
ಪ್ರವಾಸಿ (Tourist) ತಾಣಗಳಲ್ಲಿ ಮಂಗಗಳ ಸಂಖ್ಯೆ ಜಾಸ್ತಿ ಇರುತ್ತೆ. ಅನೇಕ ದೇವಸ್ಥಾನ ಮತ್ತು ಪ್ರವಾಸಿ ತಾಣಗಳಲ್ಲಿ ನೀವು ಮಂಗ (Monkey)ಗಳನ್ನು ನೋಡಿರ್ತೀರಿ. ಅವು ಹತ್ತಿರ ಬರ್ತಿದ್ದಂತೆ ನಿಮ್ಮ ಕೈನಲ್ಲಿರುವ ಹಣ್ಣು ಅಥವಾ ಆಹಾರ ಪದಾರ್ಥವನ್ನು ಮುಚ್ಚಿಟ್ಟುಕೊಳ್ತೀರಿ. ಭಾರತದ ಕೆಲ ಪ್ರವಾಸಿ ಸ್ಥಳಗಳಲ್ಲಿ ಮಂಗಗಳ ಸಂಖ್ಯೆ ಹೆಚ್ಚಿದ್ರೂ ಅವು ಹೆಚ್ಚು ಆಕ್ರಮಣಕಾರಿಯಲ್ಲ. ಅಲ್ಲಿ ಇಲ್ಲಿ ಒಂದೆರಡು ಮಂಗಗಳು ಆಹಾರ ಕಾಣ್ತಿದ್ದಂತೆ ಹತ್ತಿರ ಬರುತ್ವೆ. ಮಂಗನನ್ನು ನೋಡಿದ್ರೆ ಭಯವಾಗುತ್ತೆ ಅನ್ನೋರು ಅಪ್ಪಿತಪ್ಪಿಯೂ ಈಗ ನಾವು ಹೇಳ್ತಿರೋ ಜಾಗಕ್ಕೆ ಹೋಗ್ಬೇಡಿ. ಅಲ್ಲಿ ಒಂದೋ ಎರಡೋ ಮಂಗಗಳಿಲ್ಲ. ಮಂಗಗಳ ದೊಡ್ಡ ಸಂತತಿಯೇ ಇದೆ. ಅವು ಸುಮ್ಮನೆ ಕುಳಿತುಕೊಳ್ಳೋದಿಲ್ಲ. ನೀವು ಆಹಾರ ಪೊಟ್ಟಣ ಹಿಡಿದಿರಲಿ ಇಲ್ಲ ಬ್ಯಾಗ್ ಹಿಡಿದುಕೊಂಡಿರಿ, ನಿಮ್ಮ ಮೇಲೆ ನೆಗೆಯುವ ಅವು, ಬ್ಯಾಗ್ ಕಸಿದುಕೊಂಡು ಓಡುತ್ವೆ. ಕೆಲವೊಮ್ಮೆ ನೀವು ಏನು ಮಾಡಿಲ್ಲ ಅಂದ್ರೂ ನಿಮ್ಮ ಮೇಲೆ ದಾಳಿ ನಡೆಸುತ್ವೆ.
ಕೋತಿಗಳ ಸಂಖ್ಯೆ ಹೆಚ್ಚಿರೋದು ಥೈಲ್ಯಾಂಡ್ (Thailand) ನ ಲೋಪ್ಬುರಿ (Lopburi)ಯಲ್ಲಿ. ಬ್ಯಾಂಕಾಕ್‌ನಿಂದ ಉತ್ತರಕ್ಕೆ ಲೋಪ್ಬುರಿ ಇದೆ. ಬ್ಯಾಂಕಾಕ್ ನಿಂದ ಮೂರು ಗಂಟೆ ಪ್ರಯಾಣ ಬೆಳೆಸಿದ್ರೆ ನೀವು ಈ ಮಂಕಿ ಸಿಟಿಗೆ ಎಂಟ್ರಿ ಪಡೆಯಬಹುದು. ಥೈಲ್ಯಾಂಡ್‌ನಲ್ಲಿ, ಕೋತಿಗಳನ್ನು ಪವಿತ್ರ ಎಂದು ನಂಬಲಾಗುತ್ತದೆ. ಕೋತಿಗಳನ್ನು ಇಲ್ಲಿ ರಕ್ಷಿಸಲಾಗುತ್ತದೆ. ಅವುಗಳನ್ನು ವಾನರ ದೇವರು ಹನುಮನ ವಂಶಸ್ಥರೆಂದು ಪರಿಗಣಿಸಲಾಗುತ್ತದೆ. ಕೋತಿಗಳು ರಾಜಕುಮಾರ ರಾಮನಿಗೆ ರಾಕ್ಷಸ ನಿಯೋ ಥೋಟ್ಸಕನ್ ಅನ್ನು ಸೋಲಿಸಲು ಸಹಾಯ ಮಾಡಿದ್ದರು ಎಂದು ಜನರು ನಂಬಿದ್ದಾರೆ. ಇದೇ ಕಾರಣಕ್ಕೆ ಆರಂಭದಲ್ಲಿ ಕೋತಿಗಳಿಗೆ ಇಲ್ಲಿನ ಜನರು ಆಹಾರ ನೀಡುತ್ತಿದ್ದರು. ಕಾಡಿನಲ್ಲಿ ವಾಸವಾಗಿದ್ದ ಕೋತಿಗಳು ನಗರದ ಅತಿಥಿಗಳಾಗಿದ್ದವು. ಆದ್ರೆ ಕೊರೊನಾ ಲಾಕ್ಡೌನ್ ನಂತ್ರ ಎಲ್ಲವೂ ಬದಲಾಯ್ತು. ಈ ಹಿಂದೆ ಕೋತಿಗಳಿಗೆ ಆಹಾರ ನೀಡುವುದಲ್ಲದೆ ಹಣ್ಣಿನ ಹಬ್ಬವನ್ನು ಏರ್ಪಡಿಸಲಾಗ್ತಿತ್ತು. ಕೊರೊನಾ ನಂತ್ರ ಜನರು ಕೋತಿಗಳಿಗೆ ಆಹಾರ ನೀಡುವುದನ್ನು ನಿಲ್ಲಿಸಿದ್ದರು. ಇದ್ರಿಂದ ಕೋಪಗೊಂಡ ಕೋತಿಗಳು ಆಕ್ರಮಣಕಾರಿಯಾಗಿ ಬದಲಾಗಿವೆ. ಮನಸ್ಸಿಗೆ ಬಂದಂತೆ ವರ್ತಿಸುತ್ತಿವೆ. ದೇವಸ್ಥಾನ, ಪ್ರವಾಸಿ ತಾಣ ಎಂಬುದಿಲ್ಲ, ಲೋಪ್ಬುರಿಯ ಎಲ್ಲ ಕಡೆ ಕೋತಿಗಳಿವೆ. ಯಾವುದೇ ವ್ಯಕ್ತಿ ಆಹಾರವನ್ನು ಕೈನಲ್ಲಿ ಹಿಡಿದು ಹೋಗುವಂತಿಲ್ಲ. ಒಂದಲ್ಲ ಒಂದು ಕೋತಿ ಅವರ ಮೇಲೆ ದಾಳಿ ನಡೆಸುತ್ತದೆ.
ಕಂಡವರ ತೋಟದಲ್ಲಿ ಆಪಲ್ ತಿನ್ನೋದೇ ಮಜ, ಹೊಸ ಸ್ಟೈಲ್ ನಲ್ಲಿ ಡಾ. ಬ್ರೋ ಮಿಂಚಿಂಗ್
ಈಗ ವೈರಲ್ ಆಗಿರುವ ಒಂದು ವಿಡಿಯೋದಲ್ಲಿ ಕೋತಿಗಳ ಕಾಟವನ್ನು ಸೆರೆ ಹಿಡಿಯಲಾಗಿದೆ. ಪ್ರವಾಸಿಗನ ತಲೆ ಮೇಲೆ ಹೊಡೆಯುವ, ಮುಖ ಪರಚುವ, ಕಾಲಿನ ಮೇಲೆ ದಾಳಿ ಮಾಡುವ, ಆಹಾರ ಕಸಿದುಕೊಳ್ಳುವ, ಬ್ಯಾಗ್ ಹಿಡಿದು ಎಳೆಯುವ ಕೋತಿಗಳನ್ನು ನೀವು ಕಾಣ್ಬಹುದು. ಕೋತಿ ಚೇಷ್ಠೆ ಏನು ಅನ್ನೋದು ಈ ವಿಡಿಯೋದಲ್ಲಿ ಸ್ಪಷ್ಟವಾಗುತ್ತೆ.
ಈ ದೇಶದಲ್ಲಿ ಕ್ರೈಮ್ ರೇಟ್ ಝೀರೋ… ಜೈಲುಗಳೆಲ್ಲಾ ಖಾಲಿ ಖಾಲಿ
2024ರಲ್ಲಿ ಕೋತಿಗಳ ಕಾಟ ವಿಪರೀತವಾಗಿತ್ತು. ಜನರು ಮನೆಯಿಂದ ಹೊರ ಬರಲು ಹೆದರುತ್ತಿದ್ದರು. ಕಬ್ಬಿಣದ ಸರಳುಗಳನ್ನು ಹಾಕಿ ತಮ್ಮನ್ನು ತಾವು ಬಂಧಿಯಾಗಿಸಿಕೊಂಡಿದ್ದರು. ಪರಿಸ್ಥಿತಿ ಕೈಮೀರಿ ಹೋಗ್ತಿದ್ದಂತೆ ಸ್ಥಳೀಯ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಹಿಂದಿನ ವರ್ಷವೇ ಮಂಗಗಳ ಬಂಧನ ಹಾಗೂ ಸಂತಾನ ಹರಣ ಚಿಕಿತ್ಸೆ ಮಾಡ್ತಿದೆ. ಮಂಗಗಳಿಗೆ ಸಂತಾನ ಹರಣ ಚಿಕಿತ್ಸೆ ಅವಶ್ಯಕ ಎನ್ನುವ ಪ್ರಾಣಿ ಪ್ರಿಯರು, ಅವುಗಳ ಬಂಧವನ್ನು ಖಂಡಿಸಿದ್ದಾರೆ. ಲೋಪ್ಬುರಿಯಲ್ಲಿ 1600ಕ್ಕೂ ಹೆಚ್ಚು ಮಂಗಗಳನ್ನು ಬಂಧಿಸಲಾಗಿದೆ. ಲೋಪ್ಬುರಿಯಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇಲ್ಲಿನ ಫ್ರಾ ಪ್ರಾಂಗ್ ಸ್ಯಾಮ್ ಯೋಟ್ ದೇವಾಲಯದಲ್ಲಿ ವಾರ್ಷಿಕ ಮಂಕಿ ಉತ್ಸವ ನಡೆಯುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.