
ಮಂಗಳೂರು (ಅ.11): ದಸರಾ ಮಹೋತ್ಸವ ಮತ್ತು ನವರಾತ್ರಿ ಸಂಭ್ರಮಕ್ಕೆ ಕರಾವಳಿ ನಗರಿ ಸಜ್ಜಾಗುತ್ತಿದೆ. ದಸರಾ ರಜೆಗಳಲ್ಲಿ ಕುಟುಂಬ ಸಮೇತರಾಗಿ ಪ್ರಸಿದ್ಧ ಪುಣ್ಯಕ್ಷೇತ್ರಗಳ ದರ್ಶನ ಪಡೆಯಲು ಬಯಸುವ ಭಕ್ತರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಭರ್ಜರಿ ಗುಡ್ ನ್ಯೂಸ್ ನೀಡಿದೆ. ಅತ್ಯಂತ ಕೈಗೆಟುಕುವ ದರದಲ್ಲಿ 'ಮಂಗಳೂರು ದಸರಾ ವಿಶೇಷ ಪ್ಯಾಕೇಜ್ ಪ್ರವಾಸ' ಗಳನ್ನು ನಿಗಮ ಪ್ರಕಟಿಸಿದೆ.
ಭಕ್ತಿ, ಪ್ರವಾಸ ಮತ್ತು ಸಂಸ್ಕೃತಿಯನ್ನು ಒಂದೇ ಯಾತ್ರೆಯಲ್ಲಿ ಬೆಸೆಯುವ ಈ ವಿಶೇಷ ಬಸ್‌ಗಳು ಅಕ್ಟೋಬರ್ 11 ರಿಂದ ಅಕ್ಟೋಬರ್ 20 ರವರೆಗೆ ಕಾರ್ಯಾಚರಣೆ ನಡೆಸಲಿವೆ.
ಪ್ರತಿಯೊಬ್ಬ ಸಾಮಾನ್ಯ ಭಕ್ತರಿಗೂ ತಲುಪುವಂತೆ ದರ ನಿಗದಿಪಡಿಸಲಾಗಿದ್ದು, ಆಯ್ಕೆ ಮಾಡುವ ಪ್ಯಾಕೇಜ್‌ಗೆ ಅನುಗುಣವಾಗಿ ₹500 ರಿಂದ ₹700 ರವರೆಗೆ ಮಾತ್ರ ಪ್ರಯಾಣ ದರ ನಿಗದಿಪಡಿಸಲಾಗಿದೆ (ಊಟ ಹಾಗೂ ಉಪಹಾರದ ವೆಚ್ಚ ಪ್ರತ್ಯೇಕವಾಗಿರುತ್ತದೆ).
ಲಭ್ಯವಿರುವ ಪ್ರಮುಖ ಪ್ರವಾಸ ಪ್ಯಾಕೇಜ್‌ಗಳು:
ಉಡುಪಿ – ಶೃಂಗೇರಿ ದರ್ಶನ ಪ್ಯಾಕೇಜ್:
ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ, ಶೃಂಗೇರಿ ಶ್ರೀ ಶಾರದಾಂಬಾ ದೇವಸ್ಥಾನ, ಕಿಗ್ಗಾ ಋಷ್ಯಶೃಂಗೇಶ್ವರ ದೇವಸ್ಥಾನ, ಹರಿಹರಪುರ ಮಠ ಮತ್ತು ಪೆರ್ಡೂರು ಅನಂತಪದ್ಮನಾಭ ದೇವಸ್ಥಾನಗಳ ದರ್ಶನ.
ಉಡುಪಿ – ಕೊಲ್ಲೂರು ದರ್ಶನ ಪ್ಯಾಕೇಜ್:
ನೀಲಾವರ ಮಹಿಷಮರ್ದಿನಿ ದೇವಸ್ಥಾನ, ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ, ಸೌಕೂರು ದುರ್ಗಾಪರಮೇಶ್ವರಿ ದೇವಸ್ಥಾನ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಹಾಗೂ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನಗಳ ದರ್ಶನ.
ಸುರಕ್ಷಿತ, ವಿಶ್ವಾಸಾರ್ಹ ಮತ್ತು ಮುಂಗಡ ಬುಕಿಂಗ್ ಮಾಹಿತಿ:
ಕುಟುಂಬ, ಸ್ನೇಹಿತರು ಹಾಗೂ ಭಕ್ತ ವೃಂದದೊಂದಿಗೆ ಏಕಕಾಲದಲ್ಲಿ ಹಲವು ಪ್ರಸಿದ್ಧ ದೇವಾಲಯಗಳನ್ನು ಸಂದರ್ಶಿಸಲು ಇದು ಸುವರ್ಣಾವಕಾಶವಾಗಿದೆ. ಸೀಟುಗಳ ಲಭ್ಯತೆ ಸೀಮಿತವಾಗಿದ್ದು, ಆಸಕ್ತರು ಮುಂಗಡವಾಗಿ ಬುಕಿಂಗ್ ಮಾಡಿಕೊಳ್ಳಲು ಸೂಚಿಸಲಾಗಿದೆ.
📞 7760990713, 7760990723, 7760990711, 7760990720
ಹೆಚ್ಚಿನ ಮಾಹಿತಿಗಾಗಿ ಹತ್ತಿರದ KSRTC ಘಟಕ ಅಥವಾ ಬಸ್ ನಿಲ್ದಾಣವನ್ನು ಸಂಪರ್ಕಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.