New Year 2022: ಪ್ರವಾಸಿಗರಿಗೆ ಕಾಫಿನಾಡು ಆತಿಥ್ಯ, ರೆಸಾರ್ಟ್, ಹೋಂ ಸ್ಟೇಗಳು ಭರ್ತಿ

By Suvarna News  |  First Published Dec 31, 2021, 10:56 AM IST

ಅಂತು ಇಂತು 2021ಕ್ಕೆ ಗುಡ್ ಬೈ ಹೇಳೋ ಕಾಲ ಸನ್ನಿಹಿತ. ವರ್ಷಾಂತ್ಯವನ್ನ (Year End) ಕಲರ್ ಫುಲ್ಲಾಗಿ ಸೆಲಬ್ರೆಟ್ ಮಾಡ್ಬೇಕು, 2022 ನ್ನ ಅದ್ಧೂರಿಯಾಗಿ ಸ್ವಾಗತಿಸ್ಬೇಕು ಅಂತ ಎಲ್ಲರೂ ಕಾತರದಿಂದಿದ್ದಾರೆ. 


ಚಿಕ್ಕಮಗಳೂರು (ಡಿ. 31): ಅಂತು ಇಂತು 2021ಕ್ಕೆ ಗುಡ್ ಬೈ ಹೇಳೋ ಕಾಲ ಸನ್ನಿಹಿತ. ವರ್ಷಾಂತ್ಯವನ್ನ (Year End) ಕಲರ್ ಫುಲ್ಲಾಗಿ ಸೆಲಬ್ರೆಟ್ ಮಾಡ್ಬೇಕು, 2022 ನ್ನ ಅದ್ಧೂರಿಯಾಗಿ ಸ್ವಾಗತಿಸ್ಬೇಕು ಅಂತ ಎಲ್ಲರೂ ಕಾತರದಿಂದಿದ್ದಾರೆ. ಪ್ರವಾಸಿಗರ (Tourists) ಸ್ವರ್ಗ ಅಂತಾನೇ ಕರೆಸಿಕೊಳ್ಳುವ ಕಾಫಿನಾಡ ಹೋಂ ಸ್ಟೇ, ರೆಸಾರ್ಟ್, ಹೋಟೆಲ್‌ಗಳು ಈಗಾಗಲೇ ಫುಲ್ ಬುಕ್ಕಿಂಗ್ ಆಗಿದೆ.

"

Latest Videos

undefined

ಕಾಫಿನಾಡು ಚಿಕ್ಕಮಗಳೂರಂತೂ (Chikkamagaluru) ಫುಲ್ ಹೌಸ್ಫುಲ್. ಎಲ್ಲಿ ನೋಡಿದ್ರು ಪ್ರವಾಸಿಗರ ದಂಡು. ಇಯರ್ ಎಂಡ್ ಆಗಿರೋದ್ರಿಂದ ರಾಜ್ಯದ ಎತ್ತರದ ಪ್ರದೇಶವಾಗಿರೋ ಮುಳ್ಳಯ್ಯನಗಿರಿಯಲ್ಲಿ (Mullaina Giri) ಪ್ರತಿ ದಿನ ಜನಸಾಗರವೇ ಸೇರುತ್ತಿದೆ. ಹಾಗಾಗಿ, ಸುತ್ತಮುತ್ತಲಿನ ಹೋಂ ಸ್ಟೇ, ರೆಸಾರ್ಟ್, ಹೋಟೆಲ್‌ಗಳು ಫುಲ್ ಬುಕ್ ಆಗಿವೆ. ಬಹುತೇಕರು ಇಯರ್ ಎಂಡ್, ನ್ಯೂ ಇಯರ್‌ಗೆ ಬುಕ್ ಮಾಡಿಸಿದ್ದಾರೆ.

ಕಾಫಿನಾಡ ಪ್ರಕೃತಿ ಸೌಂದರ್ಯ ಸವಿಯಲು ಸಜ್ಜಾಗಿದ್ದಾರೆ. 10-15 ದಿನಗಳ ಹಿಂದೆಯೇ ಬುಕ್ಕಿಂಗ್ ಮಾಡಿಸಿಕೊಂಡಿರುವ ಮಾಲೀಕರಿಗೆ ಈಗ ಪೀಕಲಾಟ ಶುರುವಾಗಿದೆ. ಸರ್ಕಾರ 50:50 ಆದೇಶ ಮಾಡಿರೋದು ಈಗಾಗಲೇ ವ್ಯಾಪಾರವಿಲ್ಲದೇ ಕಂಗೆಟ್ಟಿದ್ದ ಮಾಲೀಕರಿಗೆ ನಾಲಿಗೆ ಮೇಲಿ ಬಿಸಿ ತುಪ್ಪವಿಟ್ಟಂತಾಗಿದೆ. ಆದ್ರೆ, ಸರ್ಕಾರದ  ಆದೇಶವನ್ನ ನಾವು ಪಾಲಿಸ್ಲೇಬೇಕು ಅಂತಾರೆ ಡಿಸಿ ರಮೇಶ್. 

New Year 2022: ರೆಸಾರ್ಟ್‌ಗಳು, ಹೋಂ ಸ್ಟೇಗಳು, ಹೊಟೇಲ್‌ಗಳು ಫುಲ್, ಪ್ರವಾಸೋದ್ಯಮಕ್ಕೆ ಕಳೆ

ಒಂದೆಡೆ ಪ್ರವಾಸಿಗರು ಮುಳ್ಳಯ್ಯನಗಿರಿ ಸೌಂದರ್ಯ ಸವಿಯುತ್ತಿದ್ದರೆ, ಮತ್ತೊಂದೆಡೆ ಟೂರಿಸ್ಟ್‌ಗಳ ಬೇಜವಾಬ್ದಾರಿ ಕೂಡ ಎದ್ದು ಕಾಣಿಸುತ್ತಿದೆ. ಸಾಗರೋಪಾದಿಯಲ್ಲಿ ಮುಳ್ಳಯ್ಯನಗಿರಿಯತ್ತ ಬರುತ್ತಿರೋ ಪ್ರವಾಸಿಗರ ಬೇಕಾಬಿಟ್ಟಿ ವರ್ತನೆ ಕೂಡ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಮುಖಕ್ಕೆ ಮಾಸ್ಕ್ ಇಲ್ಲ, ಸಾಮಾಜಿಕ ಅಂತರ ದೂರದ ಮಾತು. ಸ್ಯಾನಿಟೈಸರ್ ಕೇಳೋದೆ ಬೇಡ. ರಾಜ್ಯದ ಮೂಲೆ ಮೂಲೆಗಳಿಂದ ಬರುವ ಪ್ರವಾಸಿಗರು ಜಿಲ್ಲೆಯ ನಾನಾ ಹೋಟೆಲ್, ರೆಸಾರ್ಟ್ ಹಾಗೂ ಹೋಂ ಸ್ಟೇನಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಈಗಾಗಲೇ ಸರ್ಕಾರ ಒಮಿಕ್ರಾನ್ ತಡೆಗೆ ಮೇಲಿಂದ ಮೇಲೆ ಸಭೆ ಮಾಡಿ ಟಫ್ ರೂಲ್ಸ್‌ನತ್ತ ಮುಖ ಮಾಡ್ತಿದೆ. ಆದ್ರೆ, ಕೆಲ ಪ್ರವಾಸಿಗರು ಇದಕ್ಕೂ ನಮಗೂ ಸಂಬಂಧವೇ ಇಲ್ಲದಂತೆ ವರ್ತಿಸ್ತಾ ಇರೋದು ಸ್ಥಳೀಯ ಜನರ ಬೇಸರಕ್ಕೆ ಕಾರಣವಾಗಿದೆ. ಈ ಮಧ್ಯೆ ಹೋಂ ಸ್ಟೇ ಮಾಲೀಕರು ಕೂಡ ಸರ್ಕಾರ ಕಾನೂನುಗಳನ್ನ ಸಡಿಲಗೊಳಿಸಬೇಕು, 2ನೇ ತಾರೀಖಿನ ಬಳಿಕ ಸರ್ಕಾರ ಟಫ್ ರೂಲ್ಸ್‌ಗಳನ್ನ ಜಾರಿಗೆ ತರುವಂತೆ ಮನವಿ ಮಾಡಿದ್ದಾರೆ. 

 ಒಟ್ಟಾರೆ, ಕಳೆದೆರಡು ವರ್ಷಗಳಿಂದ ಕೊರೋನಾ, ಲಾಕ್ ಡೌನ್ ಅಂತ ವ್ಯವಹಾರವಿಲ್ಲದೆ ಕಂಗೆಟ್ಟಿದ್ದ ಹೋಂ ಸ್ಟೇ, ರೆಸಾರ್ಟ್, ಹೋಟೆಲ್ ಮಾಲೀಕರು ಇದೀಗ ಸರ್ಕಾರದ ಆದೇಶಕ್ಕೆ ಕಂಗಾಲಾಗಿದ್ದಾರೆ. ಆದ್ರು, ಸರ್ಕಾರ ಜಾರಿ ಮಾಡಿರೋ ಆದೇಶವನ್ನ ನಾವು ಪಾಲಿಸಬೇಕು ನಾವು ಪಾಲಿಸ್ತೀವಿ, ಹೆಚ್ಚು ಜನರನ್ನ ಸೇರಲು ಬಿಡಲ್ಲ ಅಂತ ಜಿಲ್ಲಾಡಳಿತ ಹೇಳ್ತಿದೆ. ಈ ಮಧ್ಯೆ ಪ್ರವಾಸಿಗರ ಹಾಟ್ ಸ್ಪಾಟ್ ಅಂತಾನೇ ಕರೆಸಿಕೊಳ್ಳೋ ಕಾಫಿನಾಡು ಚಿಕ್ಕಮಗಳೂರಿಗೆ ಪ್ರವಾಸಿಗರ ದಂಡೇ ಹರಿದು ಬರ್ತಿದ್ದು, ಜಿಲ್ಲಾಡಳಿತ ಎಲ್ಲವನ್ನೂ ಹೇಗೆ ನಿಭಾಯಿಸುತ್ತದೆ ಎಂದು ಕಾದು ನೋಡಬೇಕಿದೆ. 

click me!