಆಗಿದೆ. 

ಬಾಹ್ಯಾಕಾಶದಿಂದ ಭೂಮಿಯ (Earth) ವಾತಾವರಣಕ್ಕೆ (Environment) ಪ್ರವೇಶಿಸುವ ಹಂತದಲ್ಲಿ ದೊರೆತ ವೀಡಿಯೋ ಕ್ಲಿಪ್ ಇದಾಗಿದ್ದು, ಮೈನವಿರೇಳಿಸುವಂತಿದೆ. ವೇಗವಾಗಿ ಚಲಿಸುತ್ತಿರುವ ನೌಕೆಯ (Craft) ಒಳಭಾಗದಲ್ಲಿರುವ ಕ್ಯಾಮರಾದಿಂದ ಈ ಚಿತ್ರಣ ಸೆರೆಹಿಡಿಯಲಾಗಿದೆ. ನೌಕೆಯ ಹೊರಭಾಗದಲ್ಲಿ ಬೆಳಕಿನ ಮಾಲೆಯಂತಹ ರಚನೆಗಳು ವೇಗವಾಗಿ ಸರಿಯುತ್ತಿರುತ್ತವೆ. ಆಗ ಮುಂದೆ ಬೃಹತ್ತಾದ ಭೂಮಿ ಎದುರಾಗುತ್ತದೆ. ಭೂಮಿ ಸಮೀಪಿಸಿದಾಗ ವಾತಾವರಣದ ಬಣ್ಣವೂ ಬದಲಾಗುವುದನ್ನು ಗಮನಿಸಬಹುದು. ನೀಲಿ (Blue) ಬಣ್ಣದಲ್ಲಿ ಹೊಳೆಯುವ ಭೂಮಿಯನ್ನು ನೋಡಿದರೆ ರೋಮಾಂಚನವೆನಿಸುತ್ತದೆ. ಇದನ್ನು ವರ್ದಾ ಸ್ಪೇಸ್ ಇಂಡಸ್ಟ್ರೀಸ್ ತನ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವೀಡಿಯೋ ಕೂಡ ಅಸಲಿಯಾಗಿದೆ. 

ಅಷ್ಟೊಂದು ವರ್ಷದ ಹಿಂದೆ ಅಲ್ಲಿ ನಡೆದಿತ್ತು ಮೊದಲ ಚುಂಬನ!

ಕಚ್ಚಾ ಫೂಟೇಜ್
ಬಾಹ್ಯಾಕಾಶದ ಚಿತ್ರಣ ಹೆಚ್ಚೇನೂ ಕಂಡುಬರುವುದಿಲ್ಲವಾದರೂ ಸುತ್ತಲಿನ ಎಲ್ಲ ಅಂಶಗಳು ವೇಗವಾಗಿ ಸರಿಯುತ್ತಿರುವುದು ತಿಳಿದುಬರುತ್ತದೆ. ಭೂಮಿಯ ನೀಲಿ ದಿಗಂತ (Horizon) ಎದುರಾದಾಗ ಇದ್ದಕ್ಕಿದ್ದ ಹಾಗೆ ವೇಗ ಕಡಿಮೆಯಾದಂತೆ ಭಾಸವಾಗುತ್ತದೆ. “ಇದು ನಮ್ಮ ಕ್ಯಾಪ್ಸೂಲ್ (Capsule) ಭೂ ವಾತಾವರಣವನ್ನು ಸೀಳಿಕೊಂಡು ಮುಂದೆ ಸಾಗುವ ಹಂತದ ಚಿತ್ರಣ. ಯಾವುದೇ ನಿರೂಪಣೆಯಿಲ್ಲ. ಇದು ಕಚ್ಚಾ ಪೂಟೇಜ್ (Footage)’ ಎಂದು ಕ್ಯಾಪ್ಷನ್ ನೀಡಲಾಗಿದೆ. 

Scroll to load tweet…

ಕ್ಯಾಮರಾ ಯಾವ್ದು?
ಬಾಹ್ಯಾಕಾಶ ನೌಕೆಯೊಳಗೆ ಅಳವಡಿಸಲಾಗಿರುವ ಕ್ಯಾಮರಾದಿಂದ (Camera) ಈ ದೃಶ್ಯ ಸೆರೆಯಾಗಿದೆ. ಭೂ ವಾತಾವರಣವನ್ನು ಭೇದಿಸಿಕೊಂಡು ನೌಕೆ ಭೂಮಿಗೆ ನುಗ್ಗುವ ಸನ್ನಿವೇಶ ಸಮ್ಮೋಹನಗೊಳಿಸುವಂತಿದೆ. ಕೆಲ ದಿನಗಳ ಹಿಂದೆ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, 1.4 ಮಿಲಿಯನ್ ಜನ ವೀಕ್ಷಣೆ ಮಾಡಿದ್ದಾರೆ. ಸಿಕ್ಕಾಪಟ್ಟೆ ಕಾಮೆಂಟುಗಳೂ, ಲೈಕುಗಳನ್ನೂ ಈ ವೀಡಿಯೋ ಪಡೆದುಕೊಂಡಿದೆ. 

ಮಂಗಳ ಗ್ರಹದ ಮೇಲೆ ಲ್ಯಾಂಡರ್‌, ಪುಟ್ಟ ಹೆಲಿಕಾಪ್ಟರ್‌ ಕಳಿಸಲು ಸಿದ್ಧತೆ ಆರಂಭಿಸಿದ ಇಸ್ರೋ!

ಕೆಲವರು ಕ್ಯಾಮರಾ ಬಗ್ಗೆ ವಿಚಾರಿಸಿದ್ದಾರೆ. ಬಾಹ್ಯಾಕಾಶದಲ್ಲಿ ಯಾವ ಕ್ಯಾಮರಾ ಬಳಸಲಾಗಿದೆ ಎಂದು ಕೇಳಿದ್ದಾರೆ. ತಾಂತ್ರಿಕ ವಿಧಾನಗಳನ್ನು ತಿಳಿಸಿ ಎಂದೂ ಹೇಳಿದ್ದಾರೆ. “ಈ ವೀಡಿಯೋ ಕ್ಲಿಪ್ ಮೈನವಿರೇಳಿಸುತ್ತದೆ. ಇದರಲ್ಲಿ ಬಳಕೆ ಮಾಡಿರುವ ಕ್ಯಾಮರಾ ಬಗ್ಗೆ ಮಾಹಿತಿ ನೀಡುತ್ತೀರಾ?’ ಎಂದು ಒಬ್ಬರು ಕೇಳಿದ್ದಾರೆ. ಈ ವೀಡಿಯೋ ಅದ್ಭುತ ಕಾರ್ಯ ಮಾಡಿದೆ ಎಂದು ಹಲವರು ಉದ್ಗರಿಸಿದ್ದಾರೆ. “ವೀಡಿಯೋ ರೋಮಾಂಚನ ಮೂಡಿಸುತ್ತಿದೆ. ಎಪಿಕ್ (Epic) ವರ್ಕ್’ ಎಂದು ಹಲವರು ಮೆಚ್ಚಿಕೊಂಡಿದ್ದಾರೆ.