ಕಂಡವರ ತೋಟದಲ್ಲಿ ಆಪಲ್ ತಿನ್ನೋದೇ ಮಜ, ಹೊಸ ಸ್ಟೈಲ್ ನಲ್ಲಿ ಡಾ. ಬ್ರೋ ಮಿಂಚಿಂಗ್

Published : Feb 21, 2025, 11:32 AM ISTUpdated : Feb 21, 2025, 11:52 AM IST
 ಕಂಡವರ ತೋಟದಲ್ಲಿ ಆಪಲ್ ತಿನ್ನೋದೇ ಮಜ, ಹೊಸ ಸ್ಟೈಲ್ ನಲ್ಲಿ ಡಾ. ಬ್ರೋ ಮಿಂಚಿಂಗ್

ಸಾರಾಂಶ

ಜನಪ್ರಿಯ ಯೂಟ್ಯೂಬರ್ ಡಾ. ಬ್ರೋ, ಆಪಲ್ ತೋಟದಲ್ಲಿ ಟಿಬೆಟಿಯನ್ ಶೈಲಿಯ ಉಡುಗೆ ಧರಿಸಿ ವಿಡಿಯೋ ಮಾಡಿದ್ದಾರೆ. ತೋಟದ ಬಗ್ಗೆ ಮಾಹಿತಿ ನೀಡಿ, ಆಪಲ್ ಹಣ್ಣುಗಳನ್ನು ತಿನ್ನುತ್ತಾ ವೀಕ್ಷಕರ ಗಮನ ಸೆಳೆದಿದ್ದಾರೆ. ಅವರ ವಿಡಿಯೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿರುವ ಡಾ. ಬ್ರೋ, ವಿವಿಧ ದೇಶಗಳ ಸಂಸ್ಕೃತಿಯನ್ನು ಪರಿಚಯಿಸುತ್ತಾರೆ. ಅವರ ಕನ್ನಡದ ನಿರೂಪಣೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರ ಅಚ್ಚುಮೆಚ್ಚಿನ ಯೂಟ್ಯೂಬರ್ ಡಾ. ಬ್ರೋ (YouTuber Dr. Bro) ಅಲಿಯಾಸ್ ಗಗನ್ಗೆ ಸರಿಸಾಟಿ ಯಾರಿಲ್ಲ. ಅವ್ರ ಸ್ಟೈಲ್, ಅವರ ಮಾತು, ಅವ್ರ ವಿಡಿಯೋ ಹೀಗೆ ಪ್ರತಿಯೊಂದು ಡಿಫರೆಂಟ್ ಆಗಿರುತ್ತೆ. ಈಗ ಡಾ. ಬ್ರೋ ಹೊಸ ವಿಡಿಯೋ ಒಂದನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಆಪಲ್ (Apple) ತೋಟಕ್ಕೆ ಲಗ್ಗೆ ಇಟ್ಟಿರುವ ಅವರು, ಆಪಲ್ ತಿಂತಾ ಫ್ಯಾನ್ಸ್ ಬಾಯಲ್ಲಿ ನೀರು ತರಿಸಿದ್ದಾರೆ. 

ಡಾ. ಬ್ರೋ ಯಾವ ದೇಶಕ್ಕೆ ಹೋಗ್ತಾರೋ ಅದೇ ದೇಶದ ಸ್ಟೈಲ್ ಫಾಲೋ ಮಾಡ್ತಾರೆ. ಕಾಡು ಜನರ ಮಧ್ಯೆ ಅವರಂತೆ ಡ್ರೆಸ್ ಧರಿಸಿ ಗಮನ ಸೆಳೆದಿದ್ದರು. ಈಗ ಆಪಲ್ ತೋಟಕ್ಕೆ ಹೋಗಿರುವ ಗಗನ್ (Gagan), ಟಿಬೆಟ್ ಜನರಂತೆ ಡ್ರೆಸ್ ಧರಿಸಿದ್ದಾರೆ. ತಲೆಗೊಂದು ಟೋಪಿ, ಉದ್ದ ಶರ್ಟ್, ಅದ್ರ ಮೇಲೊಂದು ಕಪ್ಪು ಶಾಲ್ ಹೊದ್ದಿರುವ ಗಗನ್, ಮಣಿ ಸರವನ್ನು ಕೊರಳಿಗೆ ಹಾಕಿದ್ದಾರೆ. ಆರಂಭದಲ್ಲಿ ರಾಜರಂತೆ ಹಜ್ಜೆ ಹಾಕುವ ಗಗನ್, ನಾವಿಂದು ಆಪಲ್ ತೋಟಕ್ಕೆ ಬಂದಿದ್ದೇವೆ ಅಂತಾ, ಅದ್ರ ಬಗ್ಗೆ ಮಾಹಿತಿ ಹಂಚಿಕೊಳ್ತಾರೆ. ಆಪಲ್ ಮರ, ಹಣ್ಣುಗಳನ್ನು ತೋರಿಸ್ತಾ ಅದ್ರ ಬಗ್ಗೆ ವಿವರಿಸ್ತಾರೆ ಗಗನ್. 

ಸೆಲೆಬ್ರಿಟಿಗಳ ಜೊತೆ ಡಾ. ಬ್ರೋ ಫೋಟೋ ವೈರಲ್; ನೀವು ಕೂಡ ಸ್ಟಾರ್ ಎಂದ ನೆಟ್ಟಿಗರು

ಕಂಡವರ ತೋಟದಲ್ಲಿ ಆಪಲ್ ತಿನ್ನೋದೇ ಮಜ ಎನ್ನುವ ಗಗನ್  ಮಾತು ಫ್ಯಾನ್ಸ್ ಗಮನ ಸೆಳೆದಿದೆ. ಆಪಲ್ಲೋ ಆಪಲ್ಲು ಎನ್ನುತ್ಲೇ ಮರದ ಮೇಲಿರುವ ಆಪಲ್ ತೋರಿಸುವ ಡಾ. ಬ್ರೋ ಅದನ್ನು ಕಿತ್ತು ತಿನ್ನುತ್ತಾರೆ.  ನಮ್ಕಡೆ ಮನೆ ಹತ್ರ ಇಡುವ ಚೇಪೆ ಮರದಿಂದ ಚೇಪೆ ಹಣ್ಣು ಹೇಗೆ ಕೆಳಗೆ ಬಿದ್ದಿರುತ್ತೋ ಅದೇ ರೀತಿ ಅಲ್ಲಿ ಆಪಲ್ ಮರದ ಕೆಳಗೆ ಸಾಕಷ್ಟು ಆಪಲ್ ಉದುರಿ ಬಿದ್ದಿರೋದನ್ನು ನೀವು ಕಾಣ್ಬಹುದು. ಒಂದಿಷ್ಟು ಹಣ ಮರದ ಕೆಳಗೆ ಬಿದ್ದಿದ್ರೆ ಮತ್ತೊಂದಿಷ್ಟು ಹಣ್ಣನ್ನು ಬುಟ್ಟಿಯಲ್ಲಿ ಇಡಲಾಗಿದೆ. ಹಾಗೇನೇ ಗ್ರೀನ್ ಆಪಲ್ ಮತ್ತು ಕೆಲ ಬಾಡಿದ ಆಪಲ್ ಗಳನ್ನು ಡಾ. ಬ್ರೋ  ವೀಕ್ಷಕರಿಗೆ ತೋರಿಸ್ತಾರೆ. ಅಷ್ಟೇ ಅಲ್ಲ, ಇಲ್ಲಿಗೆ ಬಂದ್ಮೇಲೆ ಇಡೀ ಆಪಲ್ ತೋಟ ನಂದೇ, ನಾನೇ ಆಪಲ್ ರಾಜ ಅನ್ನಿಸ್ತಿದೆ ಅಂತ ಡಾ. ಬ್ರೋ ಫೋಸ್ ನೀಡಿದ್ದಾರೆ.

ಡಾ, ಬ್ರೋ ಈ ವಿಡಿಯೋ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ. ಹಾಗೆ ವಿಡಿಯೋಗೆ ಹಾಕಿರುವ ಸೌಂಡ್ ವೀಕ್ಷಕರನ್ನು ಸೆಳೆದಿದೆ. ಡಾ. ಬ್ರೋ ನಿಮ್ಮ ಸ್ಟೈಲ್ ಸೂಪರ್ ಅಂತ ಕಮಂಟ್ ಗಳು ಬಂದಿವೆ. ನಿಮ್ಮಂಥ ಕಂಟೆಂಟ್ ಕ್ರಿಯೇಟರ್ ಕರ್ನಾಟಕದಲ್ಲಿ ಇಲ್ಲ, ಆಪಲ್ ರಾಜ ಡಾಕ್ಟರ್ ಬ್ರೋ, ರಾಜನ ವೇಷ ಹಾಕಿ, ರಾಜಾರೋಷವಾಗಿ ಆಪಲ್ ಕಳ್ಳತನ ಮಾಡೋದನ್ನು ನಮ್ಮ ದೇವರ ಹತ್ರ ಕಲಿಬೇಕು ಅಂತ ಜನರು ಡಾ. ಬ್ರೋ ಕಾಲೆಳೆದಿದ್ದಾರೆ.

ಡಾ. ಬ್ರೋ ಬಿಟ್ಟು ಹೊರಟು ಹೋದ ವರ್ಷದಿಂದ ಸಾಥ್ ಕೊಟ್ಟ ಗೆಳೆಯ... ಭಾವುಕರಾದ ಗಗನ್

2024ರಲ್ಲಿ ಸ್ವಲ್ಪ ಕಡಿಮೆ ವಿಡಿಯೋಗಳನ್ನು ಯುಟ್ಯೂಬ್ ಗೆ ಪೋಸ್ಟ್ ಮಾಡಿದ್ದ ಗಗನ್ ಗೋ ಪ್ರವಾಸ ಎಂಬ ಹೊಸ ಬ್ಯುಸಿನೆಸ್ ಶುರು ಮಾಡಿದ್ದರು. 2025ರಲ್ಲಿ ಫುಲ್ ಬ್ಯುಸಿಯಾಗೋದಾಗಿ ಅವರು ಈ ಹಿಂದೆಯೇ ಹೇಳಿದ್ದರು. ಅದ್ರಂತೆ ಗಗನ್ ಒಂದಾದ್ಮೇಲೆ ಒಂದು ದೇಶಕ್ಕೆ ಹೋಗಿ, ಸುಂದರ ವಿಡಿಯೋ ಮಾಡಿ ಹಂಚಿಕೊಳ್ತಿದ್ದಾರೆ. ದೇವ್ರು ಎನ್ನುತ್ಲೇ ವಿಡಿಯೋ ಶುರು ಮಾಡುವ ಗಗನ್ ಮಕ್ಕಳಿಂದ ವೃದ್ಧರವರೆಗೆ ಎಲ್ಲರ ಫೆವರೆಟ್. ಅನೇಕ ದೇಶಗಳು, ಅಲ್ಲಿನ ಸಂಸ್ಕೃತಿ, ಪದ್ಧತಿಯನ್ನು ಜನರು ಮನೆಯಲ್ಲೇ ಕುಳಿತು ಕಣ್ತುಂಬಿಕೊಳ್ಳಲು ಗಗನ್ ಅವಕಾಶ ಮಾಡ್ಕೊಟ್ಟಿದ್ದಾರೆ. ಅಚ್ಚು ಕನ್ನಡದಲ್ಲಿ ಮಾತನಾಡುವ ಅವರ ಮಾತಿಗೆ ಮರುಳಾಗದವರಿಲ್ಲ.  

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
Traffic Mantra: ಟ್ರಾಫಿಕ್‌ನಲ್ಲಿ ಶಾಂತವಾಗಿರೋದು ಹೇಗೆ? ಈ ಮಂತ್ರ ಪಠಿಸಿ ಸಾಕು!