ಯುಟ್ಯೂಬರ್ ಡಾ. ಬ್ರೋ ತಮ್ಮ ಸರಳತೆಯಿಂದಲೇ ಪ್ರಸಿದ್ಧಿ ಪಡೆದಿದ್ದಾರೆ. ಜೀವ ಪಣಕ್ಕಿಟ್ಟು ವಿಡಿಯೋ ಮಾಡುವ ಅವರ ಸಾಹಸ, ಮಾತು ಹಾಗೂ ಕೆಲಸ ಎಲ್ಲರ ಮೆಚ್ಚುಗೆ ಗಳಿಸಿದೆ. ಈಗ ಅಭಿಮಾನಿಯೊಬ್ಬರ ಭಾವನಾತ್ಮಕ ಕಮೆಂಟ್ ಗಮನ ಸೆಳೆದಿದೆ.
ಸೋಶಿಯಲ್ ಮೀಡಿಯಾ (Social media) ಗಳು ಕೆಲವರಿಗೆ ಸ್ಟ್ರೆಸ್ ಬೂಸ್ಟರ್ (stress booster) ಆದ್ರೆ ಮತ್ತೆ ಕೆಲವರಿಗೆ ಸ್ಟ್ರೆಸ್ ಬಸ್ಟರ್ (stress buster) ಆಗಿ ಕೆಲಸ ಮಾಡುತ್ವೆ. ಸೋಶಿಯಲ್ ಮೀಡಿಯಾವನ್ನು ನಾವು ಹೇಗೆ ಬಳಸಿಕೊಳ್ತೇವೆ, ಯಾವ ಕೆಂಟೆಂಟ್ ನೋಡ್ತೆವೆ ಎಂಬುದು ಇಲ್ಲಿ ಮುಖ್ಯವಾಗುತ್ತೆ. ಸೋಷಿಯಲ್ ಮಿಡಿಯಾ ಇನ್ಫ್ಲುಯೆನ್ಸರ್ ಡಾ. ಬ್ರೋ (Social Media Influencer Dr. Bro) ಕನ್ನಡಿದ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ನಾವು ಕಂಡು ಕೇಳರಿಯದ ಊರು, ದೇಶಗಳನ್ನು ನಮ್ಮ ಕಣ್ಣ ಮುಂದೆ ತರ್ತಿರುವ ಡಾ. ಬ್ರೋ ಗಗನ್ , ನಿರೂಪಣೆ ಅತ್ಯಂತ ಸರಳವಾಗಿದೆ. ಅತಿಶಯೋಕ್ತಿ ಇಲ್ಲದ, ವ್ಯಂಗ್ಯವಿಲ್ಲದ, ಯಾವುದೇ ಜಾತಿಒ – ಜನಾಂಗಕ್ಕೆ ನಿಂದನೆ ಮಾಡದೆ, ಇರೋದನ್ನು ಇದ್ದಂಗೆ ಹೇಳುವ ಗಗನ್, ಮಕ್ಕಳಿಂದ ಮುದುಕರವರೆಗೆ ಎಲ್ಲರ ಫೆವರೆಟ್. ಅವರ ಹೊಸ ವಿಡಿಯೋಗಳನ್ನು ನೋಡಲು ವೀಕ್ಷಕರು ಕಾತುರದಿಂದ ಕಾಯ್ತಿರುತ್ತಾರೆ. ಸಾಮಾನ್ಯ ಜನರಿಗೆ ಮಾತ್ರವಲ್ಲ ರೋಗಿಗಳ ಬಾಳಲ್ಲೂ ಡಾ. ಬ್ರೋ ನೋವು ಮರೆಸುವ ಮಾತ್ರೆಯಾಗಿದ್ದಾರೆ ಅಂದ್ರೆ ಅತಿಶಯೋಕ್ತಿ ಆಗೋದಿಲ್ಲ. ಇದಕ್ಕೆ ಸಾಕ್ಷ್ಯ ಎನ್ನುವಂತೆ ಗಗನ್ ಇನ್ಸ್ಟಾ ಸ್ಟೋರಿಯಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಚಿನ್ನರೂಪಾ ಹೆಸರಿನ ಬಳಕೆದಾರರೊಬ್ಬರ ಕಮೆಂಟನ್ನು ಡಾ. ಬ್ರೋ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ನಾವು ನಿಮ್ಮ ವಿಡಿಯೋವನ್ನು ಕಳೆದ ಆರು ತಿಂಗಳಿಂದ ನೋಡ್ತಿದ್ದೇವೆ. ನಿಮ್ಮ ವಿಡಿಯೋಗಳನ್ನು ನೋಡೋದು ನಮಗೆ ಖುಷಿ ನೀಡುತ್ತದೆ. ಇದು ಸ್ಟ್ರೆಸ್ಟ್ ಬಸ್ಟರ್ ಆಗಿದೆ. ನಮ್ಮ ತಂದೆ ಕಳೆದ ಒಂದು ವರ್ಷದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಚಿಕಿತ್ಸೆ ಸಮಯದಲ್ಲಿ ಡಿಪ್ರೆಶನ್ ನಿಂದ ಹೊರಗೆ ಬರಲು ಅವರು ನಿಮ್ಮ ವಿಡಿಯೋಗಳನ್ನು ನೋಡುತ್ತಿದ್ದರು. ನಿಮ್ಮ ಮಾತು ಅವರಿಗೆ ತುಂಬಾ ಪ್ರಿಯವಾಗಿತ್ತು. ಇದನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ. ನಾವು ಬೆಂಗಳೂರಿನಲ್ಲಿ ವಾಸವಾಗಿದ್ದು, ಕಳೆದ ಒಂದು ತಿಂಗಳ ಹಿಂದೆ ನಮ್ಮ ತಂದೆ ನಿಧನರಾಗಿದ್ದಾರೆ. ಸದಾ ಹೀಗೆ ಖುಷಿಯಾಗಿರಿ, ಧನ್ಯವಾದಗಳು ಎಂದು ಬರೆಯಲಾಗಿದೆ. ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿರುವ ಡಾ. ಬ್ರೋ, ಧನ್ಯವಾದ, ಓಂ ಶಾಂತಿ ಎಂದು ಬರೆದಿದ್ದಾರೆ.
undefined
ಭಾರತೀಯ ರೈಲ್ವೆ ವೈಟಿಂಗ್ ಲಿಸ್ಟ್ ಟಿಕೆಟ್ ಕೋಡೋದೇಕೆ?
ಸೋಶಿಯಲ್ ಮೀಡಿಯಾ ಇನ್ಸ್ಟಾದಲ್ಲೂ ಸಕ್ರಿಯವಾಗಿರುವ ಗಗನ್, ತಮ್ಮ ಪ್ರವಾಸದ ಬಗ್ಗೆ ಹಿಂಟ್ ನೀಡ್ತಿರುತ್ತಾರೆ. ಎರಡು ವಾರಗಳ ಹಿಂದಷ್ಟೆ ಡಾ. ಬ್ರೋ ಹೊಸ ವಿಡಿಯೋವನ್ನು ತಮ್ಮ ಯುಟ್ಯೂಬ್ ನಲ್ಲಿ ಹಂಚಿಕೊಂಡಿದ್ದಾರೆ. ನೈಜಿರಿಯಾಕ್ಕೆ ತೆರಳಿದ್ದ ಡಾ. ಬ್ರೋ ಅಲ್ಲಿನ ಅತಿ ದೊಡ್ಡ ಸ್ಲಂ ದರ್ಶನವನ್ನು ನಮಗೆ ಮಾಡಿಸಿದ್ದಾರೆ. ಚರಂಡಿ ಪಕ್ಕದಲ್ಲಿ ವಾಸಿಸುವ ಜನರನ್ನು ನೋಡಿದ ವೀಕ್ಷಕರು ದಂಗಾಗಿದ್ದಾರೆ. ಎಲ್ಲಕ್ಕಿಂತ ನಾವೇ ವಾಸಿ ಎನ್ನುತ್ತಿದ್ದಾರೆ. ಇನ್ನು ಗಗನ್ ಅಲ್ಲಿಯೂ ಕನ್ನಡ ಮರೆತಿಲ್ಲ. ಶಾಲೆಗೆ ಹೋಗಿ ಮಕ್ಕಳಿಗೆ ಕನ್ನಡ ಕಲಿಸಿದ್ದಾರೆ. ಗಗನ್ ವಿಡಿಯೋ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ಗಗನ್ ವಿದೇಶಿಗರಿಗೆ ಕನ್ನಡ ಕಲಿಸಿದ ಪರಿ ಇಷ್ಟವಾಗಿದೆ. ಕರ್ನಾಟಕದಲ್ಲೇ ಇದ್ದು ಜನ ಕನ್ನಡ ಮಾತನಾಡ್ತಿಲ್ಲ., ಹಾಗಿರುವಾಗ ನೀವು ಅಲ್ಲಿನ ಮಕ್ಕಳಿಗೆ ಕನ್ನಡ ಕಲಿಸಿದ್ದು ಹೆಮ್ಮೆ ಎಂದಿದ್ದಾರೆ. ಅಷ್ಟೇ ಅಲ್ಲ ಗಗನ್, ವಾರಕ್ಕೆ ಎರಡು ವಿಡಿಯೋ ಪೋಸ್ಟ್ ಮಾಡ್ಬೇಕು ಎನ್ನುವ ಬೇಡಿಕೆ ಕೂಡ ವೀಕ್ಷಕರಿಂದ ಕೇಳಿ ಬರ್ತಿದೆ.
ಭಾರತೀಯ ಕರೆನ್ಸಿ ಈ 8 ದೇಶಗಳಲ್ಲಿ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತೆ, ಈ ದೇಶದಲ್ಲಿ 1 ರೂಪಾಯಿ ಬೆಲೆ 500
ಬೇರೆ ಬೇರೆ ದೇಶ ಸುತ್ತುವ ಡಾ. ಬ್ರೋ ತಿಂಗಳಿಗೊಂದು ವಿಡಿಯೋವನ್ನು ಹಂಚಿಕೊಳ್ತಿದ್ದಾರೆ. ಈಗ ಪ್ರವಾಸದಲ್ಲಿ ಆಸಕ್ತಿಯುಳ್ಳ ಜನರಿಗೆ ದೇಶ ಸುತ್ತುವ ಅವಕಾಶವನ್ನು ಡಾ. ಬ್ರೋ ಮಾಡಿಕೊಟ್ಟಿದ್ದಾರೆ. ಗೋ ಪ್ರವಾಸದಡಿ ಅವರ ಟೀಂ ಸದ್ಯವೇ ಮಲೇಷ್ಯಾ ಹಾಗೂ ಸಿಂಗಾಪುರಕ್ಕೆ ಹೊರಟಿದೆ.