11 ದಿನಗಳ ನ್ಯೂಡ್ ಬೋಟ್ ಪ್ರಯಾಣ ಎಂಜಾಯ್ ಮಾಡಬೇಕಾ? ನಗ್ನರಾದರೆ ಮಾತ್ರ ಅವಕಾಶ!

Published : May 11, 2024, 05:34 PM IST
11 ದಿನಗಳ ನ್ಯೂಡ್ ಬೋಟ್ ಪ್ರಯಾಣ ಎಂಜಾಯ್ ಮಾಡಬೇಕಾ? ನಗ್ನರಾದರೆ ಮಾತ್ರ ಅವಕಾಶ!

ಸಾರಾಂಶ

ಬಿಗ್ ನ್ಯೂಡ್ ಬೋಟ್ ಪ್ರಯಾಣಕ್ಕೆ ಸಜ್ಜಾಗಿದೆ. ಬುಕಿಂಗ್ ಮಾಡಿಕೊಳ್ಳಲು ಯುವತಿಯರು, ಪುರುಷರು ಸಾಲುಗಟ್ಟಿ ನಿಂತಿದ್ದಾರೆ. ಬರೋಬ್ಬರಿ 11 ದಿನಗಳ ಪ್ರವಾಸದಲ್ಲಿ ಎಲ್ಲರೂ ನಗ್ನ. ನಿಮಗೂ ಈ ಬೋಟ್‌ನಲ್ಲಿ ಪ್ರಯಾಣ ಮಾಡಬೇಕಾದರೆ ಬೆತ್ತಲೆಯಾದರೆ ಮಾತ್ರ ಅವಕಾಶ.  

ಬೆತ್ತಲೇ ಉತ್ಸವ, ನಗ್ನ ಪಾರ್ಟಿ ಸೇರಿದಂತೆ ಹಲವು ದೇಶಗಳಲ್ಲಿ ಹಲವು ಸಂಪ್ರದಾಯ, ಉತ್ಸವಗಳು ಆಯೋಜನೆಗೊಳ್ಳುತ್ತದೆ. ಇದೀಗ ಬೆತ್ತಲೆ ಬೋಟ್ ಪ್ರಯಾಣಕ್ಕೆ ಎಲ್ಲಾ ತಯಾರಿ ನಡೆದಿದೆ. ಬುಕಿಂಗ್ ಮಾಡಿ 11 ದಿನ ಹಡಗಿನ ಮೂಲಕ ಖಾಸಗಿ ರೆಸಾರ್ಟ್, ದ್ವೀಪ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ, ವಿಶ್ರಾಂತಿ ಸೇರಿದಂತೆ ಹಲವು ಚಟುವಟಿಕೆಗಳಿವೆ. ಯುವತಿಯರು, ಪುರುಷರು ಈ ಬೋಟ್‌ನಲ್ಲಿ ಪ್ರಯಾಣ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಒಂದೇ ಕಂಡೀಷನ್ ಬೆತ್ತಲೆಯಾಗಿ ಬರಬೇಕು. ಬೆತ್ತಲೆಯಾಗಿ 11 ದಿನ ದಿ ಬಿಗ್ ನ್ಯೂಡ್ ಬೋಟ್ ಮೂಲಕ ಪ್ರಯಾಣ ಮಾಡಬಹುದು.

968 ಅಡಿಯ ನಾರ್ವೆಯನ್ ಪರ್ಲ್ ಬೋಟ್ ಈ ಬೆತ್ತಲೆ ಆಸಕ್ತರನ್ನು ಕರೆದುಕೊಂಡು ಹೋಗಲು ರೆಡಿಯಾಗಿದೆ. ಅಮೆರಿಕಾದ ಕರಾವಳಿ ಭಾಗವಾಗಿರುವ ಮಿಯಾಮಿಯಿಂದ ಕೆರಿಬಿಯನ್ ಐಸ್‌ಲ್ಯಾಂಡ್‌ಗೆ ಈ ಬೋಟು ಪ್ರವಾಸ ತೆರಳಲಿದೆ. ಒಟ್ಟುು 11 ದಿನ. ಬೇರ್ ನೆಸಸಿಟಿ ಅನ್ನೋ ಟ್ರಾವೆಲ್ ಕಂಪನಿ ಈ ನಗ್ನ ಪ್ರಯಾಣ ಆಯೋಜಿಸಿದೆ. ಈ ಹೊಸ ಪ್ರಯಾಣಕ್ಕೆ ಜನರು ಮುಗಿಬೀಳುತ್ತಿದ್ದಾರೆ.

ಬೆತ್ತಲಾಗಿ ದೇವಸ್ಥಾನಕ್ಕೆ ಬರುವ ವಿಶೇಷ ಹಬ್ಬಕ್ಕೆ ಈ ವರ್ಷ ತೆರೆ, ಅಚ್ಚರಿ ಹುಟ್ಟಿಸುತ್ತೆ ಕಾರಣ!

ನ್ಯೂಡ್ ಬೋಟ್‌ನಲ್ಲಿ ಪ್ರವಾಸ ಎಂಜಾಯ್ ಮಾಡಲು ಗುಂಪಾಗಿ, ಜೋಡಿಯಾಗಿ, ಏಕಾಂಗಿಯಾಗಿಯೂ ತೆರಳಬಹುದು. ನೈಸರ್ಗಿಕ ಸೌಂದರ್ಯವನ್ನು ನೈಸರ್ಗಿಕವಾಗಿ ಆಸ್ವಾದಿಸಲು ಟ್ರಾವೆಲ್ ಕಂಪನಿ ಈ ಪ್ಲಾನ್ ಮಾಡಿದೆ. ಬೇರ್ ನೆಸಸಿಟಿ ಜೊತೆ ನಾರ್ವೆಯನ್ ಕ್ರೂಸ್ ಶಿಪ್ ಪಾಲುದಾರಿಕೆಯಲ್ಲಿ ಈ ಪ್ರಯಾಣ ಆಯೋಜನೆಗೊಂಡಿದೆ.

 

 

11 ದಿನಗಳ ಈ ಪ್ರವಾಸದಲ್ಲಿ ಕೆಲ ಖಾಸಗಿ ದ್ವೀಪ, ಖಾಸಗಿ ಬೀಚ್ ರೆಸಾರ್ಟ್ ಸೇರಿದಂತೆ ಪ್ರವಾಸಿ ತಾಣಗಳಿಗೂ ಭೇಟಿ ನೀಡಲು ಪ್ಲಾನ್ ಮಾಡಲಾಗಿದೆ. ಇದರ ಜೊತೆಗೆ ಬೋಟ್‌ನಲ್ಲಿ ಕೆಲ ಚಟುವಟಿಕೆ, ಕೆರಿಬಿಯನ್ ಪಾರ್ಟಿ, ಮ್ಯೂಸಿಕ್ ಮಸ್ತಿ ಸೇರಿದಂತೆ ಹಲವು ಮನೋರಂಜನೆಗಳನ್ನು ಆಯೋಜಿಸಲಾಗಿದೆ. ಅತ್ಯಂತ ಐಷಾರಾಮಿ ಪ್ರವಾಸದಲ್ಲಿ ಪಾಲ್ಗೊಳ್ಳುವ ನಿಮಗೆ ಅಷ್ಟೇ ಲಕ್ಷುರಿ  ಆತಿಥ್ಯ ನೀಡಲಿದ್ದೇವೆ. ನ್ಯೂಡ್ ಬೋಟ್ ಪ್ರಯಾಣದ ಪ್ರತಿ ಆತಿಥ್ಯ, ಆಹಾರ, ಐತಿಹಾಸಿಕ ಸ್ಥಳ, ಪ್ರಕೃತಿ ಸೌಂದರ್ಯ ಆಸ್ವಾದಿಸಿ ಎಂದು ಬೇರ್ ನೆಸೆಸಿಟಿ ಟ್ರಾವೆಲ್ ಕಂಪನಿ ಮನವಿ ಮಾಡಿದೆ.

Nude Travel : ನಗ್ನರಾಗಿ ಪ್ರವಾಸ ಮಾಡೋ ದಂಪತಿ, ಕಾರಣವೂ ಇದೆ

ಈ ಪ್ರವಾಸಕ್ಕೆ ಸಿದ್ದಗೊಂಡಿರುವ ಬೋಟ್‌ಗೆ ದಿ ಬಿಗ್ ನ್ಯೂಡ್ ಬೋಟ್ ಜರ್ನಿ ಎಂದು ಹೆಸರಿಡಲಾಗಿದೆ. ಬುಕಿಂಗ್ ನಡೆಯುತ್ತಿದ್ದು, ಕೆಲವೇ ಮಂದಿಗೆ ಮಾತ್ರ ಅವಕಾಶ ಬಾಕಿ ಉಳಿದಿದೆ. ಈ 11 ದಿನಗಳ ಪ್ರವಾಸ ಮುಂದಿನ ವರ್ಷ ಆರಂಭಗೊಳ್ಳಲಿದೆ ಎಂದು ಬೇರ್ ನೆಸಸಿಟಿ ಹೇಳಿದೆ.
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?
ನಿವೃತ್ತಿ ನಂತ್ರವೂ ಪರದಾಡಬೇಕಾಗಿಲ್ಲ, ನೆಮ್ಮದಿ ಜೀವನಕ್ಕೆ ಈ ದೇಶಗಳು ಬೆಸ್ಟ್