50 ವರ್ಷಗಳಲ್ಲಿ ಮದುವೆಯೇ ನಡೆಯದ ಭಾರತದ ವಿಚಿತ್ರ ಹಳ್ಳಿ.. ಕಾರಣ ಏನು ಗೊತ್ತಾ?

By Bhavani Bhat  |  First Published Jun 27, 2024, 10:39 AM IST

ಭಾರತದಲ್ಲಿ ಮದುವೆಯೇ ನಡೆಯದ ಹಳ್ಳಿ ಎಲ್ಲೂ ಎಂದೂ ಇರಲಾರದು ಎನ್ನುತ್ತೀರಾ? ನಿಮ್ಮ ನಂಬಿಕೆ ತಪ್ಪು. ಭಾರತದ ಈ ಹಳ್ಳಿಯಲ್ಲಿ ೫೦ ವರ್ಷಗಳಿಂದ ಒಂದು ಮದುವೆಯೂ ನಡೆಯಲಿಲ್ಲ. ಯಾಕೆ ಹೀಗೆ?



ಭಾರತೀಯ ಸಂಸ್ಕೃತಿಯಲ್ಲಿ, ಕುಟುಂಬಗಳಲ್ಲಿ ಮದುವೆ ಬಹಳ ಮುಖ್ಯವಾದ ಘಟನೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸಂಗಾತಿಯನ್ನು ಬಯಸುತ್ತಾರೆ. ಪ್ರತಿಯೊಬ್ಬರೂ ಕೌಟುಂಬಿಕವಾಗಿ ಸಮಯ ಕಳೆಯಲು ಬಯಸುತ್ತಾರೆ. ಅದಕ್ಕಾಗಿಯೇ ಭಾರತದಲ್ಲಿ ಮದುವೆಯನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ ಮದುವೆಗಳು ಧರ್ಮಗಳು ಮತ್ತು ಸಮುದಾಯಗಳಿಗೆ ಅನುಗುಣವಾಗಿ ಬದಲಾಗುತ್ತವೆ. ಭಾರತದಲ್ಲಿ ಮದುವೆಯನ್ನು ನಿರ್ಧರಿಸುವಲ್ಲಿ ವಧು ಮತ್ತು ವರನ ಕುಟುಂಬಗಳು ಪ್ರಮುಖ ಪಾತ್ರ ವಹಿಸುತ್ತವೆ. ಭಾರತದಲ್ಲಿ ಮದುವೆಗಳು ಆಡಂಬರ, ಅಲಂಕಾರಗಳು, ಅಲಂಕಾರಿಕ ಉಡುಪುಗಳು, ಸಂಗೀತ, ನೃತ್ಯ, ವೇಷಭೂಷಣಗಳು ಮತ್ತು ಆಚರಣೆಗಳೊಂದಿಗೆ ಹಬ್ಬದಂತೆ ಇರುತ್ತವೆ. ಆದರೆ, ಭಾರತದ ಒಂದು ನಿರ್ದಿಷ್ಟ ಸ್ಥಳದಲ್ಲಿ, ಕೆಲವು ವರ್ಷಗಳ ಹಿಂದಿನವರೆಗೂ, ಮದುವೆಯೇ ಸಾಧ್ಯವಿರಲಿಲ್ಲ.  

ಭಾರತದಲ್ಲಿ ಇರುವ ಹಲವು ವಿಚಿತ್ರ ಹಳ್ಳಿಗಳಲ್ಲಿ ಇದೂ ಒಂದು. ಇದರ ಹೆಸರು ಪರ್ವಾನ್ ಕಾಲಾ. ಅತ್ಯಂತ ವಿಲಕ್ಷಣ ಹಳ್ಳಿಗಳಲ್ಲಿ ಒಂದು. ಪರ್ವಾನ್ ಕಲಾ ಬಿಹಾರ ರಾಜ್ಯದ ಕೈಮೂರ್ ಜಿಲ್ಲೆಯ ತೆಹಸಿಲ್ ಅಥೌರಾದಲ್ಲಿರುವ ಒಂದು ವಿಶಿಷ್ಟ ಗ್ರಾಮ. ಇದು ಚೈನ್ಪುರ್ ಅಸೆಂಬ್ಲಿ ಕ್ಷೇತ್ರ ಮತ್ತು ಸರಸ್ರಾಮ್ ಲೋಕಸಭಾ ಕ್ಷೇತ್ರದ ಅಡಿಯಲ್ಲಿ ಬರುತ್ತದೆ. ಭಾರತ ಸರ್ಕಾರದ 2011 ರ ಜನಗಣತಿಯ ಪ್ರಕಾರ, ಪರ್ವಾನ್ ಕಲಾದಲ್ಲಿ 244 ಕುಟುಂಬಗಳು ವಾಸಿಸುತ್ತಿದ್ದವು. ಗ್ರಾಮದ ಒಟ್ಟು ಜನಸಂಖ್ಯೆಯು 743 ಪುರುಷರು ಮತ್ತು 644 ಮಹಿಳೆಯರು. ಒಟ್ಟು ಮಂದಿ 1387. ಪರ್ವಾನ್ ಕಾಲಾ ವಿಚಿತ್ರ ಹಳ್ಳಿ ಏಕೆ? ಪರ್ವಾನ್ ಕಾಲಾ ಸ್ವಾತಂತ್ರ್ಯಾ ನಂತರದ ಭಾರತದಲ್ಲಿ 50 ವರ್ಷಗಳ ಕಾಲ ಒಂದೇ ಒಂದು ಮದುವೆಯನ್ನು ಕಂಡಿರಲಿಲ್ಲ. ಇಲ್ಲಿನ ಯುವಜನತೆ ಬಿಹಾರದ ಎಲ್ಲಾ ಗ್ರಾಮಗಳಿಗೆ ಹೋಲಿಸಿದರೆ ಅತಿ ಹೆಚ್ಚು ಅವಿವಾಹಿತ ಪುರುಷರನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

Tap to resize

Latest Videos

ಯಾವ ವಿಜ್ಞಾನಿಗಳಿಂದಲೂ ಭೇದಿಸಲು ಸಾಧ್ಯವಾಗದ ಕೈಲಾಸ ಪರ್ವತದ ಅದ್ಭುತ ರಹಸ್ಯಗಳು

ಈ ಕೆಟ್ಟ ಪರಿಸ್ಥಿತಿಗೆ ಕಾರಣವೇನು? ಈ ಗ್ರಾಮದ ದುಃಸ್ಥಿತಿಯೇ ಈ ದುರದೃಷ್ಟಕ್ಕೆ ಕಾರಣ. ನೀರು, ವಿದ್ಯುತ್, ನೀರಾವರಿ ಅಥವಾ ದೂರಸಂಪರ್ಕವಿಲ್ಲದೆ ಈ ಗ್ರಾಮವು ಪ್ರಪಂಚದ ಇತರ ಭಾಗಗಳಿಂದ ಸಂಪರ್ಕ ಕಡಿತಗೊಂಡಿದೆ. ಇಂತಹ ವಾತಾವರಣದಲ್ಲಿ ಈ ಹಳ್ಳಿಯ ಗಂಡಸರಿಗೆ ಹೆಣ್ಣು ಕೊಡಲು ಯಾರೂ ಸಿದ್ಧರಿಲ್ಲ. ಈ ಸ್ಥಳಕ್ಕೆ ಹೊರಜಗತ್ತಿಗೆ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಸರಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳ ಪ್ರಕಾರ, ಗ್ರಾಮವು ಗೊತ್ತುಪಡಿಸಿದ ವನ್ಯಜೀವಿ ಅಭಯಾರಣ್ಯದ ಮೂಲಕ ಹಾದುಹೋಗುವುದರಿಂದ ಇಲ್ಲಿ ರಸ್ತೆಗಳನ್ನು ನಿರ್ಮಿಸಲಾಗುವುದಿಲ್ಲ, ಅಲ್ಲಿ ಸುಪ್ರೀಂ ಕೋರ್ಟ್ ಯಾವುದೇ ನಿರ್ಮಾಣ ಅಥವಾ ಆರ್ಥಿಕ ಚಟುವಟಿಕೆಗಳನ್ನು ನಿಷೇಧಿಸಿದೆ. ಹಲವು ವರ್ಷಗಳ ಪ್ರಯತ್ನದ ನಂತರ ಇಲ್ಲಿನ ಯುವಕರು ತಾವೇ ಉಪಕರಣಗಳನ್ನು ತೆಗೆದುಕೊಂಡು ಎರಡು ವರ್ಷಕ್ಕೂ ಹೆಚ್ಚು ಕಾಲ ಹಗಲಿರುಳು ಶ್ರಮಿಸಿ ಮಲೆನಾಡಿನಲ್ಲಿ ರಸ್ತೆ ಕೆತ್ತಿದ್ದಾರೆ. ಮದುವೆಯ ಅತಿಥಿಗಳು ಸ್ಥಳಕ್ಕೆ ಭೇಟಿ ನೀಡಲು ಮೋಟಾರು ಸೈಕಲ್‌ಗಳು ಮತ್ತು ಟ್ರಾಕ್ಟರ್‌ಗಳಿಗೆ ಸ್ಥಳಾವಕಾಶ ಕಲ್ಪಿಸುವಷ್ಟು ರಸ್ತೆ ದೊಡ್ಡದಾಗಿದೆ. ಯುವಕರ ಗುಂಪಿಗೆ ಮದುವೆಯಾಗಲು ಇದು ಅಗಾಧ ಪ್ರಯತ್ನವಾಗಿತ್ತು. ವಿವಿಧ ಪ್ರಯತ್ನಗಳ ನಂತರ ಪರ್ವಾನ್ ಕಲಾ ತನ್ನ ಮೊದಲ ಮದುವೆಯನ್ನು ಫೆಬ್ರವರಿ 2017ರಲ್ಲಿ ನೋಡಿತು. ಇಂದು ಬಹಳ ಕಷ್ಟದಿಂದ ಜನ ಇಲ್ಲಿಗೆ ಹೆಣ್ಣು ಕೊಡಲು ಒಪ್ಪುತ್ತಾರೆ. ಆದರೆ ಶೌಚಾಲಯಗಳಂಥ ಆಧುನಿಕ ಸೌಲಭ್ಯಗಳು ಈಗಲೂ ಇಲ್ಲ. ಹೀಗಾಗಿ ಈಗಲೂ ಅಲ್ಲಿಗೆ ಹೆಣ್ಣು ಕೊಡಲು ಒಪ್ಪುವುದು ಕಷ್ಟವೇ. 

ಪ್ರಪಂಚದ ಅಪಾಯಕಾರಿ ತಾಣಗಳಿವು, ಒಂದ್ಸಲ ಹೋದ್ರೆ ರಿಟರ್ನ್ ಬರುವುದೇ ಡೌಟು!
 

click me!