Travel Tips : ತತ್ಕಾಲ್ ರೈಲ್ವೆ ಟಿಕೆಟ್ ಬುಕ್ ಮಾಡಲು ಇಲ್ಲಿವೆ ಟಿಪ್ಸ್!

By Suvarna News  |  First Published Jan 17, 2023, 12:47 PM IST

ರೈಲಿನಲ್ಲಿ ಪ್ರಯಾಣ ಬೆಳೆಸುವುದು ಆರಾಮದಾಯಕವಾಗಿರುತ್ತದೆ. ಆದ್ರೆ ಟಿಕೆಟ್ ಸಿಗೋದೆ ಬಹಳ ಕಷ್ಟ. ಅದ್ರಲ್ಲೂ ಕೊನೆ ಕ್ಷಣದಲ್ಲಿ ಪ್ರಯಾಣದ ಪ್ಲಾನ್ ಆದ್ರೆ ಟಿಕೆಟ್ ಸಿಕ್ಕಂತೆ. ಈ ಸಂದರ್ಭದಲ್ಲಿ ನೀವು ತತ್ಕಾಲ್ ನಲ್ಲಿ ಟಿಕೆಟ್ ಬುಕ್ ಮಾಡ್ಬಹುದು.
 


ಭಾರತೀಯ ರೈಲ್ವೆ  ಕಾಲಕಾಲಕ್ಕೆ ಪ್ರಯಾಣಿಕರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತದೆ. ಹಿಂದೆ ರೈಲು ಟಿಕೆಟ್ ಕಾಯ್ದಿರಿಸಲು ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು. ಆದ್ರೂ ಟಿಕೆಟ್ ಕನ್ಫರ್ಮ್ ಆಗದೆ ಕಷ್ಟಪಡಬೇಕಾಗಿತ್ತು. ಆದರೆ ಇದೀಗ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಸೌಲಭ್ಯವನ್ನು ನೀಡಿದೆ. ಟಿಕೆಟ್ ಬುಕ್ಕಿಂಗ್, ಟಿಕೆಟ್ ಕ್ಯಾನ್ಸಲ್ ಸೇರಿ ಪ್ರಯಾಣಿಕರಿಗೆ ಅನುಕೂಲವಾಗುವ ಅನೇಕ ಸೌಲಭ್ಯವನ್ನು ರೈಲ್ವೆ ಇಲಾಖೆ ನೀಡ್ತಿದೆ.  ಇತ್ತೀಚೆಗೆ ರೈಲ್ವೇ ಬೇ ಮತ್ತೊಂದು ಸೌಲಭ್ಯವನ್ನು ನೀಡಿದ್ದು, ಅದರಲ್ಲಿ ತತ್ಕಾಲ್ ಟಿಕೆಟ್ ತೆಗೆದುಕೊಳ್ಳಲು ಸುಲಭವಾಗಿದೆ. 

ಪ್ರಯಾಣ (Travel) ದ ಪ್ಲಾನ್ ಮೊದಲೇ ಇದ್ರೆ ನಾವು ಮೊದಲೇ ಟಿಕೆಟ್ (Ticket ) ಬುಕ್ ಮಾಡಿಕೊಳ್ತೇವೆ. ಸ್ವಲ್ಪ ತಡವಾದ್ರೂ ನಮ್ಮನ್ನು ವೇಟಿಂಗ್ (Waiting) ಲೀಸ್ಟ್ ನಲ್ಲಿ ಇಡಲಾಗುತ್ತದೆ. ಕೆಲವೊಮ್ಮೆ ದಿಡೀರ್ ಪ್ರಯಾಣ ನಿರ್ಧಾರವಾಗುತ್ತದೆ. ಆಗ ಟಿಕೆಟ್ ಬುಕ್ ಮಾಡಲು ರೈಲ್ವೆ (Railway) ಇಲಾಖೆ ತತ್ಕಾಲ್ ಸೌಲಭ್ಯ ನೀಡಿದೆ. ಹಠಾತ್ ಪ್ರಯಾಣಿಸುವ ಜನರನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೇ ತತ್ಕಾಲ್ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಈ ಟಿಕೆಟ್ ಅನ್ನು ಬುಕ್ ಮಾಡಲು ನೀವೇನು ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೆವೆ.

Tap to resize

Latest Videos

ತತ್ಕಾಲ್ ಟಿಕೆಟ್ ಬುಕ್ ಮಾಡುವುದು ಹೇಗೆ ?  : ಪ್ರಯಾಣದ ಒಂದು ದಿನ ಮೊದಲು ಮಾತ್ರ ತತ್ಕಾಲ್ ಟಿಕೆಟ್ ಬುಕ್ ಮಾಡಬಹುದು. 3AC ಮತ್ತು ಅದಕ್ಕಿಂತ ಹೆಚ್ಚಿನ ಬೋಗಿ ಬುಕಿಂಗ್ 10 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಸ್ಲೀಪರ್ ಹಾಗೂ ನಾನ್ ಎಸಿ ಸೀಟ್ ಬುಕ್ಕಿಂಗ್ 11 ಗಂಟೆಗೆ ಪ್ರಾರಂಭವಾಗುತ್ತದೆ. ಕೌಂಟರ್‌ನ ಹೊರತಾಗಿ, ಜನರು ಆನ್‌ಲೈನ್‌ನಲ್ಲಿ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ದೃಢೀಕರಿಸಿದ ತತ್ಕಾಲ್ ಟಿಕೆಟ್‌ಗಳನ್ನು ನಿಮಿಷಗಳಲ್ಲಿ ಬುಕ್ ಮಾಡಬಹುದು.  

ನ್ಯೂಯಾರ್ಕ್‌ ಟೈಮ್ಸ್ 52 ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೇರಳಕ್ಕೆ ಸ್ಥಾನ

ಮೊದಲು ನೀವು ಐಆರ್ ಸಿಟಿಸಿ (IRCTC)ಯಲ್ಲಿ ಖಾತೆಯನ್ನು ರಚಿಸಬೇಕು. ಅದನ್ನು https://www.irctc.co.in ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ರಚಿಸಬೇಕು. IRCTC ಖಾತೆಯನ್ನು ರಚಿಸಿದ ನಂತರ ಮಾಸ್ಟರ್ ಪಟ್ಟಿಯನ್ನು ಮಾಡಬೇಕು. ಮಾಸ್ಟರ್ ಪಟ್ಟಿ ಅಂದ್ರೆ ನಿಮ್ಮ ಪ್ರೊಫೈಲ್‌ನಲ್ಲಿ ನೀವು ಮೊದಲೇ ಸಂಗ್ರಹಿಸಬಹುದಾದ ಪ್ರಯಾಣಿಕರ ಪಟ್ಟಿಯಾಗಿದೆ. ನನ್ನ ಪ್ರೊಫೈಲ್ ವಿಭಾಗದ  ಡ್ರಾಪ್ ಡೌನ್‌ನಲ್ಲಿ ನೀವು ಮಾಸ್ಟರ್ ಪಟ್ಟಿಯನ್ನು ಕಾಣುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ. ಈ ಪುಟದಲ್ಲಿ ನೀವು ಪ್ರಯಾಣಿಕರ ಹೆಸರು, ವಯಸ್ಸು, ಲಿಂಗ, ಆಹಾರದ ಆದ್ಯತೆ, ಹಿರಿಯ ನಾಗರಿಕರು ಸೇರಿ ಅಲ್ಲಿ ಕೇಳಿದ ಮಾಹಿತಿ ನೀಡಬೇಕು. ಈ ವಿವರ ಸೇವ್ ಮಾಡಿದ ನಂತ್ರ ಆಡ್ ಪ್ಯಾಸೆಂಜರ್ ಅನ್ನು ಕ್ಲಿಕ್ ಮಾಡಿ. ಒಬ್ಬ ವ್ಯಕ್ತಿಯು ಗರಿಷ್ಠ 20 ಪ್ರಯಾಣಿಕರ ಪಟ್ಟಿಯನ್ನು ಮಾಸ್ಟರ್ ಪಟ್ಟಿಯಲ್ಲಿ  ಸೇವ್ ಮಾಡಬಹುದು. 

ಇದಾದ ನಂತ್ರ ನೀವು ತತ್ಕಾಲ್ ಟಿಕೆಟ್ ಬುಕ್ ಮಾಡಬಹುದು. ವೆಬ್ ಸೈಟ್ ಗೆ ಲಾಗಿನ್ ಆದ್ಮೇಲೆ  ಗಮ್ಯಸ್ಥಾನವನ್ನು ಆಯ್ಕೆಮಾಡಿ ಮತ್ತು ನಿಮ್ಮ ಪ್ರಯಾಣದ ದಿನಾಂಕವನ್ನು ಭರ್ತಿ ಮಾಡಿ. ನಂತ್ರ ಸಲ್ಲಿಸು ಕ್ಲಿಕ್ ಮಾಡಿ. ನಂತರ ಕೋಟಾ ಆಯ್ಕೆಯಲ್ಲಿ ತತ್ಕಾಲ್ ಆಯ್ಕೆಮಾಡಿ. ನಿಮ್ಮ ರೈಲಿಗಾಗಿ ಬುಕ್ ನೌ ಕ್ಲಿಕ್ ಮಾಡಿ. ಕೇಳಿದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.  ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಆನ್‌ಲೈನ್‌ನಲ್ಲಿ ಟಿಕೆಟ್‌ಗಾಗಿ ಪಾವತಿಸಿ. ಆಗ ನಿಮ್ಮ ಟಿಕೆಟ್ ಬುಕ್ ಆಗುತ್ತದೆ.

ಚಳಿಗಾಲದಲ್ಲಿ ಬೇಸಿಗೆಯ ಬಿಸಿಯನ್ನು ಎಂಜಾಯ್ ಮಾಡಲು ಈ ತಾಣಗಳು ಬೆಸ್ಟ್

3ACಗೆ ತತ್ಕಾಲ್ ಟಿಕೆಟ್ ಕಾಯ್ದಿರಿಸಲು, ಬೆಳಿಗ್ಗೆ 9.57 ರೊಳಗೆ ಲಾಗ್ ಇನ್ ಆಗಬೇಕು. ಆದರೆ ಸ್ಲೀಪರ್ ಕ್ಲಾಸ್‌ಗೆ ತತ್ಕಾಲ್ ಟಿಕೆಟ್ ಬುಕಿಂಗ್ 11 ಗಂಟೆಗೆ ಪ್ರಾರಂಭವಾಗುತ್ತದೆ. ಇದಕ್ಕಾಗಿ ಪ್ರಯಾಣಿಕರು 10.57 ರವರೆಗೆ ಪೋರ್ಟಲ್‌ಗೆ ಲಾಗಿನ್ ಮಾಡಬಹುದು. ಒಬ್ಬ ವ್ಯಕ್ತಿ ಐಡಿಯಿಂದ ನಾಲ್ಕು ಮಂದಿಗೆ ಟಿಕೆಟ್ ಬುಕ್ ಮಾಡಬಹುದಾಗಿದೆ.
 

click me!