Viral News: ದಕ್ಷಿಣ ಕೊರಿಯಾದ ಮಹಿಳೆ ವಿಡಿಯೋ ವೈರಲ್.. ಭಾರತದ 'ಈ ಜಾಗ, ಜನರ ಬಗ್ಗೆ' ಆ ಟೂರಿಸ್ಟ್ ಹೇಳಿದ್ದೇನು?

Published : Oct 14, 2026, 03:53 PM IST
South Korean Woman

ಸಾರಾಂಶ

ಕಳೆದ 2 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿರುವ ದಕ್ಷಿಣ ಕೊರಿಯಾದ ಮಹಿಳೆ ಜಂಗ್ ಏ ಉಮ್, 'ಭಾರತದಲ್ಲಿ ತಮಗೆ ಅಚ್ಚುಮೆಚ್ಚಿನ ಭಾರತೀಯ ಪ್ರವಾಸಿ ತಾಣ ಅಂಡಮಾನ್‌ನ ಪ್ರಕೃತಿ ಸೌಂದರ್ಯ' ಎಂದಿದ್ದಾರೆ. ಜೊತೆಗೆ, ಸ್ವಚ್ಛವಾದ ಸಮುದ್ರ ಹಾಗೂ ಅಲ್ಲಿನ ಜನರ ಸ್ನೇಹಮಯಿ ಸ್ವಭಾವ ಅವರ ಮನಸ್ಸು ಗೆದ್ದಿದೆ. ಈ ಬಗ್ಗೆ ಅವರು ಹಂಚಿಕೊಂಡಿರುವ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.

ದಕ್ಷಿಣ ಕೊರಿಯಾದ ಮಹಿಳೆ ಜಂಗ್ ಏ ಉಮ್ (Jung ae Um) ಕಳೆದ ಎರಡು ವರ್ಷಗಳಿಂದ ತಮ್ಮ ಮಕ್ಕಳೊಂದಿಗೆ ಭಾರತದಲ್ಲಿ ವಾಸಿಸುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಭಾರತದಲ್ಲಿ ತಮಗೆ ಅತ್ಯಂತ ಇಷ್ಟವಾದ ಜಾಗ ಯಾವುದು ಎಂದು ರಿವೀಲ್ ಮಾಡಿದ್ದಾರೆ. ಅಂಡಮಾನ್‌ನ ಪ್ರಕೃತಿ ಸೌಂದರ್ಯ, ಸ್ಫಟಿಕದಷ್ಟು ಸ್ವಚ್ಛವಾದ ನೀರು ಮತ್ತು ಅಲ್ಲಿನ ಜನರ ಸ್ನೇಹಮಯಿ ಗುಣ ತಮ್ಮ ಮನಸ್ಸು ಕದ್ದಿದೆ ಎಂದು ಅವರು ಹೇಳಿದ್ದಾರೆ. ಭಾರತದ ಏಳು ನಗರಗಳಿಗೆ ಭೇಟಿ ನೀಡಿದ ಅನುಭವವನ್ನು ಅವರು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಇದಕ್ಕೆ ಫಿದಾ ಆಗಿದ್ದಾರೆ.

ಪ್ರತಿಯೊಂದು ಜಾಗಕ್ಕೂ ಅದರದ್ದೇ ಆದ ಸ್ಪೆಷಾಲಿಟಿ ಇದೆ

'ಭಾರತದಲ್ಲಿ ಎರಡು ವರ್ಷ: ಕೊರಿಯನ್ ತಾಯಿಯ ಪ್ರಾಮಾಣಿಕ ವಿಮರ್ಶೆ' ಎಂಬ ಶೀರ್ಷಿಕೆಯಡಿ ಜಂಗ್ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. "ಭಾರತ ತುಂಬಾ ವಿಶಾಲವಾದ ದೇಶ. ಇಲ್ಲಿನ ಪ್ರತಿಯೊಂದು ನಗರಕ್ಕೂ ಅದರದ್ದೇ ಆದ ವಿಶೇಷತೆ ಇದೆ. ನಾವು ಬೇರೆ ಬೇರೆ ನಗರಗಳಿಗೆ ಹೋದಂತೆ ಅಲ್ಲಿನ ಭಾಷೆ, ಊಟ, ವಾತಾವರಣ ಮತ್ತು ಸಂಸ್ಕೃತಿ ಎಲ್ಲವೂ ಬದಲಾಗುತ್ತದೆ. ಆದರೆ, ನಾನು ಭೇಟಿ ನೀಡಿದ ಪ್ರತಿಯೊಂದು ಜಾಗವೂ ಸುಂದರ ಹಾಗೂ ಆಕರ್ಷಕವಾಗಿತ್ತು" ಎಂದು ಜಂಗ್ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ.

ಭಾರತದಲ್ಲಿರುವ ಜಂಗ್ ಏ ಉಮ್🇰🇷 ಹಂಚಿಕೊಂಡಿರುವ ಪೋಸ್ಟ್-🇮🇳 (@wonny_brothers) ನಲ್ಲಿದೆ.

ಅಂಡಮಾನ್ ಪ್ರಕೃತಿ ಸೌಂದರ್ಯ ಮರೆಯೋಕೆ ಚಾನ್ಸೇ ಇಲ್ಲ

ತಮ್ಮ ಭಾರತದ ಪ್ರವಾಸದಲ್ಲಿ ಅಂಡಮಾನ್ ದ್ವೀಪವನ್ನು ಅವರು ಅತ್ಯುತ್ತಮ ಜಾಗ ಎಂದು ಕರೆದಿದ್ದಾರೆ. "ನಾವು ಅಲ್ಲಿಗೆ ಹೋದಾಗ ಪ್ರವಾಸಿಗರ ರಶ್ ಸ್ವಲ್ಪ ಕಡಿಮೆಯಿತ್ತು. ಆದರೆ ನಮ್ಮ ಅನುಭವ ಮಾತ್ರ ಅದ್ಭುತವಾಗಿತ್ತು" ಎಂದು ಅವರು ಹೇಳಿದ್ದಾರೆ. ಅಂಡಮಾನ್ ಜನರ ಸ್ನೇಹಪರತೆ ಅವರನ್ನು ತುಂಬಾ ಆಕರ್ಷಿಸಿದೆ. ವಿಶೇಷವಾಗಿ ಅಲ್ಲಿನ ಸಮುದ್ರದ ನೀರಿನ ಸ್ವಚ್ಛತೆಯ ಬಗ್ಗೆ ಜಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಕೂಬಾ ಡೈವಿಂಗ್ ಮಾಡುವಾಗ ಕಂಡ ಬಗೆಬಗೆಯ ಮೀನುಗಳು ಅವರಿಗೆ ಮಾಲ್ಡೀವ್ಸ್‌ನ ನೆನಪು ತರಿಸಿತಂತೆ. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ ಎಂದು ಜಂಗ್ ಹೇಳಿದ್ದಾರೆ.

ಇನ್ನೂ ನೋಡಬೇಕಾದ ಜಾಗಗಳು ಬಹಳಷ್ಟಿವೆ

ಭಾರತದಲ್ಲಿ ತಾವು ಇನ್ನೂ ನೋಡಬೇಕಾದ ಜಾಗಗಳು ಬಹಳಷ್ಟಿವೆ ಎಂದು ಜಂಗ್ ಹೇಳಿದ್ದಾರೆ. ಇಲ್ಲಿರುವವರೆಗೂ ಹೊಸ ಹೊಸ ಜಾಗಗಳನ್ನು ಎಕ್ಸ್‌ಪ್ಲೋರ್ ಮಾಡಿ, ಆ ಅನುಭವಗಳನ್ನು ಹಂಚಿಕೊಳ್ಳುವ ಆಸೆ ಅವರಿಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಜನ ಕಮೆಂಟ್ ಮಾಡಿದ್ದಾರೆ. ಭಾರತದ ಸುಂದರ ತಾಣಗಳ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಕ್ಕೆ ಹಲವರು ಧನ್ಯವಾದ ತಿಳಿಸಿದ್ದಾರೆ. ಈಶಾನ್ಯ ಭಾರತಕ್ಕೂ ಒಮ್ಮೆ ಭೇಟಿ ನೀಡಿ ಎಂದು ಕೆಲವರು ಸಲಹೆ ನೀಡಿದ್ದಾರೆ. "ಭಾರತದಲ್ಲಿ ಪ್ರತಿ ನೂರು ಕಿಲೋಮೀಟರ್‌ಗೆ ಒಮ್ಮೆ ಭಾಷೆ, ಊಟ ಮತ್ತು ಸಂಸ್ಕೃತಿ ಬದಲಾಗುತ್ತದೆ. ಇದೇ ನಮ್ಮ ದೇಶದ ಸ್ಪೆಷಾಲಿಟಿ" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಭಾರತವು ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ನಾಡು" ಎಂದು ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಷ್ಯಾದಿಂದ ಪ್ರಿಯಕರನಿಗಾಗಿ ಬಿಹಾರಕ್ಕೆ ಬಂದ ಯುವತಿ! ಈ ಪ್ರೇಮಕಥೆಯ ಹಿಂದಿದೆ ರೋಚಕ ತಿರುವು
BMTCಯ ಈ ಬಸ್​ಗಳಲ್ಲಿ ಇನ್ಮುಂದೆ ಪ್ರಯಾಣಿಕರೇ ಕಂಡಕ್ಟರ್​! Tap To Pay ವ್ಯವಸ್ಥೆ ಶೀಘ್ರ ಜಾರಿ